ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

iPhone: iPhoneನಲ್ಲಿ ಅರ್ಧ ಕಚ್ಚಿದ ಆ್ಯಪಲ್ ಲೋಗೋ ಏಕಿದೆ? ಇದರ ಹಿಂದಿನ ಕಥೆ ಏನು ಗೊತ್ತಾ?

ಆ್ಯಪಲ್‌ನ ಬ್ರ್ಯಾಂಡ್‌ನ ಲೋಗೋ ಸಾಂಸ್ಕೃತಿಕ ಚಿಹ್ನೆಯಾಗಿ ವಿಶ್ವದಾದ್ಯಂತ ಕೋಟ್ಯಂತರ iPhone, MacBook ಮತ್ತು iPadಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಅರ್ಧ ಕಚ್ಚಿದ ಆ್ಯಪಲ್‌ ಲೋಗೋ ಸಾಂಕೇತಿಕವಾಗಿ ರಚನೆ ಆಯಿತಾ, ಅಥವಾ ಕೇವಲ ಸೃಜನಶೀಲ ನಿರ್ಧಾರವೇ? ಈ ಲೋಗೋದ ಹಿಂದಿನ ನಿಜವಾದ ಕಥೆಯನ್ನು ತಿಳಿಯೋಣ ಬನ್ನಿ.

ಐಫೋನ್ ಲೋಗೋ ಹಿಂದಿನ ಕಥೆ ಗೊತ್ತಾ?

ಸಾಂದರ್ಭಿಕ ಚಿತ್ರ -

Profile Sushmitha Jain Sep 10, 2025 10:16 PM

ನವದೆಹಲಿ: ಆ್ಯಪಲ್‌ನ ಕಂಪನಿಯ (Apple) ಕಚ್ಚಿದ ಆ್ಯಪಲ್‌ ಲೋಗೋ (Apple logo) ಬ್ರ್ಯಾಂಡ್‌ ಚಿಹ್ನೆಯಾಗಿ ಮಾತ್ರವಲ್ಲ, ಸಾಂಸ್ಕೃತಿಕ ಚಿಹ್ನೆಯಾಗಿ ವಿಶ್ವದಾದ್ಯಂತ ಕೋಟ್ಯಂತರ iPhone, MacBook ಮತ್ತು iPadಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಅರ್ಧ ಕಚ್ಚಿದ ಆ್ಯಪಲ್‌ (Half Eaten Apple) ಲೋಗೋ ಸಾಂಕೇತಿಕವಾಗಿ ರಚನೆ ಆಯಿತಾ ಅಥವಾ ಕೇವಲ ಸೃಜನಶೀಲ ನಿರ್ಧಾರವೇ? ಈ ಲೋಗೋದ ಹಿಂದಿನ ನಿಜವಾದ ಕಥೆಯೇನು? ಎನ್ನುವುದನ್ನು ನೋಡೋಣ.

ಲೋಗೋದ ಮೂಲ

ಆ್ಯಪಲ್‌ ಕಂಪನಿ 1976ರಲ್ಲಿ ಸ್ಥಾಪನೆಯಾದಾಗ ಮೊದಲ ಲೋಗೋ ಇಂದಿನ ಸರಳ ಚಿಹ್ನೆಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಇದು ಐಸಾಕ್ ನ್ಯೂಟನ್ ಆ್ಯಪಲ್‌ ಮರದ ಕೆಳಗೆ ಕುಳಿತಿರುವ ವಿವರವಾದ ಚಿತ್ರವಾಗಿತ್ತು. 1977ರಲ್ಲಿ ಇದರ ಬದಲಿಗೆ ವಿನ್ಯಾಸಕ ರಾಬ್ ಜಾನಾಫ್ ರಚಿಸಿದ ಕಚ್ಚಿದ ಆ್ಯಪಲ್‌ ಲೋಗೋಗೆ ಪರಿಚಯಿಸಲಾಯಿತು. ಕಚ್ಚಿದ ಭಾಗವಿಲ್ಲದಿದ್ದರೆ, ಲೋಗೋವನ್ನು ಚೆರಿ, ಟೊಮಾಟೊ ಅಥವಾ ಇತರ ಹಣ್ಣಿನೊಂದಿಗೆ ಹೋಲಿಸಿ ಗೊಂದಲಕ್ಕೀಡು ಮಾಡುವ ಸಾಧ್ಯತೆ ಇತ್ತು. ಕಚ್ಚಿದ ಭಾಗವು ಇದನ್ನು ತಕ್ಷಣವೇ ಆ್ಯಪಲ್‌ ಎಂದು ಗುರುತಿಸುವಂತೆ ಮಾಡುತ್ತದೆ.

