ಬೆಂಗಳೂರು: ಭಾರತದ ಮುಂಚೂಣಿಯ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್ ಫಾರಂ ಕೊಟಕ್811, ಸೂಪರ್ ಮನಿಯೊಂದಿಗ ಉಳಿತಾಯ ಖಾತೆ, ನಿಶ್ಚಿತ ಖಾತೆ ಮತ್ತು ಸುರಕ್ಷಿತ ಕ್ರೆಡಿಟ್ ಕಾರ್ಡ್ ಒಳಗೊಂಡ 3 ಇನ್ 1 ಸೂಪರ್ ಅಕೌಂಟ್ ಪ್ರಾರಂಭಿಸಿದೆ.
ಈ ಪ್ರಸ್ತಾವನೆಯನ್ನು ಪ್ರತಿನಿತ್ಯ ಭಾರತೀಯರು ಸರಳ, ಡಿಜಿಟಲ್-ಪ್ರಥಮ ಹಣಕಾಸು ಸಾಧನ ಗಳನ್ನು ಬಯಸುವ ಭಾರತೀಯರ ವೃದ್ಧಿಸುತ್ತಿರುವ ಹಾಗೂ ದೊಡ್ಡ ವರ್ಗಕ್ಕಾಗಿ ನಿರ್ಮಿಸಲಾಗಿದೆ. ಇದು ವೇತನದಾರ ಉದ್ಯೋಗಿಗಳು, ಡಿಜಿಟಲ್ ನೇಟಿವ್ ಗಳು, ವಿದ್ಯಾರ್ಥಿಗಳು, ಮೊದಲ ಸಲ ಉದ್ಯೋಗ ಪಡೆಯುವವರು ಮತ್ತಿತರರನ್ನು ಒಳಗೊಂಡಿದೆ. ಇವರು ಸಣ್ಣದಾಗಿ ಪ್ರಾರಂಭಿಸಿ, ನಿಯಂತ್ರಣದಲ್ಲಿರಿಸಿಕೊಂಡು ಅವರ ಹಣದಿಂದ ಹೆಚ್ಚಿನ ನಿರೀಕ್ಷೆ ಹೊಂದಿದವರಾಗಿದ್ದಾರೆ. ಈ 3 ಇನ್ 1 ಸೂಪರ್ ಖಾತೆಯನ್ನು ಅವರ ಅಗತ್ಯಗಳಿಗೆ ಒಂದು ಸುಲಭ ಬಳಕೆಯ ಪರಿಹಾರದೊಂದಿಗೆ ಪೂರೈಸಲು ವಿನ್ಯಾಸಗೊಳಿಸಲಾಗಿದೆ.
ಈ ಕುರಿತು ಕೊಟಕ್811 ಮುಖ್ಯಸ್ಥ ಮನಿಶ್ ಅಗರ್ವಾಲ್, “ಈ 3 ಇನ್ 1 ಸೂಪರ್ ಖಾತೆಯು ಉಳಿತಾಯ, ವ್ಯಯ ಮತ್ತು ಸಾಲ ಪಡೆಯುವುದನ್ನು ಒಂದೇ ಸ್ಥಳಕ್ಕೆ ತರುತ್ತದೆ ಇದು ಸಂಕೀರ್ಣತೆ ಯಿಲ್ಲದೆ ಹಣವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಬಯಸುವ ಜನರಿಗೆ ನಿರ್ಮಿಸಲಾಗಿದೆ. ಇದು ಸರಳ, ಸುರಕ್ಷಿತ ಮತ್ತು ಪ್ರತಿನಿತ್ಯದ ಬಳಕೆಗೆ ವಿನ್ಯಾಸಗೊಳಿಸಲಾಗಿದೆ” ಎಂದರು.
ಇದನ್ನೂ ಓದಿ: Bangalore News: ಅ.19ರಂದು ಪರಮ್ ಫೌಂಡೇಶನ್‌ನ ಕಲಾ ಸಂವಾದದಲ್ಲಿ ʻಮಹಾಕ್ಷತ್ರಿಯʼ ನೃತ್ಯರೂಪಕ, ಸಂವಾದ!
