ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stabbing: ಗೆಳತಿಗೆ ಮೆಸೇಜ್ ಮಾಡಿದ್ದನ್ನು ಆಕ್ಷೇಪಿಸಿದವನಿಗೆ ಚೂರಿಯಿಂದ ಇರಿದ ಪಾತಕಿ

Assault case: ಯುವತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿದ್ದನ್ನು ಆಕೆಯ ಸ್ನೇಹಿತ ಪ್ರಶ್ನಿಸಿದ್ದು, ಇವರಿಬ್ಬರೂ ಒಂದೇ ಕ್ಲಾಸ್‌ನಲ್ಲಿ ಕಲಿಯುತ್ತಿದ್ದಾರೆ. ಇದೇ ಸಿಟ್ಟನ್ನು ಇಟ್ಟುಕೊಂಡ ಆರೋಪಿ ಪ್ರಭು ತನ್ನ ಗೆಳೆಯನ ಜೊತೆಗೆ ಬೈಕ್‌ನಲ್ಲಿ ಬಂದು ಚಾಕುವಿನಿಂದ ಇರಿದು ಪರಾರಿ ಆಗಿದ್ದಾನೆ.

ಬೆಂಗಳೂರು: ಬೆಂಗಳೂರಿನಲ್ಲಿ ಯುವತಿಗೆ ಮೆಸೇಜ್‌ ಮಾಡಿದ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ನಡುವೆ ಗಲಾಟೆ (assault case) ನಡೆದಿದ್ದು ಚಾಕುವಿನಿಂದ ಒಬ್ಬನಿಗೆ ಇರಿಯಲಾಗಿದೆ. ಆರ್ ಟಿ ನಗರದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ (Bengaluru crime news) ತಡವಾಗಿ ಬೆಳಕಿಗೆ ಬಂದಿದೆ. ಇನ್ಸ್ಟಾಗ್ರಾಮ್‌ನಲ್ಲಿ ಯುವತಿಯೊಬ್ಬಳಿಗೆ ಪ್ರಭು ಎನ್ನುವ ಸೀನಿಯರ್‌ ವಿದ್ಯಾರ್ಥಿ ನಿರಂತರವಾಗಿ ಮೆಸೇಜ್ ಮಾಡಿ ಕಾಟ ಕೊಡುತ್ತಿದ್ದ. ಇದನ್ನು ಪ್ರಶ್ನಿಸಿದ ಯುವತಿಯ ಕ್ಲಾಸ್‌ಮೇಟ್‌ ಗೆಳೆಯ ಇರಿತಕ್ಕೆ (stabbing) ಒಳಗಾಗಿದ್ದಾನೆ.

ಯುವತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿದ್ದನ್ನು ಆಕೆಯ ಸ್ನೇಹಿತ ಪ್ರಶ್ನಿಸಿದ್ದು, ಇವರಿಬ್ಬರೂ ಒಂದೇ ಕ್ಲಾಸ್‌ನಲ್ಲಿ ಕಲಿಯುತ್ತಿದ್ದಾರೆ. ಇದೇ ಸಿಟ್ಟನ್ನು ಇಟ್ಟುಕೊಂಡ ಆರೋಪಿ ಪ್ರಭು ತನ್ನ ಗೆಳೆಯನ ಜೊತೆಗೆ ಬೈಕ್‌ನಲ್ಲಿ ಬಂದು ಚಾಕುವಿನಿಂದ ಇರಿದು ಪರಾರಿ ಆಗಿದ್ದಾನೆ. ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿಪ್ಪೆಗುಂಡಿಯಲ್ಲಿ ಆಸ್ಫೋಟ, ಪಿಸ್ತೂಲ್‌, ಗುಂಡುಗಳು ಪತ್ತೆ

ಕಲಬುರಗಿ : ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಚಿಂಚೋಳಿ (ಹೆಚ್) ಗ್ರಾಮದಲ್ಲಿರುವ ತಿಪ್ಪೆಗುಂಡಿಯಲ್ಲಿ ಒಂದು ನಾಡಪಿಸ್ತೂಲ್ ಹಾಗೂ ಮೂರು ಗುಂಡುಗಳು ಪತ್ತೆಯಾಗಿವೆ. ತಿಪ್ಪೆಗುಂಡಿಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಅದೇನು ಎಂದು ಪರಿಶೀಲಿಸಿದಾಗ ಇವು ಪತ್ತೆಯಾಗಿವೆ. ಬಹುಶಃ ತಿಪ್ಪೆಗುಂಡಿಗೆ ಹಾಕಿದ ಬೆಂಕಿಯಿಂದ ಒಂದು ಗುಂಡು ಆಸ್ಫೋಟಿಸಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: Drowned: ಮೀನು ಹಿಡಿಯಲು ಹೋಗಿದ್ದ ಮೂವರು ಮಕ್ಕಳು ಜಲಸಮಾಧಿ, ಒಬ್ಬ ಬಚಾವ್

ಮಾಳಪ್ಪ ಎಂಬ ವ್ಯಕ್ತಿ ತಮ್ಮ ಟೈಲರ್ ಅಂಗಡಿಯಲ್ಲಿದ್ದ ವೇಸ್ಟ್‌ ಬಟ್ಟೆಗಳನ್ನು ತಿಪ್ಪೆಗುಂಡಿಗೆ ಹಾಕಿದ್ದರು. ಬಟ್ಟೆಗೆ ಬೆಂಕಿ ಹಚ್ಚಿದ ಕೆಲ ಸಮಯದ ಬಳಿಕ ಭಾರಿ ಸ್ಫೋಟದ ಶಬ್ದ ಕೇಳಿಸಿದೆ. ನಂತರ ತಿಪ್ಪೆಗುಂಡಿ ಪರಿಶೀಲಿಸಿದಾಗ ಪಿಸ್ತೂಲು ಹಾಗೂ ಮೂರು ಗುಂಡು ಪತ್ತೆಯಾಗಿವೆ. ಈ ಸಂಬಂಧ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೂರೂ ಗುಂಡುಗಳು ಸಜೀವ ಗುಂಡುಗಳು ಎಂದು ಶಂಕಿಸಲಾಗಿದೆ.

ಹರೀಶ್‌ ಕೇರ

View all posts by this author