ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಕುಡಿದ ಮತ್ತಲ್ಲಿ ಕಿರಿಕ್‌; ಸ್ನೇಹಿತನನ್ನೇ ಬಿಯರ್‌ ಬಾಟೆಲ್‌ನಿಂದ ಹೊಡೆದು ಕೊಂದ ಪಾಪಿಗಳು

ಕುಡಿದ ಅಮಲಿನಲ್ಲಿ ಕ್ಷುಲಕ ಕಾರಣಕ್ಕೆ ಜಗಳವಾಡಿಕೊಂಡು ಗೆಳಯನ ಕೊಲೆ ಮಾಡಿದ ಘಟನೆ ಬನಶಂಕರಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ತ್ಯಾಗರಾಜನಗರದ ನಿವಾಸಿ ಸುರೇಶ್ (45) ಕೊಲೆಯಾದ ವ್ಯಕ್ತಿ. ಕೊಲೆಗೆ ಸಂಬಂಧಿಸಿದಂತೆ ಮೃತನ ಸ್ನೇಹಿತರಾದ ವೇಲು, ಸ್ಟೀಫನ್‌ ಹಾಗೂ ಪ್ರದೀಪ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ವ್ಯಕ್ತಿ ಸುರೇಶ್‌ (ಸಂಗ್ರಹ ಚಿತ್ರ)

ಬೆಂಗಳೂರು: ಕುಡಿದ ಅಮಲಿನಲ್ಲಿ ಕ್ಷುಲಕ ಕಾರಣಕ್ಕೆ ಜಗಳವಾಡಿಕೊಂಡು ಗೆಳಯನ ಕೊಲೆ ಮಾಡಿದ ಘಟನೆ ಬನಶಂಕರಿ (Murder Case) ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ತ್ಯಾಗರಾಜನಗರದ ನಿವಾಸಿ ಸುರೇಶ್ (45) ಕೊಲೆಯಾದ ವ್ಯಕ್ತಿ. ಕೊಲೆಗೆ ಸಂಬಂಧಿಸಿದಂತೆ ಮೃತನ ಸ್ನೇಹಿತರಾದ ವೇಲು, ಸ್ಟೀಫನ್‌ ಹಾಗೂ ಪ್ರದೀಪ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತ್ಯಾಗರಾಜನಗರದ ಬಳಿ ಆಟೋದಲ್ಲಿ ಗುರುವಾರ ರಾತ್ರಿ ಈ ನಾಲ್ವರು ಸ್ನೇಹಿತರು ಮದ್ಯ ಸೇವಿಸಿದ್ದರು. ಈ ವೇಳೆ ಕೆಲ ವಿಷಯಕ್ಕೆ ಗಲಾಟೆ ನಡೆದಿದೆ. ಆರೋಪಿಗಳು ಸುರೇಶ್‌ಗೆ ಬಿಯರ್ ಬಾಟಲ್‌ನಿಂದ ಹೊಡೆದು ಕೊಂದಿದ್ದಾರೆ.

ತನ್ನ ಕುಟುಂಬದ ಜತೆ ನೆಲೆಸಿದ್ದ ಸುರೇಶ್‌, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ವೇಲು ಬಳಿ ಸ್ಟೀಫನ್‌ ಹಾಗೂ ಪ್ರದೀಪ್ ಕೆಲಸ ಮಾಡುತ್ತಿದ್ದರು. ಸುರೇಶ್ ಕುತ್ತಿಗೆಗೆ ಬಿಯರ್ ಬಾಟಲ್ ತಿವಿದಿದ್ದೇ ತೀವ್ರ ರಕ್ತಸ್ರಾವ ಆಗಿದೆ. ಆಗ ಅಲ್ಲಿಯೇ ಇದ್ದ ವೇಲುನ ಇಬ್ಬರು ಸಹಚರರಾದ ನೇತಾಜಿ ಹಾಗೂ ಪ್ರತಾಪ್ ಅವರ ಕೈಲಿದ್ದ ಬಾಟೆಲ್ ಒಡೆದು ಅವರು ಸಹ ಸುರೇಶ್ ಗೆ ಮನಸೋ ಇಚ್ಛೆ ತಿವಿದುಬಿಟ್ಟಿದ್ದಾರೆ. ಸುರೇಶ್ ಕೂಗಲು ಶುರು ಮಾಡಿದಾಗ ಭಯಭೀತರಾಗಿ ಅವರದ್ದೇ ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಲು ನೋಡಿದ್ರು ಅಷ್ಟೋತ್ತಿಗೆ ಸಾವನ್ನಪ್ಪಿದ್ದಾನೆ. ಬಳಿಕ ಶವವನ್ನು ಆಟೋದಲ್ಲೇ ಬಿಟ್ಟು ಎಸ್ಕೆಪ್ ಆಗಿದ್ದು, ಬಳಿಕ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Murder Case: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಕೊಲೆ, ಕೊಲೆ ಹಿಂದೆ ಲವ್‌ ಸ್ಟೋರಿ

