ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2025ರ ಪರಿಸರ ಮಾಸ ಯಶಸ್ವಿಯಾಗಿ ಪೂರ್ಣಗೊಳಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

ಹಸಿರು ಸಾರಿಗೆ ವ್ಯವಸ್ಥೆಗೆ ಪರಿವರ್ತನೆ ಹೊಂದುವುದು, ಸಂಪನ್ಮೂಲ ಪ್ರಧಾನ ವಿಧಾನವನ್ನು ಅಳವಡಿಸಿಕೊಳ್ಳುವುದು, ಪಾಲುದಾರರಲ್ಲಿ ಪರಿಸರ ಜಾಗೃತಿಯನ್ನು ಉಂಟು ಮಾಡುವುದು, ಈ ಮೂಲಕ ಸುಸ್ಥಿರ ಜೀವನ ಪಾಲಿಸುವಂತೆ ಮಾಡುವುದು ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡಲು ನಿರ್ಧಾರ

‘ಸುಸ್ಥಿರ ಸಂಪನ್ಮೂಲ ನಿರ್ವಹಣಾ ಅಭಿಯಾನ’

Profile Ashok Nayak Jun 27, 2025 7:45 PM

ರಾಮನಗರ: ಪರಿಸರ ಸಂರಕ್ಷಣೆ ವಿಚಾರದಲ್ಲಿ ಬದ್ಧವಾಗಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ‘ಸುಸ್ಥಿರ ಸಂಪನ್ಮೂಲ ನಿರ್ವಹಣಾ ಅಭಿಯಾನ’ ಎಂಬ ಹೆಸರಿನಲ್ಲಿ 2025ರ ಪರಿಸರ ಮಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಸಂದರ್ಭದಲ್ಲಿ ‘ಝೀರೋ ಬೇಸ್ ವಿಧಾನ’ದ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆಯ ಪ್ರಯತ್ನಗಳನ್ನು ನಡೆಸಲಾಗಿದೆ.

ಈ ವರ್ಷದ ಪರಿಸರ ಮಾಸದಲ್ಲಿ ಸಂಸ್ಥೆಯ ಎಲ್ಲಾ ವಿಭಾಗಗಳಲ್ಲಿ ಸುಸ್ಥಿರತೆಯನ್ನು ಪಾಲಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದ್ದು, ಹಸಿರು ಸಾರಿಗೆ ವ್ಯವಸ್ಥೆಯನ್ನು ಬಳಸುವುದು, ಸಂಪನ್ಮೂಲ ಪ್ರಧಾನ ವಿಧಾನವನ್ನು ಅಳವಡಿಸಿಕೊಳ್ಳುವುದು ಮತ್ತು ಜನ ಸಮುದಾಯದಲ್ಲಿ ಪರಿಸರ ಸಂರಕ್ಷ ಣೆಯ ಕುರಿತು ಜಾಗೃತಿಯನ್ನು ಮೂಡಿಸುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳ ಲಾಯಿತು. ಈ ಯೋಜನೆಗಳಲ್ಲಿ 3,100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ಉದ್ಯೋಗಿಗಳು, ಪೂರೈಕೆದಾರರು, ವಿತರಕರು ಮತ್ತು ಸುತ್ತಮುತ್ತಲಿನ ಮಂದಿ ಪಾಲ್ಗೊಂಡರು.

