Terrorist arrested: ಪೊಲೀಸ್ ಠಾಣೆ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೋಸ್ಟ್ ವಾಂಟೆಡ್ ಉಗ್ರ ಪೊಲೀಸ್ ಬಲೆಗೆ
Babbar Khalsa Terrorist arrested: ನಿಷೇಧಿತ ಭಯೋತ್ಪಾದಕ ಗುಂಪು ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಗೆ ಸಂಬಂಧಿಸಿದ 41 ವರ್ಷದ ಕರಣ್‌ವೀರ್ ಸಿಂಗ್ ಎಂಬ ವ್ಯಕ್ತಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಪಂಜಾಬ್‌ನ ಕಪುರ್ತಲಾ ಮೂಲದ ಬಿಕೆಐ ಭಯೋತ್ಪಾದಕ ಕರಣ್‌ವೀರ್ ಸಿಂಗ್, ಏಪ್ರಿಲ್ 7 ರಂದು ಪಂಜಾಬ್‌ನ ಬಟಾಲಾ ಜಿಲ್ಲೆಯ ಕಿಲಾ ಲಾಲ್ ಸಿಂಗ್ ವಾಲಾ ಪೊಲೀಸ್ ಠಾಣೆಯ ಮೇಲೆ ನಡೆದ ರಾಕೆಟ್-ಪ್ರೊಪಲ್ಡ್ ಗ್ರೆನೇಡ್ (ಆರ್‌ಪಿಜಿ) ದಾಳಿಯಲ್ಲಿ ಆರೋಪಿಯಾಗಿದ್ದಾನೆ.


ನವದೆಹಲಿ: ಪಂಜಾಬ್‌ನ ಪೊಲೀಸ್ ಠಾಣೆಯ ಮೇಲೆ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರನೊಬ್ಬನನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಿಷೇಧಿತ ಭಯೋತ್ಪಾದಕ ಗುಂಪು ಬಬ್ಬರ್ ಖಾಲ್ಸಾ(Babbar Khalsa Terrorist) ಇಂಟರ್ನ್ಯಾಷನಲ್ (ಬಿಕೆಐ) ಗೆ ಸಂಬಂಧಿಸಿದ 41 ವರ್ಷದ ಕರಣ್‌ವೀರ್ ಸಿಂಗ್ ಎಂಬ ವ್ಯಕ್ತಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಪಂಜಾಬ್‌ನ ಕಪುರ್ತಲಾ ಮೂಲದ ಬಿಕೆಐ ಭಯೋತ್ಪಾದಕ ಕರಣ್‌ವೀರ್ ಸಿಂಗ್, ಈ ಹಿಂದೆ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ ಎಂದು ಶಂಕಿಸಲಾಗಿದ್ದು, ಏಪ್ರಿಲ್ 7 ರಂದು ಪಂಜಾಬ್‌ನ ಬಟಾಲಾ ಜಿಲ್ಲೆಯ ಕಿಲಾ ಲಾಲ್ ಸಿಂಗ್ ವಾಲಾ ಪೊಲೀಸ್ ಠಾಣೆಯ ಮೇಲೆ ನಡೆದ ರಾಕೆಟ್-ಪ್ರೊಪಲ್ಡ್ ಗ್ರೆನೇಡ್ (ಆರ್‌ಪಿಜಿ) ದಾಳಿಯಲ್ಲಿ ಆರೋಪಿಯಾಗಿದ್ದಾನೆ.
2023 ರಲ್ಲಿ, ಕ್ರಿಮಿನಲ್ ಪಿತೂರಿ, ಕೊಲೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಉಲ್ಲಂಘನೆ, ಭಯೋತ್ಪಾದಕ ಚಟುವಟಿಕೆಗಳಿಗೆ ನಿಧಿಸಂಗ್ರಹಣೆ ಮತ್ತು ನಿಷೇಧಿತ ಭಯೋತ್ಪಾದಕ ಗುಂಪಿನ ಸದಸ್ಯತ್ವ ಸೇರಿದಂತೆ ಹಲವು ಆರೋಪಗಳ ಮೇಲೆ ಭಾರತೀಯ ಅಧಿಕಾರಿಗಳಿಗೆ ಬೇಕಾಗಿದ್ದ ಕರಣ್‌ವೀರ್ ಸಿಂಗ್ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ.
ಈ ಸುದ್ದಿಯನ್ನೂ ಓದಿ: Al-Qaeda Terrorists Arrested: ಭರ್ಜರಿ ಉಗ್ರ ಬೇಟೆ; 4 ಆಲ್-ಖೈದಾ ಭಯೋತ್ಪಾದಕರು ಅರೆಸ್ಟ್
ದೆಹಲಿ ಪೊಲೀಸ್ ವಿಶೇಷ ದಳ ನಿಷೇಧಿತ ಸಂಘಟನೆಯ ಬಿಕೆಐನ ಉಗ್ರ ಆಕಾಶ್‌ದೀಪ್ ಸಿಂಗ್ ಅಲಿಯಾಸ್ ಬಾಜ್ ಅವರನ್ನು ಇದೇ ಪ್ರಕರಣದಲ್ಲಿ ಬಂಧಿಸಿದ ಕೆಲವೇ ದಿನಗಳ ನಂತರ ಕರಣ್‌ವೀರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನವದೆಹಲಿ ಶ್ರೇಣಿಯ ಉಪ ಪೊಲೀಸ್ ಆಯುಕ್ತ (ವಿಶೇಷ ಘಟಕ) ಅಮಿತ್ ಕೌಶಿಕ್ ಬುಧವಾರ ಬಂಧನವನ್ನು ದೃಢಪಡಿಸಿದರು. ಬಿಕೆಐ ದಾಳಿಯ ಹೊಣೆಯನ್ನು ಹೊತ್ತುಕೊಂಡಾಗಿನಿಂದ ಮತ್ತು ದೆಹಲಿಯಲ್ಲಿ ಇದೇ ರೀತಿಯ ದಾಳಿ ನಡೆಸುವ ಬೆದರಿಕೆಗಳು ಬಂದಾಗನಿಂದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು. ಆರೋಪಿ ಅಮೃತಸರ ನಿವಾಸಿಯಾಗಿದ್ದು, ಹಲವಾರು ವಿಧ್ವಂಸಕ ಕೃತ್ಯಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ಉಪ ಪೊಲೀಸ್ ಆಯುಕ್ತ (ವಿಶೇಷ ಘಟಕ) ಅಮಿತ್ ಕೌಶಿಕ್ ಹೇಳಿದ್ದಾರೆ.
ಇನ್ನು ಆಕಾಶದೀಪನನ್ನು ಜು.22ರಂದು ರಾಜಸ್ಥಾನದಲ್ಲಿ ಅರೆಸ್ಟ್ ಮಾಡಲಾಗಿತ್ತು. ಈತ ಅಮೃತಸರ ಜಿಲ್ಲೆಯ ಚಂದಂಕೆ ಗ್ರಾಮದ ನಿವಾಸಿ ಎಂದು ಗುರುತಿಸಿದ್ದಾರೆ ಈ ಪ್ರಕರಣವನ್ನು ಇತ್ತೀಚೆಗೆ ಹೆಚ್ಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವರ್ಗಾಯಿಸಲಾಗಿತ್ತು.