ಈ ಸುದ್ದಿಯನ್ನು ಓದಿ: Viral Video: ಭಾರಿ ಮಳೆಯನ್ನೂ ಲೆಕ್ಕಿಸದೆ ಹನುಮಾನ್ ಚಾಲೀಸಾಗೆ ಭರತನಾಟ್ಯ ಪ್ರದರ್ಶಿಸಿದ ಮಂಗಳೂರಿನ ವಿದ್ಯಾರ್ಥಿನಿಯರು; ವಿಡಿಯೊ ನೋಡಿ

ಕಚ್ಚಿದ ಭಾಗದ ಸಾಂಕೇತಿಕತೆ

ಕಚ್ಚಿದ ಆ್ಯಪಲ್‌ ಭಾಗಕ್ಕೆ ಜನರು ವಿವಿಧ ಅರ್ಥಗಳನ್ನು ಕಲ್ಪಿಸಿದ್ದಾರೆ. ಕೆಲವರು ಇದು ಈವ್‌ನ ನಿಷೇಧಿತ ಹಣ್ಣಿನ ಕಥೆಯಿಂದ ಪ್ರೇರಿತವಾದ ಜ್ಞಾನದ ಸಂಕೇತವೆಂದಿದ್ದಾರೆ. ಇತರರು ಇದು ಆವಿಷ್ಕಾರ, ಕುತೂಹಲ ಮತ್ತು ನಾವೀನ್ಯತೆಯನ್ನು ಪ್ರತಿನಿಧಿಸುತ್ತದೆ ಎಂದು ಭಾವಿಸಿದ್ದಾರೆ. 1970ರ ದಶಕದಲ್ಲಿ ಕಾಮನಬಿಲ್ಲಿನ ಬಣ್ಣಗಳಿಂದ ಆರಂಭವಾಗಿ ಇಂದಿನ ಏಕವರ್ಣದ ಸರಳ ವಿನ್ಯಾಸದವರೆಗೆ, ಕಚ್ಚಿದ ಆ್ಯಪಲ್‌ ಲೋಗೋ ತನ್ನ ಗುರುತನ್ನು ಉಳಿಸಿಕೊಂಡಿದೆ.

ವಿನ್ಯಾಸದ ಉದ್ದೇಶ

ರಾಬ್ ಜಾನಾಫ್‌ನ ಪ್ರಕಾರ, ಕಚ್ಚಿದ ಭಾಗವು ವಿನ್ಯಾಸದ ಪ್ರಾಯೋಗಿಕ ಅಗತ್ಯವಾಗಿತ್ತು. ಇದು ಆ್ಯಪಲ್‌ ಎಂದು ಸ್ಪಷ್ಟವಾಗಿ ಗುರುತಿಸುವುದರ ಜತೆಗೆ, ಲೋಗೋಗೆ ವಿಶಿಷ್ಟ ಗುರುತನ್ನು ನೀಡಿತು. ಈ ಸರಳ ಆದರೆ ಚತುರ ವಿನ್ಯಾಸವು ಆ್ಯಪಲ್‌ನ ಉತ್ಪನ್ನಗಳ ಗುಣಮಟ್ಟ, ಸೃಜನಶೀಲತೆ ಮತ್ತು ವಿಶ್ವಾಸಾರ್ಹತೆಯನ್ನು ಪ್ರತಿಬಿಂಬಿಸುತ್ತದೆ. ಕಾಲಾನಂತರದಲ್ಲಿ, ಈ ಲೋಗೋ ತಂತ್ರಜ್ಞಾನದ ಜಗತ್ತಿನ ಅತ್ಯಂತ ಶಕ್ತಿಶಾಲಿ ಬ್ರ್ಯಾಂಡ್‌ ಚಿಹ್ನೆಯಾಗಿ ಮಾರ್ಪಟ್ಟಿದೆ.

ಸಾಂಸ್ಕೃತಿಕ ಮಹತ್ವ

ಆ್ಯಪಲ್‌ನ ಕಚ್ಚಿದ ಲೋಗೋ ಕೇವಲ ವಾಣಿಜ್ಯಿಕ ಚಿಹ್ನೆಯಾಗಿರದೆ, ಆಧುನಿಕ ಸಂಸ್ಕೃತಿಯ ಭಾಗವಾಗಿದೆ. ಇದು ತಂತ್ರಜ್ಞಾನ ಮತ್ತು ಐಷಾರಾಮಿ ಜೀವನಶೈಲಿಯನ್ನು ಸಂಕೇತಿಸುತ್ತದೆ. ಜಗತ್ತಿನಾದ್ಯಂತ ಜನರು ಈ ಲೋಗೋವನ್ನು ಗುರುತಿಸುತ್ತಾರೆ ಮತ್ತುಆ್ಯಪಲ್‌ನ ಉತ್ಪನ್ನಗಳೊಂದಿಗೆ ಕನೆಕ್ಟ್‌ ಆಗುತ್ತಾರೆ. ಒಟ್ಟಿನಲ್ಲಿ ಈ ಕಚ್ಚಿದ ಆ್ಯಪಲ್‌ ಶಾಶ್ವತವಾಗಿ ಉಳಿಯುವ ಒಂದು ಐಕಾನಿಕ್ ಚಿಹ್ನೆ ಎನಿಸಿಕೊಂಡಿದೆ.