Stock Market: ಷೇರು ಮಾರುಕಟ್ಟೆ ಇಂಡೆಕ್ಸ್ ಕುಸಿತದ ವೇಳೆ ಯಾವ ಷೇರು ಬೆಸ್ಟ್?
Stock Market: ಇಕನಾಮಿಕ್ ಟೈಮ್ಸ್ ತನ್ನ ವರದಿಯಲ್ಲಿ Low-Beta Stocks ಗಳ ಪಟ್ಟಿಯನ್ನು ಪ್ರಕಟಿಸಿದೆ. BSE, NSE, ಕ್ಯಾಪಿಟಾಲೈನ್‌ನ ದತ್ತಾಂಶಗಳನ್ನು ಆಧರಿಸಿ ಇಕನಾಮಿಕ್ ಟೈಮ್ಸ್ ಈ ವರದಿಯನ್ನು ಸಿದ್ಧಪಡಿಸಿದೆ. ಒಟ್ಟು 258 ಲೋ beta ಷೇರುಗಳನ್ನು ಗುರುತಿಸಲಾಗಿದೆ. ಇವುಗಳು ಬಿಎಸ್‌ಇ 500 ಷೇರುಗಳ ಪೈಕಿ 0.9 beta ಅನುಪಾತವನ್ನು ಹೊಂದಿರುವ ಷೇರುಗಳಾಗಿವೆ.


- ಕೇಶವ ಪ್ರಸಾದ್ ಬಿ.
ಮುಂಬೈ: ಷೇರು ಮಾರುಕಟ್ಟೆಯಲ್ಲಿ ಏರಿಳಿತ ತೀವ್ರವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಬೆಂಚ್‌ಮಾರ್ಕ್ ಇಂಡೆಕ್ಸ್‌ಗಳಿಗೆ ಹೋಲಿಸಿದ್ರೆ, ದರದಲ್ಲಿ ಕಡಿಮೆ ಏರಿಳಿತ ದಾಖಲಿಸುವ ಷೇರುಗಳನ್ನು Low-Beta Stocks ಎಂದು ಕರೆಯುತ್ತಾರೆ. ಇಂಥ ಷೇರುಗಳು ಸೆನ್ಸೆಕ್ಸ್, ನಿಫ್ಟಿಯಂತಹ ಸ್ಟಾಕ್ ಮಾರ್ಕೆಟ್ ಸೂಚ್ಯಂಕಗಳು ತೀವ್ರ ಕುಸಿದರೂ, ತಾವು ಅಷ್ಟೊಂದು ಕುಸಿಯುವುದಿಲ್ಲ. ಹೀಗಾಗಿ ಸುರಕ್ಷಿತ ಮತ್ತು ಲಾಭದಾಯಕ ಷೇರುಗಳ ಹುಡುಕಾಟದಲ್ಲಿರುವ ಹೂಡಿಕೆದಾರರು ಇಂಥ ಷೇರುಗಳನ್ನು ನಿರೀಕ್ಷಿಸುತ್ತಾರೆ.ಹಾಗಾದರೆ ಸದ್ಯದ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಇಂಡೆಕ್ಸ್‌ಗಿಂತಲೂ ಸ್ಟ್ರಾಂಗ್ ಆಗಿ ನಿಲ್ಲುವ ಲೋ beta ಷೇರುಗಳು ಯಾವುದು ಎಂಬ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳೋಣ.
ಇಕನಾಮಿಕ್ ಟೈಮ್ಸ್ ತನ್ನ ವರದಿಯಲ್ಲಿ Low-Beta Stocks ಗಳ ಪಟ್ಟಿಯನ್ನು ಪ್ರಕಟಿಸಿದೆ. BSE, NSE, ಕ್ಯಾಪಿಟಾಲೈನ್‌ನ ದತ್ತಾಂಶಗಳನ್ನು ಆಧರಿಸಿ ಇಕನಾಮಿಕ್ ಟೈಮ್ಸ್ ಈ ವರದಿಯನ್ನು ಸಿದ್ಧಪಡಿಸಿದೆ. ಒಟ್ಟು 258 ಲೋ beta ಷೇರುಗಳನ್ನು ಗುರುತಿಸಲಾಗಿದೆ. ಇವುಗಳು ಬಿಎಸ್‌ಇ 500 ಷೇರುಗಳ ಪೈಕಿ 0.9 beta ಅನುಪಾತವನ್ನು ಹೊಂದಿರುವ ಷೇರುಗಳಾಗಿವೆ.
ಇಕನಾಮಿಕ್ ಟೈಮ್ಸ್ ಸಿದ್ಧಪಡಿಸಿರುವ ಈ ಲೋ beta ಷೇರುಗಳ ಪಟ್ಟಿಯಲ್ಲಿ FMCG ಮತ್ತು ರಿಟೇಲ್ ವಲಯದ ಷೇರುಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. HUL, ITC, ಮ್ಯಾರಿಕೊ, ಬ್ರಿಟಾನಿಯಾ, ಯುನೈಟೆಡ್ ಸ್ಪಿರಿಟ್ಸ್, ಯುನೈಟೆಡ್ ಬ್ರೇವರೀಸ್, ಪೇಜ್ ಇಂಡಸ್ಟ್ರೀಸ್ ಇವೆ.
