PM Kisan Samman Nidhi: ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಕಂತು ಬಂದಿಲ್ಲವೆ? ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್
Narendra Modi: ಆಗಸ್ಟ್ 2ರಂದು ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತನ್ನು ಬಿಡುಗಡೆಗೊಳಿಸಿದ್ದು, ಒಟ್ಟು 20,500 ಕೋಟಿ ರೂ. ರಿಲೀಸ್ ಮಾಡಿದ್ದಾರೆ. ಒಂದುವೇಳೆ ನೀವು ಯೋಜನೆಗೆ ಅರ್ಜಿ ಸಲ್ಲಿಸಿಯೂ ಹಣ ಬಂದಿಲ್ಲ ಎಂದಾದರೆ ಚಿಂತಿಸಬೇಕಾಗಿಲ್ಲ. ಇದನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ದೆಹಲಿ: ರೈತರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ 2019ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆ ಪ್ರಕಾರ ರೈತರಿಗೆ 3 ಕಂತುಗಳಲ್ಲಿ 6,000 ರೂ.ಗಳನ್ನು ವರ್ಗಾಯಿಸಲಾಗುತ್ತಿದೆ. ಪ್ರತಿ ಕಂತನ್ನು ಪ್ರತಿ 4 ತಿಂಗಳಿಗೊಮ್ಮೆ ನೀಡಲಾಗುತ್ತದೆ. ಶನಿವಾರ (ಆಗಸ್ಟ್ 2) ಪ್ರಧಾನಿ ನರೇಂದ್ರ ಮೋದಿ (Narendra Modi) ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ಕಾರ್ಯಕ್ರಮಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತನ್ನು ಬಿಡುಗಡೆಗೊಳಿಸಿದ್ದು, ಒಟ್ಟು 20,500 ಕೋಟಿ ರೂ. ರಿಲೀಸ್ ಮಾಡಿದ್ದಾರೆ. ಒಂದುವೇಳೆ ನೀವು ಯೋಜನೆಗೆ ಅರ್ಜಿ ಸಲ್ಲಿಸಿಯೂ ಹಣ ಬಂದಿಲ್ಲ ಎಂದಾದರೆ ಚಿಂತಿಸಬೇಕಾಗಿಲ್ಲ. ಕೆಲವೊಮ್ಮೆ ತಾಂತ್ರಿಕ ದೋಷ ಇನ್ನಿತರ ಕಾರಣಗಳಿಂದ ವಿಳಂಬ ಸಂಭವಿಸುತ್ತದೆ. ಇದನ್ನು ಪರಿಹರಿಸಲು ಸಾಧ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿದಾರರು ತಮ್ಮ ಭೂಮಿಯಲ್ಲಿ ಕೃಷಿ ಮಾಡುವುದು, ಆಧಾರ್ ಆಧಾರಿತ ಪಾವತಿ ಮತ್ತು ಇ-ಕೆವೈಸಿ ಕಡ್ಡಾಯ ಎಂದು ಈ ಹಿಂದೆಯೇ ಕೃಷಿ ಸಚಿವಾಲಯ ತಿಳಿಸಿತ್ತು. ಇದರಲ್ಲಿ ಯಾವುದಾದರೊಂದು ಪ್ರಕ್ರಿಯೆ ಪೂರ್ಣವಾಗದಿದ್ದರೆ ಕಿಸಾನ್ ಸಮ್ಮಾನ್ ನಿಧಿಯ ಕಂತು ಪಾವತಿಯಾಗಿವುದಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
सशक्त किसान, समृद्ध राष्ट्र! 🇮🇳#PMKISAN योजना के तहत एक और ऐतिहासिक कदम।
— PM Kisan Samman Nidhi (@pmkisanofficial) August 2, 2025
PM @narendramodi ने एक क्लिक में ₹20,500 करोड़ की राशि 9.7 करोड़ किसानों के खातों में DBT से ट्रांसफर की।
यह केवल आर्थिक सहायता नहीं,
बल्कि आत्मसम्मान और आत्मनिर्भरता का प्रतीक है। #PMKisan20thInstallment pic.twitter.com/L5Saiay6YF
ಏನು ಮಾಡಬೇಕು?
ಒಂದುವೇಳೆ ರೈತರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಕೂಡಲೇ ಹಿಂದಿನ ಬಾಕಿ ಜತೆಗೆ ಎಲ್ಲ ಕಂತುಗಳು ಪಾವತಿಯಾಗಲಿದೆ. ಪಿಎಂ ಕಿಸಾನ್ ನಿಧಿ ಯೋಜನೆಗೆ ಹೆಸರು ನೋಂದಾಯಿಸಿರುವವರು ಇ-ಕೈವೈಸಿ ಮಾಡಿಸುವುದು ಕಡ್ಡಾಯ ಎಂದು ವೆಬ್‌ಸೈಟ್ ತಿಳಿಸಿದೆ. ನೀವು ಒಟಿಪಿ ಆಧಾರಿತ ಇ-ಕೆವೈಸಿ, ಬಯೋಮೆಟ್ರಿಕ್ ಇ-ಕೆವೈಸಿ ಮತ್ತು ಫೇಶಿಯಲ್ ಆಥಂಟಿಕೇಶನ್ ಮೂಲಕ ಇ-ಕೆವೈಸಿ ಪೂರೈಸಬಹುದು. ಅದಾಗ್ಯೂ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದೂ ಕಂತು ಪಾವತಿಯಾದಿದ್ದರೆ ನೀವು ದೂರು ಸಲ್ಲಿಸಬಹುದು.
