ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

1993 Mumbai Blast: ಮುಂಬೈ ಸರಣಿ ಸ್ಪೋಟದ ಆರೋಪಿ ಟೈಗರ್ ಮೆಮನ್ ಆಸ್ತಿ ಹರಾಜು!

Tiger Memon: 1993ರ ಮಾರ್ಚ್ 12ರಂದು ನಡೆದ ಮುಂಬೈ ವಿವಿಧ ಭಾಗಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಟೈಗರ್ ಮೆಮನ್ ಮತ್ತು ಆತನ ಕುಟುಂಬಕ್ಕೆ ಸೇರಿದ ಹಲವಾರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಕಳ್ಳಸಾಗಣೆದಾರರು ಮತ್ತು ವಿದೇಶಿ ವಿನಿಮಯ ಆಸ್ತಿ ಮುಟ್ಟುಗೋಲು ಪ್ರಾಧಿಕಾರದ ವಿಶೇಷ ಟಿಎಡಿಎ ನ್ಯಾಯಾಲಯವು ಇದನ್ನು ಶೀಘ್ರದಲ್ಲೇ ಹರಾಜು ಹಾಕುವ ಸಾಧ್ಯತೆ ಇದೆ.

ನವದೆಹಲಿ: ಮುಂಬೈ ಸರಣಿ ಸ್ಪೋಟದ (Mumbai serial bomb blasts) ಆರೋಪಿ ಟೈಗರ್ ಮೆಮನ್ (Tiger Memon) ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಆಸ್ತಿಗಳನ್ನು ಶೀಘ್ರದಲ್ಲೇ ಹರಾಜು ಮಾಡುವ ಸಾಧ್ಯತೆ ಇದೆ. ಈಗಾಗಲೇ ನಾಲ್ಕು ಆಸ್ತಿಗಳು ವಿವಾದದಲ್ಲಿದ್ದು, ಇನ್ನು ಐದು ಆಸ್ತಿಗಳನ್ನು ವಶಕ್ಕೆ ಪಡೆಯುವ ಪ್ರಕ್ರಿಯೆಗಳು ನಡೆಯುತ್ತಿವೆ. ಕಳ್ಳಸಾಗಣೆದಾರರು ಮತ್ತು ವಿದೇಶಿ ವಿನಿಮಯ ಆಸ್ತಿ ಮುಟ್ಟುಗೋಲು ಪ್ರಾಧಿಕಾರ (Smugglers and Foreign Exchange Manipulators (Forfeiture of Property) Authority) ವಿಶೇಷ ಟಿಎಡಿಎ ನ್ಯಾಯಾಲಯವು ಟೈಗರ್ ಮೆಮನ್ ಮತ್ತು ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ನೋಂದಾಯಿಸಲಾದ ಆಸ್ತಿಗಳ ವಿವರಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿರುವ ಟೈಗರ್ ಮೆಮನ್ ಮತ್ತು ಅವರ ಕುಟುಂಬಕ್ಕೆ ಸೇರಿದ ಹಲವಾರು ಆಸ್ತಿಗಳನ್ನು ಶೀಘ್ರದಲ್ಲೇ ಹರಾಜು ಹಾಕಲಾಗುವುದು. ಕಳ್ಳಸಾಗಣೆದಾರರು ಮತ್ತು ವಿದೇಶಿ ವಿನಿಮಯ ಆಸ್ತಿ ಮುಟ್ಟುಗೋಲು ಪ್ರಾಧಿಕಾರದ ವಿಶೇಷ ಟಿಎಡಿಎ ನ್ಯಾಯಾಲಯವು ಈಗಾಗಲೇ ಟೈಗರ್ ಮೆಮನ್ ಮತ್ತು ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ನೋಂದಾಯಿಸಲಾಗಿರುವ 17 ಆಸ್ತಿಗಳ ವಿವರಗಳನ್ನು ಪಡೆದುಕೊಂಡಿದೆ.

