ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Crime news: ಪ್ರಿಯಕರನಿಗೆ ತಾಯಿ, ಸಂಬಂಧಿಯ ಖಾಸಗಿ ಫೋಟೋ ಕಳಿಸಿದ ಪಾಪಿ ಮಗಳು!

ತಾಯಿ ಮತ್ತು ಆಂಟಿ ಮಲಗಿದ್ದಾಗ ಖಾಸಗಿ ಫೋಟೋ ತೆಗೆದು ಮಗಳು ಪ್ರಿಯಕರನಿಗೆ ಕಳುಹಿಸಿದ್ದಾಳೆ. ಈ ಕುರಿತು ಪ್ರಶ್ನೆ ಮಾಡಿದಾಗ ಆತನನ್ನೇ ಮದುವೆಯಾಗುವುದಾಗಿ ಮಗಳು ಹಠಕ್ಕೆ ಬಿದ್ದಿದ್ದಾಳೆ. ಮಗಳಿಗೆ ಬುದ್ಧಿ ಹೇಳಿ ತಾಯಿ ಫೋಟೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ಮಗಳು ಮತ್ತು ಆಕೆಯ ಪ್ರಿಯಕರನ ವಿರುದ್ಧ ತಾಯಿ ಠಾಣೆಗೆ ದೂರು ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.09 : ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ಪಾಪಿ ಮಗಳೊಬ್ಬಳು ಪ್ರಿಯಕರನಿಗೆ (lover) ತನ್ನ ತಾಯಿ ಹಾಗೂ ಸಂಬಂಧಿಕರ ತೀರಾ ಖಾಸಗಿ ಫೋಟೋಗಳನ್ನು (private photos) ಕಳುಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಹಿನ್ನೆಲೆ ಮಗಳು ಮತ್ತು ಆಕೆಯ ಪ್ರಿಯಕರನ ವಿರುದ್ಧ ತಾಯಿ ಬೆಂಗಳೂರಿನ (Bengaluru Crime news) ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿದ್ಯಾಭ್ಯಾಸಕ್ಕೆ ಎಂದು ಯುವತಿ ಪೋಷಕರ ಬಳಿ ಮೊಬೈಲ್ ಪಡೆದಿದ್ದಳು. ತಿಂಗಳ ಹಿಂದೆ ಯುವಕನ ಜೊತೆ ಮಾತನಾಡಿ ಯುವತಿ ಸಿಕ್ಕಿಬಿದ್ದಿದ್ದಾಳೆ. ಆದರೆ ಮೊಬೈಲ್ ಮತ್ತು ಪಾಸ್‌ವರ್ಡ್ ನೀಡಿದ 23 ವರ್ಷದ ಮಗಳು, ಇತ್ತೀಚಿಗೆ ತಂದೆಗೆ ವಿಷಯ ತಿಳಿಸಿ ತಾಯಿಯ ಪಾಸ್‌ವರ್ಡ್ ಪಡೆದಿದ್ದಳು. ಮೊಬೈಲ್ ಪರಿಶೀಲನೆ ಮಾಡಿದಾಗ ಮಗಳ ಈ ಕೃತ್ಯ ಬೆಳಕಿಗೆ ಬಂದಿದೆ.

ತಾಯಿ ಮತ್ತು ಆಂಟಿ ಮಲಗಿದ್ದಾಗ ಖಾಸಗಿ ಫೋಟೋ ತೆಗೆದು ಮಗಳು ಪ್ರಿಯಕರನಿಗೆ ಕಳುಹಿಸಿದ್ದಾಳೆ. ಈ ಕುರಿತು ಪ್ರಶ್ನೆ ಮಾಡಿದಾಗ ಆತನನ್ನೇ ಮದುವೆಯಾಗುವುದಾಗಿ ಮಗಳು ಹಠಕ್ಕೆ ಬಿದ್ದಿದ್ದಾಳೆ. ಮಗಳಿಗೆ ಬುದ್ಧಿ ಹೇಳಿ ತಾಯಿ ಫೋಟೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ಮಗಳು ಮತ್ತು ಆಕೆಯ ಪ್ರಿಯಕರನ ವಿರುದ್ಧ ತಾಯಿ ಠಾಣೆಗೆ ದೂರು ನೀಡಿದ್ದಾರೆ. ಹಾಗಾಗಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

Bengaluru Crime News: ಸರಗಳ್ಳರಿಂದ ಬಿಡಿಸಿಕೊಳ್ಳಲು ಹೋಗಿ ಬಿದ್ದು ಮಹಿಳೆ ಸಾವು

ಮದುವೆ ನಿಶ್ಚಯವಾಗಿದ್ದ ಮಗಳೊಂದಿಗೆ ತಾಯಿ ಆತ್ಮಹತ್ಯೆ

ಮಂಡ್ಯ: ಮಂಡ್ಯದಲ್ಲಿ ಘೋರ ಘಟನೆ ನಡೆದಿದ್ದು, ಮದುವೆ ನಿಶ್ಚಯವಾಗಿದ್ದ ಮಗಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯ ಜಿಲ್ಲೆಯ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ ಹಾಗೂ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಕುಂತಲಾದೇವಿ (46) ಹಾಗೂ ಪ್ರಿಯಾಂಕಾ (19) ಮೃತ ದುರ್ದೈವಿಗಳು.

ಮಗಳು ಪ್ರಿಯಾಂಕಾ ಮದುವೆಗೆ ಕುಟುಂಬದವರು ಸಿದ್ಧತೆ ನಡೆಸಿದ್ದರು. ಆದರೆ ಈಗ ತಾಯಿ-ಮಗಳು ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹರೀಶ್‌ ಕೇರ

View all posts by this author