ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಕಾರಿನ ಮುಂಭಾಗ, ಇವಿ ಬೈಕ್ ಜಖಂ

ಬೃಹತ್ ಮರವೊಂದು ಧರಾಘಾತವಾದ ಕೂಡಲೇ ನಗರ ಸಂಚಾರಿ ಪೊಲೀಸ್ ಠಾಣೆ ಸಬ್‌ಇನ್ಸ್‌ ಪೆಕ್ಟರ್ ಮಂಜುಳ ನೇತೃತ್ವದಲ್ಲಿ ಕ್ಷಿಪ್ರಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸರು ಅರಣ್ಯ ಇಲಾಖೆ ಮತ್ತು ಬೆಸ್ಕಾಂ, ನಗರಸಭೆಗೆ ಮಾಹಿತಿ ರವಾನೆ ಮಾಡಿ, ಸಂಬಂಧಪಟ್ಟವರನ್ನು ಸ್ಥಳಕ್ಕೆ ಕರೆಸಿಕೊಂಡು ಮರವನ್ನು ಸ್ಥಳಾಂತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಕೆಲಸ ಮಾಡಿದರು.

ಜನಸಂದಣಿಯ ಬಿಬಿರಸ್ತೆಯಲ್ಲಿ ಧರಾಘಾತವಾದ ಬೃಹತ್ ಮರ

ನಗರದ ಬಿ.ಬಿ.ರಸ್ತೆ ಕೆನರಾಬ್ಯಾಂಕ್ ಸಮೀಪ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿರುವ ಚಿತ್ರ.

Ashok Nayak Ashok Nayak Aug 19, 2025 11:25 PM

ಚಿಕ್ಕಬಳ್ಳಾಪುರ : ಬಿಬಿ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ೯ ಗಂಟೆ ಸುಮಾರಿನಲ್ಲಿ ಬೃಹತ್ ಮರ ವೊಂದು ಜನಸಂಚಾರ ವಾಹನಸಂಚಾರ ಹೆಚ್ಚಿರುವ ರಸ್ತೆಗೆ ಅಡ್ಡಲಾಗಿ ಬೇರುಕಳಚಿ ಉರುಳಿದ ಪರಿಣಾಮ ಆಗಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.ಪರಿಣಾಮ ಒಂದು ಗಂಟೆಗೂ ಹೆಚ್ಚು ಕಾಲ ಸುಗಮ ಸಂಚಾರಕ್ಕೆ ಅಡಚಣೆಯುಂಟಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ನಗರದ ಪ್ರಮುಖ ರಾಜಬೀದಿಯಾದ ಬೆಂಗಳೂರು ಬಳ್ಳಾರಿ ರಸ್ತೆಯಲ್ಲಿ ಬೆಳಿಗ್ಗೆ ಭಾರೀಗಾತ್ರದ ಮರವೊಂದು ಧರೆಗುರುಳಿದ್ದು ನಾಗರೀಕರ ಆತಂಕಕ್ಕೆ ಕಾರಣವಾಗಿತ್ತು.

ಬೃಹತ್ ಮರವೊಂದು ಧರಾಘಾತವಾದ ಕೂಡಲೇ ನಗರ ಸಂಚಾರಿ ಪೊಲೀಸ್ ಠಾಣೆ ಸಬ್‌ಇನ್ಸ್‌ ಪೆಕ್ಟರ್ ಮಂಜುಳ ನೇತೃತ್ವದಲ್ಲಿ ಕ್ಷಿಪ್ರಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸರು ಅರಣ್ಯ ಇಲಾಖೆ ಮತ್ತು ಬೆಸ್ಕಾಂ, ನಗರಸಭೆಗೆ ಮಾಹಿತಿ ರವಾನೆ ಮಾಡಿ, ಸಂಬಂಧಪಟ್ಟವರನ್ನು ಸ್ಥಳಕ್ಕೆ ಕರೆಸಿಕೊಂಡು ಮರವನ್ನು ಸ್ಥಳಾಂತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವ ಕೆಲಸ ಮಾಡಿದರು.

