ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harassment: ಯುವ ವೈದ್ಯೆಗೆ ಬೀದಿ ಕಾಮಣ್ಣನ ಕಿರುಕುಳ, ಹೆಡೆಮುರಿ ಕಟ್ಟಿದ ಪೊಲೀಸರು

ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆಯ ವೇಳೆ ಆರೋಪಿ ವಿನೋದ್ ಎಂಬುದು ದೃಢಪಟ್ಟಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ವಿನೋದ್ ಬೈಕ್‌ನಲ್ಲಿ ಸಂಚರಿಸುತ್ತ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಈ ರೀತಿಯ ಕೃತ್ಯ ಎಸಗುತ್ತಿದ್ದಾನೆ ಎಂಬುದು ಗೊತ್ತಾಗಿದೆ.

ಯುವ ವೈದ್ಯೆಗೆ ಬೀದಿ ಕಾಮಣ್ಣನ ಕಿರುಕುಳ, ಹೆಡೆಮುರಿ ಕಟ್ಟಿದ ಪೊಲೀಸರು

ಯುವತಿಗೆ ಕಿರುಕುಳ -

ಹರೀಶ್‌ ಕೇರ
ಹರೀಶ್‌ ಕೇರ Jan 3, 2026 1:33 PM

ಬೆಂಗಳೂರು, ಜ.03: ನಗರದಲ್ಲಿ (Bengaluru Crime News) ಮಹಿಳೆಯರ ಸುರಕ್ಷತೆ (Women safety) ಕುರಿತು ಕಳವಳ ಮೂಡುವಂತೆ ಮತ್ತೊಂದು ಘಟನೆ ನಡೆದಿದೆ. ರಾತ್ರಿ ಸಮಯದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವ ವೈದ್ಯೆಯೊಬ್ಬರಿಗೆ ವಿಕೃತನೊಬ್ಬ ಕಿರುಕುಳ (Harassment) ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಬಾಣಾವಾರದ ಎಜಿಬಿ ಲೇಔಟ್‌ನಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಆರೋಪಿ ವಿನೋದ್‌ ಎಂಬಾತನನ್ನು ಬಂಧಿಸಿದ್ದಾರೆ.

ಡಿಸೆಂಬರ್ 17 ರಂದು ರಾತ್ರಿ 12.45ರ ಸುಮಾರಿಗೆ ಈ ಘಟನೆ ನಡೆದಿದೆ. ಹೆಸರಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯೆ, ತನ್ನ ಡ್ಯೂಟಿ ಮುಗಿಸಿಕೊಂಡು ಪಿಜಿಗೆ ತೆರಳುತ್ತಿದ್ದರು. ಪಿಜಿ ಗೇಟ್ ಸಮೀಪ ಬಂದಾಗ, ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬರು ವೈದ್ಯೆಯ ಬಳಿ ನಿಂತು “ಬಸ್ ನಿಲ್ದಾಣ ಎಲ್ಲಿದೆ?” ಎಂದು ಕೇಳಿದ್ದಾರೆ. ವೈದ್ಯೆ ಸಹಜವಾಗಿ ಉತ್ತರ ನೀಡಲಾರಂಭಿಸಿದ ಕ್ಷಣದಲ್ಲೇ ಈ ಪಾತಕಿ ಹತ್ತಿರ ಬಂದು ವೈದ್ಯೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ.

ಏಕಾಏಕಿ ಈತನ ನೀಚ ವರ್ತನೆಗೆ ಬೆಚ್ಚಿಬಿದ್ದ ವೈದ್ಯೆ ಜೋರಾಗಿ ಕಿರುಚಿಕೊಂಡಿದ್ದಾರೆ. ವೈದ್ಯೆಯ ಕಿರುಚಾಟ ಕೇಳಿ ಗಾಬರಿಯಾದ ಆಸಾಮಿ, ಸ್ಥಳದಿಂದ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಪಿಜಿ ಗೇಟ್ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಸಂಪೂರ್ಣ ಘಟನೆ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಬೈಕ್ ಮೇಲೆ ಬಂದ ವ್ಯಕ್ತಿಯ ಚಲನವಲನ, ವೈದ್ಯೆಯೊಂದಿಗೆ ಮಾತನಾಡಿದ ರೀತಿ ಹಾಗೂ ಕಿರುಚಾಟದ ಬಳಿಕ ಎಸ್ಕೇಪ್ ಆದ ದೃಶ್ಯಗಳು ಸ್ಪಷ್ಟವಾಗಿ ದಾಖಲಾಗಿವೆ. ಈ ದೃಶ್ಯಗಳ ಆಧಾರದ ಮೇಲೆ ವೈದ್ಯೆ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಉಪನ್ಯಾಸಕರಿಂದ ಲೈಂಗಿಕ ಕಿರುಕುಳ, ಹಿರಿಯ ವಿದ್ಯಾರ್ಥಿನಿಯರ ರ‍್ಯಾಗಿಂಗ್‍; ಯುವತಿ ಆತ್ಮಹತ್ಯೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆಯ ವೇಳೆ ಆರೋಪಿ ವಿನೋದ್ ಎಂಬುದು ದೃಢಪಟ್ಟಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ವಿನೋದ್ ಬೈಕ್‌ನಲ್ಲಿ ಸಂಚರಿಸುತ್ತ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಈ ರೀತಿಯ ಕೃತ್ಯ ಎಸಗುತ್ತಿದ್ದಾನೆ ಎಂಬುದು ಗೊತ್ತಾಗಿದೆ.

ಈ ಘಟನೆ ಮತ್ತೊಮ್ಮೆ ನಗರದಲ್ಲಿ ರಾತ್ರಿ ಕೆಲಸ ಮುಗಿಸಿ ಮರಳುವ ಮಹಿಳೆಯರ ಭದ್ರತೆಯ ಬಗ್ಗೆ ಆತಂಕ ಮೂಡಿಸಿದೆ. ಸೋಲದೇವನಹಳ್ಳಿ ಪೊಲೀಸರು ಈ ಪ್ರಕರಣದಲ್ಲಿ ತ್ವರಿತ ಕ್ರಮ ಕೈಗೊಂಡು ವಿಶ್ವಾಸ ಮೂಡಿಸಿದ್ದಾರೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ ಮತ್ತು ರಾತ್ರಿ ಗಸ್ತು ತೀವ್ರಗೊಳಿಸುವ ಅಗತ್ಯವಿದೆ.

Murder Case: ಇನ್‌ಸ್ಟಗ್ರಾಮ್‌ನಲ್ಲಿ ಯುವತಿಗೆ ಮೆಸೇಜ್‌ ಮಾಡಿ ಕಿರುಕುಳ, ಯುವಕನ ಹತ್ಯೆ