ಮುಂಬೈ, ನ. 20: ಸೆನ್ಸೆಕ್ಸ್ (Sensex) ಗುರುವಾರ (ನ. 20) 400 ಅಂಕ ಏರಿಕೆಯಾಗಿದೆ. ನಿಫ್ಟಿ 26,200 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದೆ (Stock Market). ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಲಾಭದಾಯಕವಾಗಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರು ಹೆಚ್ಚು ಲಾಭವನ್ನು ಗಳಿಸಿತು (Stock Market). ಜಾಗತಿಕ ಮಟ್ಟದಲ್ಲಿ ಪಾಸಿಟಿವ್ ಕ್ಲೂ ಮಾರುಕಟ್ಟೆಗೆ ಸಿಕ್ಕಿತ್ತು. ಮಧ್ಯಂತರದಲ್ಲಿ ಸೆನ್ಸೆಕ್ಸ್ 52 week high ದಾಖಲಿಸಿದ್ದು, 85,801ಕ್ಕೆ ಏರಿತು. ನಿಫ್ಟಿ 50 ಸೂಚ್ಯಂಕವು 26,246ಕ್ಕೆ ಏರಿಕೊಂಡಿತು.
ಅಂತಿಮವಾಗಿ ಸೆನ್ಸೆಕ್ಸ್ 446 ಅಂಕ ಏರಿಕೆಯಾಗಿ 85,632ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 140 ಅಂಕ ಏರಿಕೆಯಾಗಿ 26,192ಕ್ಕೆ ಸ್ಥಿರವಾಯಿತು. ಹೀಗಿದ್ದರೂ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಇಂಡೆಕ್ಸ್‌ಗಳು ಇಳಿಕೆಯಾಗಿತ್ತು. ಬಿಎಸ್‌ಇ ಮಿಡ್ ಕ್ಯಾಪ್ ಇಂಡೆಕ್ಸ್ 0.13% ಇಳಿದಿತ್ತು. ಸ್ಮಾಲ್ ಕ್ಯಾಪ್ ಇಂಡೆಕ್ಸ್ 0.17% ಇಳಿಯಿತು.
ಮದುವೆ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ?
ಸೆನ್ಸೆಕ್ಸ್-ನಿಫ್ಟಿ ಏರಿಕೆಗೆ ಕಾರಣವೇನು?
ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿ ಇರುವುದು ಪ್ರಗತಿದಾಯಕವಾಗಿದೆ. ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪ್ರಭಾವ ಬೀರಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್ ಕೂಡ ಈ ಕುರಿತ ಸುಳಿವು ನೀಡಿದ್ದಾರೆ. ಈ ಒಪ್ಪಂದದಲ್ಲಿ ರೈತರು, ಸಣ್ಣ ಉದ್ಯಮಿಗಳು ಮತ್ತು ದೇಶದ ಹಿತಾಸಕ್ತಿಯನ್ನು ರಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.
ಎಚ್ ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್‌ನಂತಹ ಲಾರ್ಜ್ ಕ್ಯಾಪ್ ಷೇರುಗಳು ಲಾಭ ಗಳಿಸಿವೆ. ಆಟೊಮೊಬೈಲ್, ಹಣಕಾಸು, ಐಟಿ ಕ್ಷೇತ್ರಗಳಿಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ.
ನಿಫ್ಟಿ 50 ಇಂಡೆಕ್ಸ್‌ನಲ್ಲಿ ಇವತ್ತು ಲಾಭ ಗಳಿಸಿದ ಷೇರುಗಳು: ಐಷರ್ ಮೋಟಾರ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್ ಸೇರಿದಂತೆ 34 ಷೇರುಗಳು ಲಾಭ ಗಳಿಸಿತು.
ನಿಫ್ಟಿ 50 ಇಂಡೆಕ್ಸ್‌ನಲ್ಲಿ ನಷ್ಟಕ್ಕೀಡಾದ ಷೇರುಗಳು: ಏಷ್ಯನ್ ಪೇಂಟ್ಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಟೈಟನ್.
ನಿಫ್ಟಿ ಬ್ಯಾಂಕ್ ಗುರುವಾರ 59,440 ಅಂಕ ಎತ್ತರಕ್ಕೇರಿತು. ನಿಫ್ಟಿ ಪಿಎಸ್‌ಯು ಬ್ಯಾಂಕ್ ಇಳಿಯಿತು.
ಹೆಚ್ಚು ಸಕ್ರಿಯವಾಗಿದ್ದ ಷೇರುಗಳು: ವೊಡಾಫೋನ್ ಐಡಿಯಾ, ಜೈಪ್ರಕಾಶ್ ಪವರ್ ವೆಂಚರ್ಸ್.
ಬಿಎಸ್‌ಇನಲ್ಲಿ 15%ಗಿಂತಲೂ ಹೆಚ್ಚು ಏರಿಕೆ ದಾಖಲಿಸಿದ್ದ 9 ಷೇರುಗಳು:
ಸೆಕ್ಯೂರ್‌ಕ್ಲೌಡ್ ಟೆಕ್ನಾಲಜೀಸ್, ಆಸ್ಟೆಕ್ ಲೈಫ್ ಸೈನ್ಸ್, ಪ್ರೀಮಿಯರ್ ಪಾಲಿಫಿಲ್ಮ್, ವೈಷ್ಣವಿ ಇಂಡಸ್ಟ್ರೀಸ್.
ಮಂಗಳೂರಿನ ಜಯಶ್ರೀ ಉಳ್ಳಾಲ್ ಭಾರತದ ಶ್ರೀಮಂತ ಮಹಿಳಾ ಉದ್ಯಮಿ
ಬಿಎಸ್‌ಇನಲ್ಲಿ 4,353 ಷೇರುಗಳ ಪೈಕಿ 1872 ಷೇರುಗಳು ಲಾಭ ಗಳಿಸಿತು. 2,304 ಷೇರುಗಳು ನಷ್ಟಕ್ಕೀಡಾಯಿತು. 177 ಷೇರುಗಳು ಯಥಾಸ್ಥಿತಿಯಲ್ಲಿತ್ತು. 142 ಷೇರುಗಳು 52 ವಾರಗಳಲ್ಲಿಯೇ ಗರಿಷ್ಠ ಎತ್ತರಕ್ಕೇರಿತು.