ಮಧ್ಯ ಮುಂಬೈನ ಮಾಹಿಮ್‌ನಲ್ಲಿರುವ ಅಲ್ ಹುಸೇನಿ ಕಟ್ಟಡದಲ್ಲಿರುವ ಮೂರು ಫ್ಲಾಟ್‌ಗಳು ಸೇರಿದಂತೆ ಒಟ್ಟು ಎಂಟು ಆಸ್ತಿಗಳನ್ನು ಕಳ್ಳಸಾಗಣೆದಾರರು ಮತ್ತು ವಿದೇಶಿ ವಿನಿಮಯ ಆಸ್ತಿ ಮುಟ್ಟುಗೋಲು ಪ್ರಾಧಿಕಾರವು ಈಗಾಗಲೇ ವಶಕ್ಕೆ ಪಡೆದುಕೊಂಡಿದೆ. ಅಲ್ ಹುಸೇನಿ ಕಟ್ಟಡದಲ್ಲಿರುವ ಮೂರು ಫ್ಲಾಟ್‌ಗಳಲ್ಲಿ ಈ ಹಿಂದೆ ಟೈಗರ್ ಮೆಮನ್, ಅವರ ತಾಯಿ ಮತ್ತು ಐವರು ಸಹೋದರರು ಇದರಲ್ಲಿ ವಾಸವಾಗಿದ್ದರು. ಮುಂಬೈ ಸ್ಪೋಟಕ್ಕೆ ಸಂಚು ರೂಪಿಸಲು ಪ್ರಮುಖ ಸಭೆ ನಡೆಸಿದ ಸ್ಥಳವು ಕೂಡ ಇದಾಗಿದೆ. ಇದೇ ಕಟ್ಟಡದೊಳಗೆ ವಾಹನಗಳಲ್ಲಿ ಸ್ಫೋಟಕಗಳನ್ನು ಇರಿಸಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: Koragajja Movie: ವಿಶೇಷ ಭದ್ರತೆಗೆ ʼಕೊರಗಜ್ಜʼ ಚಿತ್ರತಂಡ ಮನವಿ; ಗೃಹ ಸಚಿವ ಡಾ.ಜಿ. ಪರಮೇಶ್ವರ್‌ರಿಂದ ಸಕಾರಾತ್ಮಕ ಸ್ಪಂದನೆ

ಟೈಗರ್ ಮೆಮನ್ ಗೆ ಸೇರಿದ ನಾಲ್ಕು ಆಸ್ತಿಗಳು ಇನ್ನೂ ನ್ಯಾಯಾಲಯದಲ್ಲಿ ವಿವಾದದಲ್ಲಿವೆ. ಇನ್ನೂ ಐದು ಆಸ್ತಿಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರವು ಹರಾಜಿಗೆ ಮುಂಚಿತವಾಗಿ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಮೌಲ್ಯವನ್ನು ನಿರ್ಣಯಿಸಲು ಪ್ರಾರಂಭಿಸಿದೆ.

1993ರ ಮಾರ್ಚ್ 12ರಂದು ನಡೆದ ಮುಂಬೈ ಬಾಂಬ್ ಸ್ಫೋಟಗಳು 257 ಜನರನ್ನು ಬಲಿ ತೆಗೆದುಕೊಂಡಿತ್ತು. 1,400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮುಂಬೈ ಮೂಲದ ಅಂತಾರಾಷ್ಟ್ರೀಯ ಸಂಘಟಿತ ಅಪರಾಧ ಸಿಂಡಿಕೇಟ್ ಡಿ-ಕಂಪೆನಿಯ ನಾಯಕ ದಾವೂದ್ ಇಬ್ರಾಹಿಂ ಈ ದಾಳಿಗಳನ್ನು ನಡೆಸಿದ್ದನು. ಹಿಂದುತ್ವವಾದಿ ಗುಂಪು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಬಳಿಕ ಈ ಸರಣಿ ಬಾಂಬ್ ದಾಳಿಗಳು ನಡೆದಿತ್ತು.

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಯವರ "ಮತಗಳ್ಳತನʼ ಆರೋಪದ ಸುತ್ತಮುತ್ತ

ನಗರದಾದ್ಯಂತ 12 ವಿವಿಧ ಸ್ಥಳಗಳಲ್ಲಿ ಸ್ಫೋಟಗಳು ಉಂಟಾಗಿದ್ದವು. ಬಳಿಕ ಟೈಗರ್ ಮೆಮನ್ ತಲೆಮರೆಸಿಕೊಂಡಿದ್ದಾನೆ. ಈ ದಾಳಿಯಲ್ಲಿ ಭಾಗಿಯಾಗಿದ್ದ ಆತನ ಸಹೋದರ ಯಾಕೂಬ್ ಮೆಮನ್‌ನನ್ನು 2015ರಲ್ಲಿ ಗಲ್ಲಿಗೇರಿಸಲಾಗಿತ್ತು. ಮೆಮನ್ ಕುಟುಂಬದ ಇತರ ಸದಸ್ಯರಿಗೂ ಶಿಕ್ಷೆಗಳನ್ನು ವಿಧಿಸಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author