Physical Assault: ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೊ, ಫೋಟೊ ಕಳುಹಿಸುತ್ತಿದ್ದ ಶಿಕ್ಷಕಿಗೆ ಶಿಕ್ಷೆಯೇ ಆಗಲಿಲ್ಲ! ಯಾಕೆ?
ಅಮೆರಿಕದಲ್ಲಿ ರಿಕ್ಕಿ ಲಿನ್ ಲಾಫ್‌ಲಿನ್ ಎಂಬ ಶಿಕ್ಷಕಿ ಆಕೆಯ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಒಪ್ಪಿಕೊಂಡಿದ್ದಾಳೆ. ಬಾಲಕನಿಗೆ ಚುಂಬಿಸಲು ಬಲವಂತಪಡಿಸಿದ್ದು, ಆತನ ಖಾಸಗಿ ಭಾಗಗಳನ್ನು ಸ್ಪರ್ಶಿಸಿದ್ದಳು ಎಂದು ವರದಿಯಾಗಿದೆ. ಅಲ್ಲದೆ ತನ್ನ ನಗ್ನ ಫೋಟೊ ಕಳುಹಿಸಿ, ಅವನಿಂದಲೂ ಅದೇ ರೀತಿ ಮಾಡಲು ಒತ್ತಾಯಿಸಿದಳು ಎಂದು ವರದಿಯಾಗಿದೆ.

ಶಿಕ್ಷಕಿ ರಿಕ್ಕಿ ಲಿನ್ ಲಾಫ್ಲಿನ್

ವಾಷಿಂಗ್ಟನ್: ಅಮೆರಿಕದ (America) ಮಿಸೌರಿಯ ಸೇಂಟ್ ಜೇಮ್ಸ್ ಹೈಸ್ಕೂಲ್‌ನ (St. James High School) 26 ವರ್ಷದ ವಿಶೇಷ ಶಿಕ್ಷಣ ಶಿಕ್ಷಕಿ (special education teacher) ರಿಕ್ಕಿ ಲಿನ್ ಲಾಫ್‌ಲಿನ್, 16 ವರ್ಷದ ವಿದ್ಯಾರ್ಥಿಗೆ ಅನುಚಿತ ಸಂದೇಶಗಳನ್ನು ಕಳುಹಿಸಿದ ಆರೋಪದಲ್ಲಿ ತಪ್ಪೊಪ್ಪಿಕೊಂಡಿದ್ದಾಳೆ. 2023ರ ಸೆಪ್ಟೆಂಬರ್ 8ರಿಂದ ಅಕ್ಟೋಬರ್ 19ರವರೆಗೆ ಸ್ನ್ಯಾಪ್‌ಚಾಟ್ ಮೂಲಕ ವಿದ್ಯಾರ್ಥಿಗೆ ಅಶ್ಲೀಲ ಚಿತ್ರಗಳು ಮತ್ತು ವಿಡಿಯೊಗಳನ್ನು ಕಳುಹಿಸಿದ್ದಾಳೆ ಎಂದು KRCG ವರದಿ ಮಾಡಿದೆ.
ಮೇರೀಸ್ ಕೌಂಟಿ ತನಿಖಾಧಿಕಾರಿಗಳ ಪ್ರಕಾರ, ಶಿಕ್ಷಕಿ ಲಾಫ್‌ಲಿನ್ ಸ್ನ್ಯಾಪ್‌ಚಾಟ್‌ನಲ್ಲಿ ಸಂಪರ್ಕಿಸಿ, ತರಗತಿಯಲ್ಲಿ ಚುಂಬಿಸಿದ್ದಾಗಿ ಮತ್ತು ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದಾಗಿ ವಿದ್ಯಾರ್ಥಿಯು ದೂರಿದ್ದಾನೆ. “ವಿಷಯಗಳು ತ್ವರಿತವಾಗಿ ಮುಂದುವರಿದವು” ಎಂದು ವಿದ್ಯಾರ್ಥಿ ಹೇಳಿದ್ದಾನೆ. ಅಕ್ಟೋಬರ್ 14ರಂದು ಆಕೆ ತನ್ನ ಮನೆಗೆ ಆಹ್ವಾನಿಸಿದ್ದಳು. ಆದರೆ ವಿದ್ಯಾರ್ಥಿ “ನನಗೆ ಕಂಫರ್ಟಬಲ್ ಆಗಿಲ್ಲ” ಎಂದು ನೆಪ ಹೇಳಿದ್ದಾನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ.
