ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರವಾಸಿಗರ ಅಚ್ಚುಮೆಚ್ಚಿನ ಅಡಿಗಾಸ್‌ ಯಾತ್ರಾಗೆ 32ರ ಸಂಭ್ರಮ; ದೇಶ-ವಿದೇಶ ಟೂರ್‌ಗೆ ಎಲ್ಲರ ಪ್ರಥಮ ಆಯ್ಕೆ

Adigas Yatra: ಕರ್ನಾಟಕ ಮತ್ತು ಭಾರತದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ವಿಶಿಷ್ಟ ಸಂಸ್ಥೆ ಅಡಿಗಾಸ್‌ ಯಾತ್ರಾಗೆ ಇದೀಗ 32 ವರ್ಷದ ಸಂಭ್ರಮ. ಕೆ. ನಾಗರಾಜ್‌ ಅಡಿಗ ಅವರ ಸಾರಥ್ಯದಲ್ಲಿ ಅಡಿಗಾಸ್‌ ಯಾತ್ರಾ ಲಕ್ಷಾಂತರ ಪ್ರವಾಸಿಗರಿಗೆ ದೇಶ-ವಿದೇಶಗಳ ಪ್ರವಾಸವನ್ನು ಅಚುಕಟ್ಟಾಗಿ, ನಡೆಸಿಕೊಟ್ಟಿದೆ.

ಕೆ. ನಾಗರಾಜ್‌ ಅಡಿಗ

ಕರ್ನಾಟಕ ಮತ್ತು ಭಾರತದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ವಿಶಿಷ್ಟ ಸಂಸ್ಥೆ ಅಡಿಗಾಸ್‌ ಯಾತ್ರಾಗೆ (Adigas Yatra) ಇದೀಗ 32 ವರ್ಷದ ಸಂಭ್ರಮ. ಕೆ. ನಾಗರಾಜ್‌ ಅಡಿಗ ಅವರ ಸಾರಥ್ಯದಲ್ಲಿ ಅಡಿಗಾಸ್‌ ಯಾತ್ರಾ ಲಕ್ಷಾಂತರ ಪ್ರವಾಸಿಗರಿಗೆ ದೇಶ-ವಿದೇಶಗಳ ಪ್ರವಾಸವನ್ನು ಅಚುಕಟ್ಟಾಗಿ, ಅವಿಸ್ಮರಣೀಯವಾಗಿ, ಯಾವುದಕ್ಕೂ ಕೊರತೆ ಇಲ್ಲದಂತೆ ನಡೆಸಿಕೊಟ್ಟಿದೆ. ಹೀಗಾಗಿ ಹೊಸ ಹೊಸ ಮೈಲಿಗಲ್ಲುಗಳನ್ನು ಅಡಿಗಾಸ್‌ ಯಾತ್ರಾ ಕ್ರಮಿಸುವಲ್ಲಿ ಯಶಸ್ವಿಯಾಗಿದೆ.

ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ ಕಟ್ಕೆರೆ ಅಡಿಗರ ಹುಟ್ಟೂರು. ಮೂಲತಃ ಕಕ್ಕುಂಜೆ ಮೂಲದವರಾದ ಇವರು ಕಾಲಾನಂತರ ಬಂದು ನೆಲೆಸಿದ್ದು ಕೋಟೇಶ್ವರ ಸಮೀಪದ ಕಟ್ಕೆರೆಯಲ್ಲಿ. ಮಧ್ಯಮ ವರ್ಗದ ಮಹಾಬಲ ಅಡಿಗ ಹಾಗೂ ವಾಗ್ದೇವಿ ಅಡಿಗರ ಮಗನಾಗಿ 1971ರಲ್ಲಿ ಜನನ. ಬಾಲ್ಯದಿಂದಲೂ ಚುರುಕುತನ ಹಾಗೂ ಅಸಾಧಾರಣ ಧೈರ್ಯದ ಅಡಿಗರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಮುಗಿಸಿದ್ದು ಕೋಟೇಶ್ವರದಲ್ಲಿ. ಈ ದಿನಗಳಲ್ಲೇ ಬಹುಷಃ ಅವರ ಪ್ರವಾಸೋಧ್ಯಮದ ಕನಸು ಅಂಕುರಿತವಾಗಿದ್ದು. ಶಾಲಾ ಪಠ್ಯ ಪುಸ್ತಕಗಳ ವಾಸ್ಕೊ ಡ ಗಾಮಾ ಭಾರತಕ್ಕೆ ಬಂದಿದ್ದು ಹೇಗೆ? ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಕರೆಯುತ್ತಿದ್ದ ಇಂಗ್ಲೆoಡ್, ಅಮೇರಿಕಾ ಹಾಗೂ ಕೆನಡಾ ಮಧ್ಯದಲ್ಲಿ ಇರುವ ನಯಾಗಾರ ಜಲಪಾತ, ಆಸ್ಟ್ರೇಲಿಯಾದ ಹವಳ ದ್ವೀಪಗಳು ವಿವೇಕಾನಂದರ ಅಮೇರಿಕಾ ದಿಗ್ವಿಜಯ, ಸುಭಾಷ್‌ಚಂದ್ರ ಬೋಸರ ಜರ್ಮನಿ, ಸಿಂಗಾಪುರದ ಪರ್ಯಟನೆ, ಸಾವರ್ಕರರ ಅಂಡಮಾನಿನ ಕರಾಳ ಜೈಲು ವಾಸ ಇದನ್ನೆಲ್ಲ ಪಠ್ಯ ಪುಸ್ತಕಗಳಲ್ಲಿ, 'ತರಂಗ', 'ಸುಧಾ' ವಾರ ಪತ್ರಿಕೆಗಳಲ್ಲಿ ಬರುತ್ತಿದ್ದ ಪ್ರವಾಸ ಕಥನಗಳನ್ನು ಓದುವಾಗ ಈ ಎಲ್ಲ ಸ್ಥಳಗಳಿಗೆ ಹೋಗಬೇಕೆನ್ನಿಸುತ್ತಿತ್ತು ಅಂತ ಅಡಿಗರು ಹೇಳುತ್ತಿದ್ದರು.