ಇದನ್ನೂ ಓದಿ: Sowmya Sanath Column: ಜಗದ್ರಕ್ಷಕ ಜಗನ್ನಾಥನ ಜಗದ್ವಿದಿಖ್ಯಾತ ರಥೋತ್ಸವ

ಹಸಿರು ಸಾರಿಗೆ ವ್ಯವಸ್ಥೆಯ ಕಡೆಗೆ ಸಾಗುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ, ಲಾಜಿಸ್ಟಿಕ್ ಪಾಲುದಾರ ಸಂಸ್ಥೆಯ 17 ಎಲೆಕ್ಟ್ರಿಕ್ ಟ್ರಕ್‌ ಗಳ ಕಾರ್ಯಾರಂಭವನ್ನು ಟಿಕೆಎಂನಲ್ಲಿ ಉದ್ಘಾಟಿಸ ಲಾಯಿತು. ಈ ಟ್ರಕ್ ಗಳು ಐದು ಪ್ರಮುಖ ಸರಬರಾಜು ಕಾರ್ಯ ನೆರವೇರಿಸಲಿದೆ. ಈ ಯೋಜನೆ ಯನ್ನು 2015ರಲ್ಲಿ ಘೋಷಿಸಲಾದ ಆರು ಸವಾಲುಗಳನ್ನು ಒಳಗೊಂಡ ಜಾಗತಿಕ ಟೊಯೋಟಾ ಪರಿಸರ ಸವಾಲು 2050ಕ್ಕೆ ಪೂರಕವಾಗಿ ಕೈಗೊಳ್ಳಲಾಗಿದೆ. ಈ ಮೂಲಕ ಟಿಕೆಎಂ ಇಂಗಾಲ ಮುಕ್ತ ವ್ಯವಸ್ಥೆಗೆ ಬದಲಾವಣೆ ಹೊಂದುತ್ತಿದೆ, ಉತ್ಪನ್ನಗಳ ಜೊತೆಗೆ ಉತ್ಪಾದನಾ ಕಾರ್ಯಾಚರಣೆಗಳು ಮತ್ತು ಸಂಪೂರ್ಣ ಮೌಲ್ಯ ಸರಪಳಿಯಾದ್ಯಂತ ಸುಸ್ಥಿರ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿದೆ.

ಈ ಮೇಲೆ ಹೇಳಿದಂತೆ ಟೊಯೋಟಾ ಪರಿಸರ ಸವಾಲುಗಳಲ್ಲಿ 1-3 ಸವಾಲುಗಳು ವಾಹನದ ಜೀವನ ಚಕ್ರದ ಪ್ರತೀ ಹಂತದಲ್ಲಿ (ವಸ್ತು/ ಭಾಗಗಳ ಉತ್ಪಾದನೆ, ವಾಹನ ಜೋಡಣೆ, ಲಾಜಿಸ್ಟಿಕ್ ಕಾರ್ಯಾಚರಣೆ, ವಿದ್ಯುತ್ ಬಳಕೆ/ ಸಂರಕ್ಷಣೆ ಮತ್ತು ಉತ್ಪಾದನೆಯಲ್ಲಿ ನವೀಕರಿಸಬಹುದಾದ ವಿದ್ಯುತ್ ಶಕ್ತಿಯ ಅಳವಡಿಕೆ ಇತ್ಯಾದಿ) ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತಗ್ಗಿಸುವ ಗುರಿಯನ್ನು ಹೊಂದಿರುವ ವಿವಿಧ ಸ್ವಚ್ಛ ತಂತ್ರಜ್ಞಾನ- ಚಾಲಿತ ಉತ್ಪನ್ನಗಳು ಮತ್ತು ಹಸಿರು ಉತ್ಪಾದನಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದ್ದಾಗಿದೆ. ಇದರ ಜೊತೆಗೆ, ಟಿಕೆಎಂ 4-6 ಸವಾಲು ಗಳನ್ನು ಪರಿಹರಿಸಲು ನೀರಿನ ಬಳಕೆಯನ್ನು ಕಡಿಮೆ ಮಾಡುವ, ಮರುಬಳಕೆ ಆಧಾರಿತ ಸಮಾಜ ವನ್ನು ನಿರ್ಮಿಸುವ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯ ಹೊಂದಿರುವ ಭವಿಷ್ಯದ ಸಮಾಜವನ್ನು ರೂಪಿಸುವ ಗುರಿಯೊಂದಿಗೆ ತನ್ನ ಪ್ರಯತ್ನಗಳನ್ನು ಮುಂದುವರೆಸುತ್ತಿದೆ.

