ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೈಲು ಬೋಗಿ ಒಳಗೆ 54 ವರ್ಷದ ಮಹಿಳೆ ಮೇಲೆ ಅತ್ಯಾಚಾರ, ಭೀಕರ ಹತ್ಯೆ; ಅಪರಾಧಿಯನ್ನು ಪತ್ತೆಹಚ್ಚಲು ನೆರವಾಯ್ತು ಚಿನ್ನದ ಉಂಗುರ

Crime News: ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್‌ನ ರೈಲ್ವೆ ಯಾರ್ಡ್‌ನಲ್ಲಿ ನಿಲ್ಲಿಸಿದ್ದ ಪಾಳುಬಿದ್ದ ಬೋಗಿಯೊಂದರಲ್ಲಿ ಪತ್ತೆಯಾದ 54 ವರ್ಷದ ಅಪರಿಚಿತ ಮಹಿಳೆಯ ಗುರುತು ಪತ್ತೆಗೆ ಚಿನ್ನದ ಉಂಗುರ ನೆರವಾದ ಘಟನೆ ನಡೆದಿದೆ. ಜತೆಗೆ ಅಪರಾಧಿಯೂ ಸಿಕ್ಕಿಬಿದ್ದಿದ್ದಾನೆ.

ಸಾಂದರ್ಭಿಕ ಚಿತ್ರ

ಚೆನ್ನೈ, ನ. 21: ಪಾಳುಬಿದ್ದ ರೈಲು ಬೋಗಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆಗೈದ ನಿಗೂಢ ಪ್ರಕರಣವನ್ನು ಬೇಧಿಸಲು ಪೊಲೀಸರಿಗೆ ಉಂಗುರವೊಂದು ನೆರವಾದ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ (Crime News). ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್‌ನ ರೈಲ್ವೆ ಯಾರ್ಡ್‌ನಲ್ಲಿ ನಿಲ್ಲಿಸಿದ್ದ ಪಾಳುಬಿದ್ದ ಭೋಗಿಯೊಂದರಲ್ಲಿ 54 ವರ್ಷದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಕೈಗಿತ್ತಿಕೊಂಡ ಪೊಲೀಸರಿಗೆ ಆರಂಭದಲ್ಲಿ ಮಹಿಳೆಯ ಗುರುತು ಪತ್ತೆಯೇ ಸವಾಲಾಗಿ ಪರಿಣಮಿಸಿತ್ತು. ಬಳಿಕ ಸ್ಥಳದಲ್ಲಿ ಸಿಕ್ಕ ಚಿನ್ನದ ಉಂಗುರದಿಂದಾಗಿ ಈ ಪ್ರಕರಣದ ನಿಗೂಢತೆ ಕರಗಿದ್ದು, ಮಹಿಳೆಯ ಗುರುತು ಪತ್ತೆಯಾಗಿದೆ. ಜತೆಗೆ ಅಪರಾಧಿಯೂ ಸಿಕ್ಕಿಬಿದ್ದಿದ್ದಾನೆ.

ಪೋಸ್ಟ್‌ ಮಾರ್ಟಂ ವರದಿಯಲ್ಲಿ ಕೊಲೆಯ ಮುನ್ನ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವುದು ದೃಢವಾಗಿದೆ. ಸ್ಟೇಷನ್‌ನಲ್ಲಿದ್ದ ಭಿಕ್ಷುಕ ಈ ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಘಟನೆ ವಿವರ

ನವೆಂಬರ್‌ 13ರಂದು ನಾಗರಕೋಯಿಲ್‌ನ ರೈಲ್ವೆ ಯಾರ್ಡ್‌ ಸ್ವಚ್ಛ ಮಾಡುತ್ತಿದ್ದ ಕಾರ್ಮಿಕರಿಗೆ ಬೋಗಿಯೊಂದರಲ್ಲಿ ಮಹಿಳೆಯ ಮೃತದೇಹ ಕಂಡು ಬಂತು. ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ಕೈಗೆತ್ತಿಕೊಂಡರೂ ಮೃತ ಮಹಿಳೆಯ ಗುರುತು ಪತ್ತೆಯೇ ಸವಾಲಾಗಿತ್ತು. ಗುರುತು ಪತ್ತೆಗೆ ಪರಿಶೀಲನೆ ನಡೆಸುತ್ತಿದ್ದಾಗ ಪೊಲೀಸರ ಕಣ್ಣಿಗೆ ಬಿದ್ದಿದ್ದೇ ಮಹಿಳೆಯ ಬೆರಳಿನಲ್ಲಿದ್ದ ಹಾವಿನ ಆಕಾರದ ಚಿನ್ನದ ಉಂಗುರ. ವಿಶಿಷ್ಟ ಆಕಾರದ ಈ ಉಂಗುರವೇ ಮುಂದೆ ತನಿಖೆಯಲ್ಲಿ ಪ್ರಧಾನ ಪಾತ್ರ ವಹಿಸಿತು.

