ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Double Murder: ಬೆಂಗಳೂರಿನಲ್ಲಿ ಟೆಕ್ಕಿಯಿಂದ ಹಣಕಾಸಿಗಾಗಿ ತಂದೆ- ತಾಯಿಯ ಹತ್ಯೆ

ರೋಹನ್ ಭಟ್ (33) ಎಂಬಾತ 4 ಲಕ್ಷ ರೂ. ಹಣಕ್ಕಾಗಿ ತನ್ನ ತಂದೆ-ತಾಯಿಯನ್ನು ಕೊಲೆ ಮಾಡಿದ್ದಾನೆ. ನವೀನ್ ಚಂದ್ರ ಭಟ್ (60), ಡಾ. ಶ್ಯಾಮಲಾ ಭಟ್ (55) ಕೊಲೆಯಾದವರು. ಕೊಲೆಯಾದ ನವೀನ್ ಚಂದ್ರ ಭಟ್ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಆಗಿದ್ದಾರೆ. ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದಾರೆ.

‌ಆರೋಪಿ ರೋಹನ್

ಬೆಂಗಳೂರು, ಫೆ.12 : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಕೃತ್ಯ ನಡೆದಿದೆ. ಬೆಂಗಳೂರಿನ (Bengaluru) ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್ಮೆಂಟ್‌ನಲ್ಲಿ ಮಗನೇ ತನ್ನ ಹೆತ್ತ ತಂದೆ, ತಾಯಿಯ ಬರ್ಬರ ಹತ್ಯೆ (Double Murder case) ಮಾಡಿದ್ದಾನೆ. ಕೊಲೆ ಮಾಡಿದವನು ಟೆಕ್ಕಿ (Techie) ಆಗಿದ್ದು, ಹಣಕಾಸಿನ ವಿಚಾರಕ್ಕಾಗಿ ಕೊಲೆ ನಡೆದಿದೆ.

ರೋಹನ್ ಭಟ್ (33) ಎಂಬಾತ 4 ಲಕ್ಷ ರೂ. ಹಣಕ್ಕಾಗಿ ತನ್ನ ತಂದೆ-ತಾಯಿಯನ್ನು ಕೊಲೆ ಮಾಡಿದ್ದಾನೆ. ನವೀನ್ ಚಂದ್ರ ಭಟ್ (60), ಡಾ. ಶ್ಯಾಮಲಾ ಭಟ್ (55) ಕೊಲೆಯಾದವರು. ಕೊಲೆಯಾದ ನವೀನ್ ಚಂದ್ರ ಭಟ್ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಆಗಿದ್ದಾರೆ. ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದಾರೆ.

ನಿನ್ನೆ ಬೆಳಗ್ಗೆ 7.30ರ ಸುಮಾರಿಗೆ ಹೆತ್ತ ತಂದೆ ಮತ್ತು ತಾಯಿಗೆ ಪುತ್ರ ಚಾಕುವಿನಿಂದ ಇರಿದಿದ್ದಾನೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದಾರೆ. ಆರೋಪಿ ಪುತ್ರ ರೋಹನ್ ಭಟ್ ನನ್ನು HAL ಪೊಲೀಸರು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವಿದೇಶದಲ್ಲಿರುವ ಮಗಳು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಹೆಚ್.ಎ.ಎಲ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹರೀಶ್‌ ಕೇರ

View all posts by this author