ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಪತ್ನಿಯನ್ನು ಕೊಂದು ನಿವೃತ್ತ ಬಿಎಂಟಿಸಿ ಬಸ್ ಚಾಲಕ ಆತ್ಮಹತ್ಯೆಗೆ ಶರಣು

Bengaluru Crime News: ವೆಂಕಟೇಶ್ ಬಿಎಂಟಿಸಿ ಡ್ರೈವರ್ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದ. ಪತ್ನಿಗೆ ಸ್ಟ್ರೋಕ್ ಆಗಿ ವೀಲ್‌ಚೇರ್‌ನಲ್ಲಿ ಜೀವನ ಸಾಗಿಸುತ್ತಿದ್ದರು. ಆರೋಗ್ಯ ಸಮಸ್ಯೆ ಸೇರಿದಂತೆ ಸಣ್ಣ ಪುಟ್ಟ ವಿಚಾರಗಳಿಗೂ ಕೂಡ ಇಬ್ಬರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಮಕ್ಕಳು ಹೊರಗಡೆ ಹೋದಾಗ ದಂಪತಿಗಳು ಜಗಳ ಮಾಡಿಕೊಳ್ಳುತ್ತಿದ್ದರು. ಜಗಳ ಉಲ್ಭಣಿಸಿ ಕೊಲೆಗೆ ಕಾರಣವಾಗಿದೆ.

ವೆಂಕಟೇಶನ್‌, ಬೇಬಿ

ಬೆಂಗಳೂರು, ಡಿ.04 : ಬೆಂಗಳೂರಿನಲ್ಲಿ (Bengaluru crime news) ಬೆಚ್ಚಿ ಬೆಳಿಸುವಂತಹ ಘಟನೆ ನಡೆದಿದೆ. ನಿವೃತ್ತ ಬಿಎಂಟಿಸಿ ಡ್ರೈವರ್‌ನೊಬ್ಬ (BMTC driver) ತನ್ನ ಪತ್ನಿಯನ್ನು ಕೊಂದು (Murder case) ಬಳಿಕ ತಾನೂ ಆತ್ಮಹತ್ಯೆಗೆ (Self harming) ಶರಣಾಗಿದ್ದಾನೆ. ಈ ದಾರುಣ ಘಟನೆ ಸುಬ್ರಮಣ್ಯಪುರದ ಚಿಕ್ಕ ಗೌಡನಪಾಳ್ಯದಲ್ಲಿ ನಡೆದಿದೆ. ಪತ್ನಿ ಬೇಬಿ (65) ಯನ್ನು ಕೊಂದು ಪತಿ ವೆಂಕಟೇಶನ್ (65) ಆತ್ಮಹತ್ಯೆಗೆ ಶರಣಾಗಿದ್ದಾನೆ.

ವೆಂಕಟೇಶ್ ಬಿಎಂಟಿಸಿ ಡ್ರೈವರ್ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದ. ಪತ್ನಿಗೆ ಸ್ಟ್ರೋಕ್ ಆಗಿ ವೀಲ್‌ಚೇರ್‌ನಲ್ಲಿ ಜೀವನ ಸಾಗಿಸುತ್ತಿದ್ದರು. ಸಣ್ಣ ಪುಟ್ಟ ವಿಚಾರಗಳಿಗೂ ಕೂಡ ಇಬ್ಬರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಮಕ್ಕಳು ಹೊರಗಡೆ ಹೋದಾಗ ದಂಪತಿಗಳು ಜಗಳ ಮಾಡಿಕೊಳ್ಳುತ್ತಿದ್ದರು. ಡಿಸೆಂಬರ್ 2ರಂದು ಮಂಗಳವಾರ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಗಲಾಟೆ ವಿಕೋಪಕ್ಕೆ ಹೋಗಿ ವೈರಿನಿಂದ ಪತ್ನಿಯ ಕುತ್ತಿಗೆ ಬಿಗಿದು ವೆಂಕಟೇಶನ್ ಕೊಲೆ ಮಾಡಿದ್ದಾನೆ. ನಂತರ ಅದೇ ವೈರ್‌ನಲ್ಲಿ ತಾನು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಧ್ಯಾಹ್ನ ಸೊಸೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಮೃತದೇಹಗಳು ಕಾಣಿಸಿವೆ. ತಕ್ಷಣವೇ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರೆಸಿದ್ದಾರೆ.

Sangeeth Sagar Death: ಸಿನಿಮಾ ಶೂಟಿಂಗ್‌ ವೇಳೆಯೇ ನಿರ್ದೇಶಕ ಸಂಗೀತ್‌ ಸಾಗರ್‌ಗೆ ಹೃದಯಾಘಾತ, ಸಾವು

ಮದುವೆಯಾಗಲಿಲ್ಲ ಎಂದು ಯುವಕ ಆತ್ಮಹತ್ಯೆ

ಮುಂಬೈ: ಕಾನೂನು ಪ್ರಕಾರ ಗಂಡು ಮಕ್ಕಳು 21ನೇ ವಯಸ್ಸಿಗೆ ಮದುವೆಯಾಗಬಹುದು. ಆದರೆ ಇಲ್ಲೊಬ್ಬ 19 ವರ್ಷದ ಯುವಕ ಇನ್ನೆರಡು ವರ್ಷ ಕಾಯಲು ಸಾಧ್ಯವಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharashtra) ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಮದುವೆಯನ್ನು ಮುಂದೂಡುವಂತೆ ಕುಟುಂಬಸ್ಥರು ಒತ್ತಾಯಿಸಿದ್ದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಈ ಘಟನೆ ನವೆಂಬರ್ 30ರಂದು ಡೊಂಬಿವ್ಲಿ ಪ್ರದೇಶದಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಯುವಕ ತನ್ನ ಊರಿನ ಹುಡುಗಿಯನ್ನು ಪ್ರೀತಿಸುತ್ತಿದ್ದ ಮತ್ತು ಅವಳನ್ನು ಮದುವೆಯಾಗಲು ಬಯಸಿದ್ದ. ಆದರೆ ಆತನ ಕುಟುಂಬವು ಮದುವೆಗೆ ಕಾನೂನುಬದ್ಧವಾಗಿ ಅನುಮತಿಸಲಾದ 21 ವರ್ಷವನ್ನು ತಲುಪುವವರೆಗೆ ಕಾಯುವಂತೆ ಕೇಳಿಕೊಂಡಿತ್ತು. ಇದು ಅವನಿಗೆ ಭಾವನಾತ್ಮಕ ಯಾತನೆಯನ್ನು ಉಂಟು ಮಾಡಿತ್ತು ಎಂದು ಮನ್ಪಾಡಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವೆಂಬರ್ 30ರಂದು ಈ ಯುವಕ ತನ್ನ ಮನೆಯ ಛಾವಣಿಗೆ ಸ್ಕಾರ್ಫ್ ಕಟ್ಟಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ನೇಣು ಬಿಗಿದಿದ್ದನ್ನು ನೋಡಿದ ಕೂಡಲೇ ಕುಟುಂಬಸ್ಥರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಯುವಕ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು. ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹರೀಶ್‌ ಕೇರ

View all posts by this author