ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

10 ವರ್ಷಗಳ ಸಂಶೋಧನೆಗೆ ಜಯ: ಭಾರತದ ಮೊಟ್ಟಮೊದಲ 'ಸ್ವದೇಶಿ' ಕೀಟನಾಶಕ ಬಿಡುಗಡೆ ಮಾಡಿದ ಪಿಐ ಇಂಡಸ್ಟ್ರೀಸ್!

PI Industries: ಪಿಐ ಇಂಡಸ್ಟ್ರೀಸ್ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಅನ್ವೇಷಿಸಿ, ಅಭಿವೃದ್ಧಿಪಡಿಸಿದ ಸ್ವದೇಶಿ ಕೀಟನಾಶಕ ಸಂಯುಕ್ತ 'ಪಯೋಕ್ಸಾನಿಲಿಪ್ರೋಲ್' ಅನ್ನು ಮಂಗಳವಾರ ಅಧಿಕೃತವಾಗಿ ಜಗತ್ತಿಗೆ ಪರಿಚಯಿಸಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ನಿರಂತರ ವೈಜ್ಞಾನಿಕ ಸಂಶೋಧನೆ ಹಾಗೂ ಬೃಹತ್ ಹೂಡಿಕೆಯ ಫಲವಾಗಿ ಈ ಕೀಟನಾಶಕ ರೂಪುಗೊಂಡಿದೆ.

ಬೆಂಗಳೂರು, ನ.3: ಖ್ಯಾತ ಲೈಫ್ ಸೈನ್ಸ್ ಸಂಸ್ಥೆಯಾದ ಪಿಐ ಇಂಡಸ್ಟ್ರೀಸ್ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಅನ್ವೇಷಿಸಿ, ಅಭಿವೃದ್ಧಿಪಡಿಸಿದ ಸ್ವದೇಶಿ ಕೀಟನಾಶಕ ಸಂಯುಕ್ತ 'ಪಯೋಕ್ಸಾನಿಲಿಪ್ರೋಲ್' ಅನ್ನು ಮಂಗಳವಾರ ಅಧಿಕೃತವಾಗಿ ಜಗತ್ತಿಗೆ ಪರಿಚಯಿಸಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ನಿರಂತರ ವೈಜ್ಞಾನಿಕ ಸಂಶೋಧನೆ ಹಾಗೂ ಬೃಹತ್ ಹೂಡಿಕೆಯ ಫಲವಾಗಿ ಈ ಕೀಟನಾಶಕ ರೂಪುಗೊಂಡಿದೆ. ಭಾರತ ಸರ್ಕಾರದ ಕೃಷಿ ಸಚಿವಾಲಯದ ಅಡಿಯಲ್ಲಿ ಬರುವ 'ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ' (ಸಿಐಬಿ&ಆರ್‌ಸಿ) ಇದಕ್ಕೆ ಅಧಿಕೃತ ಅನುಮೋದನೆ ನೀಡಿದ್ದು, 'ಭಾರತದಲ್ಲೇ ಸಂಶೋಧಿಸಲ್ಪಟ್ಟ ಮೊದಲ ಕೀಟನಾಶಕದ ಸಕ್ರಿಯ ಘಟಕ' ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಭಾರತದ ಮಣ್ಣಿಗೆ, ಭಾರತದ ವಿಜ್ಞಾನ

ಭಾರತದ ಕೃಷಿ ಪರಿಸರ ಅತ್ಯಂತ ವೈವಿಧ್ಯಮಯವಾದದ್ದು. ಇಲ್ಲಿನ ಹವಾಮಾನ ಮತ್ತು ಬೆಳೆಗಳಿಗೆ ತಕ್ಕಂತೆ ಕೀಟಗಳ ಬಾಧೆಯೂ ಬದಲಾಗುತ್ತಿರುತ್ತದೆ. ಕಳೆದ 8 ದಶಕಗಳಿಂದ ರೈತರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲ ಪಿಐ ಇಂಡಸ್ಟ್ರೀಸ್, ದೇಶದ ಕೃಷಿ ವಿಶ್ವವಿದ್ಯಾಲಯಗಳ ಜತೆಗೂಡಿ ಈ ಉತ್ಪನ್ನವನ್ನು ಅಭಿವೃದ್ಧಿಪಡಿಸಿದೆ. ವಿಶ್ವದರ್ಜೆಯ ವೈಜ್ಞಾನಿಕ ಮಾನದಂಡಗಳೊಂದಿಗೆ ರೂಪುಗೊಂಡಿರುವ ಈ ಕೀಟನಾಶಕವನ್ನು, ಭಾರತದ ಹವಾಮಾನಕ್ಕೆ ತಕ್ಕಂತೆ ಕೃಷಿಭೂಮಿಯ ಪ್ರಾತ್ಯಕ್ಷಿಕೆಗಳು ಹಾಗೂ ಕಟ್ಟುನಿಟ್ಟಿನ ವೈಜ್ಞಾನಿಕ ಮೌಲ್ಯಮಾಪನಗಳಿಗೆ ಒಳಪಡಿಸಿ ತಯಾರಿಸಲಾಗಿದೆ.

