ಪ್ರವಾಹದಿಂದ ಹಾನಿಗೊಳಗಾದ ವಾಹನ ಮಾಲೀಕರಿಗೆ ನೆರವು ಒದಗಿಸುವ ಹೊಸ ಯೋಜನೆ ಘೋಷಿಸಿದ ನಿಸ್ಸಾನ್ ಮೋಟಾರ್ ಇಂಡಿಯಾ
ಪ್ರವಾಹದಿಂದ ವಾಹನ ಹಾನಿಗೊಳಗಾದ ಗ್ರಾಹಕರಿಗೆ ನೆರವಾಗಲು ಸಹಾಯವಾಣಿ ಸ್ಥಾಪಿಸಲಾಗಿದೆ. ಅಗತ್ಯವಿರುವ ಗ್ರಾಹಕರಿಗೆ ಉಚಿತ ಟೋಯಿಂಗ್ ಸೇವೆ ಒದಗಿಸ ಲಾಗುತ್ತಿದ್ದು, ವರ್ಕ್ ಶಾಪ್ ಸಮಯ ವಿಸ್ತರಿಸಲಾಗಿದೆ. ದುರಸ್ತಿ ಮೇಲೆ ರಿಯಾಯಿತಿ ನೀಡಲಾಗುತ್ತಿದೆ ಮತ್ತು ಇನ್ಶೂರೆನ್ಸ್ ಕ್ಲೈಮ್ ಮಾಡಲು ನೆರವು ಒದಗಿಸಲಾಗುತ್ತಿದೆ.


ಬೆಂಗಳೂರು: ಭಾರತದ ಹಲವಾರು ಪ್ರದೇಶಗಳು ಪ್ರವಾಹ ಪೀಡಿತವಾಗಿದ್ದು, ಅಲ್ಲಿನ ಬಹಳಷ್ಟು ವಾಹನ ಮಾಲೀಕರು ತೊಂದರೆಗೊಳಗಾಗಿದ್ದಾರೆ. ಈ ನಿಟ್ಟಿನಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ ಸಂಸ್ಥೆಯು ಪ್ರವಾಹದಿಂದ ತೊಂದರೆಗೆ ಒಳಗಾಗಿರುವ ನಿಸ್ಸಾನ್ ಗ್ರಾಹಕರಿಗೆ ಸಹಾಯ ಮಾಡಲು ಮುಂದಾಗಿದ್ದು, ಪ್ರವಾಹದಿಂದ ತೊಂದರೆಗೊಳಗಾದ ಗ್ರಾಹಕರಿಗೆ ಸಂಪೂರ್ಣ ನೆರವು ಒದಗಿಸುವ ಯೋಜನೆಯನ್ನು ಜಾರಿಗೆ ತಂದಿದೆ.
ಪ್ರವಾಹದಿಂದ ಹಾನಿಗೊಳಗಾದ ವಾಹನಗಳ ಮಾಲೀಕರಿಗೆ ಸಹಾಯ ಮಾಡಲು ವಿಶೇಷ ಸಹಾಯ ವಾಣಿ (1800 209 3456) ಸ್ಥಾಪಿಸಲಾಗಿದೆ. ಈ ಯೋಜನೆಯಲ್ಲಿ ಹಾನಿಗೊಳಗಾದ ವಾಹನಗಳನ್ನು ಹತ್ತಿರದ ಅಧಿಕೃತ ನಿಸ್ಸಾನ್ ವರ್ಕ್ ಶಾಪ್ ಗಳಿಗೆ ತಲುಪಿಸಲು ಉಚಿತ ಟೋಯಿಂಗ್ ಸೇವೆ ಒದಗಿಸ ಲಾಗುತ್ತದೆ. ವರ್ಕ್ ಶಾಪ್ ಸಮಯ ಹೆಚ್ಚಳ ಮತ್ತು ವಿಮಾ ಕ್ಲೈಮ್ ಮಾಡಲು ನೆರವು ಒದಗಿಸ ಲಾಗುತ್ತದೆ. ಜೊತೆಗ ಎಕ್ಸೆಸ್ ಕ್ಲಾಸ್ ಶುಲ್ಕಕ್ಕೂ ಕವರೇಜ್ ಒದಗಿಸಲಾಗುತ್ತದೆ.