Ramnagar Toyota

ಕಂಪನಿಯ ವಿವಿಧ ವಿಭಾಗಳಲ್ಲಿ ಪರಿಸರ ಮೇಲೆ ಉಂಟಾಗುವ ಪರಿಣಾಮವನ್ನು ಕಡಿಮೆ ಮಾಡುವ ಬದ್ಧತೆಯ ಭಾಗವಾಗಿ, ಕಂಪನಿಯ ಲಾಜಿಸ್ಟಿಕ್ ವಿಭಾಗದಲ್ಲಿ ಎಲೆಕ್ಟ್ರಿಕ್ ಟ್ರಕ್‌ ಗಳ ಬಳಕೆಯನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಈ ಮೂಲಕ ಟೈಲ್‌ಪೈಪ್ ಇಂಗಾಲ ಹೊರ ಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗುವುದು, ವಿದ್ಯುತ್ ದಕ್ಷತೆಯನ್ನು ಸುಧಾರಿಸಲಾಗುವುದು. 2ನೇ ಸವಾಲಾಗಿರುವ ಜೀವನಚಕ್ರದಲ್ಲಿ ಶೂನ್ಯ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ವಿಚಾರಕ್ಕೆ (ಹಸಿರು ಸರಬರಾಜು ಸರಪಳಿ, ಇಕೋ-ಡೀಲರ್‌ಶಿಪ್, ಮತ್ತು ಹಸಿರು ಲಾಜಿಸ್ಟಿಕ್ಸ್) ಅನುಗುಣವಾಗಿ ಈ ಹೆಜ್ಜೆ ಇಡಲಾಗಿದೆ.

ಟಿಕೆಎಂ ತನ್ನ ಸರಕು ಸಾಗಾಣಿಕೆ ಚಟುವಟಿಕೆಗಳನ್ನು ಸುಸ್ಥಿರತೆ ಮತ್ತು ಆವಿಷ್ಕಾರದ ಮೇಲೆ ಗಮನ ಕೇಂದ್ರೀಕರಿಸಿದ್ದು, ಈ ನಿಟ್ಟಿನಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಇದರಡಿಯಲ್ಲಿ, ‘ಮಿಕ್ಸ್ ಲಾಜಿಸ್ಟಿಕ್ಸ್ ಮಾಡೆಲ್’ ಅನ್ನು ತನ್ನ ಪಾಲುದಾರ ಕಂಪನಿಗಳ ಸಹಯೋಗದೊಂದಿಗೆ ಜಾರಿಗೆ ತರಲಾಗಿದೆ. ವಾಹನ ವಿತರಣಾ ಲಾಜಿಸ್ಟಿಕ್ ಮಾರ್ಗಗಳನ್ನು ಉತ್ತಮಗೊಳಿಸಿ ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲಾಗಿದೆ. ಈ ಪರಿಸರ ಸ್ನೇಹಿ ಲಾಜಿಸ್ಟಿಕ್ಸ್‌ ವಿಧಾನಕ್ಕೆ ಬದ್ಧವಾಗಿರುವ ಟಿಕೆಎಂ ‘ರಿಟರ್ನ್ ಲಾಜಿಸ್ಟಿಕ್ಸ್ ರಿಡಕ್ಷ್’ ವಿಧಾನವನ್ನು ಪ್ರಾರಂಭಿಸಿತು. ವಾಹನಗಳು ಖಾಲಿಯಾಗಿ ರಿಟರ್ನ್ ಬರುವುದನ್ನು ಗಣನೀಯವಾಗಿ ಕಡಿಮೆ ಮಾಡಿ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಿತು. ಇದರ ಜೊತೆಗೆ, ಟಿಕೆಎಂ ಸಿ ಎನ್ ಜಿ ಟ್ರಕ್‌ಗಳನ್ನು ಪರಿಚಯಿಸುವ ಮೂಲಕ ತನ್ನ ಹಸಿರು ಸರಕು ಸಾಗಾಣಿಕಾ ವ್ಯವಸ್ಥೆಯನ್ನು ಬಲಪಡಿಸಿತು.

