ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Cyber crime: ಆನ್‌ಲೈನ್‌ ಟ್ರೇಡಿಂಗ್‌ ಗೀಳು; ಸೈಬರ್‌ ವಂಚನೆಗೀಡಾಗಿ 1.28 ಕೋಟಿ ರೂಪಾಯಿ ಕಳೆದುಕೊಂಡ ಭೂಪ!

ಹೆಚ್ಚಿನ ಹಣ ಹಾಕಿದರೆ ಹೆಚ್ಚು ಲಾಭ ಬರುತ್ತೆ ಎಂದು ಅವರು ಕೇಳಿದಾಗೆಲ್ಲ ಹಂತ ಹಂತವಾಗಿ ಹಣ ಹಾಕಿದ್ದರು. ಹೀಗೆ ಬರೋಬ್ಬರಿ 1 ಕೋಟಿ 28 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಆದರೆ, ಈ ಬಾರಿ ಲಾಭ ಮಾತ್ರ ಬರಲಿಲ್ಲ. ಹಣ ವಿಥ್ ಡ್ರಾ ಮಾಡಲು ನೋಡಿದ್ದಾರೆ, ಅದೂ ಆಗಿಲ್ಲ. ಬಳಿಕ ತಾನು ಮೋಸ ಹೋಗಿರುವುದು ಅರಿವಾಗಿದೆ.

ಸೈಬರ್‌ ಕ್ರೈಮ್

ಚಿಕ್ಕಮಗಳೂರು, ಮಾ.30: ಜಿಲ್ಲೆಯ (Chikkamagaluru) ಕಡೂರು (Kadur) ತಾಲೂಕಿನ ಶಿವಪುರ ಗ್ರಾಮದ ವ್ಯಕ್ತಿಯೊಬ್ಬರು ಅಲ್ಪ ಅವಧಿಯಲ್ಲಿ ಹೆಚ್ಚಿನ ಲಾಭ ಮಾಡುವ ಆಸೆಗೆ ಬಿದ್ದು, ಆನ್‌ಲೈನ್‌ ಟ್ರೇಡಿಂಗ್‍ (Online Trading) ನಂಬಿ 1,28,10,000 ರೂ. ಹಣ ಕಳೆದುಕೊಂಡಿದ್ದಾರೆ.

ಗ್ರಾಮದ ಕಲ್ಲೇಗೌಡ ಹಣ ಕಳೆದುಕೊಂಡ ನತದೃಷ್ಟ. ಇವರು ಫೇಸ್ಬುಕ್‌ನಲ್ಲಿ ಟ್ರೇಡಿಂಗ್ ಲಿಂಕ್ ನೋಡಿದ್ದರು. ಅದನ್ನು ಕ್ಲಿಕ್‌ ಮಾಡಿ ಬಳಿಕ ವಾಟ್ಸಾಪ್‌ನಲ್ಲಿ ಗ್ರೂಪ್‌ ಒಂದಕ್ಕೆ ಸೇರಿದ್ದರು. ಅಲ್ಲಿಂದ ಟ್ರೇಡಿಂಗ್ ಲಿಂಕ್‍ನಲ್ಲಿ ಅಕೌಂಟ್ ತೆರೆದಿದ್ದರು. ಆರಂಭದಲ್ಲಿ 60 ಸಾವಿರ ರೂ. ಹಣ ಹಾಕಿದ್ದರು. ಈ ವೇಳೆ 17,800 ರೂ. ಲಾಭದ ಹಣವನ್ನು ಹಾಕಿ ಆನ್‌ಲೈನ್ ವಂಚಕರು (Cyber Crime) ನಂಬಿಸಿದ್ದರು.

ಹೆಚ್ಚಿನ ಹಣ ಹಾಕಿದರೆ ಹೆಚ್ಚು ಲಾಭ ಬರುತ್ತೆ ಎಂದು ಅವರು ಕೇಳಿದಾಗೆಲ್ಲ ಹಂತ ಹಂತವಾಗಿ ಹಣ ಹಾಕಿದ್ದರು. ಹೀಗೆ ಬರೋಬ್ಬರಿ 1 ಕೋಟಿ 28 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಆದರೆ, ಈ ಬಾರಿ ಲಾಭ ಮಾತ್ರ ಬರಲಿಲ್ಲ. ಹಣ ವಿಥ್ ಡ್ರಾ ಮಾಡಲು ನೋಡಿದ್ದಾರೆ, ಅದೂ ಆಗಿಲ್ಲ. ಬಳಿಕ ತಾನು ಮೋಸ ಹೋಗಿರುವುದು ಅರಿವಾದ ಕಲ್ಲೇಗೌಡ, ಚಿಕ್ಕಮಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Cyber Crime: AI ಹುಡುಗಿ ನಂಬಿ ಬೆತ್ತಲಾದ ಯುವಕ, 1.5 ಲಕ್ಷ ರೂ. ಮಂಗಮಾಯ

ಹರೀಶ್‌ ಕೇರ

View all posts by this author