ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asha Jois: ಸ್ನೇಹಿತೆಯ ಖಾಸಗಿ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್​ಮೇಲ್; ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ ಎಫ್‌ಐಆರ್‌

Sandalwood News: ಶೃಂಗೇರಿ ಶಾರದಾ ಪೀಠದ ಜೋಯಿಸ್ ಕುಟುಂಬದ ಸದಸ್ಯೆ ಹಾಗೂ ಮಿಸ್ ಇಂಡಿಯಾ ಪ್ಲಾನೆಟ್ 2016ರಲ್ಲಿ ಸ್ಪರ್ಧಿಯಾಗಿದ್ದ ನಟಿ ಆಶಾ ಜೋಯಿಸ್ ವಿರುದ್ಧ ಪಾರ್ವತಿ ಎಂಬುವವರು ಅವರು ದೂರು ದಾಖಲಿಸಿದ್ದಾರೆ. ತಿಲಕನಗರ ಪೊಲೀಸ್ ಠಾಣೆಯಲ್ಲಿ ಆಶಾ ಜೋಯಿಸ್​ ವಿರುದ್ಧ ಎಫ್​​ಐಆರ್ ದಾಖಲಾಗಿದೆ.

ಬೆಂಗಳೂರು, ಅ.25: ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಕಿರುತೆರೆ ನಟಿ ಆಶಾ ಜೋಯಿಸ್ (TV Actress Asha Jois) ವಿರುದ್ಧ ಬ್ಲ್ಯಾಕ್‌ಮೇಲ್ ಆರೋಪ ಕೇಳಿ ಬಂದಿದೆ. ಖಾಸಗಿ ವಿಡಿಯೊ, ಫೋಟೊಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ ಎಂದು ಪಾರ್ವತಿ (61) ಎಂಬುವರು ನೀಡಿದ ದೂರಿನ ಮೇರೆಗೆ ತಿಲಕನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

61 ವರ್ಷದ ಪಾರ್ವತಿಗೆ ಮೂರು ವರ್ಷದ ಹಿಂದೆ ಆಶಾ ಜೋಯಿಸ್ ಪರಿಚಯವಾಗಿದ್ದರು. ತಾನು ಶೃಂಗೇರಿ ಮಠದ ಜೋಯಿಸ್ ಕುಟುಂಬದವಳು ಹಾಗೂ ಸೀರಿಯಲ್ ನಟಿ ಎಂದು ಹೇಳಿ ಆಶಾ ಹೇಳಿಕೊಂಡಿದ್ದರು.

ಪಾರ್ವತಿ ಹಲವು ವರ್ಷಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಕಂಪನಿ ಮಾಲೀಕರನ್ನೇ ಮದುವೆಯಾಗಿದ್ದರು. ಈ ವಿಚಾರ ತಿಳಿದುಕೊಂಡ ಆಶಾ ಜೋಯಿಸ್, ಪತಿಗೆ ಬ್ಲ್ಯಾಕ್​ಮೇಲ್ ಮಾಡಲು ಬಲವಂತ ಮಾಡಿದ್ದಾರೆ. ಸ್ನೇಹಿತೆಯ ಖಾಸಗಿ ವಿಡಿಯೊ, ಫೋಟೊಗಳನ್ನು ಕದ್ದು ಇತರರ ಜತೆ ಹಂಚಿ ಬ್ಲ್ಯಾಕ್​ಮೇಲ್ ಮಾಡಿದ್ದಾರೆ. ಅಲ್ಲದೇ 2 ಕೋಟಿ ರೂಪಾಯಿಗೆ ಬ್ಲ್ಯಾಕ್​​ಮೇಲ್ ಮಾಡಲು ಬಲವಂತದ ಪ್ರಚೋದನೆ ನೀಡಿರುವ ಆರೋಪ ಮಾಡಲಾಗಿದೆ.

