Malaika Arora: ಮಗನ ಜೊತೆ ಭರ್ಜರಿ ವೆಕೇಶನ್! ಮಲೈಕಾ ಅರೋರಾ ಹಾಟ್ ಫೋಟೋಸ್ ಫುಲ್ ವೈರಲ್
ಬಾಲಿವುಡ್ ಬ್ಯುಟಿ, ಐಕಾನಿಕ್ ಸ್ಟಾರ್ ಮಲೈಕಾ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ನಟಿ ಮಲೈಕಾ ಅವರು ಹೌಸ್ ಫುಲ್, ದಬಾಂಗ್ 2, ವೆಲ್ಕಂ, ಕಾಂಟೆ, ಇಎಂಐ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸುವ ಜೊತೆಗೆ ಮಾಡೆಲಿಂಗ್ ಕ್ಷೇತ್ರದಿಂದಲೂ ಇವರು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದಾರೆ. ನಟಿ ಮಲೈಕಾ ಅರೋರಾ ಅವರು ಇತ್ತೀಚೆಗಷ್ಟೆ ಇಟಲಿಯ ಫ್ಲಾರೆನ್ಸ್, ಟಸ್ಕನಿ ಪ್ರದೇಶಗಳಿಗೆ ತಮ್ಮ ಮಗ ಅರ್ಹಾನ್ ಜೊತೆಗೆ ತೆರಳಿದ್ದಾರೆ. ಇಲ್ಲಿ ಕಳೆದ ಸುಂದರ ಕ್ಷಣಗಳ ಫೋಟೊವನ್ನು ನಟಿ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.



ನಟಿ ಮಲೈಕಾ ಅವರು ಮಾಡರ್ನ್ ಡ್ರೆಸ್ ಧರಿಸಿದ್ದು ಪುತ್ರ ಅರ್ಹಾನ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಇಬ್ಬರು ಇಟಲಿಯ ಫೇಮಸ್ ಜ್ಯೂಸ್ ಅನ್ನು ಸವಿಯುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಮಲೈಕಾ ಅವರು ಬ್ಲೂ ಕಲರ್ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದು ಅರ್ಹಾನ್ ಅವರು ಬ್ಲ್ಯಾಕ್ ಟೀ ಶರ್ಟ್ ತೊಟ್ಟಿದ್ದಾರೆ. ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿದ್ದ ನಟಿ ಮಲೈಕಾ ಹೆಚ್ಚು ಗ್ಲಾಮರಸ್ ಆಗಿ ಕಂಡಿದ್ದಾರೆ.

ವೈರಲ್ ಆದ ಮತ್ತೊಂದು ಫೋಟೋದಲ್ಲಿ ಅರ್ಹಾನ್ ಅವರು ಇಟಲಿಯ ಸನ್ ಸೆಟ್ ವೀವ್ಸ್ ನಲ್ಲಿ ಫೋಟೊ ತೆಗೆಸಿಕೊಂಡಿದ್ದಾರೆ. ಅರ್ಹಾನ್ ಅವರು ಕಂದು ಬಣ್ಣದ ಜಾಕೆಟ್ ಡ್ರೆಸ್ ಧರಿಸಿ ಕೂಲ್ ಲುಕ್ ನಲ್ಲಿ ಕಂಗೊಳಿಸಿದ್ದಾರೆ.

ನಟಿ ಮಲೈಕಾ ಅವರು ತಮ್ಮ ಫೋಟೊದ ಜೊತೆಗೆ ಇಟಲಿಯ ಪ್ರಸಿದ್ಧ ಖಾದ್ಯಗಳ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಇಟಲಿ ಶೈಲಿಯ ಟೊಮೆಟೊ ಫೋಕಾಸಿಯಾ ತಿನಿಸನ್ನು ಕೈಯಲ್ಲಿ ಹಿಡಿದಿದ್ದ ಫೋಟೊವನ್ನು ಕೂಡ ಅವರು ಶೇರ್ ಮಾಡಿಕೊಂಡಿದ್ದಾರೆ. ತಾಯಿ-ಮಗನ ಹಾಲಿಡೇ ಟ್ರಿಪ್ ಸೋಶಿಯಲ್ ಮಿಡಿಯಾದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ.

ಇಟಲಿಯ ಟಸ್ಕನಿ ಪ್ರದೇಶದಲ್ಲಿ ಪುತ್ರ ಅರ್ಹಾನ್ ಜೊತೆಗೆ ನಟಿ ಮೈಲೆಕಾ ಅರೋರ ಅವರು ಸೈಕ್ಲಿಂಗ್ ಮಾಡಿದ್ದ ಫೋಟೊ ಕೂಡ ವೈರಲ್ ಆಗಿದೆ. ಹಸಿರೆಲೆ ದ್ರಾಕ್ಷೀ ತೋಟಗಳು ನಮ್ಮನ್ನು ಸ್ವಾಗತಿಸಿದವು ಎಂದು ವಿಶೇಷ ಕ್ಯಾಪ್ಶನ್ ಬರೆದುಕೊಂಡು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಮಲೈಕಾ ಮತ್ತು ಅರ್ಹನ್ ಅವರು ಜೊತೆಗೆ ಸೈಕಲ್ ಮೇಲೆ ಸಾಗುವ ಫೋಟೊ ಅಭಿಮಾನಿಗಳ ಮನಗೆದ್ದಿದೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ಮಲೈಕಾ ಅರೋರಾ ಅವರು ಫ್ಯಾಷನೆಬಲ್ ರೆಡ್ ಕಲರ್ ಡ್ರೆಸ್ ತೊಟ್ಟು ರಾತ್ರಿಯ ಪಾರ್ಟಿಯಲ್ಲಿ ಕೂಡ ಭಾಗಿಯಾಗಿದ್ದಾರೆ. ಫ್ರೀ ಹೇರ್ ಸ್ಟೈಲ್ ನಲ್ಲಿ ಮಿರರ್ ಮುಂದೆ ನಿಂತು ಫೋಟೊ ತೆಗಿಸಿಕೊಂಡಿದ್ದಾರೆ. ನಟಿ ಮಲೈಕಾ ಅವರು ಈ ಫೋಟೊದಲ್ಲಿ ಯಂಗ್ ಲುಕ್ ನಿಂದ ಹೆಚ್ಚು ಗಮನ ಸೆಳೆದಿದ್ದಾರೆ.