ವಿವಿಧ ಪರಿಸರ ಯೋಜನೆಗಳನ್ನು ಜಾರಿಗೆ ತರುವ ಉದ್ದೇಶಕ್ಕೆ ಅನುಗುಣವಾಗಿ ಟಿಕೆಎಂ ತನ್ನ ಬಿಡದಿ ಕಾರ್ಖಾನೆಯಲ್ಲಿ ‘ಸಸ್ಟೈನೊವೇಶನ್ ಹಬ್’ ವೇದಿಕೆಯಡಿಯಲ್ಲಿ ಹಸಿರು ಪ್ರದರ್ಶನವನ್ನು ಆಯೋಜಿಸಿತ್ತು. ಈ ಪ್ರದರ್ಶನದಲ್ಲಿ ಪರಿಸರಕ್ಕೆ ಒಳಿತು ಮಾಡುವ ಮತ್ತು ಅತ್ಯುತ್ತಮ ಪರಿಣಾಮ ವನ್ನು ಉಂಟು ಮಾಡುವ ಕಾರ್ಪೊರೇಟ್ ಸಂಸ್ಥೆಗಳ ಪ್ರಮುಖ ಪಾತ್ರವನ್ನು ತಿಳಿಸಲಾಯಿತು.

ಪ್ರದರ್ಶನದ ಸ್ಟಾಲ್‌ನಲ್ಲಿ ನೈಸರ್ಗಿಕ ವಸ್ತುಗಳಿಂದ ತಯಾರಾದ ದೈನಂದಿನ ಅಗತ್ಯ ವಸ್ತುಗಳು, ಜೈವಿಕ ವಿಘಟನೀಯ ವಸ್ತುಗಳು ಮತ್ತು ಸುಸ್ಥಿರ ಜವಳಿಗಳಿಂದ ರೂಪಿತವಾದ ವೈಯಕ್ತಿಕ ಆರೈಕೆ ಉತ್ಪನ್ನ, ಗೃಹ ಶುದ್ಧೀಕರಣ, ಆಹಾರ ಮತ್ತು ದಿನಸಿ, ಮತ್ತು ಮರುಬಳಕೆಯ ಪ್ಯಾಕೇಜಿಂಗ್ ಉತ್ಪನ್ನ ಸೇರಿದಂತೆ ವಿವಿಧ ಪರಿಸರ ಸ್ನೇಹಿ ಜೀವನಶೈಲಿ ಉತ್ಪನ್ನಗಳನ್ನು ಇಡಲಾಗಿತ್ತು.

ಇದರ ಜೊತೆಗೆ, ಈ ಪರಿಸರ ಮಾಸದಲ್ಲಿ ವಿದ್ಯಾರ್ಥಿಗಳಿಂದ ನಡೆಸಲಾದ ಒಂದು ಇಕೋ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಇದರಲ್ಲಿ ತ್ಯಾಜ್ಯ ನಿರ್ವಹಣೆ, ನೀರು, ವಿದ್ಯುತ್, ಮತ್ತು ಸುಸ್ಥಿರ ಜೀವನದಂತಹ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿದ 30ಕ್ಕೂ ಹೆಚ್ಚು ಸೃಜನಶೀಲ, ಸುಸ್ಥಿರತೆ-ಚಾಲಿತ ಮಾಡೆಲ್ ಗಳನ್ನು ಪ್ರದರ್ಶಿಸಲಾಯಿತು. ಎಲ್ಲಾ ಮಾಡೆಲ್ ಗಳನ್ನು ಶೂನ್ಯ-ವೆಚ್ಚದ ವಸ್ತುಗಳು ಮತ್ತು ಸಾಮಾನ್ಯವಾಗಿ ಲಭ್ಯವಿರುವ ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ರಚಿಸಲಾಗಿತ್ತು. ಈ ಮಾಡೆಲ್ ಗಳನ್ನು ಟೊಯೋಟಾ ಟೆಕ್ನಿಕಲ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ (ಟಿಟಿಟಿಐ) ವಿದ್ಯಾರ್ಥಿಗಳು ಟಿಕೆಎಂ ತಜ್ಞ ತರಬೇತುದಾರರ ಮಾರ್ಗದರ್ಶನ ಮತ್ತು ತರಬೇತಿಯನ್ನು ಪಡೆದು, ಕಾರ್ಪೊರೇಟ್ ಪರಿಸರ ತಂಡದ ಬೆಂಬಲದ ಜೊತೆಗೆ ವಿದ್ಯಾರ್ಥಿಗಳು ರಚಿಸಿದ್ದರು. ಈ ಯೋಜನೆಯು ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಆಲೋಚನೆಗಳನ್ನು ಹೊಳೆಯಿಸುವಂತೆ ಮಾಡುವುದರ ಜೊತೆಗೆ ಅವರದಲ್ಲಿ ಬಲವಾದ ಪರಿಸರ ಮೌಲ್ಯಗಳನ್ನು ಬೆಳೆಸಲು ಸಹಾಯ ಮಾಡಿತು. ಇದರ ಜೊತೆಗೆ, ಎರಡೂ ವಸ್ತು ಪ್ರದರ್ಶನಗಳಲ್ಲಿ ಪ್ರದರ್ಶನಕ್ಕಿಡಲಾದ ಉತ್ಪನ್ನಗಳು ನೈಸರ್ಗಿಕ ವಾಗಿದ್ದವು.

