ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾಯಿ-ಬೆಕ್ಕುಗಳಿಗೀಗ ವಿಐಪಿ ಟ್ರೀಟ್‌ಮೆಂಟ್‌, ಸಾಕು ಪ್ರಾಣಿಗಳ ಆರೈಕೆಯಲ್ಲಿ ಬೆಂಗಳೂರಿಗರೇ ನಂಬರ್ 1!

Instamart: ಸಾಕುಪ್ರಾಣಿಗಳನ್ನು ಮುದ್ದಿಸುವಲ್ಲಿ ಬೆಂಗಳೂರಿಗರೇ ಮುಂದಿದ್ದಾರೆ. ನಗರದಲ್ಲಿ ಸಾಕುಪ್ರಾಣಿಗಳಿಗಾಗಿ ಆಗುವ ಒಟ್ಟು ಖರ್ಚಿನಲ್ಲಿ ಶೇ.66ರಷ್ಟು ಹಣ ಕೇವಲ ಅವುಗಳ ಖುಷಿಗಾಗಿ (ಆಟಿಕೆಗಳು, ತಿಂಡಿಗಳು, ಗ್ರೂಮಿಂಗ್ ಉತ್ಪನ್ನಗಳು) ಬಳಕೆಯಾಗುತ್ತಿದೆ. ಬೆಂಗಳೂರಿನ ನಂತರದ ಸ್ಥಾನಗಳಲ್ಲಿ ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ದೆಹಲಿ ಇವೆ.

'ಇನ್‌ಸ್ಟಾಮಾರ್ಟ್'

ಬೆಂಗಳೂರು, ಜೂ.19: ಭಾರತದಲ್ಲಿ ಸಾಕುಪ್ರಾಣಿಗಳನ್ನು ಸಾಕುವ ಟ್ರೆಂಡ್ ಸಂಪೂರ್ಣವಾಗಿ ಬದಲಾಗಿದೆ. ಪ್ರಾಣಿಗಳನ್ನು ಕೇವಲ ಕಾವಲಿಗೆ ಅಥವಾ ಹವ್ಯಾಸಕ್ಕೆ ಸಾಕುವ ಬದಲು, ಮನೆಯ ಮತ್ತೊಬ್ಬ ಸದಸ್ಯನಂತೆ, ಮಗುವಿನಂತೆ ಆರೈಕೆ ಮಾಡುವ ಸಂಸ್ಕೃತಿ ಹೆಚ್ಚಾಗಿದೆ. ಈ ಸಾಕುಪ್ರಾಣಿಗಳ ಕ್ರಾಂತಿಗೆ ನಮ್ಮ 'ಬೆಂಗಳೂರು' ರಾಜಧಾನಿಯಾಗಿ ಹೊರಹೊಮ್ಮಿದೆ! ಹೌದು, ಪ್ರಮುಖ ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್ 'ಇನ್‌ಸ್ಟಾಮಾರ್ಟ್' (Instamart) ಕಳೆದ ಒಂದು ವರ್ಷದಲ್ಲಿ (ಜೂನ್ 2025 ರಿಂದ ಜೂನ್ 2026) 130ಕ್ಕೂ ಹೆಚ್ಚು ನಗರಗಳಲ್ಲಿ ನಡೆದ ಆರ್ಡರ್‌ಗಳನ್ನು ವಿಶ್ಲೇಷಿಸಿ ಒಂದು ವರದಿಯನ್ನು ನೀಡಿದೆ. ಆ ವರದಿಯಲ್ಲಿ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ.

ಬೆಂಗಳೂರಿನ ಸಾಕುಪ್ರಾಣಿಗಳೇ ಅದೃಷ್ಟವಂತರು!

