ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವ ಘಟನೆ; 3 ತಿಂಗಳ ಹಸುಳೆ ಮೇಲೆ ಅತ್ಯಾಚಾರ ಎಸಗಿದ 30 ವರ್ಷದ ನೀಚ

Physical Assault: 30 ವರ್ಷದ ಪಾಪಿಯೊಬ್ಬ ತನ್ನ 3 ತಿಂಗಳ ಸೊಸೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಹಸುಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಸದ್ಯ ಈ ವಿಚಾರ ತಿಳಿದು ನಾಗರಿಕ ಸಮಾಜವೇ ಬೆಚ್ಚಿ ಬಿದ್ದಿದೆ.

ಸಾಂದರ್ಭಿಕ ಚಿತ್ರ.

ಭೋಪಾಲ್‌, ಡಿ. 30: ಇತ್ತೀಚೆಗೆ ಮಹಿಳೆಯರ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದೆ. ಕೆಲವೊಮ್ಮೆ ಕಾಮುಕರು ತಮ್ಮ ಸಂಬಂಧಿಕರು, ಮಕ್ಕಳು ಎನ್ನವುದನ್ನೂ ನೋಡದೆ ಅವರ ಮೇಲೆರಗುತ್ತಾರೆ. ಅದರಲ್ಲೂ ಇದೀಗ ದೇಶವೇ ನಾಚಿಕೆಯಿಂದ ತಲೆತಗ್ಗಿಸುವ ಹೀನ ಕೃತ್ಯವೊಂದು ಬೆಳಕಿಗೆ ಬಂದಿದೆ‌ (Crime News). 30 ವರ್ಷದ ಪಾಪಿಯೊಬ್ಬ ತನ್ನ 3 ತಿಂಗಳ ಸೊಸೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸದ್ಯ ಹಸುಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ (Madhya Pradesh News). ಸದ್ಯ ಈ ವಿಚಾರ ತಿಳಿದು ನಾಗರಿಕ ಸಮಾಜವೇ ಬೆಚ್ಚಿ ಬಿದ್ದಿದೆ. ಹಲವರ ರಕ್ತ ಕುದಿಯುತ್ತಿದ್ದು, ಪಾಪಿಯನ್ನು ತಮ್ಮ ಕೈಗೆ ಒಪ್ಪಿಸಿ ಎಂದು ಆಗ್ರಹಿಸಿದ್ದಾರೆ.

ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೃತ್ಯ ನಡೆಸುವ ವೇಳೆ ಪಾಪಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆತನನ್ನು ವಶಕ್ಕೆ ಪಡೆಯಲಾಗಿದೆ.

ಘಟನೆಯ ವಿವರ

ಸಂತ್ರಸ್ತೆಯ ತಂದೆಯ ಭಾವ (ಕಸಿನ್‌) ಆರೋಪಿ. ಈ 2 ಕುಟುಂಬ ಹಲವು ವರ್ಷಗಳಿಂದ ಒಂದೇ ಮನೆಯಲ್ಲಿ ವಾಸವಾಗಿದೆ. ಸ್ಟೇಷನ್‌ ರೋಡ್‌ ಪೊಲೀಸ್‌ ಸ್ಟೇಷನ್‌ ಪ್ರದೇಶದಲ್ಲಿ ಈ ಕುಟುಂಬದ ಮನೆ ಇದೆ. ಎಎಸ್‌ಪಿ ಸುರೇಂದ್ರ ಪ್ರತಾಪ್‌ ಸಿಂಗ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ʼʼಮಂಗಳವಾರ (ಡಿಸೆಂಬರ್‌ 30) ಮಧ್ಯಾಹ್ನ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ಆರೋಪಿ ಆಟವಾಡುವ ನೆಪದಲ್ಲಿ ಶಿಶುವನ್ನು ಕೋಣೆಗೆ ಕರೆದೊಯ್ದು ನಂತರ ಅತ್ಯಾಚಾರ ಎಸಗಿದ್ದಾನೆʼʼ ಎಂದು ಅವರು ಹೇಳಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸದ್ಯ ಆತನ ತನಿಖೆ ನಡೆಸಲಾಗುತ್ತಿದೆ.

ನಿದ್ರೆ ಔಷಧ ನೀಡಿ ಅತ್ಯಾಚಾರ, ವಿಡಿಯೊ ಮಾಡಿ ಬೆದರಿಕೆ

ʼʼಇವರದ್ದು ಕೂಡು ಕುಟುಂಬ. ಮಂಗಳವಾರ ಅಪರಾಹ್ನ ಆರೋಪಿ ಮದ್ಯದ ಅಮಲಿನಲ್ಲಿ ಮನೆಗೆ ಬಂದ. ಈ ವೇಳೆ ಮಗುವನ್ನು ಆಟವಾಡಿಸುವುದಾಗಿ ಹೇಳಿದ. ಮಗುವಿನ ತಾಯಿ, ಅಜ್ಜಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೂ ಇದನ್ನು ಕಿವಿಗೆ ಹಾಕಿಕೊಳ್ಳದೆ ಆಕೆಯನ್ನು ಕರೆದುಕೊಂಡು ಪಕ್ಕದ ರೂಮ್‌ಗೆ ಹೋದʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ʼʼಕೋಣೆಯಲ್ಲಿ ಮಗು ಜೋರಾಗಿ ಅಳುತ್ತಿರುವುದನ್ನು ಗಮನಿಸಿ ಮನೆಯವರು ಬಾಗಿಲನ್ನು ಬಲವಂತವಾಗಿ ತೆಗೆದು ಒಳ ಪ್ರವೇಶಿಸಿದರು. ಈ ವೇಳೆ ಮಗು ಚಿಂತಾಜನಕ ಸ್ಥಿತಿಯಲ್ಲಿ ಕಂಡುಬಂತು. ಆರೋಪಿ ಅಲ್ಲಿಂದ ತಪ್ಪಿಸಿಕೊಂಡ. ಕೂಡಲೇ ಮನೆಯವರು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಆಗಮಿಸಿ ಗಂಭೀರ ಸ್ಥಿತಿಯಲ್ಲಿದ್ದ ಮಗುವನನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಸದ್ಯ ಮಗುವಿನ ಸ್ಥಿತಿ ಚಿಂತಾಜನಕವಾಗಿ ಮುಂದುವರಿದಿದೆʼʼ ಎಂದು ವಿವರಿಸಿದ್ದಾರೆ. ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಿದ್ದಾರೆ.

ಬೆಚ್ಚಿಬಿದ್ದ ದೇಶ

ಸದ್ಯ ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆತನನ್ನು ಕೂಡಲೇ ಗಲ್ಲಿಗೇರಿಸಬೇಕು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಕೃತ್ಯ ಎಸಗಿದ ಆತನ ಮನಸ್ಥಿತಿ ಬಗ್ಗೆ ಕ್ಯಾಕರಿಸಿ ಉಗುಳಿದ್ದಾರೆ. ಇಂತಹವರು ಭೂಮಿ ಮೇಲೆ ಜೀವಿಸಲು ಯಾವುದೇ ಅರ್ಹತೆ ಹೊಂದಿಲ್ಲ ಎಂದು ಕಿಡಿಕಾರಿದ್ದಾರೆ.