ಇದನ್ನೂ ಓದಿ: Vishweshwar Bhat Column: ಪೈಲಟ್ ಮತ್ತು ಪರಿಸ್ಥಿತಿ ಅರಿವು
ಇವೆಲ್ಲದರ ಜೊತೆಗೆ ನಿಸ್ಸಾನ್, ಎಂಜಿನ್ ಆಯಿಲ್ ಮತ್ತು ಆಯಿಲ್ ಫಿಲ್ಟರ್ ಬದಲಾವಣೆಯ ಮೇಲೆ ಶೇ.10 ರಿಯಾಯಿತಿಯನ್ನು ನೀಡುತ್ತಿದೆ. ಫ್ಲೋರ್ ಕಾರ್ಪೆಟ್ ಬದಲಾವಣೆಯ ಮೇಲೆ ಹೆಚ್ಚುವರಿ ಶೇ.10 ರಿಯಾಯಿತಿ ನೀಡಲಾಗುತ್ತಿದೆ. ವಾಹನದ ಸಂಪೂರ್ಣ ಆರೋಗ್ಯ ತಪಾಸಣೆಯನ್ನು ನಡೆಸಿ ಆಗಿರುವ ಹಾನಿಯನ್ನು ಮೌಲ್ಯಮಾಪನ ಮಾಡಿ ವಾಹನದ ಕಾರ್ಯಕ್ಷಮತೆ ಮತ್ತು ಸುರಕ್ಷತೆ ಯನ್ನು ಪರೀಕ್ಷಿಸಲಾಗುತ್ತದೆ.
ಈ ಕುರಿತು ಮಾತನಾಡಿರುವ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈ. ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ಅವರು, “ಕಾರು ಕೇವಲ ಯಂತ್ರವಲ್ಲ, ಬದಲಿಗೆ ಕಾರು ತಮ್ಮ ಪ್ರೀತಿಪಾತ್ರರ ಕಾಳಜಿ ವಹಿಸಲು ಮತ್ತು ಜಗತ್ತಿನ ಜೊತೆ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ. ಹಾಗಾಗಿ ಕಾರು ಬಹಳ ಮುಖ್ಯವಾಗಿದೆ. ನಿಸ್ಸಾನ್ ಸದಾ ತನ್ನ ಗ್ರಾಹಕರ ಮೇಲೆ ಕಾಳಜಿ ತೋರುತ್ತಿದ್ದು, ಅದರ ಫಲವಾಗಿಯೇ ನಾವು ಇದೀಗ ಪ್ರವಾಹದಿಂದ ತೊಂದರೆಗೀಡಾದ ನಮ್ಮ ಗ್ರಾಹಕರಿಗೆ ಸಂಪೂರ್ಣ ನೆರವು ಒದಗಿಸಲು ಮುಂದಾಗಿದ್ದೇವೆ. ನಮ್ಮ ಸಹಾಯವಾಣಿ ಮತ್ತು ಅಗತ್ಯ ಸೇವೆ ಒದಗಿಸುವ ಮೂಲಕ ಕಷ್ಟದ ಸಮಯದಲ್ಲಿ ನಮ್ಮ ಗ್ರಾಹಕರ ಜೊತೆ ನಿಲ್ಲಲಿದ್ದೇವೆ” ಎಂದರು.
ಪ್ರವಾಹದಿಂದ ಪೀಡಿತ ಪ್ರದೇಶಗಳಲ್ಲಿನ ನಿಸ್ಸಾನ್ ಸರ್ವೀಸ್ ಸೆಂಟರ್ ಗಳು ಜಾಸ್ತಿ ಸಮಯ ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯವಿರುವಾಗ ಸುಲಭವಾಗಿ ಸಹಾಯ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ.