ನವದೆಹಲಿ: ದೇಶಾದ್ಯಂತ ಸಾವಿರಾರು ರೈತರು ಕಾಯುತ್ತಿರುವ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 21ನೇ ಕಂತಿನ ಹಣ (PM Kisan Samman Nidhi) ಶೀಘ್ರದಲ್ಲೇ ಕೈಸೇರಲಿದೆ. ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಕೇಂದ್ರ ಸರ್ಕಾರ (Ministry of Agriculture and Farmers Welfare ) ಆರಂಭಿಸಿದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ( PM Kisan Samman,) ರೈತರಿಗೆ 2,000 ರೂ. ಅನ್ನು ನೀಡಲಾಗುತ್ತದೆ. ಇದರ ವಿತರಣೆ ಪ್ರಕ್ರಿಯೆಯು ಹಲವಾರು ರಾಜ್ಯಗಳಲ್ಲಿ ಈಗಾಗಲೇ ಪ್ರಾರಂಭವಾಗಿದೆ. ದೀಪಾವಳಿ ಹಬ್ಬಕ್ಕೂ ಮೊದಲು ಇದು ರೈತರ ನಿರೀಕ್ಷೆ ಇದೆ.
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿಯಲಿ ರೈತರಿಗೆ ವಾರ್ಷಿಕವಾಗಿ 6,000 ರೂ. ಅನ್ನು 2,000 ರೂ. ಆಗಿ ತಲಾ ಮೂರು ಸಮಾನ ಕಂತುಗಳಲ್ಲಿ ವಿತರಿಸಲಾಗುತ್ತದೆ. ಇದರ ವಿತರಣೆ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ದೀಪಾವಳಿ ಹಬ್ಬಕ್ಕೂ ಮೊದಲು ರೈತರು ಅದನ್ನು ಪಡೆಯುವ ಸಾಧ್ಯತೆ ಇದೆ. ಕಿಸಾನ್ ಸಮ್ಮಾನ್ ಯೋಜನೆಯ 20ನೇ ಕಂತನ್ನು 2025ರ ಆಗಸ್ಟ್ 2ರಂದು ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು.
ಯಾರು ಅರ್ಹರು?
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಲು ರೈತರು 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿದ್ದು, ರಾಜ್ಯ ಮತ್ತು ಕೇಂದ್ರ ಆಡಳಿತ ಪ್ರದೇಶಗಳಲ್ಲಿ ಗುರುತಿಸಲ್ಪಟ್ಟಿರಬೇಕು. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು, ಭೂ ಮಾಲೀಕತ್ವದ ದಾಖಲೆಗಳು, ಮೊಬೈಲ್ ಸಂಖ್ಯೆಯನ್ನು ದಾಖಲೆ ಜೊತೆ ಒದಗಿಸಬೇಕು.
ಅರ್ಜಿ ಸ್ಥಿತಿ ಪರಿಶೀಲನೆ ಹೇಗೆ?
ಫಲಾನುಭವಿಗಳು ಅರ್ಜಿ ಸ್ಥಿತಿಯನ್ನು ಸರ್ಕಾರದ ಅಧಿಕೃತ ವೆಬ್ ಸೈಟ್ pmkisan.gov.in ನಲ್ಲಿ ರೈತರ ಕಾರ್ನರ್ ಅಡಿಯಲ್ಲಿ ಫಲಾನುಭವಿಗಳ ಸ್ಥಿತಿ ಕ್ಲಿಕ್ ಮಾಡಿ. ಬಳಿಕ ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆಯನ್ನು ನಮೂದಿಸಿ. ಪಾವತಿ ಇತಿಹಾಸ ಮತ್ತು ಅರ್ಹತೆಯನ್ನು ಪರಿಶೀಲಿಸಬಹುದು. ಖಾತೆಯ ವಿವರವನ್ನು ಮೊಬೈಲ್ ನಲ್ಲಿ ಪಡೆಯಬೇಕಾದರೆ ಮೊಬೈಲ್ ಸಂಖ್ಯೆಯನ್ನು ಖಾತೆಯೊಂದಿಗೆ ಲಿಂಕ್ ಮಾಡಬೇಕು. ಇದಕ್ಕಾಗಿ pmkisan.gov.in ವೆಬ್ ಸೈಟ್ ನಲ್ಲಿ ರೈತರ ಕಾರ್ನರ್ ಗೆ ಭೇಟಿ ನೀಡಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಿ ಎಂಬುದನ್ನು ಆಯ್ಕೆ ಮಾಡಿ ಆಧಾರ್ ವಿವರಗಳನ್ನು ನಮೂದಿಸಿ. ಒಟಿಪಿ ಪಡೆದು ಬಳಿಕ ಅದನ್ನು ನಮೂದಿಸಿ.
ಇದನ್ನೂ ಓದಿ: EPFO rules: ಮಹತ್ವದ ಬದಲಾವಣೆ- ಪಿಎಫ್ ಖಾತೆಯಿಂದ ಶೇ. 100ರಷ್ಟು ವಿಥ್‌ಡ್ರಾ ಸಾಧ್ಯ!
ಇಲ್ಲಿ ಎಚ್ಚರ ವಹಿಸಬೇಕಾದ ಒಂದು ಸಂಗತಿ ಎಂದರೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಬಗ್ಗೆ ಅತ್ಯಂತ ನಿಖರವಾದ ಮತ್ತು ನವೀಕೃತ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್ ಅನ್ನು ನೋಡಿ ಪರಿಶೀಲಿಸಿಸುವಂತೆ ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.