ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಟಾಕ್‌ ಮಾರುಕಟ್ಟೆಗೆ ಜಿಯೋ ಬ್ಲಾಕ್‌ಬಸ್ಟರ್ ಪದಾರ್ಪಣೆ: ಭಾರತದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹವಾದ ರಿಲಯನ್ಸ್

Jio IPO listing: ಜಿಯೋ ಪ್ಲಾಟ್‌ಫಾರ್ಮ್ಸ್ ಕಂಪನಿಯು ಅದ್ದೂರಿಯಾಗಿ ಷೇರು ಮಾರುಕಟ್ಟೆಗೆ ಪ್ರವೇಶಿಸಿದೆ. ಬುಧವಾರ ಜಿಯೋ ಷೇರುಗಳು ಪ್ರತಿ ಷೇರಿಗೆ ₹1,358ರಂತೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗುತ್ತಿದ್ದಂತೆ, ರಿಲಯನ್ಸ್ ಸಮೂಹವು ಭಾರತದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹವಾಗಿ ಹೊರಹೊಮ್ಮಿದೆ.

ಮುಂಬೈ, ಅ. 28: ಜಿಯೋ ಪ್ಲಾಟ್‌ಫಾರ್ಮ್ಸ್ ಕಂಪನಿಯ ಅದ್ದೂರಿ ಷೇರು ಮಾರುಕಟ್ಟೆ ಪ್ರವೇಶದೊಂದಿಗೆ (Jio IPO listing) ಭಾರತದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹಗಳ ಶ್ರೇಯಾಂಕದಲ್ಲೇ ಮಹತ್ತರ ಬದಲಾವಣೆಯಾಗಿದೆ. ಬುಧವಾರ (ಅಕ್ಟೋಬರ್‌ 28) ಜಿಯೋ ಷೇರುಗಳು ಪ್ರತಿ ಷೇರಿಗೆ ₹1,358ರಂತೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗುತ್ತಿದ್ದಂತೆ, ರಿಲಯನ್ಸ್ ಸಮೂಹವು (Reliance Industries) ಟಾಟಾ ಗ್ರೂಪ್ ಅನ್ನು ಹಿಂದಿಕ್ಕಿ ಭಾರತದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹವಾಗಿ ಹೊರಹೊಮ್ಮಿದೆ.

ಜಿಯೋ ಲಿಸ್ಟಿಂಗ್ ನಂತರ ರಿಲಯನ್ಸ್ ಸಮೂಹದ ನೋಂದಾಯಿತ (ಲಿಸ್ಟೆಡ್) ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ಭರ್ಜರಿ ₹28.9 ಲಕ್ಷ ಕೋಟಿಗೆ ತಲುಪಿದೆ. ಈ ಪಟ್ಟಿಯಲ್ಲಿ ಟಾಟಾ ಗ್ರೂಪ್ ₹25.6 ಲಕ್ಷ ಕೋಟಿ ಮೌಲ್ಯದೊಂದಿಗೆ ಎರಡನೇ ಸ್ಥಾನಕ್ಕೆ ಸರಿದರೆ, ಅದಾನಿ ಗ್ರೂಪ್ ₹16.6 ಲಕ್ಷ ಕೋಟಿ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದೆ.

ಅನಂತ್‌ ಅಂಬಾನಿ ಮಾತು:



ಜಿಯೋ ಐಪಿಒ ಧಮಾಕಾ: 21.4% ಪ್ರೀಮಿಯಂ ಲಿಸ್ಟಿಂಗ್

ಜಿಯೋ ಮಾರುಕಟ್ಟೆ ಪ್ರವೇಶವು ರಿಲಯನ್ಸ್ ಸಮೂಹದ ಒಟ್ಟು ಮೌಲ್ಯವರ್ಧನೆಗೆ ಬೃಹತ್ ಕೊಡುಗೆ ನೀಡಿದೆ. ಇದರ ಇಶ್ಯೂ ಬೆಲೆ: 1,119 ರುಪಾಯಿಗಳಾಗಿತ್ತು. ಆದರೆ ಲಿಸ್ಟಿಂಗ್ ಬೆಲೆ: 1,358 ರೂ.ಗಳಾಗಿದೆ (ಶೇ. 21.4 ರಷ್ಟು ಭಾರಿ ಪ್ರೀಮಿಯಂ). ಇದರೊಂದಿಗೆ ಐಪಿಒದಲ್ಲಿ ಹೂಡಿಕೆ ಮಾಡಿದವರಿಗೆ ಲಿಸ್ಟ್‌ ಸಂದರ್ಭದಲ್ಲಿ ಲಾಭದಾಯಕವಾಗಿದೆ. ಜಿಯೋ ಮಾರುಕಟ್ಟೆ ಬಂಡವಾಳ ಮೌಲ್ಯವು 12.5 ಲಕ್ಷ ಕೋಟಿ ರುಪಾಯಿಗಳಾಗಿದೆ.

