ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಸೆನ್ಸೆಕ್ಸ್‌ 442 ಅಂಕ ಜಿಗಿತ, ಬೆಮೆಲ್‌ 1:2 ಷೇರು ವಿಭಜನೆ, ಜೊಮ್ಯಾಟೊ ಆದಾಯ ಏರಿಕೆ

Share Market: ಸೆನ್ಸೆಕ್ಸ್‌ ಸೋಮವಾರ 442 ಅಂಕ ಗಳಿಸಿಕೊಂಡು 82,200ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 122 ಅಂಕ ಗಳಿಸಿಕೊಂಡು 25,090 ಕ್ಕೆ ಸ್ಥಿರವಾಯಿತು. ಈ ವಾರ ಇನ್ಫೋಸಿಸ್‌, ಡಿಕ್ಸಾನ್‌ ಟೆಕ್ನಾಲಜೀಸ್‌, ಐಆರ್‌ಎಫ್‌ಸಿ, ಪೇಟಿಎಂ, ನೆಸ್ಲೆ ಇಂಡಿಯಾ, ಎಟರ್ನಲ್‌ ಮೊದಲಾದ 95ಕ್ಕೂ ಹೆಚ್ಚು ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಪ್ರಕಟವಾಗಲಿವೆ.

ಸಾಂದರ್ಭಿಕ ಚಿತ್ರ.

-ಕೇಶವ ಪ್ರಸಾದ್ ಬಿ.‌

ಮುಂಬೈ: ಸೋಮವಾರ ಸೆನ್ಸೆಕ್ಸ್‌ 442 ಅಂಕ ಗಳಿಸಿಕೊಂಡು 82,200ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 122 ಅಂಕ ಗಳಿಸಿಕೊಂಡು 25,090ಕ್ಕೆ ಸ್ಥಿರವಾಯಿತು (Stock Market). ಈ ವಾರ ಇನ್ಫೋಸಿಸ್‌, ಡಿಕ್ಸಾನ್‌ ಟೆಕ್ನಾಲಜೀಸ್‌, ಐಆರ್‌ಎಫ್‌ಸಿ, ಪೇಟಿಎಂ, ನೆಸ್ಲೆ ಇಂಡಿಯಾ, ಎಟರ್ನಲ್‌ ಮೊದಲಾದ 95ಕ್ಕೂ ಹೆಚ್ಚು ಕಂಪನಿಗಳ ತ್ರೈಮಾಸಿಕ ಫಲಿತಾಂಶ ಪ್ರಕಟವಾಗಲಿದೆ. ಸೋಮವಾರ ಸಾಧಾರಣ ರೀತಿಯಲ್ಲಿ ಆರಂಭವಾದ ವಹಿವಾಟು, ಪ್ರಮುಖ ಬ್ಯಾಂಕ್‌ಗಳ‌ ಪ್ರಬಲ ತ್ರೈಮಾಸಿಕ ರಿಸಲ್ಟ್‌ ಹಿನ್ನೆಲೆಯಲ್ಲಿ ಚೇತರಿಸಿಕೊಂಡಿತು. ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್ ನ ಏಪ್ರಿಲ್-ಜೂನ್‌ ಫಲಿತಾಂಶ ಸಕಾರಾತ್ಮಕವಾಗಿತ್ತು. ಹೀಗಿದ್ದರೂ, ವಿಪ್ರೊ, ಎಚ್‌ಸಿಎಲ್‌ ಟೆಕ್‌, ಎಂಫಸಿಸ್‌ ಮತ್ತು ಇನ್ಫೋಸಿಸ್‌ ಷೇರುಗಳ ದರ ಇಳಿಯಿತು. ಆಯಿಲ್‌ & ಗ್ಯಾಸ್‌, ಪಿಎಸ್‌ಯು ಬ್ಯಾಂಕ್‌, ಫಾರ್ಮಾ ಇಂಡೆಕ್ಸ್‌ ಇಳಿಯಿತು. ನಿಫ್ಟಿ ಮಿಡ್‌ ಕ್ಯಾಪ್‌ 100 ಕೂಡ ಸ್ವಲ್ಪ ತಗ್ಗಿತು.