ಸಾಕುಪ್ರಾಣಿಗಳನ್ನು ಮುದ್ದಿಸುವಲ್ಲಿ ಬೆಂಗಳೂರಿಗರೇ ಮುಂದಿದ್ದಾರೆ. ನಗರದಲ್ಲಿ ಸಾಕುಪ್ರಾಣಿಗಳಿಗಾಗಿ ಆಗುವ ಒಟ್ಟು ಖರ್ಚಿನಲ್ಲಿ ಶೇ.66ರಷ್ಟು ಹಣ ಕೇವಲ ಅವುಗಳ ಖುಷಿಗಾಗಿ (ಆಟಿಕೆಗಳು, ತಿಂಡಿಗಳು, ಗ್ರೂಮಿಂಗ್ ಉತ್ಪನ್ನಗಳು) ಬಳಕೆಯಾಗುತ್ತಿದೆ. ಬೆಂಗಳೂರಿನ ನಂತರದ ಸ್ಥಾನಗಳಲ್ಲಿ ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ದೆಹಲಿ ಇವೆ. ಇನ್ನು ಸಾಕುಪ್ರಾಣಿಗಳಿಗಾಗಿ ವಿಶೇಷ 'ಟ್ರೀಟ್ಸ್' ಆರ್ಡರ್ ಮಾಡುವಲ್ಲಿ ಗುರ್ಗಾಂವ್ ನಂಬರ್ ಒನ್ ಸ್ಥಾನದಲ್ಲಿದೆ. ಗುರ್ಗಾಂವ್‌ನ ಪ್ರತಿ 100 ಆಹಾರದ ಆರ್ಡರ್‌ಗಳಲ್ಲಿ 37 ಟ್ರೀಟ್ಸ್ ಆರ್ಡರ್ ಆಗುತ್ತಿವೆ.

ಶ್ವಾನ ಪ್ರೇಮಿಗಳಲ್ಲಿ ಬೆಂಗಳೂರು ಟಾಪ್, ಬೆಕ್ಕಿನ ಪ್ರೀತಿಯಲ್ಲಿ ಮುಂಬೈ ಫಸ್ಟ್!

ಭಾರತದಲ್ಲಿ ಶ್ವಾನ ಮತ್ತು ಬೆಕ್ಕು ಪ್ರೇಮಿಗಳ ನಡುವಿನ ಪೈಪೋಟಿಯಲ್ಲಿ ಸದ್ಯ ಬೆಕ್ಕುಗಳು ಮುನ್ನಡೆ ಸಾಧಿಸಿವೆ. ಇನ್‌ಸ್ಟಾಮಾರ್ಟ್‌ನಲ್ಲಿ ಶೇ. 60ರಷ್ಟು ಆರ್ಡರ್‌ಗಳು 'ಬೆಕ್ಕಿನ ಆಹಾರ'ದ್ದೇ ಆಗಿವೆ.

  • ಭಾರತದ ಬೆಕ್ಕುಗಳ ರಾಜಧಾನಿಯಾಗಿ ಮುಂಬೈ ಹೊರಹೊಮ್ಮಿದ್ದರೆ, ನಂತರದ ಸ್ಥಾನದಲ್ಲಿ ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತಾ ಇವೆ.
  • ಕೋಲ್ಕತ್ತಾ ನಗರವಂತೂ ಬೆಕ್ಕುಗಳ ಸಾಮ್ರಾಜ್ಯವೇ ಆಗಿದೆ. ಅಲ್ಲಿನ ಪ್ರತಿ 10 ಆರ್ಡರ್‌ಗಳಲ್ಲಿ 8 ಆರ್ಡರ್‌ಗಳು ಬೆಕ್ಕಿನ ಆಹಾರದ್ದೇ ಆಗಿವೆ.
  • ಆದರೆ, ಅತಿ ಹೆಚ್ಚು 'ಶ್ವಾನ ಪ್ರೇಮಿಗಳನ್ನು' ಹೊಂದಿರುವ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರು ಮೊದಲ ಸ್ಥಾನದಲ್ಲಿದೆ.

ಶಾಂಪೂ, ಐಸ್‌ಕ್ರೀಮ್ ಮತ್ತು ಡಯಟ್ ಫುಡ್

ಸಾಕುಪ್ರಾಣಿಗಳ ಊಟ-ತಿಂಡಿಯ ಸ್ಟೈಲ್ ಕೂಡ ಈಗ ಬದಲಾಗಿದೆ.