ರಾಸಾಯನಿಕ-ಮುಕ್ತ, ಮತ್ತು ಪರಿಸರ ಸ್ನೇಹಿಯಾಗಿದ್ದವು. ಈ ಮೂಲಕ ವಿಷಕಾರಿ ವಸ್ತುಗಳನ್ನು ತೊಡೆದುಹಾಕುವ ಮೂಲಕ ಒಟ್ಟಾರೆ ಯೋಗಕ್ಷೇಮವನ್ನು ಸಾಧ್ಯವಾಗಿಸುವ ಆರೋಗ್ಯಕರ ಜೀವನಶೈಲಿ ಪಾಲನೆಯನ್ನು ಬೆಂಬಲಿಸಲಾಯಿತು. ಇವುಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಗಣನೀಯವಾಗಿ ಕಡಿಮೆ ಮಾಡಬಹು ದಾಗಿದ್ದು, ಮಾಲಿನ್ಯವನ್ನು ಕಡಿಮೆ ಮಾಡಬಹುದು, ನೀರು ಮತ್ತು ವಿದ್ಯುತ್ ಅನ್ನು ಸಂರಕ್ಷಿಸ ಬಹುದು, ಮತ್ತು ಹೆಚ್ಚು ಸುಸ್ಥಿರ ಸಂಪನ್ಮೂಲ ನಿರ್ವಹಣೆಯನ್ನು ಮಾಡಬಹುದು.

ಈ ಸಂದರ್ಭದಲ್ಲಿ ಮಾತನಾಡಿದ ಟಿಕೆಎಂನ ಉತ್ಪಾದನಾ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ನಿರ್ದೇಶಕ ಬಿ. ಪದ್ಮನಾಭ ಅವರು , “ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ನಲ್ಲಿ ನಾವು ಸುಸ್ಥಿರತೆ ಪಾಲಿಸುವುದನ್ನು ನಮ್ಮ ಉತ್ಪನ್ನ ಮತ್ತು ಉತ್ಪಾದನಾ ಕಾರ್ಯಾಚರಣೆ ಗಳನ್ನು ಮೀರಿ ಸಂಪೂರ್ಣ ಮೌಲ್ಯ ಸರಪಳಿಯಾದ್ಯಂತ ವಿಸ್ತರಿಸುವ ಜವಾಬ್ದಾರಿ ಹೊಂದಿದ್ದೇವೆ. ಇಂಗಾಲ ಮುಕ್ತ ಗುರಿಯನ್ನು ಸಾಕಾರಗೊಳಿಸಲು ಹೆಚ್ಚಿನ ಹುಮ್ಮಸ್ಸಿಮಲ್ಲಿ ಸಾಮೂಹಿಕ ಪರಿಸರ ಸ್ನೇಹಿ ಪ್ರಯತ್ನಗಳನ್ನು ಕೈಗೊಳ್ಳಲಿದ್ದೇವೆ.