ಇವತ್ತು ಲಾಭ ಗಳಿಸಿದ ಷೇರುಗಳ ಲಿಸ್ಟ್‌

ಐಸಿಐಸಿಐ ಬ್ಯಾಂಕ್‌: 1,460/-

ಎಚ್‌ಡಿಎಫ್‌ಸಿ ಬ್ಯಾಂಕ್‌: 1,997/-

KIOCL: 306/-

ಟೈಮ್ಸ್‌ ಸ್ಕ್ಯಾನ್‌ ಲಾಜಿಸ್ಟಿಕ್ಸ್‌: 57/-

ಪರ್ಸಿಸ್ಟೆಂಟ್‌ ಸಿಸ್ಟಮ್ಸ್‌: 5779/-

ಯುಪಿಎಲ್‌ ಲಿಮಿಟೆಡ್‌: 713/-

MMTC: 70/-

ಬ್ರಿಗೇಡ್‌ ಹೋಟೆಲ್‌ ವೆಂಚರ್ಸ್‌ ದಕ್ಷಿಣ ಭಾರತದಲ್ಲಿ ಹೋಟೆಲ್‌ಗಳನ್ನು ನಿರ್ಮಿಸುತ್ತಿದ್ದು, ಷೇರು ಮಾರುಕಟ್ಟೆ ಪ್ರವೇಶಿಸಿದೆ. ಇದರ ಐಪಿಒದಲ್ಲಿ ಪ್ರತಿ ಷೇರಿನ Price band 85-90 ರುಪಾಯಿ ಆಗಿದೆ. 750 ಕೋಟಿ ರುಪಾಯಿ ಗಾತ್ರದ ಐಪಿಒ ಇದಾಗಿದೆ. ಬ್ರಿಗೇಡ್‌ ಹೋಟೆಲ್‌ ವೆಂಚರ್ಸ್‌ನ ಮಾರುಕಟ್ಟೆ ಬಂಡವಾಳ ಮೌಲ್ಯ 3,400 ಕೋಟಿ ರುಪಾಯಿ ಆಗಿದೆ.

ಬೆಂಗಳೂರು ಮೂಲದ ರಕ್ಷಣಾ ವಲಯದ ಕಂಪನಿಯಾದ ಬೆಮೆಲ್‌ನ ಆಡಳಿತ ಮಂಡಳಿಯು 1:2 ಅನುಪಾತದಲ್ಲಿ ಷೇರಿನ ವಿಭಜನೆಗೆ ಅನುಮೋದಿಸಿದೆ. ಅಂದರೆ ಷೇರುದಾರರ ಪ್ರತಿ ಒಂದು ಷೇರು ಎರಡಾಗಲಿದೆ. ಆದರೆ ಷೇರಿನ ಒಟ್ಟು ಮೌಲ್ಯದಲ್ಲಿ ಬದಲಾವಣೆ ಆಗುವುದಿಲ್ಲ. ಈಗ ಇರುವ 10 ರುಪಾಯಿ ಮುಖಬೆಲೆಯ ಷೇರಿ ಮುಖಬೆಲೆ 5 ಆಗಲಿದೆ.

ಉದಾಹರಣೆಗೆ ಒಬ್ಬ ವ್ಯಕ್ತಿ ಬೆಮೆಲ್‌ನ 10 ಷೇರುಗಳನ್ನು ಹೊಂದಿದ್ದು ಪ್ರತಿ ಷೇರಿನ ದರ 100 ರುಪಾಯಿ ಎಂದು ಭಾವಿಸಿ. ಒಟ್ಟು ಮೌಲ್ಯ 1000/-. ವಿಭಜನೆಯ ನಂತರ ಆತನ ಬಳಿ ಇರುವ ಷೇರುಗಳ ಸಂಖ್ಯೆ 20 ಆಗಲಿದೆ. ಆದರೆ ಪ್ರತಿ ಷೇರಿನ ಬೆಲೆ 50 ರುಪಾಯಿ ಆಗಲಿದೆ. ಹೀಗಿದ್ದರೂ ಒಟ್ಟು ಮೌಲ್ಯದಲ್ಲಿ ಬದಲಾವಣೆಯಾಗುವುದಿಲ್ಲ. 1000/- ಆಗಿರುತ್ತದೆ. ಸ್ಟಾಕ್‌ ಮಾರ್ಕೆಟ್‌ನಲ್ಲಿ ಬೆಮೆಲ್‌ ಷೇರಿನ ಈಗಿನ ದರ 4,374 ರುಪಾಯಿ ಆಗಿದೆ. ಬೆಮೆಲ್‌ ನಾಲ್ಕನೇ ತ್ರೈಮಾಸಿಕದಲ್ಲಿ, ಅಂದರೆ ಜನವರಿ-ಮಾರ್ಚ್‌ ಅವಧಿಯಲ್ಲಿ 288 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು.