ಎಎಸ್‌ಐ ಕೊಂದು ಅವರ ಕಾರ್‌ನಲ್ಲೇ ಸುಟ್ಟು ಹಾಕಿದ ಮಹಿಳಾ ಹೆಡ್‌ ಕಾನ್ಸ್‌ಟೇಬಲ್‌; ಅಕ್ರಮ ಸಂಬಂಧಕ್ಕೆ ಅಧಿಕಾರಿ ಬಲಿ

ರೈಲ್ವೆ ಎಸ್‌ಪಿ ಆದರ್ಶ್‌ ಪಚೇರ ಈ ಬಗ್ಗೆ ಮಾಹಿತಿ ನೀಡಿ ಉಂಗುರ ಹೇಗೆ ಈ ಪ್ರಕರಣವನ್ನು ಬೇಧಿಸಲು ನೆರವಾಯಿತು ಎನ್ನುವುದನ್ನು ವಿವರಿಸಿದ್ದಾರೆ. ಉಂಗುರದ ಹಾಲ್‌ಮಾರ್ಕ್‌ನ ವಿವರ ಪರಿಶೀಲಿಸಿದಾಗ ಅದರ ಮೂಲ ಗುಜರಾತ್‌ ಎನ್ನುವುದು ತಿಳಿದುಬಂತು. ಅಲ್ಲಿ ವಿಚಾರಿಸಿದಾಗ ಉಂಗುರವನ್ನು ಛತ್ತೀಸ್‌ಗಢದ ರಾಯ್‌ಪುರಕ್ಕೆ ಮಾರಾಟ ಮಾಡಿರುವುದು ಗೊತ್ತಾಯಿತು. ಇನ್ನು ಮಾರಾಟ ವಿವರ ಪರಿಶೀಲನೆ ವೇಳೆ ಮಹಿಳೆ ಪ್ಯಾನ್‌ ಕಾರ್ಡ್‌ ವಿವರ ಬಯಲಾಯಿತು. ಅದರಲ್ಲಿ ಮಹಿಳೆಯ ಮಧ್ಯ ಪ್ರದೇಶ ಮೂಲದವರು ಎನ್ನುವುದು ತಿಳಿಯಿತು. ಅದರೊಂದಿಗೆ ಪೊಲೀಸರಿಗೆ ಬಹುದೊಡ್ಡ ಸುಳಿವು ಸಿಕ್ಕಂತಾಯ್ತು.

ಬಳಿಕ ಪೊಲೀಸರು ಮಹಿಳೆಯ ಕುಟುಂಬಸ್ಥರನ್ನು ಸಂಪರ್ಕಿಸಿದಾಗ ಅವರು, ಆಕೆ 3 ತಿಂಗಳಿನಿಂದ ನಾಪತ್ತೆಯಾಗಿರುವುದಾಗಿ ತಿಳಿಸಿದರು. ಸದ್ಯ ಮಹಿಳೆಯ ಪತಿ ಮತ್ತು ಮಕ್ಕಳು ಕನ್ಯಾಕುಮಾರಿಗೆ ತೆರಳಿದ್ದಾರೆ. ಮಹಿಳೆಯ ಗುರುತು ಪತ್ತೆಯಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆಯ ಬಳಿಕ ಅಪರಾಧಿಯನ್ನು ಪತ್ತೆಹಚ್ಚಿದ್ದಾರೆ. ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲಿ ಓಡಾಡುತ್ತಿದ್ದುದನ್ನು ಗಮನಿಸಿ ಆತನನ್ನು ವಿಚಾರಿಸಿದಾಗ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ.

ರಸ್ತೆ ಮಧ್ಯೆ ಪಟಾಕಿ ಸಿಡಿಸಿದ್ದನ್ನು ಪ್ರಶ್ನಿಸಿದ ಪೊಲೀಸ್‌ ಅಧಿಕಾರಿಯನ್ನು ಥಳಿಸಿ ಹತ್ಯೆ

ರೈಲು ನಿಲ್ದಾಣದಲ್ಲಿ ಭಿಕ್ಷುಕನಾಗಿದ್ದ ಈತ ಹಿಂದೆಯೂ ಮಹಿಳೆಯನ್ನು ಹಿಂಬಾಲಿಸಿದ್ದ ಎನ್ನಲಾಗಿದೆ. ಘಟನೆ ನಡೆದ ದಿನ ಮಹಿಳೆಯನ್ನು ಭೋಗಿಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಅಲ್ಲದೆ ಅಪರಾಧಿಯ ರಕ್ತಸಿಕ್ತ ಅಂಗಿ ಪತ್ತೆಯಾಗಿದೆ. ಮಹಿಳೆಯ ಎದೆಗೆ ಒದ್ದು ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ. ಅಲ್ಲದೆ ಕೊಲೆಗೆ ಯಾವುದೇ ಆಯುಧ ಬಳಸಿಲ್ಲವೆಂದೂ ಹೇಳಿದ್ದಾನೆ. ಘಟನೆ ಬಗ್ಗೆ ತನಿಖೆ ಮುಂದುವರಿದಿದೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author