ಬೆಂಗಳೂರು, ಜ.16: ನಗರದಲ್ಲಿ (Bengaluru) ಹುಡುಗರ (boys) ರೀತಿ ಡ್ರೆಸ್ ಮಾಡಿಕೊಂಡು ಮನೆಗಳ್ಳತನ (Theft Case) ಮಾಡುತ್ತಿದ್ದ ಇಬ್ಬರು ಹುಡುಗಿಯರನ್ನು ಪೊಲೀಸರು ಬಂಧಿಸಿದ್ದಾರೆ. ಹುಡುಗರೆಂದು ಭಾವಿಸಿ ಬಂಧಿಸಿ ಕರೆದೊಯ್ಯುವಾಗ ಇವರು ಖತರ್‌ನಾಕ್ ಕಳ್ಳಿಯರು ಎಂದು ಗೊತ್ತಾಗಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಜ.13 ರಂದು ಸಂಪಿಗೇಹಳ್ಳಿಯ ಸಂಗಮೇಶ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದಾಗ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಹುಡುಗರು ನಡೆದುಕೊಂಡು ಹೋಗುವುದು ಪತ್ತೆಯಾಗಿತ್ತು. ಸಿಸಿಟಿವಿ ಬೆನ್ನತ್ತಿ ಆರೋಪಿಗಳನ್ನು ವಶಕ್ಕೆ ಪಡೆದ ವೇಳೆ ಅದು ಹುಡುಗರಲ್ಲ, ಹುಡುಗಿಯರು ಎನ್ನುವುದು ಪತ್ತೆಯಾಗಿದೆ. ಕಳ್ಳತನ ಎಸಗಿದ ಶಾಲು ಮತ್ತು ನೀಲು ಅವರನ್ನು ಬಂಧಿಸಿದ್ದಾರೆ.
ಇಬ್ಬರೂ ಆರೋಪಿಗಳು ಟ್ಯಾನರಿ ರಸ್ತೆಯ ನಿವಾಸಿಗಳಾಗಿದ್ದು ಹುಡುಗರ ರೀತಿ ಪ್ಯಾಂಟ್ ಶರ್ಟ್, ಟೋಪಿ ಹಾಕಿಕೊಂಡು ಬೈಕಿನಲ್ಲಿ ಓಡಾಡುತ್ತಿದ್ದರು. ನಿರ್ಜನ ಪ್ರದೇಶದ ಮನೆಗಳಲ್ಲಿ ಹಾಡುಹಗಲೇ ಕಳ್ಳತನ ಮಾಡುತ್ತಿದ್ದರು. ಸದ್ಯ ಇಬ್ಬರನ್ನು ಬಂಧಿಸಿ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಇವರು ಇಬ್ಬರೇನಾ, ಅಥವಾ ಇವರ ಹಿಂದೆ ದೊಡ್ಡ ಗ್ಯಾಂಗ್ ಇದೆಯಾ ಎಂಬುದು ಪತ್ತೆ ಆಗಬೇಕಿದೆ.
ಚಿಕ್ಕಬಳ್ಳಾಪುರದ ಜ್ಯುವೆಲ್ಲರಿ ಶಾಪ್‌ನಲ್ಲಿ ಕಳ್ಳರ ಕರಾಮತ್ತು; 3 ಕೋಟಿ ಮೌಲ್ಯದ 140 ಕೆ.ಜಿ ಬೆಳ್ಳಿ ಆಭರಣ ಕಳವು