MRS Adiga

ಪ್ರಕೃತಿಪ್ರಿಯರ ಸ್ವರ್ಗ ಮೇಘಾಲಯಕ್ಕೆ ಅಡಿಗಾಸ್‌ ಯಾತ್ರಾ ಟೂರ್

ಮುಂದೆ ವಿದ್ಯಾಭ್ಯಾಸ ಮುಗಿಸಿದ ಅಡಿಗರು ಹೊಸದೊಂದು ಪ್ರಯತ್ನಕ್ಕೆ ಮುಂದಾದರು. ಆ ಕಾಲಕ್ಕೆ ಉಡುಪಿಯವರ ವ್ಯವಹಾರ ವೆಂದರೆ ಹೋಟೆಲ್ ಉದ್ಯಮ ಅನ್ನುವ ಕಾಲಕ್ಕೆ ಎಲ್ಲರಿಗಿಂತ ಭಿನ್ನವಾಗಿ ಅಡಿಯಿಟ್ಟ ಅಡಿಗರು 1994ರಲ್ಲಿ ಟ್ರಾವೆಲ್ಸ್ ಉಧ್ಯಮವನ್ನು ಆರಂಭಿಸುತ್ತಾರೆ. ಪ್ರವಾಸವೆಂದರೆ ಬರಿ ತೀರ್ಥಕ್ಷೇತ್ರ ಗಳಿಗೆ ಸೀಮಿತವಾಗಿದ್ದ ಕಾಲವದು. ಈಗಿನoತೆ ಮಾಧ್ಯಮಗಳು, ಇಂಟರ್ನೆಟ್ ಇಲ್ಲದ ದಿನಗಳು. ಮೊತ್ತ ಮೊದಲು ನೇಪಾಳ ಪ್ರವಾಸಕ್ಕೆ ಉತ್ತರ ಕರ್ನಾಟಕ ದಿಂದ 22 ಜನರನ್ನು ಕರೆದೊಯ್ದಿದ್ದು ಒಂದು ಹರಸಾಹಸ. ಆದರೆ ಶ್ರಮಜೀವಿ ಅಡಿಗರ ಈ ಪ್ರಯತ್ನ ಫಲ ಕೊಟ್ಟಿತ್ತು. ಮೊತ್ತ ಮೊದಲ ನೇಪಾಳ ಪ್ರವಾಸ ಯಶಸ್ವಿಯಾಗಿತ್ತು. ಅಲ್ಲಿಂದ ಅಡಿಗರು ಹಿಂತಿರುಗಿ ನೋಡಿದ್ದೇ ಇಲ್ಲ. ನಿರಂತರ ವಾಗಿ ಹೊಸ ಹೊಸ ಪ್ರಯತ್ನಗಳನ್ನು, ಸ್ಥಳಗಳನ್ನು ಪ್ರವಾಸೋಧ್ಯಮ ದಲ್ಲಿ ಪರಿಚಯಿಸಿ ಅದನ್ನು ಯಶಸ್ವಿ ಗೊಳಿಸುವಲ್ಲಿ ಅವರ ಪರಿ ಶ್ರಮ, ಸತತ ಅಧ್ಯಯನ, ವಿಶ್ವಾಸಾರ್ಹತೆ ಸರಿಸಾಟಿಯಿಲ್ಲದ್ದು. ಮುಂದಿನ ದ್ದೆಲ್ಲ ಈ ಸಾಧನೆಯ ಮೈಲಿಗಲ್ಲುಗಳು. ಪ್ರವಾಸಿಗರ ಬೇಡಿಕೆ ಹೆಚ್ಚಿದoತೆಲ್ಲ ಬೆಂಗಳೂರಿನಲ್ಲಿ ಅಡಿಗಾಸ್ ಸಂಸ್ಥೆ ಬಸವನಗುಡಿ,ವಿಜಯನಗರ, ರಾಜರಾಜೇಶ್ವರಿ ನಗರ, ಮಲ್ಲೇಶ್ವರ, ಹಾಗೂ ಹಾಸನದಲ್ಲಿ ತನ್ನ ಕಛೇರಿಗಳ ಮೂಲಕ ಯಶಸ್ವಿಯಾಗಿ ಪ್ರವಾಸಗಳನ್ನು ಪರಿಚಯಿಸಿ ಪ್ರಖ್ಯಾತಿ ಯನ್ನು ಪಡೆದಿದೆ.

ಅಡಿಗಾಸ್ ಸಂಸ್ಥೆಯು ಪ್ರವಾಸಿಗರ / ಯಾತ್ರಿಕರ ಅಭಿರುಚಿ ಹಾಗೂ ಬೇಡಿಕೆಗೆ ಅನುಗುಣವಾಗಿ 500ಕ್ಕೂ ಹೆಚ್ಚು ಪ್ರವಾಸಗಳನ್ನು ದೇಶಿಯ, ಅಂತರ ರಾಷ್ಟ್ರೀಯ, ಗ್ರಾಹಕಾನುಕೂಲಿತ ಹಾಗೂ ಮಧುಚಂದ್ರ ಪ್ರವಾಸಗಳು ಯೋಜಿಸಿದೆ.

ಅಂತಾರಾಷ್ಟ್ರೀಯ ಪ್ರವಾಸಗಳಲ್ಲಿ ಯುರೋಪ್, ಯುಕೆ, ಆಸ್ಟ್ರೇಲಿಯಾ, ದುಬೈ, ಇಂಡೋನೆಷಿಯಾ, ಸಿಂಗಾಪುರ್, ಮಲೇಷಿಯಾ, ಥೈಲ್ಯಾಂಡ್, ಬಾಲಿ, ವಿಯಟ್ನಾಮ್, ಕಾಂಬೊಡಿಯಾ, ಹಾಂಕಾಂಗ್ -ಮಕಾವು, ಸ್ಕಾoಡೀನೇವಿಯನ್ ಕಂಟ್ರಿಸ್ ಜಪಾನ್,