ಫಿನ್‌ ಟೆಕ್‌ ವಲಯದ ಪ್ರಮುಖ ಕಂಪನಿಯಾದ ಪೇಟಿಎಂ ಏಪ್ರಿಲ್-ಜೂನ್‌ ತ್ರೈಮಾಸಿಕ ಅವಧಿಯ ಫಲಿತಾಂಶವನ್ನು ಪ್ರಕಟಿಸಲಿದ್ದು, ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ 19 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸುವ ನಿರೀಕ್ಷೆ ಇದೆ. ಆದಾಯದಲ್ಲಿ 29% ಹೆಚ್ಚಳವಾಗುವ ಸಾಧ್ಯತೆ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪೇಟಿಎಂ ನಷ್ಟದಲ್ಲಿತ್ತು ಎಂಬುದನ್ನು ಗಮನಿಸಬಹುದು.

ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶದ ಮೇಲೆ ಷೇರು ಹೂಡಿಕೆದಾರರ ಗಮನ ಈಗ ಇದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಐಸಿಐಸಿಐ ಬ್ಯಾಂಕ್‌ ರಿಸಲ್ಟ್‌ ಬಗ್ಗೆ ಹೂಡಿಕೆದಾರರು ಸೋಮವಾರ ಸಕಾರಾತ್ಮಕವಾಗಿದ್ದರು. ಇದಾದ ಬಳಿಕ ಇನ್ಫೋಸಿಸ್‌, ಡಾ. ರೆಡ್ಡೀಸ್‌ ಲ್ಯಾಬೊರೇಟರೀಸ್‌, ಬಜಾಜ್‌ ಫೈನಾನ್ಸ್‌, ನೆಸ್ಲೆ ಇಂಡಿಯಾ, ಸಿಪ್ಲಾ ತಮ್ಮ ತ್ರೈಮಾಸಿಕ ರಿಸಲ್ಟ್‌ ಅನ್ನು ಪ್ರಕಟಿಸಲಿದ್ದು ಸ್ಟಾಕ್‌ ಮಾರ್ಕೆಟ್‌ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ.