3 ಇನ್ 1 ಸೂಪರ್ ಖಾತೆಯಿಂದ ನೀವೇನು ಪಡೆಯುತ್ತೀರಿ:
-₹ 1000ರಿಂದ ಪ್ರಾರಂಭಿಸಿ: ಎಫ್.ಡಿ. ತೆರೆಯಿರಿ ಮತ್ತು ಪ್ರಾರಂಭಿಸಿ
- ಹೆಚ್ಚು ಗಳಿಸಿ: ಎಫ್.ಡಿ. ಮೇಲೆ ಬಡ್ಡಿ + ವ್ಯಯಿಸಿದ್ದಕ್ಕೆ ಕ್ಯಾಶ್ ಬ್ಯಾಕ್
- ಸಾಲದಲ್ಲಿ ಯು.ಪಿ.ಐ ಬಳಸಿ: ನೀವು ಸದಾ ಪಾವತಿಸುವಂತೆ ಪಾವತಿಸಿ, ರಿವಾರ್ಡ್ ಗಳಿಸಿರಿ
- -ಸುರಕ್ಷಿತ ಕೊಟಕ್811 ಸೂಪರ್ ಮನಿ ಕ್ರೆಡಿಟ್ ಕಾರ್ಡ್: ನಿಮ್ಮ ಎಫ್.ಡಿ. ಬೆಂಬಲಿತವಾಗಿದ್ದು ಯಾವುದೇ ಆದಾಯದ ದಾಖಲೆ ಬೇಕಿಲ್ಲ
-ಕಾಗದಪತ್ರಗಳಿಲ್ಲ: ಶೇ.100 ಡಿಜಿಟಲ್ ಸೇರ್ಪಡೆ
-ನಿಯಂತ್ರಣದಲ್ಲಿರಿ: ನಿಮ್ಮ ಎಫ್.ಡಿ.ಯು. ನಿಮ್ಮ ವ್ಯಯಿಸುವ ಮಿತಿಯನ್ನು ನಿಗದಿಪಡಿಸುತ್ತದೆ.
“ಸುಲಭ ಮತ್ತು ಪುರಸ್ಕಾರಯುತವಾಗಿರುವುದ್ನು ಬಯಸುವ ನಮ್ಮ ಗ್ರಾಹಕರು ಕೊಟಕ್811ರ ಡಿಜಿಟಲ್-ಪ್ರಥಮ ಬಳಕೆದಾರರೊಂದಿಗೆ ಸಂಧಿಸುತ್ತಿದ್ದಾರೆ. ನಾವು ವಿಶ್ವಾಸಾರ್ಹ ಬ್ಯಾಂಕಿಂಗ್ ಅನ್ನು ಡಿಜಿಟಲ್ ಪ್ರಥಮ ಆವಿಷ್ಕಾರದೊಂದಿಗೆ ಸಂಯೋಜಿಸುತ್ತಿದ್ದು ಸಾಲವನ್ನು ಪಾವತಿ ಗಳಂತೆಯೇ ಪ್ರಯತ್ನರಹಿತವಾಗಿಸುತ್ತಿದ್ದೇವೆ” ಎಂದು ಸೂಪರ್ ಮನಿ ಸಂಸ್ಥಾಪಕ ಪ್ರಕಾಶ್ ಸಿಕಾರಿಯಾ ಹೇಳಿದರು.
ಈ ಕುರಿತು ಕೊಟಕ್811ರ ಸಹ-ಮುಖ್ಯಸ್ಥ ಜೇ ಕೊಟಕ್, “ಕೊಟಕ್811 ಆರ್ಥಿಕವಾಗಿ ಮುನ್ನಡೆ ಸಾಧಿಸಲು ಬಯಸುವ ವಿಸ್ತಾರ ಭಾರತೀಯ ಗ್ರಾಹಕರಿಗೆ ಸೇವೆ ಒದಗಿಸುತ್ತದೆ. ಈ ಬಳಕೆದಾರರು ಡಿಜಿಟಲ್ ಪರಿಣಿತರು ಆದರೆ ಸಾಲದೊಂದಿಗೆ ಎಚ್ಚರದಿಂದಿರುತ್ತಾರೆ. ಅವರು ನಿಯಂತ್ರಣ, ಸ್ಪಷ್ಟತೆ ಮತ್ತು ಮೌಲ್ಯವನ್ನು ಬಯಸುತ್ತಾರೆ. ಈ 3 ಇನ್ 1 ಸೂಪರ್ ಖಾತೆಯು ಆ ವರ್ತನೆಗೆ ಪರಿಪೂರ್ಣ ವಾಗಿ ಹೊಂದಿಕೊಳ್ಳುತ್ತದೆ. ಇದು ಪ್ರಾರಂಭಿಸಲು, ಬಳಸಲು ಸುಲಭ ಮತ್ತು ಜನರಿಗೆ ಅವರ ಹಣದೊಂದಿಗೆ ವಿಶ್ವಾಸ ನಿರ್ಮಿಸಿಕೊಳ್ಳಲು ನೆರವಾಗುತ್ತದೆ” ಎಂದರು.
ಪ್ರಾರಂಭಿಸಲು:
Visit kotak811.com/3in1SuperAccount ಭೇಟಿ ಕೊಡಿ ಅಥವಾ ಸೂಪರ್ ಮನಿ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
*ಷರತ್ತುಗಳು ಅನ್ವಯಿಸುತ್ತವೆ. ಕ್ರೆಡಿಟ್ ಕಾರ್ಡ್ ನೀಡಿಕೆ ಬ್ಯಾಂಕಿನ ಸ್ವಂತ ವಿವೇಚನೆಗೆ ಒಳಪಟ್ಟಿರು ತ್ತದೆ