ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಟೋದಲ್ಲಿ ಕರೆದೊಯ್ದು ಮಾತು ಬಾರದ, ಕಿವಿ ಕೇಳಿಸದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಡ್ರಾಪ್‌ ನೆಪದಲ್ಲಿ ಭೀಕರ ಕೃತ್ಯ

Hyderabad Horror: ಆಟೋದಲ್ಲಿ ವಿಶೇಷ ಚೇತನ ಮಹಿಳೆಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತೆಲಂಗಾಣದ ರಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು ಸೈಯದ್‌ ಜಾವೀದ್‌ (37) ಮತ್ತು ಅರ್ಪುಲ ವೆಂಕಟೇಶ್‌ (30) ಎಂದು ಗುರುತಿಸಲಾಗಿದೆ.

ಸಾಂದರ್ಭಿಕ ಚಿತ್ರ

ಹೈದರಾಬಾದ್‌, ನ. 17: ತೆಲಂಗಾಣದಲ್ಲಿ ವಿಶೇಷ ಚೇತನ ಮಹಿಳೆಯೊಬ್ಬರನ್ನು ಆಟೋದಲ್ಲಿ ಕರೆದೊಯ್ದ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಭೀಕರ ಘಟನೆ ನಡೆದಿದೆ. ಡ್ರಾಪ್‌ ನೆಪದಲ್ಲಿ ಕರೆದೊಯ್ದು 37 ವರ್ಷದ ಮಾತು ಬಾರದ, ಕಿವಿ ಕೇಳಿಸದ ಮಹಿಳೆ ಮೇಲೆ ಈ ಕೃತ್ಯ ಎಸಗಲಾಗಿದ್ದು, ಪೈಶಾಚಿಕ ನಡೆಗೆ ದೇಶವೇ ಬೆಚ್ಚಿಬಿದ್ದಿದೆ. ಸದ್ಯ ಈ ಅಮಾನವೀಯ ಕೃತ್ಯ ಎಸಗಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ (Hyderabad Horror). ಬಂಧಿತರನ್ನು ಸೈಯದ್‌ ಜಾವೀದ್‌ (37) ಮತ್ತು ಅರ್ಪುಲ ವೆಂಕಟೇಶ್‌ (30) ಎಂದು ಗುರುತಿಸಲಾಗಿದೆ.

ತೆಲಂಗಾಣದ ರಂಗರೆಡ್ಡಿ ಜಿಲ್ಲೆಯಲ್ಲಿ ಈ ಘಟನ ನಡೆದಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ಹುಟ್ಟುಹಾಕಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಒಡಿಶಾವನ್ನು ಬೆಚ್ಚಿಬೀಳಿಸಿದ ಅತ್ಯಾಚಾರ ಪ್ರಕರಣ: ಹತ್ತು ದಿನಗಳಲ್ಲಿ ಐದು ಸಾಮೂಹಿಕ ಅತ್ಯಾಚಾರ ದೂರು ದಾಖಲು

ಘಟನೆ ವಿವರ

ʼʼನವೆಂಬರ್‌ 14-15ರ ಮಧ್ಯೆ ಈ ಕೃತ್ಯ ನಡೆದಿದೆ. ಕಿವುಡ ಮತ್ತು ಮೂಕ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ. ರಸ್ತೆ ಬದಿ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆ ಬಳಿ ಬಂದ ಸೈಯದ್‌ ಜಾವೀದ್‌ ಮತ್ತು ಅರ್ಪುಲ ವೆಂಕಟೇಶ್‌ ಮನೆಗೆ ಬಿಡುವುದಾಗಿ ಹೇಳಿ ಆಟೋಗೆ ಹತ್ತಿಸಿಕೊಂಡರು. ಬಳಿಕ ಆಟೋವನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು. ಕೊನೆಗೆ ಮಹಿಳೆಯನ್ನು ಅವರ ಮನೆ ಬಳಿ ಬಿಟ್ಟು ಪರಾರಿಯಾಗಿದ್ದರು ಎನ್ನಲಾಗಿದೆ.

ಸಂತ್ರಸ್ತೆಯ ದೂರಿನ ಮೇರೆಗೆ ನವೆಂಬರ್‌ 16ರಂದು ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡರು. ಸದ್ಯ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇಂಡಿಯಾ ಟುಡೇ ಸುದ್ದಿಸಂಸ್ಥೆ ಜತೆ ಮಾತನಾಡಿದ ಮಹೇಶ್ವರಂ ಝೋನ್‌ನ ಡೆಪ್ಯುಟಿ ಕಮಿಷನರ್‌ ಆಫ್‌ ಪೊಲೀಸ್‌ ಕೆ. ನಾರಾಯಣ ರೆಡ್ಡಿ ಇಬ್ಬರ ಬಂಧನವನ್ನು ಖಚಿತಪಡಿಸಿದ್ದಾರೆ. ಸಂತ್ರಸ್ತೆ ವಿವಾಹಿತೆಯಾಗಿದ್ದು, 17 ಮತ್ತು 14 ವರ್ಷದ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ.

ವರದಿ ಪ್ರಕಾರ ಸಂತ್ರಸ್ತೆಗೆ ಬಂಧಿತರ ಪೈಕಿ ಓರ್ವ ಪರಿಚಯ ಮೊದಲೇ ಇತ್ತು. ಅವರಿಬ್ಬರ ಮಧ್ಯೆ ಇದ್ದಿರಬಹುದಾದ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದ ವಿವಾದ ಈ ಕೃತ್ಯಕ್ಕೆ ಕಾರಣ ಎನ್ನುವುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಅದಾಗ್ಯೂ ಎಲ್ಲ ಕೋನಗಳಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ 65 ವರ್ಷದ ವೃದ್ಧ

ಅಮಲು ಪದಾರ್ಥ ಬೆರೆಸಿದ ಸಾಫ್ಟ್‌ ಡ್ರಿಂಕ್ಸ್‌ ನೀಡಿ ಕೃತ್ಯ

ಆಟೋ ಏರಿದ ಮಹಿಳೆಗೆ ಆರಂಭದಲ್ಲಿ ಅಪರಾಧಿಗಳು ಅಮಲು ಪದಾರ್ಥ ಸೇರಿಸಿದ ಸಾಫ್ಟ್‌ ಡ್ರಿಂಕ್ಸ್‌ ನೀಡಿದ್ದರು. ಅದರನ್ನು ಸೇವಿಸಿದ ಮಹಿಳೆಗಿದೆ ಪ್ರಜ್ಞೆ ಕಳೆದುಕೊಂಡಾಗ ಅವರದ್ದೇ ವೇಲ್‌ನಿಂದ ಕೈ-ಕಾಲು ಕಟ್ಟಿ ಹಾಕಿ ಅತ್ಯಾಚಾರ ನಡೆಸಲಾಗಿದೆ ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ವಿಶೇಷ ಚೇತನ ಮಹಿಳೆ ಮೇಲೆ ಇಂತಹ ಘೋರ ಕೃತ್ಯ ಎಸಗಿದ ಇಬ್ಬರನ್ನು ಸುಮ್ಮನೆ ಬಿಡಬಾರದು ಎನ್ನುವ ಆಗ್ರಹ ಜೋರಾಗಿ ಕೇಳಿ ಬಂದಿದೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author