ಈ ವಾರ Q1 ರಿಸಲ್ಟ್‌ ಪ್ರಕಟಿಸಲಿರುವ ಕಂಪನಿಗಳ ವಿವರ

ಜುಲೈ 21

ಎಟರ್ನಲ್‌

ಆಂಧ್ರ ಸಿಮೆಂಟ್ಸ್‌

ಚಾಯ್ಸ್‌ ಇಂಟರ್‌ ನ್ಯಾಶನಲ್‌

ಬನ್ಸಾಲ್‌ ವೈರ್‌ ಇಂಡಸ್ಟ್ರೀಸ್‌

ಸಿಐಇ ಆಟೊಮೇಟಿವ್‌ ಇಂಡಿಯಾ

ಕಂಟ್ರೋಲ್‌ ಪ್ರಿಂಟ್‌

ಕ್ರಿಸಿಲ್‌

ಧನಲಕ್ಷ್ಮಿ ಬ್ಯಾಂಕ್‌

ಹ್ಯಾವೆಲ್ಸ್‌ ಇಂಡಿಯಾ

ಐಡಿಬಿಐ ಬ್ಯಾಂಕ್‌

ಒಬೆರಾಯ್‌ ರಿಯಾಲಿಟಿ

ಪರಾಗ್‌ ಮಿಲ್ಕ್‌ ಫುಡ್ಸ್‌

ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌

ಅಲ್ಟ್ರಾ ಟೆಕ್‌ ಸಿಮೆಂಟ್‌

ಜುಲೈ 22

ಕೋಲ್ಗೇಟ್‌ ಪಾಮೊಲಿವ್‌ ಇಂಡಿಯಾ

ಕ್ರೆಡಿಟ್‌ ಅಸೆಸ್‌ ಗ್ರಾಮೀಣ್‌

ದಾಲ್ಮಿಯಾ ಭಾರತ್‌

ಡಿಕ್ಸಾನ್‌ ಟೆಕ್ನಾಲಜೀಸ್‌

ಇಂಡಿಯನ್‌ ರೈಲ್ವೆ ಫೈನಾನ್ಸ್‌ ಕಾರ್ಪೊರೇಷನ್‌ ಅಥವಾ IRFC

JSW ಇನ್‌ ಫ್ರಾಸ್ಟ್ರಕ್ಚರ್‌

ಕಜಾರಿಯಾ ಸಿರಾಮಿಕ್ಸ್‌

ವನ್‌ 97 ಕಮ್ಯುನಿಕೇಶನ್ಸ್‌

ಶ್ಯಾಮ್‌ ಮೆಟಾಲಿಕ್ಸ್‌ ಆಂಡ್‌ ಎನರ್ಜಿ

ಯುನೈಟೆಡ್‌ ಬ್ರೇವರೀಸ್‌

ವರ್ಧಮಾನ್‌ ಟೆಕ್ಸ್‌ ಟೈಲ್ಸ್‌

ಝೀ ಎಂಟರ್‌ಟೈನ್‌ ಎಂಟರ್‌ಪ್ರೈಸ್‌

ಜುಲೈ 23

ಆದಿತ್ಯ ಬಿರ್ಲಾ ರಿಯಲ್‌ ಎಸ್ಟೇಟ್‌

ಬಜಾಜ್‌ ಹೌಸಿಂಗ್‌ ಫೈನಾನ್ಸ್‌

ಡಾ ರೆಡ್ಡೀಸ್‌ ಲ್ಯಾಬೊರೇಟರೀಸ್‌

ಇನ್ಫೋಸಿಸ್‌

ಮಹಾರಾಷ್ಟ್ರ ಸ್ಕೂಟರ್ಸ್‌

ಒರಾಕಲ್‌ ಫೈನಾನ್ಷಿಯಲ್‌ ಸರ್ವೀಸ್‌ ಸಾಫ್ಟ್‌ವೇರ್‌

ಪರ್ಸಿಸ್ಟೆನ್ಸ್‌ ಸಿಸ್ಟಮ್ಸ್‌

ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಟ್ಸ್‌

ಜುಲೈ 24

ಎಸಿಸಿ

ಅದಾನಿ ಎನರ್ಜಿ ಸಲ್ಯೂಷನ್ಸ್‌

ಆದಿತ್ಯ ಬಿರ್ಲಾ ಸನ್‌ ಲೈಫ್‌ ಎಎಂಸಿ

ಕರೂರ್‌ ವೈಶ್ಯ ಬ್ಯಾಂಕ್‌

ಮೋತಿಲಾಲ್‌ ಓಸ್ವಾಲ್‌ ಸರ್ವೀಸ್‌

ನೆಸ್ಲೆ ಇಂಡಿಯಾ

ಎಸ್‌ಬಿಐ ಲೈಫ್‌ ಇನ್ಷೂರೆನ್ಸ್‌ ಕಂಪನಿ

ಜುಲೈ 25

ಆಧಾರ್‌ ಹೌಸಿಂಗ್‌ ಫೈನಾನ್ಸ್‌

ಬಜಾಜ್‌ ಫಿನ್‌ ಸರ್ವ್‌

ಬ್ಯಾಂಕ್‌ ಆಫ್‌ ಬರೋಡಾ

ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್‌

ಟಾಟಾ ಕೆಮಿಕಲ್ಸ್‌

ಶೋಭಾ

ಶ್ರೀರಾಮ್‌ ಫೈನಾನ್ಸ್

ಜುಲೈ 26

ಕೋಟಕ್‌ ಮಹೀಂದ್ರಾ ಬ್ಯಾಂಕ್‌‌

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌

ಜೆನ್‌ ಟೆಕ್ನಾಲಜೀಸ್‌

ಬಾಲಕೃಷ್ಣ ಇಂಡಸ್ಟ್ರೀಸ್‌

ಸೆಂಟ್ರಲ್‌ ಡೆಪಾಸಿಟರಿ ಸರ್ವೀಸ್‌ ಅಥವಾ CDSI

ಈ ಎಲ್ಲ ಕಂಪನಿಗಳು ಮತ್ತು ಸಂಸ್ಥೆಗಳು ಈ ವಾರ ತಮ್ಮ ಮೊದಲ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಲಿವೆ.

ಅಲ್ಟ್ರಾ ಟೆಕ್‌ ಸಿಮೆಂಟ್‌ ಸೋಮವಾರ 2,226 ಕೋಟಿ ರುಪಾಯಿ ನಿವ್ವಳ ಲಾಭದ ರಿಸಲ್ಟ್‌ ಅನ್ನು ಪ್ರಕಟಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,495 ಕೋಟಿ ರುಪಾಯಿ ನಿವ್ವಳ ಲಾಭ ದಾಖಲಿಸಿತ್ತು. ಕಂಪನಿಯ ಆದಾಯ 21,275 ಕೋಟಿ ರುಪಾಯಿಗೆ ಏರಿದ್ದು, 13% ಹೆಚ್ಚಳವಾಗಿದೆ.