ಹೆಲ್ತ್ ಕೇರ್ ವಲಯದ ಸನ್ ಫಾರ್ಮಾ, ಟೊರೆಂಟ್ ಫಾರ್ಮಾ, ಅಜಂತಾ ಫಾರ್ಮಾ, ಅಪೊಲೊ ಹಾಸ್ಪಿಟಲ್ಸ್, ಗ್ಲಾಸ್ಕೊಸ್ಮಿತ್‌ಕ್ಲೈನ್ ಫಾರ್ಮಾ ಕಂಪನಿಯ ಷೇರುಗಳಿವೆ. ಐಷರ್ ಮೋಟಾರ್ಸ್, ಸನ್ ಟಿವಿ ನೆಟ್ ವರ್ಕ್, ಬ್ಲೂ ಡಾರ್ಟ್ ಎಕ್ಸ್‌ಪ್ರೆಸ್, ಶ್ರೀ ಸಿಮೆಂಟ್, ಕೋರಮಂಡಲ್ ಇಂಟರ್‌ನ್ಯಾಶನಲ್, HDFC Life Insurance ಷೇರುಗಳಿವೆ. ಈ ಎಲ್ಲ ಷೇರುಗಳೂ ಕಳೆದ ಒಂದು ತಿಂಗಳಿನಿಂದ ಒಂದು ವರ್ಷದ ತನಕ ಅವಧಿಯಲ್ಲಿ ಸೆನ್ಸೆಕ್ಸ್‌ಗಿಂತ ಹೆಚ್ಚು ಪರ್ಸಂಟೇಜ್ ರಿಟರ್ನ್ ಅನ್ನು ಕೊಟ್ಟಿವೆ.
ಸುರಕ್ಷಿತ Low Beta Stocks ಪರ್ಫಾರ್ಮೆನ್ಸ್ ಲಿಸ್ಟ್: (2025 ಏಪ್ರಿಲ್ 11ರ ದರ)
- ಹಿಂದೂಸ್ತಾನ್ ಯುನಿಲಿವರ್ : beta 0.06 : ಈಗಿನ ದರ 2,366 : ವಾರ್ಷಿಕ ರಿಟರ್ನ್ :4.5%
- ಸನ್ ಫಾರ್ಮಾ
- ಸನ್ ಫಾರ್ಮಾ : beta 0.40 : ಈಗಿನ ದರ 1,687 : ವಾರ್ಷಿಕ ರಿಟರ್ನ್ : 5.3 %
- HDFC ಲೈಫ್ ಇನ್ಷೂರೆನ್ಸ್ : beta 0.60 : ಈಗಿನ ದರ 685 : ವಾರ್ಷಿಕ ರಿಟರ್ನ್ : 8.1 %
- ಐಷರ್ ಮೋಟಾರ್ಸ್ : beta 0.69 : ಈಗಿನ ದರ 5,350 : ವಾರ್ಷಿಕ ರಿಟರ್ನ್ : 7.3 %
- ಬ್ರಿಟಾನಿಯಾ ಇಂಡಸ್ಟ್ರೀಸ್: beta 0.19 : ಈಗಿನ ದರ 5,349 : ವಾರ್ಷಿಕ ರಿಟರ್ನ್ : 12.9 %
- ಟಿವಿಎಸ್ ಮೋಟಾರ್ಸ್: beta 081 : ಈಗಿನ ದರ 2,512 : ವಾರ್ಷಿಕ ರಿಟರ್ನ್ : 11.4 %
- ಶ್ರೀ ಸಿಮೆಂಟ್ : beta 0.54 : ಈಗಿನ ದರ 30,109 : ವಾರ್ಷಿಕ ರಿಟರ್ನ್ : 8 %
- ಯುನೈಟೆಸ್ ಸ್ಪಿರಿಟ್ಸ್ : beta 0.44: ಈಗಿನ ದರ 1,475 : ವಾರ್ಷಿಕ ರಿಟರ್ನ್ : 12.3 %
- ಅಪೊಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸಸ್ : beta 0.46: ಈಗಿನ ದರ 6,772 : ವಾರ್ಷಿಕ ರಿಟರ್ನ್ : 4.1%
- ಮ್ಯಾರಿಕೊ : beta 0.10: ಈಗಿನ ದರ 709 : ವಾರ್ಷಿಕ ರಿಟರ್ನ್ : 39%
- ಕೋರಮಂಡಲ್ ಇಂಟರ್‌ನ್ಯಾಶನಲ್ : beta 0.60 : ಈಗಿನ ದರ 2,058 : ವಾರ್ಷಿಕ ರಿಟರ್ನ್ : 79%
- ಯುನೈಟೆಡ್ ಬ್ರೇವರೀಸ್ : beta 0.23 : ಈಗಿನ ದರ 2,018 : ವಾರ್ಷಿಕ ರಿಟರ್ನ್ : 10.7 %
- ಕಲ್ಯಾಣ್ ಜ್ಯುವೆಲರ್ಸ್ ಇಂಡಿಯಾ : beta 0.65 : ಈಗಿನ ದರ 510 : ವಾರ್ಷಿಕ ರಿಟರ್ನ್ : 20 %
