Red Carpet Event: ವುಮೆನ್ ಲೀಡರ್ಸ್ ಕಾನ್ಕ್ಲೇವ್ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಾಲಿವುಡ್ ಸೆಲೆಬ್ರಿಟಿಗಳ ಗ್ರ್ಯಾಂಡ್ ಎಂಟ್ರಿ
ಮುಂಬೈಯಲ್ಲಿ ನಡೆದ ವುಮೆನ್ ಲೀಡರ್ಸ್ ಕಾನ್ಕ್ಲೇವ್ ಅವಾರ್ಡ್ಸ್ 2025ರಲ್ಲಿ ಬಾಲಿವುಡ್ ಸೆಲೆ ಬ್ರಿಟಿಗಳು ಭಾಗವಹಿಸಿದರು. ರೆಡ್ ಕಾರ್ಪೆಟ್ ಮೇಲೆ ಮಲೈಕಾ ಅರೋರಾ, ಶೆಫಾಲಿ ಶಾ, ಜೋನಿತಾ ಗಾಂಧಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪ್ರಿಟಿ ಹಾಗೂ ಗ್ಲಾಮರಸ್ ಲುಕ್ನಲ್ಲಿ ಮಿಂಚಿದರು. ಕೆಲವು ಸೆಲೆಬ್ರಿಟಿಗಳು ವಿಭಿನ್ನ ಡ್ರೆಸ್ ತೊಟ್ಟು ಹೈಲೈಟ್ ಕೂಡ ಆಗಿದ್ದರು.

Red Carpet Event


ʼಹೌಸ್ ಫುಲ್ʼ, ʼದಬಾಂಗ್ʼ, ʼಕಾಂಟೆʼ, ʼಇಎಂಐʼ ಸಿನಿಮಾ ಖ್ಯಾತಿಯ ನಟಿ ಮಲೈಕಾ ಅರೋರಾ ಈ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಆಗಮಿಸಿದರು. ವೈಟ್ ಕಲರ್ ವೆಸ್ಟರ್ನ್ ಔಟ್ ಫಿಟ್ನಲ್ಲಿ ಸಿಂಪಲ್ ಮೇಕಪ್ನಲ್ಲಿ ನಟಿ ಮಲೈಕಾ ಮಾರ್ಡನ್ ಆಗಿ ಕಂಡಿದ್ದಾರೆ. ವಿಭಿನ್ನ ಡಿಸೈನ್ ಹೊಂದಿದ್ದ ಪ್ಯಾಂಟ್ ಹಾಗೂ ಸೂಟ್ನಲ್ಲಿ ಅವರು ಅನೇಕರ ಗಮನ ಸೆಳೆದಿದ್ದಾರೆ.

ʼಸತ್ಯʼ, ʼಮಾನ್ಸೂನ್ ವೆಡ್ಡಿಂಗ್ʼ, ʼದಿಲ್ ದಡ್ಕ್ ನೆ ದೊʼ ಸಿನಿಮಾ ಖ್ಯಾತಿಯ ನಟಿ ಶೆಫಾಲಿ ಶಾ ಕೂಡ ಈ ಕಾರ್ಯಕ್ರಮದಲ್ಲಿ ಮಿಂಚು ಹರಿಸಿದರು. ಸಿಂಪಲ್ ಮೇಕಪ್ ಹಾಗೂ ಕ್ಯಾಶುವಲ್ ಲುಕ್ನಲ್ಲಿ ಹೆಚ್ಚು ಆರ್ಷಕವಾಗಿ ಕಂಡರು. ರೆಡ್ ಕಲರ್ ವೆಸ್ಟರ್ನ್ ಗೌನ್ ವಿನ್ಯಾಸದ ಈ ಬಟ್ಟೆ ಅವರಿಗೆ ವಿಭಿನ್ನ ಲುಕ್ ನೀಡಿತು.