ಆನ್‌ಲೈನ್ ಫುಡ್‌ ಡೆಲಿವರಿ ಸಂಸ್ಥೆ‌ ಜೊಮ್ಯಾಟೊದ ಮಾತೃಸಂಸ್ಥೆಯಾದ ಎಟರ್ನಲ್‌, ತನ್ನ ಏಪ್ರಿಲ್-ಜೂನ್‌ ತ್ರೈಮಾಸಿಕ ರಿಸಲ್ಟ್‌ ಪ್ರಕಟಿಸಿದ್ದು, 25 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಲಾಭದಲ್ಲಿ 90% ಇಳಿಕೆಯಾಗಿದ್ದರೂ, ಆದಾಯದಲ್ಲಿ 70% ಏರಿಕೆ ಆಗಿರುವುದು ಗಮನಾರ್ಹ. ಕಳೆದ ವರ್ಷ ಇದೇ ಅವಧಿಯಲ್ಲಿ ಜೊಮ್ಯಾಟೊ 253 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು. ಆದರೆ ಜೊಮ್ಯಾಟೊ ಮಾತೃ ಸಂಸ್ಥೆ ಎಟರ್ನಲ್‌ನ ಒಟ್ಟು ಆದಾಯ 7,167 ಕೋಟಿ ರುಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,206 ಕೋಟಿ ರುಪಾಯಿ ಆದಾಯ ಗಳಿಸಿತ್ತು.ಎಟರ್ನಲ್‌ನ ಮತ್ತೊಂದು ಅಧೀನ ಸಂಸ್ಥೆಯಾಗಿರುವ ಬ್ಲಿಂಕಿಟ್‌ ಆದಾಯದಲ್ಲಿ ಕೂಡ ಏರಿಕೆಯಾಗಿದೆ. ಉತ್ತಮ ರಿಸಲ್ಟ್‌ ಬೆನ್ನಲ್ಲೇ ಎಟರ್ನಲ್‌ ಷೇರಿನ ದರದಲ್ಲಿ 7% ಏರಿಕೆ ಆಯಿತು. ಎಟರ್ನಲ್‌ ಷೇರಿನ ದರ 274 ರುಪಾಯಿಗೆ ಏರಿಕೆಯಾಗಿದೆ. ಎಟರ್ನಲ್‌ ಏಪ್ರಿಲ್-ಜೂನ್‌ ಅವಧಿಯಲ್ಲಿ ಫುಡ್‌ ಡೆಲಿವರಿಯಿಂದ 2,261 ಕೋಟಿ ರುಪಾಯಿ ಹಾಗೂ ಕ್ವಿಕ್‌ ಕಾಮರ್ಸ್‌ ಮೂಲಕ 2,400 ಕೋಟಿ ರುಪಾಯಿ ಆದಾಯ ಗಳಿಸಿದೆ. ಬಿ2ಬಿ ಬಿಸಿನೆಸ್‌ ಮೂಲಕ 2,295 ಕೋಟಿ ರುಪಾಯಿ ಆದಾಯವನ್ನು ಗಳಿಸಿದೆ.

ಈ ವಾರ ಡಿವಿಡೆಂಡ್‌ ನೀಡಲಿರುವ ಸ್ಟಾಕ್ಸ್‌ ಲಿಸ್ಟ್‌ಗಳ ವಿವರ

ಎಲ್‌ಐಸಿ, ಹೀರೊ ಮೊಟೊಕಾರ್ಪ್‌, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಝೈಡೂಸ್‌ ಲೈಫ್‌ ಸೈನ್ಸ್‌ ಜುಲೈ 21-25 ಅವಧಿಯಲ್ಲಿ ಡಿವಿಡೆಂಡ್‌ ನೀಡಲಿವೆ.

ಭಾರತೀಯ ಜೀವ ವಿಮೆ ನಿಗಮ ಅಥವಾ ಎಲ್‌ ಐಸಿಯು ಪ್ರತಿ ಷೇರಿಗೆ 12 ರುಪಾಯಿ ಡಿವಿಡೆಂಡ್‌ ನೀಡುತ್ತಿದ್ದು, ಇದರ ರೆಕಾರ್ಡ್‌ ಡೇಟ್‌ ಜುಲೈ 25 ಆಗಿದೆ.

