ಬೆಂಗಳೂರು, ಡಿ.27: ರಾಜಧಾನಿ ಬೆಂಗಳೂರಲ್ಲಿ (Bengaluru crime news) ತಡರಾತ್ರಿ ಸ್ಕೂಟರ್ನಲ್ಲಿ ಹೋಗುತ್ತಿದ್ದ ಯುವತಿಯನ್ನು ಕೆಲವು ಪುಂಡರು ಫಾಲೋ ಮಾಡಿ ಕಿರುಕುಳ ಕೊಟ್ಟಿದ್ದಾರೆ. ಡಿಸೆಂಬರ್ 25ರ ತಡರಾತ್ರಿ ಬಿಟಿಎಂ ಲೇಔಟ್ (BTM Layout) ನಲ್ಲಿ ಈ ಘಟನೆ ನಡೆದಿದೆ. ಹಿಂಬದಿಯಲ್ಲಿ ಬರುತ್ತಿದ್ದ ಕಾರಿನ ಚಾಲಕ ಈ ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡಿದ್ದು, ಬೆಂಗಳೂರು ಟ್ರಾಫಿಕ್ ಪೊಲೀಸರಿಗೂ (Traffic Police) ಟ್ಯಾಗ್ ಮಾಡಿದ್ದಾರೆ.
ಒಂದೇ ಬೈಕ್‌ನಲ್ಲಿ ತ್ರಿಬಲ್ ರೈಡ್ ಮಾಡುತ್ತಿದ್ದ, ಹೆಲ್ಮೆಟ್ ಕೂಡ ಧರಿಸಿರದ, ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿದ್ದ ಯುವಕರು, ಸ್ಕೂಟಿಯಲ್ಲಿ ಹೋಗ್ತಿದ್ದ ಯುವತಿಯ ಬೆನ್ನು ಬಿದ್ದಿದ್ದಾರೆ. ಈ ವೇಳೆ ಯುವತಿಯನ್ನು ಫಾಲೋ ಮಾಡಿದ ಪುಂಡರು, ಬೈಕನ್ನು ಅಡ್ಡಾದಿಡ್ಡಿ ಓಡಿಸಿ ಯುವತಿಗೆ ಟಾರ್ಚರ್ ಕೊಟ್ಟಿದ್ದಾರೆ. ಡಿಸೆಂಬರ್ 25 ರಾತ್ರಿ 12 ಗಂಟೆ ಸುಮಾರಿಗೆ ಬಿಟಿಎಂ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ಸುಮಾರು ಎರಡು ಕಿಲೋ ಮೀಟರ್ ರಸ್ತೆಯುದ್ದಕ್ಕೂ ಯುವತಿಯನ್ನು ಫಾಲೋ ಮಾಡಿದ್ದ ಕಿಡಿಗೇಡಿಗಳು, ಯುವತಿ ಪಕ್ಕದಲ್ಲೇ ಅಡ್ಡಾದಿಡ್ಡಿ ಬೈಕ್ ಓಡಿಸಿ ಭಯ ಮೂಡಿಸಿದ್ದಾರೆ.
ಸ್ಕೂಟಿಯಲ್ಲಿ ಯುವತಿ ಹೆಲ್ಮೆಟ್ ಧರಿಸಿ ಹೋಗುತ್ತಿದ್ದಳು. ಒಂದೇ ಬೈಕ್‌ನಲ್ಲಿ ಮೂವರು ಕಿಡಿಗೇಡಿಗಳು ಚಲಾಯಿಸುತ್ತಿದ್ದರು. ಹೆಲ್ಮೆಟ್ ಕೂಡ ಧರಿಸದೇ ಅಡ್ಡಾದಿಡ್ಡಿ ಬೈಕ್ ಬಿಡುತ್ತಿದ್ದರು. ಎರಡು ಕಿಲೋಮೀಟರ್‌ವರೆಗೂ ಯುವತಿಯನ್ನು ಫಾಲೋ ಮಾಡಿದ್ದಾರೆ. ಯುವತಿಗೆ ಕಿರುಕುಳ ಕೊಡೋ ವಿಡಿಯೋವನ್ನ ಕಾರಿನಲ್ಲಿ ಹಿಂದೆ ಬರ್ತಾ ಇದ್ದ ವ್ಯಕ್ತಿ ರೆಕಾರ್ಡ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ವಿಡಿಯೋ ಸಮೇತ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಸುದ್ದುಗುಂಟೆ ಪಾಳ್ಯ ಪೊಲೀಸರು ಎಕ್ಸ್ ನಲ್ಲಿ ಉತ್ತರ ನೀಡಿದ್ದು, ಬೈಕ್ ನಂಬರ್ ಪತ್ತೆ ಮಾಡಿದ್ದು, ಮೂವರನ್ನು ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ತಾಳ್ಮೆಗೆಟ್ಟ ಉತ್ತರ ಪ್ರದೇಶದ ಎಸ್‌ಪಿ ಸಂಸದ, ಟ್ರಾಫಿಕ್ ಪೊಲೀಸರ ಮೇಲೆ ಆಕ್ರೋಶ