ಬೆಂಗಳೂರು: ಬೆಂಗಳೂರಿನ (Bengaluru crime news) ಹೊಸಕೆರೆಹಳ್ಳಿಯಲ್ಲಿ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ (Assault case) ನಡೆಸಿ ಆಕೆಯ ಎರಡು ಬೆರಳುಗಳನ್ನು ಕತ್ತರಿಸಿ, ಅವರ ಚಿನ್ನದ ಸರಗಳನ್ನು ದರೋಡೆ (Robbery Case) ಮಾಡಿದ ಇಬ್ಬರು ಪಾತಕಿಗಳನ್ನು ಬಂಧಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಸಿಸಿಟಿವಿ ದೃಶ್ಯಾವಳಿಗಳು ಈ ಘಟನೆಯ ಭಯಾನಕತೆಯನ್ನು ತೋರಿಸಿದ್ದವು.
ಆರೋಪಿಗಳನ್ನು ಪ್ರವೀಣ್ ಮತ್ತು ಯೋಗಾನಂದ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಉಷಾ ಮತ್ತು ವರಲಕ್ಷ್ಮಿ ಎಂಬ ಇಬ್ಬರು ಮಹಿಳೆಯರು ಸೆಪ್ಟೆಂಬರ್ 13ರಂದು ರಾತ್ರಿ ಗಣೇಶ ಹಬ್ಬದ ಆರ್ಕೆಸ್ಟ್ರಾದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದರು. ಇಬ್ಬರೂ ಪಾತಕಿಗಳು ಬೈಕ್‌ನಲ್ಲಿ ಅವರ ಬಳಿಗೆ ಬಂದು ಬೆದರಿಸಿ ಅವರ ಚಿನ್ನದ ಸರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಭಯಭೀತರಾದ ಉಷಾ ತಮ್ಮ ಚಿನ್ನದ ಸರವನ್ನು ಕೊಟ್ಟುಬಿಟ್ಟರು. ಆದರೆ ವರಲಕ್ಷ್ಮಿ ವಿರೋಧಿಸಿದಾಗ, ಯೋಗಾನಂದ ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ, ಅವರ ಎರಡು ಬೆರಳುಗಳನ್ನು ಕತ್ತರಿಸಿದ್ದ.
ಇದನ್ನೂ ಓದಿ: Viral Video: ಪತ್ನಿಯ ಲವ್ವರ್ ಎಂದು ತಪ್ಪಾಗಿ ಭಾವಿಸಿ ಯುವಕನ ಮೇಲೆ ಬರ್ಬರ ಹಲ್ಲೆ- ಶಾಕಿಂಗ್ ವಿಡಿಯೊ ಫುಲ್ ವೈರಲ್
ನಂತರ ಆರೋಪಿಗಳು 55 ಗ್ರಾಂ ಚಿನ್ನಾಭರಣಗಳೊಂದಿಗೆ ಸ್ಥಳದಿಂದ ಪರಾರಿಯಾಗಿದ್ದರು. ಪೊಲೀಸರ ವಿಶೇಷ ತನಿಖಾ ತಂಡ ವಾರಗಳ ಕಾಲ ಈ ದುಷ್ಕರ್ಮಿಗಳನ್ನು ಹುಡುಕಾಡಿತ್ತು. ಇಬ್ಬರೂ ತಮಿಳುನಾಡು, ಗೋವಾಗಳಿಗೆ ಪರಾರಿಯಾಗಿ ಅಲ್ಲಿ ಕಾಲ ಕಳೆದಿದ್ದು, ನಂತರ ರಾಜ್ಯಕ್ಕೆ ಬಂದಾಗ ಸಿಕ್ಕಿಬಿದ್ದಿದ್ದಾರೆ. ಇವರು ಕದ್ದ 74 ಗ್ರಾಂ ಚಿನ್ನಾಭರಣ ಮತ್ತು ದಾಳಿಗೆ ಬಳಸಿದ ಆಯುಧವನ್ನು ಪತ್ತೆಹಚ್ಚಲಾಗಿದೆ.
ಆರೋಪಿಗಳಲ್ಲಿ ಒಬ್ಬನಾದ ಯೋಗಾನಂದ, ಘಟನೆಯ ನಂತರ ಪುದುಚೇರಿ, ಮುಂಬೈ ಮತ್ತು ಗೋವಾಕ್ಕೆ ಪ್ರಯಾಣಿಸಿದ್ದ. ನಂತರ ಕರ್ನಾಟಕದ ತನ್ನ ಹುಟ್ಟೂರಾದ ಮರಸಿಂಗನಹಳ್ಳಿ ಗ್ರಾಮಕ್ಕೆ ಹಿಂದಿರುಗಿದ್ದ. ಈತ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾನೆ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.