ಹೀರೋ ಮೋಟೊ ಕಾರ್ಪ್‌ ಕಂಪನಿಯ ರೆಕಾರ್ಡ್‌ ಡೇಟ್‌ ಜುಲೈ 24 ಆಗಿದೆ. ಕಂಪನಿಯು ಪ್ರತಿ ಷೇರಿಗೆ 65 ರುಪಾಯಿ ಡಿವಿಡೆಂಡ್‌ ನೀಡಲಿದೆ. ಲುಪಿನ್‌ ಕಂಪನಿಯ ರೆಕಾರ್ಡ್‌ ಡೇಟ್‌ ಜುಲೈ 25 ಆಗಿದೆ. ಲುಪಿನ್‌ ಪ್ರತಿ ಷೇರಿಗೆ 12/- ಡಿವಿಡೆಂಡ್‌ ನೀಡಲಿದೆ. ಈ ಎಲ್ಲ ಡಿವಿಡೆಂಡ್‌ಗಳನ್ನು ಪಡೆಯಲು ಬಯಸುವ ಷೇರುದಾರರು ಆಯಾ ರೆಕಾರ್ಡ್‌ ಡೇಟ್‌ ಒಳಗಾಗಿ ಷೇರುಗಳನ್ನು ಖರೀದಿಸಬೇಕಾಗುತ್ತದೆ. ಡಿವಿಡೆಂಡ್‌ ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆಯಾಗಲಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌ 2025ರಲ್ಲಿ ಇದುವರೆಗೆ 79,344 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಹೀಗಿದ್ದರೂ, ನಿರ್ದಿಷ್ಟ ವಲಯಗಳಿಂದ ಹಿಂತೆಗೆದುಕೊಂಡಿದ್ದಾರೆ. ಕೆಲವು ಸೆಕ್ಟರ್‌ಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಿದ್ದಾರೆ. ವಿದೇಶಿ ಹೂಡಿಕೆದಾರರು ಹಣಕಾಸು, ಟೆಲಿಕಾಂ, ಸೇವಾ ಕ್ಷೇತ್ರದಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸಿದ್ದಾರೆ. ಟೆಲಿಕಾಂ ಅವರ ಫೇವರಿಟ್‌ ಆಗಿದ್ದು ಈ ವರ್ಷ ಇದುವರೆಗೆ ಟೆಲಿಕಾಂ ಕ್ಷೇತ್ರದಲ್ಲಿ 26,968 ಕೋಟಿ ರುಪಾಯಿಗಳ ಹೂಡಿಕೆ ಮಾಡಿದ್ದಾರೆ.

2025ರಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಹೂಡಿಕೆ ವಿವರ

ಟೆಲಿಕಾಂ: 26,968 ಕೋಟಿ ರುಪಾಯಿ

ಹಣಕಾಸು ಸೇವೆ: 14,537 ಕೋಟಿ ರುಪಾಯಿ

ಸೇವೆ: 10,027 ಕೋಟಿ ರುಪಾಯಿ

ರಾಸಾಯನಿಕ : 6,018 ಕೋಟಿ ರುಪಾಯಿ

ಎಫ್‌ಐಐ ಹೆಚ್ಚು ಷೇರು ಮಾರಾಟ ಮಾಡಿದ ವಲಯ:

ಮಾಹಿತಿ ತಂತ್ರಜ್ಞಾನ/ಐಟಿ : 36,079 ಕೋಟಿ ರುಪಾಯಿ

ಎಫ್‌ಎಂಸಿಜಿ: 19,606 ಕೋಟಿ ರುಪಾಯಿ

ವಿದ್ಯುತ್:‌ 15,219 ಕೋಟಿ ರುಪಾಯಿ

ಕನ್‌ಸ್ಯೂಮರ್‌ ಡ್ಯೂರಬಲ್‌ : 13,188 ಕೋಟಿ ರುಪಾಯಿ

ಆಟೊಮೊಬೈಲ್‌: 12,197 ಕೋಟಿ ರುಪಾಯಿ.

ಈ ಸುದ್ದಿಯನ್ನೂ ಓದಿ | BOB Recruitment 2025: 2,500 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಿದ ಬ್ಯಾಂಕ್‌ ಆಫ್‌ ಬರೋಡಾ; ಹೊಸ ಅಪ್‌ಡೇಟ್‌ ಬಗ್ಗೆ ಇಲ್ಲಿದೆ ಮಾಹಿತಿ