ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bengaluru Crime news: ಬೆಂಗಳೂರಿನ ಮನೆಯಲ್ಲಿ ದಂಪತಿ ಶವಗಳು ಪತ್ತೆ; ಕೊಲೆ ಮಾಡಿ ಆತ್ಮಹತ್ಯೆ ಶಂಕೆ

ಪತ್ನಿಯನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ. ಪತಿ ಸೀರೆಯಿಂದ ನೇಣು ಹಾಕಿಕೊಂಡಿದ್ದಾನೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ಸಂಭವಿಸಿದ ಕೊಲೆ- ಆತ್ಮಹತ್ಯೆ ಎನ್ನಲಾಗುತ್ತಿದೆಯಾದರೂ ಮರಣೋತ್ತರ ಪರೀಕ್ಷೆ ವರದಿ ಹಾಗೂ ಪೊಲೀಸರ ತನಿಖೆ ಬಳಿಕ ಸಾವಿನ ರಹಸ್ಯ ಬಯಲಿಗೆ ಬರಲಿದೆ.

ಮೃತ ಡೇವಿಡ್‌, ಸುಮಿತ್ರಾ

ಬೆಂಗಳೂರು, ಏ. 22: ರಾಜಧಾನಿ ಬೆಂಗಳೂರಿನ (Bengaluru crime news) ಆರ್.ಟಿ ನಗರದ ಗಂಗೇನಹಳ್ಳಿಯ ಮನೆಯೊಂದರಲ್ಲಿ ದಂಪತಿ (Couple bodies found) ಶವಗಳು ಪತ್ತೆಯಾಗಿವೆ. 10 ವರ್ಷಗಳ ಹಿಂದೆ ವಿವಾಹವಾಗಿದ್ದ ಸುಮಿತ್ರಾ ಹಾಗೂ ಡೇವಿಡ್ ಇದೀಗ ಏಕಾಏಕಿ ಸಾವನ್ನಪ್ಪಿದ್ದಾರೆ. ಆದರೆ, ಇಬ್ಬರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಆರ್​​ಟಿ ನಗರ ಪೊಲೀಸರು ಮತ್ತು ಸೊಕೊ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು, ಕೌಟುಂಬಿಕ ಕಲಹದಿಂದ ಬೇಸತ್ತು ಡೇವಿಡ್, ಸುಮಿತ್ರಾಳನ್ನ ಉಸಿರುಗಟ್ಟಿಸಿ ಕೊಂದು (murder) ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ (self harming) ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಪತಿ ಡೇವಿಡ್, ಉಸಿರುಗಟ್ಟಿಸಿ ಕೊಂದು ಬಳಿಕ ಸೀರೆಯಿಂದ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಪತಿ ಡೇವಿಡ್ ಕೈಗಳ ಮೇಲೆ ಪ್ರತಿರೋಧವೊಡ್ಡಿ ತರಚಿರುವ ಗುರುತು ಸಹ ಕಂಡುಬಂದಿದೆ. ಹೀಗಾಗಿ ಡೇವಿಡನೇ ಪತ್ನಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದು, ಬಳಿಕ ಪ್ರತಿಕ್ರಿಯಿಸಿರುವ ಅವರು, ಸಂಬಂಧಿಕರ ಮಾಹಿತಿ ಪ್ರಕಾರ ಕೌಟುಂಬಿಕ ಕಲಹ ಇತ್ತು. ಜಗಳವಾಡಿದ್ದರಿಂದ ಮಕ್ಕಳನ್ನು ಸೋದರ ಸಂಬಂಧಿ ಕರೆದೊಯ್ದಿದ್ದರು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಇಬ್ಬರ ಶವ ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ಸಂಭವಿಸಿದೆ ಎನ್ನಲಾಗುತ್ತಿದೆಯಾದರೂ, ಮರಣೋತ್ತರ ಪರೀಕ್ಷೆ ವರದಿ ಹಾಗೂ ಪೊಲೀಸರ ತನಿಖೆ ಬಳಿಕ ಸಾವಿನ ರಹಸ್ಯ ಬಯಲಿಗೆ ಬರಲಿದೆ.

Sirsi Doctor Murder Case: ಶಿರಸಿ ವೈದ್ಯನ ಕೊಲೆ ಪ್ರಕರಣದ ಆರೋಪಿ ಅರೆಸ್ಟ್: 15 ಲಕ್ಷ ರೂ.‌ ಮೌಲ್ಯದ ಚಿನ್ನಾಭರಣ, 50 ಸಾವಿರ ನಗದು ವಶಕ್ಕೆ

ಹರೀಶ್‌ ಕೇರ

View all posts by this author