ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder case: ಬರ್ಬರ ಕೃತ್ಯ, ಮಗನನ್ನೇ ಡೀಸೆಲ್‌ ಸುರಿದು ಸುಟ್ಟು ಕೊಂದು ಹಾಕಿದ ಹೆತ್ತವರು!

Bagalakote: ಮಗ ದುಶ್ಚಟಗಳ ದಾಸನಾಗಿ, ಸಾಕಷ್ಟು ಸಾಲ ಮಾಡಿದ್ದಲ್ಲದೆ ಆಸ್ತಿಯಲ್ಲಿ ಪಾಲು ಕೇಳಿ ಮನೆಯವರಿಗೆ ಸದಾ ಕಿರುಕುಳ ನೀಡುತ್ತಿದ್ದ. ಮನೆಯವರ ಮೇಲೆ ಹಲ್ಲೆಗೂ ಯತ್ನಿಸಿದ್ದ ಎಂದು ತಿಳಿದುಬಂದಿದೆ. ಇಂಥ ಮಗನನ್ನು ತಂದೆ-ತಾಯಿ ಹಾಗೂ ಸಹೋದರ ಸೇರಿಕೊಂಡು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಬಾಗಲಕೋಟೆ : ರಾಜ್ಯದಲ್ಲಿ ಘೋರ ಕೃತ್ಯವೊಂದು ನಡೆದಿದ್ದು, ಹೆತ್ತ ಮಗನನ್ನೇ ತಂದೆ-ತಾಯಿ ಡೀಸೆಲ್ ಸುರಿದು ಸಜೀವವಾಗಿ ಸುಟ್ಟು ಹಾಕಿರುವ (murder case)) ಬರ್ಬರ ಘಟನೆ ಬಾಗಲಕೋಟೆ (Bagalakote) ಜಿಲ್ಲೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿಯ ಬಿದರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದುಶ್ಚಟಗಳ ದಾಸನಾಗಿ, ಸಾಲ ಮಾಡಿಕೊಂಡು, ಆಸ್ತಿಯಲ್ಲಿ ಪಾಲು ಕೇಳಿ, ಮನೆಯವರ ಮೇಲೆ ಹಲ್ಲೆಗೆ ಯತ್ನಿಸಿದ ಮಗನನ್ನು ತಂದೆ-ತಾಯಿ ಹಾಗೂ ಸಹೋದರ ಸೇರಿಕೊಂಡು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಅನೀಲ ಕಾನಟ್ಟಿ (32) ಕೊಲೆಯಾದ ಯುವಕ. ಆತನ ಸಹೋದರ ಬಸವರಾಜ (35), ತಂದೆ ಪರಪ್ಪ (62), ತಾಯಿ ಶಾಂತಾ (55) ಬಂಧಿತರು. ಶುಕ್ರವಾರ ರಾತ್ರಿ ಅನೀಲ ಮನೆಯಲ್ಲಿ ಜಗಳ ಮಾಡಿ, ನಿಮ್ಮನ್ನೆಲ್ಲ ಸಾಯಿಸುತ್ತೇನೆ ಎಂದು ಮುಂದಾದಾಗ ಪೋಷಕರು ಹತ್ಯೆಗೈದಿದ್ದಾರೆ. ಕಣ್ಣಿಗೆ ಕಾರದ ಪುಡಿ ಎರಚಿ, ಹಗ್ಗದಿಂದ ಕುತ್ತಿಗೆಗೆ ಬಿಗಿದು, ಎರಡೂ ಕೈ ಕಟ್ಟಿ, ಮನೆಯಿಂದ ಹೊರಗೆಳೆದು ತಂದು, ಆತನ ಮೈಮೇಲೆ ಡೀಸೆಲ್ ಸುರಿದು, ಸುಟ್ಟು ಹಾಕಿದ್ದಾರೆ. ಈತ ದುಶ್ಚಟಗಳ ದಾಸನಾಗಿ, ಸಾಕಷ್ಟು ಸಾಲ ಮಾಡಿದ್ದಲ್ಲದೆ ಆಸ್ತಿಯಲ್ಲಿ ಪಾಲು ಕೇಳಿ ಮನೆಯವರಿಗೆ ಸದಾ ಕಿರುಕುಳ ನೀಡುತ್ತಿದ್ದ. ಮನೆಯವರ ಮೇಲೆ ಹಲ್ಲೆಗೂ ಯತ್ನಿಸಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮದರಸಾದಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣ: ಐವರ ಬಂಧನ

ಹರೀಶ್‌ ಕೇರ

View all posts by this author