Actor Darshan: ವಿದೇಶಕ್ಕೆ ಹೋಗಲು ಮುಂದಾದ ನಟ ದರ್ಶನ್, ಷರತ್ತು ಸಡಿಲಿಕೆ ಕೋರಿ ಅರ್ಜಿ
ದರ್ಶನ್ (Actor Darshan) ಅವರು ಮಿಲನ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಹಾಡಿನ ಶೂಟ್ಗಾಗಿ ವಿದೇಶಕ್ಕೆ ತೆರಳಬೇಕಿದೆ. ಹೀಗಾಗಿ, ಸಿನಿಮಾ ಶೂಟಿಂಗ್ಗಾಗಿ ದುಬೈ ಮತ್ತು ಯೂರೋಪ್ಗೆ ತೆರಳಲು ಅವಕಾಶ ಕೋರಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಆಗಿದೆ.

ದರ್ಶನ್

ಬೆಂಗಳೂರು: ನಟ ದರ್ಶನ್ (Actor Darshan) ಅವರು ಇದೀಗ ತನಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ಕೋರಿ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy murder case) ಎರಡನೇ ಆರೋಪಿಯಾಗಿರುವ ದರ್ಶನ್, ಷರತ್ತುಬದ್ಧ ಜಾಮೀನು (bail) ಪಡೆದು ಜೈಲಿನಿಂದ ಹೊರಗಿದ್ದಾರೆ. ಜಾಮೀನು ನೀಡುವಾಗ ವಿದೇಶಕ್ಕೆ ತೆರಳುವಂತಿಲ್ಲ ಎನ್ನವು ಷರತ್ತನ್ನು ಕೋರ್ಟ್ (Court) ವಿಧಿಸಿತ್ತು. ಹೀಗೆ ತೆರಳಬೇಕಿದ್ದರೆ ಕೋರ್ಟ್ ಅನುಮತಿ ಕಡ್ಡಾಯವಾಗಿದ್ದು, ಅದನ್ನು ಪಡೆಯಲು ನಟ ಅರ್ಜಿ ಹಾಕಿದ್ದಾರೆ.
ದರ್ಶನ್ ಬೆಂಗಳೂರು ಬಿಟ್ಟು ತೆರಳುವಂತಿಲ್ಲ ಎನ್ನುವ ಸೂಚನೆಯನ್ನು ನ್ಯಾಯಾಲಯವು ನೀಡಿತ್ತು. ಆದರೆ, ಬೆಂಗಳೂರಿನಿಂದ ಆಚೆ ಹೋಗಿ ದೇಶ ಸುತ್ತಾಟ ಮಾಡಲು ದರ್ಶನ್ ಹೈಕೋರ್ಟ್ನಿಂದ ಅನುಮತಿ ಪಡೆದಿದ್ದಾರೆ. ಆ ಮೂಲಕ ರಾಜಸ್ಥಾನ ಮೊದಲಾದ ಕಡೆಗಳಲ್ಲಿ ‘ಡೆವಿಲ್’ ಸಿನಿಮಾ ಶೂಟ್ ಮುಗಿಸಿ ದರ್ಶನ್ ಮರಳಿದ್ದರು. ಈಗ ವಿದೇಶಕ್ಕೆ ಹಾರಲು ಆರೋಪಿ ದರ್ಶನ್ ಸಿದ್ಧತೆ ಮಾಡಿಕೊಂಡಿದ್ದಾರೆ.
ದರ್ಶನ್ ಅವರು ಮಿಲನ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಹಾಡಿನ ಶೂಟ್ಗಾಗಿ ವಿದೇಶಕ್ಕೆ ತೆರಳಬೇಕಿದೆ. ಹೀಗಾಗಿ, ಸಿನಿಮಾ ಶೂಟಿಂಗ್ಗಾಗಿ ದುಬೈ ಮತ್ತು ಯೂರೋಪ್ಗೆ ತೆರಳಲು ಅವಕಾಶ ಕೋರಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಆಗಿದೆ. 25 ದಿನಗಳ ಕಾಲ ವಿದೇಶಕ್ಕೆ ತೆರಳಲು ಅವಕಾಶ ಕೋರಲಾಗಿದೆ. ದರ್ಶನ್ ಪರವಾಗಿ ಅವರ ವಕೀಲ ಸುನಿಲ್ ಕುಮಾರ್ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ.
ವಿದೇಶಗಳಲ್ಲಿ ಶೂಟಿಂಗ್ ಮಾಡುವ ಅಗತ್ಯವಿದೆ ಎಂದು ನಿರ್ಮಾಪಕರ ಕಡೆಯಿಂದ ಮನವಿ ಕೂಡ ಬಂದಿದೆ. ಜೂನ್1ರಿಂದ 25ರವರೆಗೆ ವಿದೇಶಕ್ಕೆ ತೆರಳಲು ಅವಕಾಶ ನೀಡಬೇಕು ಎಂದು ದರ್ಶನ್ ಮನವಿ ಸಲ್ಲಿಸಿದ್ದಾರೆ. ಸಿಆರ್ಪಿಸಿ ಸೆಕ್ಷನ್ 439(1) (b) ಅಡಿಯಲ್ಲಿ ದರ್ಶನ್ ಈ ಬಗ್ಗೆ ಮನವಿ ಮಾಡಿದ್ದಾರೆ. ಕೋರ್ಟ್ನಲ್ಲಿ ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು (ಮೇ 28) ನಡೆಯಲಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ‘ಡೆವಿಲ್’ ಸಿನಿಮಾ ಈ ಹೊತ್ತಿಗೆ ರಿಲೀಸ್ ಆಗಿರುತ್ತಿತ್ತು. ಆದರೆ, ದರ್ಶನ್ ಜೈಲು ಸೇರಿದ್ದರಿಂದ ಸಿನಿಮಾ ರಿಲೀಸ್ ವಿಳಂಬ ಆಗಿದೆ. ಈ ವರ್ಷವೇ ಚಿತ್ರ ತೆರೆಗೆ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: Actor Darshan: ನಟ ದರ್ಶನ್, ವಿಜಯಲಕ್ಷ್ಮಿಗೆ ಮತ್ತೊಂದು ಕೋರ್ಟ್ ಸಮನ್ಸ್