ಹಸಿರು ಸರಕು ಸಾಗಾಣಿಕೆಗೆ ಪರಿವರ್ತನೆ ಹೊಂದುವುದು, ಪರಿಸರ ಸ್ನೇಹಿ ಜೀವನವನ್ನು ನಡೆಸು ವುದು, ಯುವ ಬದಲಾವಣೆಗಾರರನ್ನು ಬೆಳೆಸುವುದು, ಮತ್ತು ಜನ ಸಮುದಾಯಗಳನ್ನು ತೊಡಗಿಸಿ ಕೊಳ್ಳುವುದು ಇತ್ಯಾದಿಗಳನ್ನು ಕೈಗೊಳ್ಳಲಾಗಿದ್ದು, 2025ರ ಪರಿಸರ ಮಾಸವು ಸುಸ್ಥಿರತೆಯ ಸಂರಕ್ಷಣೆಗೆ ನಾವು ಕೈಗೊಂಡಿರುವ ನಮ್ಮ ಸಮಗ್ರ ವಿಧಾನವನ್ನು ಪ್ರತಿಬಿಂಬಿಸುತ್ತದೆ. ಸುಸ್ಥಿರ ಚಿಂತನೆ ಮತ್ತು ಕ್ರಿಯೆಗಳನ್ನು ನಮ್ಮ ಮೌಲ್ಯ ಸರಪಳಿಯಾದ್ಯಂತ ಸೇರಿಸುವ ಮೂಲಕ, ನಾವು ಟೊಯೋಟಾದ ಜಾಗತಿಕ ದೃಷ್ಟಿಕೋನಕ್ಕೆ ಕೊಡುಗೆ ನೀಡುವುದಷ್ಟೇ ಅಲ್ಲ, ಭಾರತದ ರಾಷ್ಟ್ರೀಯ ಆದ್ಯತೆಗಳಾದ ಹೆಚ್ಚು ಒಳಗೊಳ್ಳುವಿಕೆಯ, ಸದೃಢ ಮತ್ತು ಇಂಗಾಲ ತಟಸ್ಥ ಭವಿಷ್ಯವನ್ನು ರೂಪಿಸುವತ್ತ ಮುನ್ನಡೆಯುತ್ತಿದ್ದೇವೆ” ಎಂದು ಹೇಳಿದರು.

ಇದರ ಜೊತೆಗೆ, ಪರಿಸರ ಮಾಸದಲ್ಲಿ ತಜ್ಞರ ಇಕೋ ಸೆಷನ್‌ಗಳು ಮತ್ತು ಜಾಗೃತಿ ಅಭಿಯಾನಗಳು, ಗಿಡ ನೆಡುವಿಕೆ ಚಾಲನೆ, ಇಕೋ- ಐಡಿಯಾ ಸ್ಪರ್ಧೆಗಳು ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ಸುಸ್ಥಿರತೆ ಆಧರಿತ ಚಟುವಟಿಕೆಗಳು ನಡೆದುವು. ಇವೆಲ್ಲವೂ ಟಿಕೆಎಂನ ವ್ಯವಸ್ಥೆಯಲ್ಲಿ ಪರಿಸರ ಜಾಗೃತಿಯನ್ನು ಮತ್ತಷ್ಟು ಆಳಗೊಳಿಸುವ ಗುರಿಯನ್ನು ಹೊಂದಿತ್ತು. ಟಿಕೆಎಂ ಇನ್ನು ಮುಂದೆ ಯೂ ಸಾಕಷ್ಟು ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರತೆ ಪಾಲಿಸುವ ತನ್ನ ಬದ್ಧತೆಗೆ ದೃಢವಾಗಿರುತ್ತದೆ ಮತ್ತು ಇದರಿಂದ ಸಾರಿಗೆ, ಜನರು, ಮತ್ತು ಗ್ರಹ ಉತ್ತಮ ರೀತಿಯಲ್ಲಿ ಇರುವ ಭವಿಷ್ಯ ಕಟ್ಟಲು ಕೊಡುಗೆ ನೀಡುತ್ತದೆ.