- ಪೇಜ್ ಇಂಡಸ್ಟ್ರೀಸ್ : beta 0.23 : ಈಗಿನ ದರ 44,525 : ವಾರ್ಷಿಕ ರಿಟರ್ನ್ : 22 %
- ನಾರಾಯಣ ಹೃದಯಾಲಯ : beta 0.31 : ಈಗಿನ ದರ 1,700 : ವಾರ್ಷಿಕ ರಿಟರ್ನ್ : 29 %
- ಕೆಪಿಆರ್ ಮಿಲ್ : beta 0.31 : ಈಗಿನ ದರ 973 : ವಾರ್ಷಿಕ ರಿಟರ್ನ್ : 19 %
- ಸನ್ ಟಿವಿ ನೆಟ್ ವರ್ಕ್ : beta 0.35 : ಈಗಿನ ದರ 660 : ವಾರ್ಷಿಕ ರಿಟರ್ನ್ : 11 %
- ಕೃಷ್ಣ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ : beta 0.27 : ಈಗಿನ ದರ 614 : ವಾರ್ಷಿಕ ರಿಟರ್ನ್ : 53 %
- ಡಾ. ಲಾಲ್ ಪಥ್‌ಲ್ಯಾಬ್ಸ್ : beta 0.44 : ಈಗಿನ ದರ 2,699 : ವಾರ್ಷಿಕ ರಿಟರ್ನ್ : 18 %
- ಸನೋಫಿ ಇಂಡಿಯಾ: beta 0.50 : ಈಗಿನ ದರ 6,185 : ವಾರ್ಷಿಕ ರಿಟರ್ನ್ : 26 %
ಇನ್ನು, ಹಲವಾರು ಬ್ರೋಕರೇಜ್ ಕಂಪನಿಗಳೂ ಆಯ್ದ ಷೇರುಗಳ ಬಗ್ಗೆ, ಮುಂದಿನ 1-2 ವರ್ಷಗಳಿಗೆ ಪಾಸಿಟಿವ್ ಔಟ್‌ಲುಕ್ ಅನ್ನು ನೀಡಿದ್ದು, ಅವುಗಳ ವಿವರವನ್ನು ತಿಳಿದುಕೊಳ್ಳೋಣ.
- Uno Minda ( ಉನೊ ಮಿಂಡಾ):
- ಆಟೊಮೊಬೈಲ್ ಬಿಡಿ ಭಾಗಗಳನ್ನು ಉತ್ಪಾದಿಸುವ ಯುನೊ ಮಿಂಡಾ ಷೇರನ್ನು ಎಕ್ಸಿಸ್ ಸೆಕ್ಯುರಿಟೀಸ್ ಖರೀದಿಗೆ ಶಿಫಾರಸು ಮಾಡಿದೆ.
- Uno Minda: Buy | Target Rs 900| LTP Rs 814| Upside 10%
- Divi’s Laboratories Ltd ( ಡಿವೀಸ್ ಲ್ಯಾಬೊರೇಟರಿಸ್ ):
- ನುವಾಮಾ ವೆಲ್ತ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಔಷಧ ಉತ್ಪಾದಕ ಡಿವೀಸ್ ಲ್ಯಾಬೊರೇಟರೀಸ್ ಕಂಪನಿಯ ಷೇರನ್ನು ಖರೀದಿಸಲು ಶಿಫಾರಸು ಮಾಡಿದೆ.
- Dr Reddy’s Laboratories ( ಡಾ ರೆಡ್ಡೀಸ್ ಲ್ಯಾಬೊರೇಟರಿಸ್) :
- ನುವಾಮಾ ವೆಲ್ತ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಔಷಧ ಉತ್ಪಾದಕ ಡಾ ರೆಡ್ಡೀಸ್ ಲ್ಯಾಬೊರೇಟರೀಸ್ ಕಂಪನಿಯ ಷೇರನ್ನು ಖರೀದಿಸಲು ಶಿಫಾರಸು ಮಾಡಿದೆ.
- Nuvama on Dr Reddy’s Laboratories: Buy| Target Rs 1533| LTP Rs 1095| Upside 40%
ಎಚ್‌ಎಎಲ್ : ಮೋತಿಲಾಲ್ ಓಸ್ವಾಲ್ ಬ್ರೋಕರೇಜ್ ಸಂಸ್ಥೆಯು ಎಚ್‌ಎಎಲ್ ಕಂಪನಿಯ ಷೇರುಗಳನ್ನು ಖರೀದಿಸಲು ಶಿಫಾರಸು ಮಾಡಿದೆ.
Buy rating| Target Rs 5,100| LTP Rs 4031| Upside 26%