ಈ ಸುದ್ದಿಯನ್ನೂ ಓದಿ: PM-Kisan: ಆ. 2ರಂದು ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತು ಬಿಡುಗಡೆ; ಹೀಗೆ ಹೆಸರು ನೋಂದಾಯಿಸಿ
ದೂರು ನೀಡುವುದು ಹೇಗೆ?
ಪಿಎಂ ಕಿಸಾನ್ ಹೆಲ್ಪ್‌ಡೆಸ್ಕ್‌ಗೆ ನೀವು ದೂರು ಸಲ್ಲಿಸಬಹುದು. ಇದಕ್ಕಾಗಿ ನೀವು ಇ-ಮೇಲ್ ಅಥವಾ ಹೆಲ್ಪ್‌ಲೈನ್ ನಂಬರ್ ಬಳಸಬಹುದು.
ಇ-ಮೇಲ್ ಐಡಿ: pmkisan-ict@gov.in. ಮತ್ತು pmkisan-funds@gov.in.
ಹೆಲ್ಪ್‌ಲೈನ್ ನಂ.: 011-24300606,155261
ಟೋಲ್ ಫ್ರೀ ನಂ.: 1800-115-526.
ಪಿಎಂ ಕಿಸಾನ್ ಯೋಜನೆಗೆ ಅರ್ಹರೇ ಎನ್ನುವುದು ಪರಿಶೀಲಿಸುವುದು ಹೇಗೆ?
- ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್: pmkisan.gov.inಗೆ ಭೇಟಿ ನೀಡಿ.
- ಹೋಮ್‌ಪೇಜ್‌ನಲ್ಲಿ Beneficiary Status ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನೀವು ಆಧಾರ್ ನಂಬರ್, ಬ್ಯಾಂಕ್ ಅಕೌಂಟ್ ನಂಬರ್ ಅಥವಾ ಮೊಬೈಲ್ ನಂಬರ್ ನಮೂದಿಸಿ.
- ಬಳಿಕ ಅಗತ್ಯ ಮಾಹಿತಿ ನೀಡಬೇಕು. ಕೊನೆಗೆ Get Data ಬಟನ್ ಕ್ಲಿಕ್ ಮಾಡಿ.
- ಈಗ ಸ್ಕ್ರೀನ್ ಮೇಲೆ ವಿವರ ಮೂಡುತ್ತದೆ.
ಪಿಎಂ ಕಿಸಾನ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್ pmkisan.gov.inಗೆ ಭೇಟಿ ನೀಡಬೇಕು.
- ಹೊಸ ರೈತರು ನೋಂದಣಿ (New Farmer Registration) ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ಆಧಾರ್ ಸಂಖ್ಯೆ, ರಾಜ್ಯ, ಜಿಲ್ಲೆ ಮತ್ತು ವೈಯಕ್ತಿಕ ಬ್ಯಾಂಕ್ ಮಾಹಿತಿ ಸೇರಿದಂತೆ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ನಂತರ ಫಾರ್ಮ್ ಅನ್ನು ಸಲ್ಲಿಸಿ ಮತ್ತು ಸೇವ್ ಮಾಡಿ ಇಟ್ಟುಕೊಳ್ಳಿ.
- ನಿಮ್ಮ ಅರ್ಜಿ ಸಲ್ಲಿಕೆ ಆದ ನಂತರ ಅನುಮೋದನೆ ನೀಡುವ ಮೊದಲು ಸ್ಥಳೀಯ ಅಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ.
- ಅರ್ಜಿಯ ಸ್ಥಿತಿಯನ್ನು ಹೀಗೆ ಪರಿಶೀಲಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ-pmkisan.gov.in
- ಈಗ ಪುಟದ ಬಲಭಾಗದಲ್ಲಿರುವ ‘ನಿಮ್ಮ ಸ್ಥಿತಿಯನ್ನು ತಿಳಿದುಕೊಳ್ಳಿ (Know Your Status) ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು ಡೇಟಾ ಪಡೆಯಿರಿ ಆಯ್ಕೆಯನ್ನು ಆರಿಸಿ ನಿಮ್ಮ ಫಲಾನುಭವಿ ಸ್ಥಿತಿ ಪರದೆಯ ಮೇಲೆ ಬರುತ್ತದೆ.