ಶ್ರೀಲಂಕಾ, ನೇಪಾಳ ಮತ್ತು ಭೂತಾನ್ ಪ್ರವಾಸಗಳು ಅಪಾರ ಜನ ಮನ್ನಣೆಯನ್ನು ಗಳಿಸಿವೆ. ಬಹುತೇಕ ಪ್ರವಾಸಿಗರಿಗೆ ವಿದೇಶಿ ಪ್ರವಾಸಕ್ಕೆ ಅಡಿಗಾಸ್ ಮೊದಲ ಆಯ್ಕೆ ಯಾಗಿರುತ್ತದೆ. ಅದಕ್ಕೆ ಕಾರಣಗಳು ಹಲವಾರು. ಸಹ ಪ್ರಯಾಣಿಕರು ಕರ್ನಾಟಕದವರೇ ಆಗಿದ್ದು, ಅವರ ಆಚಾರ ವಿಚಾರ, ಭಾಷೆ, ಸಂಸ್ಕೃತಿ ಹಾಗೂ ಉಟೋಪಹಾರ ದಲ್ಲಿ ಸಾಮ್ಯತೆ ಇರುವುದರಿಂದ ಪ್ರವಾಸವೂ ಯಶಸ್ವಿಯಾಗುತ್ತದೆ. ಯಾವುದೇ ರೀತಿಯ ಹೋಮ್‌ ಸಿಕ್ ಭಾವನೆ ಪ್ರವಾಸಿಗರಿಗೆ ಕಾಡುವುದಿಲ್ಲ.ವಿಶ್ವದರ್ಜೆಯ ಹೆಸರಾಂತ ಹೋಟೆಲ್ ಗಳಲ್ಲಿ ವಾಸ್ತವ್ಯ, ಸುಖಾಸೀನ, ಐಷಾರಾಮಿ ಬಸ್ ಗಳಲ್ಲಿ ಪ್ರಯಾಣ, ಕನ್ನಡ ಬಲ್ಲ ಅನುಭವೀ ಟೂರ್ ಮ್ಯಾನೇಜರ್, ಭಾರತೀಯ ರೆಸ್ಟೋರೆಂಟ್ ಗಳಲ್ಲಿ ಮೊದಲೇ ಕಾದಿರಿಸಿದ ಉತ್ತಮ ಊಟ ಉಪಹಾರಗಳು ಇವೆಲ್ಲ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಂತೆಯೇ, ಪ್ರತಿಯೊಬ್ಬ ಪ್ರವಾಸಿಗನೂ ಖಡ್ಡಾಯವಾಗಿ ಪಾವತಿಸಬೇಕಾದ ಡ್ರೈವರ್ ಟಿಪ್ಸ್, ಗೈಡ್ ಚಾರ್ಜಸ್, ಟ್ರಾವೆಲ್ ಇನ್ಸೂರೆನ್ಸ್, ವೀಸಾ ಎಲ್ಲವೂ ಒಳಗೊಂಡ ಪ್ರವಾಸಿದರ ಮತ್ತು ಪ್ರಮುಖ, ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನೂ ಸಂಸ್ಥೆ ವಿಧಿಸದೇ ಪ್ರವಾಸಿಗರ ಮೆಚ್ಚುಗೆಯನ್ನು ಗಳಿಸಿದೆ.