ಜಿಯೋ ಐಪಿಒಗೆ ಆರಂಭದಲ್ಲೇ 2.5 ಲಕ್ಷ ಕೋಟಿ ರೂ.ಗಳ ಭಾರಿ ಬೇಡಿಕೆ

ಪ್ರಸ್ತುತ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಜಿಯೋ ಪ್ಲಾಟ್‌ಫಾರ್ಮ್ಸ್ ಎರಡು ಕಂಪನಿಗಳ ಜಂಟಿ ಮೌಲ್ಯವೇ ₹28.7 ಲಕ್ಷ ಕೋಟಿಗೆ ತಲುಪಿದೆ. ಅಷ್ಟೇ ಅಲ್ಲದೆ, 7.98 ಮಿಲಿಯನ್ (ಸುಮಾರು 79.8 ಲಕ್ಷ) ಷೇರುದಾರರೊಂದಿಗೆ ಜಿಯೋ ಪ್ಲಾಟ್‌ಫಾರ್ಮ್ಸ್ ಭಾರತದಲ್ಲೇ ಅತ್ಯಂತ ಹೆಚ್ಚು ಷೇರುದಾರರನ್ನು ಹೊಂದಿದ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಂಬಯಿನ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ)ನಲ್ಲಿ ಸಾಂಪ್ರದಾಯಿಕ ಗಂಟೆ ಬಾರಿಸುವ ಮೂಲಕ ಲಿಸ್ಟಿಂಗ್ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಯಿತು. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ್ ಅಂಬಾನಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಲಿಸ್ಟಿಂಗ್‌ಗೂ ಮುನ್ನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಯೋ ಪ್ಲಾಟ್‌ಫಾರ್ಮ್ಸ್ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಅಂಬಾನಿ, "ಇಂದಿನ ಲಿಸ್ಟಿಂಗ್ ನಮಗೆ ಅಂತಿಮ ಗೆರೆಯಲ್ಲ. ಬದಲಿಗೆ ಹೊಸ ಪಯಣದ ಆರಂಭದ ರೇಖೆಯಾಗಿದೆ. ನಾವು ಮುಕ್ತವಾಗಿ ಸಂವಹನ ನಡೆಸುತ್ತೇವೆ. ನೀಡಿದ ಭರವಸೆಗಳನ್ನು ಬದ್ಧತೆಯಿಂದ ಈಡೇರಿಸುತ್ತೇವೆ ಮತ್ತು ನಮ್ಮ ಕಾರ್ಯಗಳ ಮೂಲಕ ನಿಮ್ಮ ವಿಶ್ವಾಸವನ್ನು ಗಳಿಸುತ್ತೇವೆ" ಎಂದು ಭರವಸೆ ನೀಡಿದರು.

ಈ ಲಿಸ್ಟಿಂಗ್‌ನ ಮತ್ತೊಂದು ವಿಶೇಷವೆಂದರೆ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಜಿಯೋ ಪ್ಲಾಟ್‌ಫಾರ್ಮ್ಸ್ ಕ್ರಮವಾಗಿ ಭಾರತದ ಮೊದಲನೇ ಮತ್ತು ಎರಡನೇ ಅತ್ಯಂತ ಮೌಲ್ಯಯುತ ನೋಂದಾಯಿತ ಕಂಪನಿಗಳಾಗಿ ಹೊರಹೊಮ್ಮಿವೆ. ಈ ಎರಡು ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವೇ ಟಾಟಾ ಗ್ರೂಪ್‌ನ ಎಲ್ಲಾ ನೋಂದಾಯಿತ ಕಂಪನಿಗಳ ಒಟ್ಟು ಮೌಲ್ಯಕ್ಕಿಂತ ₹3.1 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. ಜಿಯೋದ ಈ ಚಾರಿತ್ರಿಕ ಪದಾರ್ಪಣೆಯು ಭಾರತದ ಅತ್ಯಂತ ಮೌಲ್ಯಯುತ ಕಂಪನಿಗಳ ಪಟ್ಟಿಯನ್ನಷ್ಟೇ ಅಲ್ಲದೆ, ದೇಶದ ದೈತ್ಯ ಉದ್ಯಮ ಸಮೂಹಗಳ ಶ್ರೇಯಾಂಕವನ್ನೇ ಸಂಪೂರ್ಣವಾಗಿ ಬದಲಾಯಿಸಿ ಹೊಸ ದಾಖಲೆ ಬರೆದಿದೆ.

ಬ್ಯಾಂಕ್‌ ಆಫ್‌ ಬರೋಡಾ, ರಿಲಯನ್ಸ್‌ ಜಿಯೋ ಸಹಭಾಗಿತ್ವದಲ್ಲಿ ಫೀಚರ್‌ ಫೋನ್‌ಗಳಿಗೆ ಬಿಒಬಿ ವರ್ಲ್ಡ್‌ ಲೈಟ್‌ ಬಿಡುಗಡೆ

ಈ ಹೋಲಿಕೆಯನ್ನು ಪ್ರತಿಯೊಂದು ಉದ್ಯಮ ಸಮೂಹದ ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯದ ಆಧಾರದ ಮೇಲೆ ಲೆಕ್ಕಹಾಕಲಾಗಿದೆ. ರಿಲಯನ್ಸ್ ಸಮೂಹದ ಲೆಕ್ಕಾಚಾರದಿಂದ 'ಜಿಯೋ ಫೈನಾನ್ಶಿಯಲ್ ಸರ್ವಿಸಸ್' ಅನ್ನು ಹೊರಗಿಡಲಾಗಿದೆ.

Ramesh Ballamoole

View all posts by this author