  • ಇನ್‌ಸ್ಟಾಮಾರ್ಟ್‌ನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಸರ್ಚ್ ಪದ ಎಂದರೆ ಅದು 'ಡಾಗ್ ಶಾಂಪೂ'. ಈ ಪದದ ಹುಡುಕಾಟ ಶೇ. 600ರಷ್ಟು ಏರಿಕೆಯಾಗಿದೆ.
  • ನಾಯಿಗಳ ಬಿಸ್ಕೆಟ್, ಐಸ್‌ಕ್ರೀಮ್ ಹುಡುಕಾಟವೂ ಶೇ.245 ರಷ್ಟು ಹೆಚ್ಚಾಗಿದೆ.
  • ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದ ಧಾನ್ಯಗಳಿಲ್ಲದ ಆರ್ಡರ್‌ಗಳ ಸಂಖ್ಯೆ ಶೇ.152ರಷ್ಟು ಹೆಚ್ಚಾಗಿದೆ.
  • ದೆಹಲಿಯ ಪ್ರಾಣಿ ಪ್ರಿಯರೊಬ್ಬರು ತಮ್ಮ ಸಾಕುಪ್ರಾಣಿಯ ಆರೈಕೆಗಾಗಿ ಒಂದೇ ವರ್ಷದಲ್ಲಿ ಬರೋಬ್ಬರಿ 60,957 ರೂ. ಖರ್ಚು ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಪಕ್ಷಿಗಳು ಮತ್ತು ಮೊಲಗಳ ಆಹಾರಗಳಿಗೂ ಹೆಚ್ಚಿದ ಡಿಮ್ಯಾಂಡ್

ಕೇವಲ ನಾಯಿ-ಬೆಕ್ಕು ಮಾತ್ರವಲ್ಲ, ಪಕ್ಷಿಗಳ ಆಹಾರದ ಆರ್ಡರ್‌ನಲ್ಲಿಯೂ ಶೇ.178 ರಷ್ಟು ಹಾಗೂ ಮೊಲದ ಆಹಾರದ ಆರ್ಡರ್‌ನಲ್ಲಿ ಶೇ. 130ರಷ್ಟು ಭಾರಿ ಏರಿಕೆ ಕಂಡುಬಂದಿದೆ.

ದ್ವಿಚಕ್ರ ವಾಹನ ಸವಾರರಿಗೆ ಗುಡ್ ನ್ಯೂಸ್: ಭಾರತದಲ್ಲೇ ಶುರುವಾಗಲಿದೆ 'ಬೈಕ್ ಎಬಿಎಸ್‌' ಉತ್ಪಾದನೆ

ಟಿಯರ್‌ 2 ನಗರಗಳಲ್ಲೂ ಜೋರಾಯ್ತು ಪೆಟ್ ಟ್ರೆಂಡ್

ಸಾಕುಪ್ರಾಣಿಗಳನ್ನು ಮುದ್ದಿಸುವುದು ಕೇವಲ ಮಹಾನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಎರಡನೇ ಸ್ಥರದ ನಗರಗಳಲ್ಲಿಯೂ ಈ ಟ್ರೆಂಡ್ ಜೋರಾಗಿದ್ದು, ಮೆಟ್ರೋಗಳಿಗಿಂತ ಶೇ. 96ರಷ್ಟು ವೇಗವಾಗಿ ಬೆಳೆಯುತ್ತಿದೆ. ಗುವಾಹಟಿ, ದಿಬ್ರುಗಢ, ಮೀರತ್, ಮಧುರೈ ಮತ್ತು ಕೊಟ್ಟಾಯಂ ನಗರಗಳು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಒಟ್ಟಿನಲ್ಲಿ, ಭಾರತೀಯರ ಮನೆಗಳಲ್ಲಿ ಸಾಕುಪ್ರಾಣಿಗಳಿಗೆ ಈಗ ವಿಐಪಿ ಸ್ಥಾನಮಾನ ಸಿಕ್ಕಿದ್ದು, ಅವುಗಳ ಆರೈಕೆಗಾಗಿ ಜನ ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುತ್ತಿಲ್ಲ ಎಂಬುದನ್ನು ಈ ವರದಿ ಸಾಬೀತುಪಡಿಸಿದೆ.