Khushbu Sundar: ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆಯಾಗಿ ನಟಿ ಖುಷ್ಬು ನೇಮಕ
ನಟಿ-ರಾಜಕಾರಣಿ ಖುಷ್ಬು ಸುಂದರ್ ಅವರನ್ನು ತಮಿಳುನಾಡು ಬಿಜೆಪಿಯ ಉಪಾಧ್ಯಕ್ಷೆಯಾಗಿ ನೇಮಿಸಲಾಗಿದೆ. ಈ ನೇಮಕದಿಂದ “ತುಂಬಾ ಆನಂದವಾಗಿದೆ” ಎಂದು ಖುಷ್ಬು ತಿಳಿಸಿದ್ದು, ಪಕ್ಷದ ಹಿರಿಯ ನಾಯಕರಿಗೆ ತಮ್ಮ ಮೇಲಿನ ನಂಬಿಕೆಗಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.ತಮಿಳುನಾಡು ಬಿಜೆಪಿಯ 14 ರಾಜ್ಯ ಉಪಾಧ್ಯಕ್ಷರ ಪೈಕಿ ಖುಷ್ಬು ಸುಂದರ್, ಶಶಿಕಲಾ ಪುಷ್ಪ, ಎಂ. ಚಕ್ರವರ್ತಿ, ವಿ.ಪಿ. ದುರೈಸಾಮಿ, ಕರು. ನಾಗರಾಜನ್ ಸೇರಿದ್ದಾರೆ.

ಖುಷ್ಬು ಸುಂದರ್

ಚೆನ್ನೈ: ನಟಿ-ರಾಜಕಾರಣಿ ಖುಷ್ಬು ಸುಂದರ್ (Khushbu Sundar) ಅವರನ್ನು ತಮಿಳುನಾಡು (Tamil Nadu) ಬಿಜೆಪಿಯ ಉಪಾಧ್ಯಕ್ಷೆಯಾಗಿ (BJP Vice-President) ನೇಮಿಸಲಾಗಿದೆ. ಈ ನೇಮಕದಿಂದ “ತುಂಬಾ ಆನಂದವಾಗಿದೆ” ಎಂದು ಖುಷ್ಬು ತಿಳಿಸಿದ್ದು, ಪಕ್ಷದ ಹಿರಿಯ ನಾಯಕರಿಗೆ ತಮ್ಮ ಮೇಲಿನ ನಂಬಿಕೆಗಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಖುಷ್ಬು, “ನನ್ನ ಆದ್ಯತೆಯು ಕ್ಷೇತ್ರಗಳಲ್ಲಿ ಬೂತ್-ಮಟ್ಟದ ಉಪಸ್ಥಿತಿಯನ್ನು ಬಲಪಡಿಸುವುದಾಗಿದೆ. ವಿಶೇಷವಾಗಿ ದಕ್ಷಿಣ ಚೆನ್ನೈಯಲ್ಲಿ. ಮತದಾರರನ್ನು ಭೇಟಿಯಾಗಿ, ಮನೆ-ಮನೆಗೆ ತೆರಳಿ, ಪ್ರಧಾನಮಂತ್ರಿ ಮತ್ತು ಬಿಜೆಪಿಯ ಒಳ್ಳೆಯ ಕೆಲಸಗಳನ್ನು ತಿಳಿಸುವ ಮೂಲಕ ತಮಿಳುನಾಡಿನ ಜನರ ಜೀವನಮಟ್ಟವನ್ನು ಉನ್ನತೀಕರಿಸುವ ಗುರಿಯಿದೆ” ಎಂದಿದ್ದಾರೆ.
ಬಿಜೆಪಿ ಮತ್ತು ಎಐಎಡಿಎಂಕೆಯ ಮೈತ್ರಿಯ ಬಗ್ಗೆ ಮಾತನಾಡಿ, “ಎಐಎಡಿಎಂಕೆಯೊಂದಿಗೆ ಸೌಹಾರ್ದ ಸಂಬಂಧವಿದೆ. ಚುನಾವಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಪಕ್ಷದ ನಾಯಕರು ತೆಗೆದುಕೊಳ್ಳುತ್ತಾರೆ” ಎಂದು ಖುಷ್ಬು ಸ್ಪಷ್ಟಪಡಿಸಿದ್ದಾರೆ. ತಮಿಳಗ ವೆಟ್ಟ್ರಿ ಕಝಗಂ (ಟಿವಿಕೆ) ಮುಖ್ಯಸ್ಥ ವಿಜಯ್‌ಗೆ ಸಂದೇಶ ನೀಡಿದ ಅವರು, “ವಿಜಯ್‌ನ ಗುರಿ ಡಿಎಂಕೆಯನ್ನು ಸೋಲಿಸುವುದಾದರೆ, ಬಿಜೆಪಿ ಮತ್ತು ಎಐಎಡಿಎಂಕೆ ಜತೆಗೆ ಕೈಜೋಡಿಸುವುದು ಬುದ್ಧಿವಂತಿಕೆಯ ನಿರ್ಧಾರವಾಗುತ್ತದೆ” ಎಂದು ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Daya Nayak: ಎಸಿಪಿಯಾಗಿ ಬಡ್ತಿ ಪಡೆದ ಎರಡೇ ದಿನಕ್ಕೆ ದಯಾ ನಾಯಕ್ ಇಂದು ನಿವೃತ್ತಿ.!
ತಮಿಳುನಾಡು ಬಿಜೆಪಿಯ 14 ರಾಜ್ಯ ಉಪಾಧ್ಯಕ್ಷರ ಪೈಕಿ ಖುಷ್ಬು ಸುಂದರ್, ಶಶಿಕಲಾ ಪುಷ್ಪ, ಎಂ. ಚಕ್ರವರ್ತಿ, ವಿ.ಪಿ. ದೊರೈಸಾಮಿ, ಕರು. ನಾಗರಾಜನ್ ಸೇರಿದ್ದಾರೆ. ಕೇಶವ ವಿನಾಯಕನ್ ಅವರನ್ನು ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ, ನಾರಾಯಣನ್ ತಿರುಪತಿ ಅವರನ್ನು ವಕ್ತಾರರಾಗಿ ನೇಮಿಸಲಾಗಿದೆ. ಖುಷ್ಬು ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
“ನನ್ನನ್ನು ಈ ಜವಾಬ್ದಾರಿಗೆ ಯೋಗ್ಯ ಎಂದು ಭಾವಿಸಿದ್ದಕ್ಕೆ ಧನ್ಯವಾದಗಳು” ಎಂದು ಖುಷ್ಬು ತಿಳಿಸಿದ್ದಾರೆ. ತಮಿಳುನಾಡಿಗೆ ಪಕ್ಷದ ಉಸ್ತುವಾರಿಗಳಾದ ಸುಧಾಕರ್ ರೆಡ್ಡಿ ಮತ್ತು ಅರವಿಂದ್ ಮೆನನ್ ಅವರ ಪಾತ್ರವನ್ನು ಕೊಂಡಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸಲು ಶ್ರಮಿಸುವ ಭರವಸೆ ನೀಡಿದ್ದಾರೆ. ಖುಷ್ಬು ಈ ಹಿಂದೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿದ್ದರು ಮತ್ತು 2021ರ ಚುನಾವಣೆಯಲ್ಲಿ ಥೌಸಂಡ್ ಲೈಟ್ಸ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.