ಆಶಾ ಜೋಯಿಸ್ ಬಲವಂತಕ್ಕೆ ಪಾರ್ವತಿ ಒಪ್ಪದೆ ನಿರಾಕರಿಸಿದ್ದಳು. ಇದೇ ದ್ವೇಷಕ್ಕೆ ಆಕೆಯ ಖಾಸಗಿ ವಿಡಿಯೊಗಳು, ವಾಯ್ಸ್ ರೆಕಾರ್ಡ್ ಹಾಗೂ ಪ್ರೈವೇಟ್ ಫೋಟೊಗಳನ್ನು ನಟಿ ಕದ್ದಿದ್ದಾರೆ. ಬಳಿಕ ಅವುಗಳನ್ನು ಪಾರ್ವತಿ ಅವರಿಗೆ ಪರಿಚಯ ಇರುವ ವ್ಯಕ್ತಿಗಳಿಗೆ ಕಳಿಸಿದ್ದಳಂತೆ. ಈ ಹಿನ್ನೆಲೆಯಲ್ಲಿ ತನ್ನ ಘನತೆಗೆ ಕುಂದುಂಟಾಗಿದೆ ಹಾಗೂ ತನ್ನ ಖಾಸಗಿ ಡೇಟಾವನ್ನು ಕದ್ದಿದ್ದಾರೆಂದು ಆರೋಪಿಸಿ ಪಾರ್ವತಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಿಲಕನಗರ ಪೊಲೀಸ್ ಠಾಣೆಯಲ್ಲಿ ಆಶಾ ಜೋಯಿಸ್​ ವಿರುದ್ಧ ಎಫ್​​ಐಆರ್ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ | Blackmail Case: ಮಹಿಳೆಯ ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ 8 ಲಕ್ಷ ವಸೂಲಿ; ಇಬ್ಬರ ವಿರುದ್ಧ ಎಫ್‌ಐಆರ್‌

ಅಮಾನುಷ ಘಟನೆ, ಮಲತಂದೆಯಿಂದ ಮಗಳ ಕೊಲೆ

ಬೆಂಗಳೂರು, ಅ.24: ಮಲತಂದೆಯೊಬ್ಬ (stepfather) 7 ವರ್ಷದ ಮಗಳ ಹತ್ಯೆ ಮಾಡಿರುವ ಅಮಾನುಷ ಘಟನೆ ಬೆಂಗಳೂರಿನ (Bengaluru crime news) ಕುಂಬಳಗೋಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ನಡೆದಿದೆ. ಮಲತಂದೆ ದರ್ಶನ್, 7 ವರ್ಷದ ಸಿರಿ ಎನ್ನುವ ಮಗಳನ್ನು ಉಸಿರುಗಟ್ಟಿಸಿ ಕೊಲೆ (murder case) ಮಾಡಿದ್ದಾನೆ. ಮಗುವಿನ ಮುಖಕ್ಕೆ ಹೊಡೆದು, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ನಿನ್ನೆ ಸಂಜೆ ಕೊಲೆ ಮಾಡಿ ಮಲತಂದೆ ದರ್ಶನ್ ಪರಾರಿಯಾಗಿದ್ದಾನೆ ಎಂದು ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Physical Abuse: ಇನ್‌ಸ್ಟಾಗ್ರಾಂನಲ್ಲಿ ಬಾಲಕಿಯನ್ನು ಪರಿಚಯಿಸಿಕೊಂಡು ಲೈಂಗಿಕ ದೌರ್ಜನ್ಯ; ನಾಲ್ವರು ಅಂದರ್

ಕೊಲೆಯಾದ ಬಾಲಕಿ ಸಿರಿಯ ತಾಯಿ, ಮೊದಲ ಪತಿ ಮೃತಪಟ್ಟ ಬಳಿಕ ದರ್ಶನ್‌ನನ್ನು ಎರಡನೇ ಮದುವೆಯಾಗಿದ್ದಳು. ಆದರೆ, ಇದೀಗ ದರ್ಶನ್ ಪತ್ನಿ ಜೊತೆ ಗಲಾಟೆ ಮಾಡಿ ಅದೇ ಕೋಪದಲ್ಲಿ ಬಾಲಕಿಯನ್ನು ಹತ್ಯೆ ಮಾಡಿದ್ದಾನೆ. ಶಿಲ್ಪಾ ಎಂಬ ಮಹಿಳೆಯ ಪುತ್ರಿ ಸಿರಿ. ಮೊದಲ ಪತಿ ಮೃತಪಟ್ಟ ಬಳಿಕ, ಇನ್ ಸ್ಟಾಗ್ರಾಂನಲ್ಲಿ ಆರೋಪಿ ದರ್ಶನ್ ಶಿಲ್ಪಾಗೆ ಪರಿಚಯವಾಗಿದ್ದ. ಬಳಿಕ ದರ್ಶನ್‌ನನ್ನು ಶಿಲ್ಪಾ ಎರಡನೇ ಮದುವೆಯಾಗಿದ್ದರು. ಮೊನ್ನೆ ಶಿಲ್ಪಾ ಜೊತೆಗೆ ಜಗಳವಾಡಿದ್ದ ದರ್ಶನ್ ನಿನ್ನೆ ಸಂಜೆ ಮಲಮಗಳು ಸಿರಿಯನ್ನು ಕೊಂದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕುಂಬಳಗೊಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ದರ್ಶನ್‌ನ ಹುಡುಕಾಟದಲ್ಲಿದ್ದಾರೆ.