ಪಂಚತಾರ ಹೋಟೆಲ್‌ಗಳಲ್ಲಿ ವಸತಿ

ನೂತನ ಪ್ರಯೋಗಗಳಿಗೆ ಸದಾ ಮುಕ್ತವಾಗಿರುವ ಅಡಿಗಾಸ್ ಹೊಸ ಹೊಸ ಪ್ರವಾಸಿ ಯೋಜನೆಗಳನ್ನು ಪ್ರವಾಸಿಗರಿಗೆ ಪರಿಚಯಿಸುತ್ತಲೇ ಬಂದಿದೆ. ಅಂತೆಯೇ ಈ ಬಾರಿ Domestic Fixed Departures ಎನ್ನುವ ಯೋಜನೆಯಡಿ ಭಾರತದಾದ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಪ್ರತಿಷ್ಠಿತ ಪಂಚತಾರ ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ವಸತಿ, ಐಷಾರಾಮಿ ವಾಹನಗಳಲ್ಲಿ ಪ್ರಯಾಣ, ನಿಖರ ಮಾಹಿತಿಯನ್ನೊಳಗೊಂಡ ಕಾರ್ಯಕ್ರಮ ಪಟ್ಟಿ, ಮುಂಚಿತವಾಗಿ ಕಾದಿರಿಸಿದ ಸುಸಜ್ಜಿತ ಹೋಟೆಲ್‌ಗಳಲ್ಲಿ ಉಟೋಪಹಾರ, ಸ್ಥಳೀಯ ಗೈಡ್ ಗಳ ಸೌಲಭ್ಯವಿದ್ದು, ನಿಮ್ಮ ಪ್ರವಾಸವು ಸುಖಕರವಾಗಿರುತ್ತದೆ.

ದೇಶಿಯ ಪ್ರವಾಸಗಳಲ್ಲಿ ಅಡಿಗಾಸ್ ಮೊದಲ ಆಯ್ಕೆ

ಅಡಿಗಾಸ್ ನ ಪುಣ್ಯಕ್ಷೇತ್ರ ದರ್ಶನ ಗಳಾದ ಕಾಶಿ ಪ್ರಯಾಗ ಗಯಾ, ಮಾತೃಗಯಾ, ಬದರಿ ಇತ್ಯಾದಿ ಯಾತ್ರೆಗಳಲ್ಲಿ ಯಾತ್ರಿಕರಿಗೆ ಪಿತೃಕಾರ್ಯದ ವ್ಯವಸ್ಥೆ ಕನ್ನಡ ಬಲ್ಲ ಆಚಾರ್ಯರಿಂದ ಮಾಡಿಸಲಾಗುತ್ತದೆ. ಪಿತೃಕಾರ್ಯಕ್ಕೆ ಬೇಕಾದ ವ್ಯವಸ್ಥೆ, ಆ ದಿನದ ವಿಶೇಷ ಭೋಜನವನ್ನೂ ಒಳಗೊಂಡಿರುವುದರಿಂದ ಯಾತ್ರಿಕರ ಉದ್ದೇಶ ಈಡೇರಿದಂತಾಗುತ್ತದೆ. ಇದಲ್ಲದೇ ಪ್ರವಾಸ / ಯಾತ್ರೆಯ ಸಂದರ್ಭದಲ್ಲಿ ಬರುವ ಜನ್ಮದಿನ, ವಿವಾಹ ವಾರ್ಷಿಕೋತ್ಸವಗಳನ್ನು ಟೂರ್ ಮ್ಯಾನೇಜರ್ ಆಯೋಜಿಸಿವುದರಿಂದ ಪ್ರವಾಸಿಗರಿಗೆ ಮನೆಯವರೆಲ್ಲರಿಂದ ದೂರಾಗಿ, ಹೊಸ ಜನ, ಮಿತ್ರರೊಂದಿಗೆ ಅವರ ಜನ್ಮದಿನ, ವಾರ್ಷಿಕೋತ್ಸವ ಆಚರಣೆ ಮಾಡಿದಂತಾಗುತ್ತದೆ.

ಇನ್ನುಳಿದಂತೆ ದೇಶಿಯ ಪ್ರವಾಸಗಳ ಬೇಡಿಕೆ ದುಪ್ಪಟ್ಟಾಗಿದೆ. ಭಾರತದಾ ದ್ಯಂತ ನಮ್ಮ ದಕ್ಷಿಣ ಭಾರತೀಯ ಉಟೋಪಹಾರ, ಹವಾ ನಿಯಂತ್ರಿತ ವಾಹನಗಳಲ್ಲಿ ಪ್ರಯಾಣ, ಅತ್ಯುತ್ತಮ ಹೋಟೆಲ್ ಗಳ ವಾಸ್ತವ್ಯ, ಅನುಭವಿ ಟೂರ್ ಮ್ಯಾನೇಜರ್ ಗಳ ಸೇವೆ ಇವೆಲ್ಲ ಸೇರಿ ಪ್ರವಾಸವನ್ನು ಅವಿಸ್ಮರಣೀಯವನ್ನಾಗಿಸುತ್ತದೆ.

