Share Market: ಸತತ 3ನೇ ದಿನ ಸೆನ್ಸೆಕ್ಸ್ ಏರಿಕೆ, ನಿಫ್ಟಿ 22,900ಕ್ಕೆ ಜಿಗಿತ
Stock Market: ಸತತ ಮೂರು ದಿನಗಳಿಂದ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಚೇತರಿಸುತ್ತಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸಕಾರಾತ್ಮಕವಾಗಿ ದಿನದಾಟ ಮುಕ್ತಾಯಗೊಳಿಸಿದೆ. ಸೆನ್ಸೆಕ್ಸ್ ಬುಧವಾರ 147 ಅಂಕ ಏರಿಕೆಯಾಗಿ 75,449ಕ್ಕೆ ಸ್ಥಿರವಾದರೆ, ನಿಫ್ಟಿ 73 ಅಂಕ ಏರಿಕೆಯಾಗಿ 22,907ಕ್ಕೆ ತಲುಪಿತು.

ಸಾಂದರ್ಭಿಕ ಚಿತ್ರ.

ಮುಂಬೈ: ಸತತ ಮೂರು ದಿನಗಳಿಂದ ಮುಂಬೈ ಷೇರು ಮಾರುಕಟ್ಟೆ (Share Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) ಚೇತರಿಸುತ್ತಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ (Nifty) ಸಕಾರಾತ್ಮಕವಾಗಿ ದಿನದಾಟ ಮುಕ್ತಾಯಗೊಳಿಸಿದೆ. ಸೆನ್ಸೆಕ್ಸ್ ಬುಧವಾರ 147 ಅಂಕ ಏರಿಕೆಯಾಗಿ 75,449ಕ್ಕೆ ಸ್ಥಿರವಾದರೆ, ನಿಫ್ಟಿ 73 ಅಂಕ ಏರಿಕೆಯಾಗಿ 22,907ಕ್ಕೆ ತಲುಪಿತು. ಬ್ಯಾಂಕಿಂಗ್, ಲೋಹ ವಲಯದ ಷೇರುಗಳು ಭಾರಿ ಏರಿಕೆ ದಾಖಲಿಸಿತು. ಎಲ್ & ಟಿ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭ ಗಳಿಸಿದವು. ಟಾಟಾ ಸ್ಟೀಲ್, ಜೊಮ್ಯಾಟೊ, ಪವರ್ ಗ್ರಿಡ್, ಅಲ್ಟ್ರಾ ಟೆಕ್ ಸಿಮೆಂಟ್, ಇಂಡಸ್ ಇಂಡ್ ಬ್ಯಾಂಕ್, ಅದಾನಿ ಪೋರ್ಟ್ಸ್ ಷೇರುಗಳು ಕೂಡ ಲಾಭ ಗಳಿಸಿವೆ.
ಐಟಿಸಿ, ಇನ್ಫೋಸಿಸ್, ಸನ್ ಫಾರ್ಮಾ, ಮಾರುತಿ, ಎಚ್‌ಸಿಎಲ್ ಟೆಕ್, ನೆಸ್ಲೆ ಷೇರುಗಳ ದರ ಇಳಿಯಿತು. ಪವರ್ ಗ್ರಿಡ್ ಮತ್ತು ಅಲ್ಟ್ರಾ ಟೆಕ್ ಷೇರುಗಳು ತಲಾ 2% ಲಾಭ ಗಳಿಸಿತು. ನಿಫ್ಟಿ 23,000 ಅಂಕಗಳತ್ತ ದಾಪುಗಾಲಿಡುತ್ತಿದ್ದು, ಹೂಡಿಕೆದಾರರಿಗೆ ನಿರಾಳ ಮೂಡಿಸಿದೆ. ವಿದೇಶಿ ಹೂಡಿಕೆದಾರರು 700 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಶಪೋರ್ಜಿ ಪಲ್ಲೋನ್‌ಜಿ ಗ್ರೂಪ್ ಬಾಂಡ್‌ಗಳ ಮಾರಾಟದ ಮೂಲಕ 3.3 ಶತಕೋಟಿ ಡಾಲರ್ ಫಂಡ್ ಅನ್ನು ಸಂಗ್ರಹಿಸುವ ಉದ್ದೇಶ ಹೊಂದಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ 86.44 ಕ್ಕೆ ಏರಿತು.
ಈ ಸುದ್ದಿಯನ್ನೂ ಓದಿ: India's Richest MLA: ದೇಶದ ಶ್ರೀಮಂತ ಶಾಸಕರ ಪಟ್ಟಿ ರಿಲೀಸ್; 2ನೇ ಸ್ಥಾನದಲ್ಲಿ ಡಿಕೆಶಿ: ಫಸ್ಟ್ ಪ್ಲೇಸ್ ಯಾರಿಗೆ?
ಕಳೆದ ಸೆಪ್ಟೆಂಬರ್ ಬಳಿಕ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿಯುತ್ತಲೇ ಇತ್ತು. ಇದೀಗ ಸತತ ಮೂರು ದಿನಗಳಿಂದ ಏರಿಕೆಯ ಹಾದಿಯಲ್ಲಿರುವುದು ಗಮನಾರ್ಹವಾಗಿದೆ.