ಘಟನೆ ಬಳಿಕ ಬನಶಂಕರಿ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆಟೋ ನಂಬ‌ರ್, ಲೊಕೇಶನ್ ಆಧರಿಸಿ ಆರೋಪಿಗಳ ಪತ್ತೆ ಮಾಡಿದ್ದಾರೆ. ಇನ್ನು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಲು ಹೋದಾಗ ನಿಜವಾಗಿಯೂ ನಮಗೆ ಗೊತ್ತಾಗಿಲ್ಲ, ನಶೆಯಲ್ಲಿ ಮಾಡಿದ್ದೀವಿ ಎಂದು ಹೇಳಿದ್ದಾರೆ. ಹಲವು ವರ್ಷಗಳಿಂದ ಸುರೇಶ್ ಹಾಗೂ ವೇಲು ಸ್ನೇಹಿತರಾಗಿದ್ದು, ಈ ಗೆಳೆತನದಲ್ಲಿ ಪರಸ್ಪರ ಹಣಕಾಸು ವ್ಯವಹಾರ ಇತ್ತು. ಮದ್ಯ ಸೇವಿಸಿದಾಗ ಗೆಳೆಯರ ಮಧ್ಯೆ ಹಣಕಾಸು ವಿಚಾರ ಪ್ರಸ್ತಾಪವಾಗಿದೆ. ಇದೇ ವಿಚಾರ ಕೊನೆಗೆ ಸುರೇಶ್ ಕೊಲೆಗೂ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರತ್ಯೇಕ ಘಟನೆಯಲ್ಲಿ ಬೆಂಗಳೂರಿನಲ್ಲಿ 65 ವರ್ಷದ ಮಹಿಳೆಯೊಬ್ಬರನ್ನು ಅವರ ಮನೆಯಲ್ಲಿಯೇ ಕೊಲೆ ಮಾಡಲಾಗಿತ್ತು. ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಾಣೆಯಾದ್ದರಿಂದ ಇದನ್ನು ಕಳ್ಳತನ ಎಂದು ಗುರುತಿಸಲಾಗಿತ್ತು. ಪೊಲೀಸರ ಪ್ರಕಾರ, ಕೆಲಸದಲ್ಲಿದ್ದ ಆಕೆಯ ಪತಿ ಅಶ್ವಥ್ ನಾರಾಯಣ್ ಅವರು ದೂರವಾಣಿ ಮೂಲಕ ಪತ್ನಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಪದೇ ಪದೇ ಕರೆ ಮಾಡಿದರೂ ಆಕೆ ಪ್ರತಿಕ್ರಿಯಿಸದಿದ್ದಾಗ, ಸಂಜೆ 5.30 ರ ಸುಮಾರಿಗೆ ಆಕೆಯ ಬಗ್ಗೆ ವಿಚಾರಿಸಲು ಅವರು ತಮ್ಮ ಬಾಡಿಗೆದಾರರನ್ನು ಕೇಳಿಕೊಂಡಿದ್ದಾರೆ. ಬಾಡಿಗೆದಾರರು ಪರಿಶೀಲಿಸಿದಾಗ, ಶ್ರೀಲಕ್ಷ್ಮಿ ಮನೆಯೊಳಗೆ ನೆಲದ ಮೇಲೆ ಪ್ರಜ್ಞಾಹೀನಳಾಗಿ ಬಿದ್ದಿರುವುದು ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.