Adigas Yatra Munnar

ವಿದೇಶಿ ಪ್ರವಾಸಕ್ಕೆ ಅಡಿಗಾಸ್ ಏಕೆ?

  • 32 ವರ್ಷಗಳ ಅಪಾರ ವೃತ್ತಿಪರ ಅನುಭವ
  • ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ "ಅನುಭವಿ ಸೇವಾ ಪೂರೈಕೆದಾರ" ಮನ್ನಣೆ.
  • ರಾಜ್ಯ ಪ್ರವಾಸೋಧ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ವಿಶ್ವಾಸಾರ್ಹ ಸಂಸ್ಥೆ.
  • ವಿಶ್ವ ದರ್ಜೆಯ ಹೆಸರಾಂತ ಹೋಟೆಲ್ ಗಳಲ್ಲಿ ವಾಸ್ತವ್ಯ.
  • ಗುಣಮಟ್ಟದ ಭಾರತೀಯ ರೆಸ್ಟೋರೆಂಟ್ ಗಳಲ್ಲಿ ಊಟೋಪಚಾರ
  • ನೋಡಲೇ ಬೇಕಾದ ಪ್ರವಾಸಿ ತಾಣಗಳಿಗೆ ಪ್ರವೇಶ ಶುಲ್ಕ ಸಹಿತ ಭೇಟಿ
  • ಪರಿಣಿತ ಮತ್ತು ಅನುಭವಿ ಟೂರ್ ಮ್ಯಾನೇಜರ್
  • ಪ್ರವಾಸಿ ದರದಲ್ಲಿ ಕಡ್ಡಾಯವಾಗಿ ಕೊಡಬೇಕಾಗುವ ಡ್ರೈವರ್ ಟಿಪ್ಸ್, ಗೈಡ್ ಚಾರ್ಜ್, ವೀಸಾ ಮತ್ತು ಇನ್ಸೂರೆನ್ಸ್ ಗಳನ್ನು ಒಳಗೊಂಡಿದೆ.
  • ಐಷಾರಾಮಿ, ಸುಖಾಸೀನ ವಾಹನ.

ಕನ್ನಡದವರಿಂದ ಕನ್ನಡದವರಿಗಾಗಿಯೇ ಇರುವ ಪ್ರಯಾಣ ಸಂಸ್ಥೆ ಅಡಿಗಾಸ್‌ ಯಾತ್ರಾ: ಕೆ. ನಾಗರಾಜ್ ಅಡಿಗ

ಸಂಪರ್ಕಿಸಿ

ನಿಮ್ಮ ಆಯ್ಕೆಯ ದೇಶಿಯ ಅಥವಾ ವಿದೇಶಿ ಪ್ರವಾಸಿ ತಾಣಕ್ಕೆ, ನೀವು ಇಚ್ಚಿಸಿದ ದಿನಾಂಕದಲ್ಲಿ, ನಿಮ್ಮ ಆದಾಯಕ್ಕನುಗುಣವಾಗಿ ಪಂಚಾತಾರಾ ಸೌಲಭ್ಯಗಳೊಂದಿಗೆ, ವ್ಯವಸ್ಥೆ ಮಾಡುವ ಸಾಮರ್ಥ್ಯ ಅಡಿಗಾಸ್ ಸಂಸ್ಥೆ ಹೊಂದಿದೆ. ಹೀಗೆ 500ಕ್ಕೂ ಮೀರಿದ ವಿಭಿನ್ನ, ವೈವಿಧ್ಯ ಪ್ರವಾಸಗಳ ಆಯ್ಕೆಯಿಂದ ಅಡಿಗಾಸ್ ಇಂದು ಕರ್ನಾಟಕದ ಮನೆಮಾತಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ: 080-26616678/ 7022259008/ 9449478944. website: www.adigasyatra.com ಸಂಪರ್ಕಿಸಬಹುದು.

Ramesh Ballamoole

View all posts by this author