ಈ ಬಗ್ಗೆ ವಿವರ ಹಂಚಿಕೊಂಡಿರುವ ಪಿಐ ಇಂಡಸ್ಟ್ರೀಸ್‌ನ ಉಪಾಧ್ಯಕ್ಷ ಹಾಗೂ ಎಂಡಿ ಮಯಾಂಕ್ ಸಿಂಘಾಲ್, "ಭಾರತದ ಕೃಷಿ ಪದ್ಧತಿಯ ಆಳವಾದ ಅರಿವು ಮತ್ತು ವಿಶ್ವದರ್ಜೆಯ ವಿಜ್ಞಾನದ ಸಮ್ಮಿಲನದಿಂದ ಏನು ಸಾಧಿಸಬಹುದು ಎಂಬುದಕ್ಕೆ ಈ 'ಪಯೋಕ್ಸಾನಿಲಿಪ್ರೋಲ್' ಅತ್ಯುತ್ತಮ ಉದಾಹರಣೆ. ಭಾರತದಲ್ಲೇ ಮೂಲ ಕೃಷಿ ವಿಜ್ಞಾನವನ್ನು ಹುಟ್ಟುಹಾಕಬೇಕು ಎಂಬ ನಮ್ಮ 10 ವರ್ಷಗಳ ಹಿಂದಿನ ಕನಸು ಮತ್ತು ಧೈರ್ಯ ಇಂದು ನನಸಾಗಿದೆ. ಜಗತ್ತಿಗಾಗಿ ಭಾರತದಿಂದಲೇ ಬೌದ್ಧಿಕ ಆಸ್ತಿಯನ್ನು ಸೃಷ್ಟಿಸುತ್ತಿರುವುದು ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಚಾರ” ಎಂದಿದ್ದಾರೆ.

"ಭಾರತೀಯ ಕೃಷಿ ವಿಜ್ಞಾನದ ವಿಕಾಸದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು” ಎಂದು ಬಣ್ಣಿಸಿರುವ ಪಿಐ ಇಂಡಸ್ಟ್ರೀಸ್ ಅಧ್ಯಕ್ಷ ನಾರಾಯಣ್ ಕೆ. ಶೇಷಾದ್ರಿ, “ಇಂತಹ ಅದ್ಭುತವನ್ನು ಸೃಷ್ಟಿಸಲು ದೀರ್ಘಕಾಲೀನ ಬದ್ಧತೆ ಮತ್ತು ಹೂಡಿಕೆ ಅತ್ಯಗತ್ಯ. ಜಾಗತಿಕ ಕೃಷಿಗೆ ಅನುಕೂಲವಾಗುವ ಮುಂದಿನ ಪೀಳಿಗೆಯ ಹೊಸ ಸಂಶೋಧನೆಗಳಿಗೆ ಇದು ಭದ್ರ ಬುನಾದಿಯಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.‌

ರಾಜ್ಯ ಸರ್ಕಾರದಿಂದ ತಳಮಟ್ಟದ ನಾವೀನ್ಯತಾ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ; 4 ಲಕ್ಷ ರೂ.ವರೆಗೆ ಆರ್ಥಿಕ ನೆರವು

'ಪಯೋಕ್ಸಾನಿಲಿಪ್ರೋಲ್' ಒಂದು ಕೀಟನಾಶಕಕ್ಕಿಂತ ಹೆಚ್ಚಾಗಿ ಇದು ಕೃಷಿ ಸಂಶೋಧನೆಯಲ್ಲಿ ಭಾರತ ಸಾಧಿಸುತ್ತಿರುವ ಸ್ವಾವಲಂಬನೆಯ ಸಂಕೇತವಾಗಿದೆ. 1946ರಲ್ಲಿ ಸ್ಥಾಪನೆಯಾದ ಪಿಐ ಇಂಡಸ್ಟ್ರೀಸ್ ಜಾಗತಿಕ ಲೈಫ್-ಸೈನ್ಸ್ ಸಂಸ್ಥೆಯಾಗಿದ್ದು, 700ಕ್ಕೂ ಹೆಚ್ಚು ವಿಜ್ಞಾನಿಗಳು, 200ಕ್ಕೂ ಹೆಚ್ಚು ಪಿಎಚ್‌ಡಿ ತಜ್ಞರನ್ನು ಹೊಂದಿದೆ. ಕೃಷಿ ವಿಜ್ಞಾನ, ರಾಸಾಯನಿಕ ಹಾಗೂ ಫಾರ್ಮಾ ವಲಯದಲ್ಲಿ 260ಕ್ಕೂ ಅಧಿಕ ಪೇಟೆಂಟ್‌ಗಳನ್ನು ಸಂಸ್ಥೆ ಹೊಂದಿದ್ದು, 4,000ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥೆಯು ಭಾರತ ಮತ್ತು ಅಮೆರಿಕದಲ್ಲಿ ಅತ್ಯಾಧುನಿಕ ಆರ್‌&ಡಿ ಕೇಂದ್ರಗಳನ್ನು ಹಾಗೂ ಭಾರತ ಮತ್ತು ಇಟಲಿಯಲ್ಲಿ ವಿಶ್ವದರ್ಜೆಯ ಉತ್ಪಾದನಾ ಘಟಕಗಳನ್ನು ಹೊಂದಿದೆ. ಕೃಷಿ ರಾಸಾಯನಿಕ ಉತ್ಪಾದನೆಯಲ್ಲಿ ವಿಶ್ವದ ಅಗ್ರ 5 ಕಂಪನಿಗಳಲ್ಲಿ ಒಂದಾಗಿರುವ 'ಪಿಐ', 40ಕ್ಕೂ ಹೆಚ್ಚು ದೇಶಗಳ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.