ಇದನ್ನೂ ಓದಿ: Crime News: ಪ್ರೇಯಸಿಗಾಗಿ ಪತ್ನಿಯನ್ನೇ ಕೊಂದ ಬಿಜೆಪಿ ನಾಯಕ

ಮರಬಿದ್ದ ರಭಸಕ್ಕೆ ವಿದ್ಯುತ್ ಕಂಬವೊಂದು ಮುರಿದು ಬಿದ್ದು ರಸ್ತೆಯಲ್ಲಿ ಪಾರ್ಕಿಂಗ್ ಮಾಡಿದ್ದ ಕಾರಿನ ಬಾನೆಟ್ ಮೇಲೆ ಬಿದ್ದು ಮುಂಭಾಗ ಜಖಂ ಆಗಿದೆ.ಇದೇ ರೀತಿ ಇವಿ ಮೊಪೆಡ್ ಸಹ ಜಖಂ ಗೊಂಡಿದೆ. ಇದನ್ನು ಬಿಟ್ಟರೆ ಯಾರಿಗೂ ಯಾವ ಯಾವ ಥರದ ಅಪಾಯವೂ ಆಗದಿರುವುದು ನೋಡಿದರೆ ದೇವರು ದೊಡ್ಡವನು ಎಂಬ ಮಾತು ಮಂಗಳವಾರ ನಿಜವಾಗಿದೆ.

ಈ ಘಟನೆ ಸಂಬAಧ ಮಾತನಾಡಿದ ಮುಖಂಡ ಮಹಾಕಾಳಿ ಬಾಬು ಮಾತನಾಡಿ ಈಗ ನೆಲಕ್ಕುರು ಳಿರುವ ಮರದ ರೀತಿಯಲ್ಲಿಯೇ ಸಾಕಷ್ಟು ಮರಗಳು ಧರೆಗುರುಳುವ ಅಪಾಯದ ಸ್ಥಿತಿಯಲ್ಲಿವೆ. ಅರಣ್ಯ ಇಲಾಖೆ ಕೂಡಲೇ ಇಂತಹ ಮರಗಳನ್ನು ಪಟ್ಟಿ ಮಾಡಿ ತೆರವುಗೊಳಿಸಬೇಕು.ದೇವರ ದಯೆಯಿಂದ ಇಂದು ಯಾರಿಗೂ ಏನೂ ಅಪಾಯ ಆಗಿಲ್ಲ. ನಗರಸಭೆ ಕೂಡ ಈ ವಿಚಾರವನ್ನು ಅರಣ್ಯ ಇಲಾಖೆ ಗಮನಕ್ಕೆ ತರಬೇಕು.ಇಲ್ಲವಾದಲ್ಲಿ ಮುಂದೆ ಏನಾದರೂ ಮರಗಳಿಂದ ಅನಾಹುತ ಆದರೆ ಅದಕ್ಕೆ ಅರಣ್ಯ ಇಲಾಖೆಯೇ ನೇರಹೊಣೆ ಹೊರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ ದರು.

ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮರವನ್ನು ತೆರವು ಗೊಳಿಸಲು ಮುಂದಾಗದೆ, ಮೂಕಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಇದರ ನಡುವೆ ಟ್ರಾಫಿಕ್ ಪೊಲೀಸರು ಸಬ್‌ ಇನ್ಸ್ಪೆಕ್ಟರ್ ಮಂಜುಳ ಮಾರ್ಗ ದರ್ಶನ ದಲ್ಲಿ ಮರವನ್ನು ತೆರವುಗೊಳಿಸಲು ಮುಂದಾಗಿದ್ದಲ್ಲದೆ ಕ್ಷಿಪ್ರಗತಿಯಲ್ಲಿ ಈ ಕೆಲಸ ಮಾಡಲು ನೆರವಾಗಿ, ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಏನೇ ಆಗಲಿ ನಗರದ ಹೃದಯ ಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಮುಖ್ಯ ರಸ್ತೆಯಲ್ಲಿಯೇ ಮರ ಧರೆಗುರುಳಿದ್ದರೂ ಯಾವುದೇ ಪ್ರಾಣಾಪಾಯ ಸಂಭವಿಸದಿರುವುದು ಪವಾಡವೇ ಸರಿ ಎಂಬುದು ನಾಗರೀಕರ ಉದ್ಘಾರವಾಗಿದೆ.