ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Pavithra Gowda: ಜಾಮೀನು ನಿರೀಕ್ಷೆಯಲ್ಲಿದ್ದ ಪವಿತ್ರಾ ಗೌಡಗೆ ನಿರಾಸೆ; ಅರ್ಜಿ ವಜಾ ಮಾಡಿದ ಕೋರ್ಟ್‌

Renukaswamy Murder case: ತಮ್ಮ ಮಗಳ ವಿದ್ಯಾಭ್ಯಾಸ ಹಾಗೂ ಆಕೆಯ ಭವಿಷ್ಯದ ವಿಚಾರವನ್ನೂ ಪರಿಗಣಿಸಿ ಜಾಮೀನು ನೀಡಬೇಕು ಎಂದು ಪವಿತ್ರಾ ಗೌಡ ಮನವಿ ಮಾಡಿದ್ದರು. ಆದರೆ, ಬೆಂಗಳೂರಿನ 59ನೇ ಸಿಸಿಎಚ್ ಕೋರ್ಟ್ ವಾದ - ಪ್ರತಿವಾದವನ್ನು ಆಲಿಸಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Murder case) ಪ್ರಕರಣದಲ್ಲಿ ಬಂಧನವಾಗಿ ಜೈಲಿನಲ್ಲಿರುವ ಪ್ರಮುಖ ಆರೋಪಿ ಪವಿತ್ರಾ ಗೌಡ (Pavithra Gowda) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿದೆ.

ನಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಂಬ್ರಾಣಿ ಅವರು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ವಾದ-ಪ್ರತಿವಾದಗಳು ಪೂರ್ಣಗೊಂಡಿದ್ದರಿಂದ ಶುಕ್ರವಾರವೇ ಆದೇಶ ಪ್ರಕಟವಾಗುವ ನಿರೀಕ್ಷೆ ಇತ್ತು. ಆದರೆ ಇಂದು ಆದೇಶ ಪ್ರಕಟಗೊಂಡಿದೆ.

ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆ ಬಹುತೇಕ ಪೂರ್ಣಗೊಂಡಿರುವುದನ್ನು ಪ್ರಮುಖ ಅಂಶವಾಗಿ ಪರಿಗಣಿಸುವಂತೆ ಪವಿತ್ರಾ ಪರ ವಕೀಲರು ನ್ಯಾಯಾಲಯದ ಮುಂದೆ ವಾದಿಸಿದ್ದರು. ತಮ್ಮ ಮಗಳ ವಿದ್ಯಾಭ್ಯಾಸ ಹಾಗೂ ಆಕೆಯ ಭವಿಷ್ಯದ ವಿಚಾರವನ್ನೂ ಪರಿಗಣಿಸಿ ಜಾಮೀನು ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಪವಿತ್ರಾ ಗೌಡ ಪರ ಹಿರಿಯ ವಕೀಲ ಬಾಲನ್ ಹಾಗೂ ವಕೀಲ ನಾರಾಯಣಸ್ವಾಮಿ ವಾದ ಮಂಡಿಸಿದ್ದರು. ಕೋರ್ಟ್ ವಾದ - ಪ್ರತಿವಾದವನ್ನು ಆಲಿಸಿ ಇದೀಗ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ನಟ ದರ್ಶನ್‌ ಸೋದರಳಿಯನ ಹೋಟೆಲ್‌ ಬಗ್ಗೆ ಅಪಪ್ರಚಾರ! ʻದಯವಿಟ್ಟು ಈ ಥರ ಮಾಡಬೇಡಿ..ʼ ಎಂದು ಬೇಡಿಕೊಂಡ ʻಡಿ ಬಾಸ್‌ʼ ಅಕ್ಕನ ಮಗ ಚಂದು!

ಇದೇ ವೇಳೆ ದರ್ಶನ್ ಪರ ವಕೀಲರು ಪ್ರದೋಷ್ ಅವರ ಸಾಕ್ಷ್ಯ ವಿಚಾರಣೆಯನ್ನು ಮುಂದೂಬೇಕೆಂದು ಮನವಿ ಮಾಡಿದ್ದರು. ಇದೇ ಸೆ.28ರಂದು ಪ್ರದೋಷ್ ಸಾಕ್ಷ್ಯ ವಿಚಾರಣೆ ನಡೆಯಲಿದೆ. ಆದರೆ ಕೋರ್ಟ್ ದರ್ಶನ್ ಅವರ ಅರ್ಜಿಯನ್ನು ವಜಾಗೊಳಿಸಿದೆ ಮಾಫಿ ಸಾಕ್ಷಿ ವಿಚಾರಣೆ ಮುಂದೂಡಿಕೆಗೆ ಒಪ್ಪಿಲ್ಲ.