ಆರೋಪಗಳು
ಶಿಕ್ಷಕಿ ಲಾಫ್‌ಲಿನ್‌ಗೆ ಆರಂಭದಲ್ಲಿ ಗಂಭೀರ ಆರೋಪಗಳು ಎದುರಾಗಿದ್ದವು. 2023ರ ಅಕ್ಟೋಬರ್ 23 ರಂದು ಮಕ್ಕಳ ಅಶ್ಲೀಲ ಚಿತ್ರಗಳನ್ನು ಹೊಂದಿರುವುದು, ಅತ್ಯಾಚಾರ, ಅಪ್ರಾಪ್ತ ವಯಸ್ಕನ ಲೈಂಗಿಕ ಶೋಷಣೆ, ದೈಹಿಕ ಸಾಕ್ಷ್ಯಗಳನ್ನು ತಿರುಚುವುದು, ಅಪ್ರಾಪ್ತ ವಯಸ್ಕನಿಗೆ ಅಶ್ಲೀಲ ವಸ್ತುಗಳನ್ನು ಒದಗಿಸುವುದು ಸೇರಿದಂತೆ ಹಲವು ಅಪರಾಧಗಳನ್ನು ಎದುರಿಸಿದ್ದಳು.
ಈ ಸುದ್ದಿಯನ್ನು ಓದಿ: Cyber Crime: ಬೆಂಗಳೂರಿನ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 378 ಕೋಟಿ ಕಳವು; ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ!
ಒಪ್ಪಿಗೆ ಒಡಂಬಡಿಕೆ
ಮನವಿ ಒಪ್ಪಂದದ ಭಾಗವಾಗಿ ಈ ಆರೋಪಗಳನ್ನು ಕೈಬಿಡಲಾಗಿದೆ. ಮಗುವಿನ ಕಲ್ಯಾಣಕ್ಕೆ ಅಪಾಯ ಉಂಟುಮಾಡಿರುವುದಾಗಿ ಒಂದನೇ ದರ್ಜೆಯ ಆರೋಪವನ್ನು ಶಿಕ್ಷಕಿ ಒಪ್ಪಿಕೊಂಡಿದ್ದಾಳೆ. ಇದು ಕಡ್ಡಾಯ ಜೈಲು ಶಿಕ್ಷೆಯನ್ನು ಹೊಂದಿರದ ಕಡಿಮೆ ಆರೋಪ ಎನಿಸಿಕೊಂಡಿದೆ. ಕಳೆದ ವಾರ ಆಕೆಗೆ ಐದು ವರ್ಷಗಳ ಪ್ರೊಬೇಷನ್ ಶಿಕ್ಷೆ ವಿಧಿಸಲಾಯಿತು.
ತನಿಖೆ
KSDK ಪ್ರಕಾರ, ಫೆಲ್ಪ್ಸ್ ಕೌಂಟಿ ಡಿಟೆಕ್ಟಿವ್‌ನಿಂದ ಮಾಹಿತಿ ಪಡೆದ ಬಳಿಕ ಮೇರೀಸ್ ಕೌಂಟಿ ಅಧಿಕಾರಿಗಳು ಶಿಕ್ಷಕಿ ಮತ್ತು ವಿದ್ಯಾರ್ಥಿಯ ನಡುವಿನ ಅನುಚಿತ ಸಂಬಂಧದ ಬಗ್ಗೆ ತನಿಖೆ ಆರಂಭಿಸಿದರು. 2023ರ ಮೇ ತಿಂಗಳಲ್ಲಿ, ನ್ಯಾಯಸಮ್ಮತ ಪ್ರಕ್ರಿಯೆಗಾಗಿ ಈ ಪ್ರಕರಣವನ್ನು ಗ್ರಂಡಿ ಕೌಂಟಿಗೆ ವರ್ಗಾಯಿಸಲಾಯಿತು.