ದೆಹಲಿ, ಫೆ. 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಸಂಸತ್ತಿನಲ್ಲಿ ತಮ್ಮ ದಾಖಲೆಯ 9ನೇ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಮಧ್ಯಮ ವರ್ಗ, ಕೃಷಿಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಮೋದಿ 3.0 ಸರ್ಕಾರದ 2ನೇ ಪೂರ್ಣಪ್ರಮಾಣದ ಬಜೆಟ್ ಇದಾಗಿದ್ದು, ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಎಲ್ಲ ವಿವರಗಳನ್ನು ಓದಿ ಹೇಳಿದ್ದಾರೆ. ಬಜೆಟ್ ಭಾಷಣ ಸಂಪೂರ್ಣ ವಿವರಗಳಿರುವ ಪಿಡಿಎಫ್ ಫೈಲ್ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಲಭ್ಯ ಇದೆ.
"ಆತ್ಮ ನಿರ್ಭರವನ್ನು ಪ್ರಧಾನವಾಗಿ ಇಟ್ಟುಕೊಂಡು, ನಾವು ದೇಶೀಯ ಉತ್ಪಾದನಾ ಸಾಮರ್ಥ್ಯ, ಇಂಧನ ಸುರಕ್ಷತೆ ಮತ್ತು ನಿರ್ಣಾಯಕ ಆಮದು ಅವಲಂಬನೆಗಳನ್ನು ಕಡಿಮೆ ಮಾಡಿದ್ದೇವೆ. ಅದೇ ಸಮಯದಲ್ಲಿ, ಸರ್ಕಾರದ ಪ್ರತಿಯೊಂದು ಕ್ರಮದಿಂದ ನಾಗರಿಕರು ಪ್ರಯೋಜನ ಪಡೆಯುವುದನ್ನು ನಾವು ಖಚಿತಪಡಿಸಿದ್ದೇವೆ. ಉದ್ಯೋಗ ಸೃಷ್ಟಿ, ಕೃಷಿ ಉತ್ಪಾದಕತೆ, ಗೃಹ ಖರೀದಿ ಶಕ್ತಿ ಮತ್ತು ಜನರಿಗೆ ಸಾರ್ವತ್ರಿಕ ಸೇವೆಗಳನ್ನು ಬೆಂಬಲಿಸಲು ಸುಧಾರಣೆಗಳನ್ನು ಕೈಗೊಳ್ಳುತ್ತೇವೆ. ಈ ಕ್ರಮಗಳು ಸುಮಾರು ಶೇ. 7ರಷ್ಟು ಹೆಚ್ಚಿನ ಬೆಳವಣಿಗೆಯ ದರವನ್ನು ನೀಡಿವೆ ಮತ್ತು ಬಡತನ ನಿವಾರಣೆ ಮತ್ತು ನಮ್ಮ ಜನರ ಜೀವನದಲ್ಲಿ ಸುಧಾರಣೆಯಲ್ಲಿ ಗಣನೀಯ ಪ್ರಗತಿ ಸಾಧಿಸಲು ನಮಗೆ ಸಹಾಯ ಮಾಡಿದೆʼʼ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಬಜೆಟ್ ಭಾಷಣದ ಪಿಡಿಎಫ್ ಪ್ರತಿ ಇಲ್ಲಿದೆ:
ಬೇರೆ ಎಲ್ಲೆಲ್ಲಿ ಬಜೆಟ್ ಪ್ರತಿ ಲಭ್ಯವಿದೆ?
ಇನ್ನು ಬಜೆಟ್ ಪ್ರತಿಗಳು ಅನೇಕ ಕಡೆಗಳಲ್ಲಿ ಲಭ್ಯವಿದ್ದು, ಅಲ್ಲೂ ನೀವು ಅದನ್ನು ಪಡೆಯಬಹುದಾಗಿದೆ. ಮುಖ್ಯವಾಗಿ ಇಂಡಿಯಾ ಬಜೆಟ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಜೆಟ್ ಪ್ರತಿಯ ಲಿಂಕ್ ಇದ್ದು, ಅಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
www.indiabudget.gov.in/ ವೆಬ್‌ಸೈಟ್‌ಗೆ ಭೇಟಿ ಕೊಟ್ಟಾಗ ಇಲ್ಲಿ ಮುಖ್ಯಪುಟದಲ್ಲೇ ನೀವು 2026-27ನೇ ಸಾಲಿನ ಕೇಂದ್ರ ಬಜೆಟ್ನ ವಿವಿಧ ಫೈಲ್ಗಳಿಗೆ ಲಿಂಕ್ ಕಾಣಬಹುದು. ಬಜೆಟ್ ಭಾಷಣ, ಬಜೆಟ್ ಮುಖ್ಯಾಂಶ ಇತ್ಯಾದಿ ಫೈಲ್ಗಳನ್ನು ನೀವು ಡೌನ್‌ಲೋಡ್ ಮಾಡಬಹುದು. ಈ ವರ್ಷ ಮಾತ್ರವಲ್ಲದೇ ಹಿಂದಿನ ವರ್ಷಗಳ ಬಜೆಟ್ಗಳ ಪ್ರತಿಗಳೂ ಅಲ್ಲಿ ಲಭ್ಯವಿದೆ.