ʼಫಕ್ರಿʼ, ʼಸೆಕ್ಷನ್ 375ʼ, ʼಹೀರಮಂಡಿʼ, ʼಮೇಡಂ ಚೀಫ್ ಮಿನಿಸ್ಟರ್ʼ ಸಿನಿಮಾಗಳ ಮೂಲಕ ಜನಪ್ರಿಯರಾದ ರಿಚಾ ಚಡ್ಡಾ ಬ್ಲ್ಯಾಕ್ ಕಲರ್ ಡ್ರೆಸ್ನಲ್ಲಿ ಕಂಗೊಳಿಸಿದ್ದಾರೆ. ಸ್ಕರ್ಟ್ನಲ್ಲಿ ರಿಚಾ ಮುದ್ದಾಗಿ ಕಂಡಿದ್ದಾರೆ. ಸ್ಟೈಲಿಶ್ ಬ್ಯಾಗ್ ಹಾಗೂ ವಿಭಿನ್ನ ವಿನ್ಯಾಸದ ಬ್ಯಾಂಗಲ್ ತೊಟ್ಟು ಕ್ಯೂಟ್ ಲುಕ್ ನೀಡಿದರು.

ʼಸಂಜುʼ, ʼಥಪಡ್ʼ ಸಿನಿಮಾ ಖ್ಯಾತಿಯ ನಟಿ ದಿಯಾ ಮಿರ್ಜಾ ಈ ಕಾರ್ಯಕ್ರಮಕ್ಕೆ ಟ್ರೆಡಿಷನಲ್ ಲುಕ್ ಇರುವ ಬಟ್ಟೆ ತೊಟ್ಟು ಆಗಮಿಸಿದರು. ಹಸಿರು ಬಣ್ಣದ ಗೌನ್ಗೆ ಫ್ಲವರ್ ಕಸೂತಿ ಮಾಡ ಲಾಗಿದ್ದು, ಪ್ರಿನ್ಸೆಸ್ ಲುಕ್ನಲ್ಲಿ ನಟಿ ದಿಯಾ ಕಂಗೊಳಿಸಿದರು. ಸಿಂಪಲ್ ಮೇಕಪ್ನಲ್ಲಿ ಹೆಚ್ಚು ಸ್ಟೈಲಿಶ್ ಆಗಿ ಕಂಡಿದ್ದಾರೆ.

ʼದಂಗಲ್ʼ, ʼಎ ದಿಲ್ ಹೈ ಮುಷ್ಕಿಲ್ʼ, ʼಚೆನ್ನೈ ಎಕ್ಸ್ಪ್ರೆಸ್ʼ ಚಿತ್ರಗಳ ಖ್ಯಾತಿಯ ಗಾಯಕಿ ಜೋನಿತಾ ಗಾಂಧಿ ಈ ಕಾರ್ಯಕ್ರಮಕ್ಕೆ ಆಗಮಿಸಿದರು. ಬೇಬಿ ಪಿಂಕ್ ಕಲರ್ ಬ್ಲೇಜರ್ ವೆಸ್ಟರ್ಸ್ ಬಟ್ಟೆ ತೊಟ್ಟು ಹೆಚ್ಚು ಸ್ಟೈಲಿಶ್ ಆಗಿ ಗಮನ ಸೆಳೆದರು.

ʼಅನುಪಮಾʼ ಸೀರಿಯಲ್ ಮೂಲಕ ಖ್ಯಾತಿ ಗಳಿಸಿರುವ ನಟಿ ರೂಪಾಲಿ ಗಂಗೂಲಿ ಸಾಂಪ್ರದಾಯಿಕ ಸೀರೆ ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಆರೆಂಜ್ ಮತ್ತು ರೆಡ್ ಕಲರ್ ಕಾಂಬಿನೇಶನ್ ಇರುವ ಈ ಸೀರೆಯಲ್ಲಿ ನಟಿ ರೂಪಾಲಿ ಅಪ್ಪಟ ದೇಸಿ ನಾರಿಯಂತೆ ಕಂಗೊಳಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ರಸಿಕಾ ದುಗಲ್, ಲಿಲ್ಲೆಟ್ ದುಬೆ, ಡೀನ್ ಪಾಂಡೆ, ಹರ್ಲೀನ್ ಸೇಥಿ, ಅದಿತಿ ಗೋವಿತ್ರಿಕರ್, ಅಶ್ವಿನಿ ಅಯ್ಯರ್ ತಿವಾರಿ , ಕುಶಾ ಕಪಿಲಾ, ಸೀಮಾ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.