ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Illicit relationship: ಮೂರು ಮಕ್ಕಳು, ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಪರಾರಿ!

Anekal: ಆನೇಕಲ್ ಬಸವನಪುರ ಗ್ರಾಮದಲ್ಲಿ ಲೀಲಾವತಿ ಎಂಬಾಕೆ ಹೀಗೆ ಮಾಡಿದ್ದಾಳೆ. ಮದುವೆಯಾಗಿ 11 ವರ್ಷಗಳ ಬಳಿಕ ಗಂಡ, ಸಂಸಾರ, ಮೂರು ಮಕ್ಕಳನ್ನು ಬಿಟ್ಟು ಈಕೆ ಲವರ್ ಜೊತೆ ಪರಾರಿಯಾಗಿದ್ದಾಳೆ. ಮಂಜುನಾಥ್ ಎಂಬವರ ಪತ್ನಿ ಲೀಲಾವತಿ ಗಂಡ, ಮಕ್ಕಳು ಬೇಡ ಅಂತ ಪ್ರಿಯಕರನ ಹಿಂದೆ ಬಿದ್ದಿದ್ದಾಳೆ.

ಮೂರು ಮಕ್ಕಳು, ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಪರಾರಿ!

-

ಹರೀಶ್‌ ಕೇರ ಹರೀಶ್‌ ಕೇರ Sep 5, 2025 1:28 PM

ಬೆಂಗಳೂರು: ಬಿಟ್ಟು ಹೋಗಬೇಡ ಎಂದು ಗೋಗರೆಯುವ ಮೂರು ಮಕ್ಕಳು, ಮೋಸ ಮಾಡಬೇಡ ಎಂದು ಗೋಳಾಡುವ ಗಂಡ- ಎಲ್ಲರನ್ನೂ ಬಿಟ್ಟು, ನನಗೆ ಪ್ರಿಯಕರನೇ ಬೇಕು (Illicit relationship) ಎಂದು ಗೃಹಿಣಿಯೊಬ್ಬಳು ಆತನ ಹಿಂದೆ ಪರಾರಿಯಾಗಿದ್ದಾಳೆ. ಆಕೆಯನ್ನು ಕರೆತಂದ ಪೊಲೀಸರು (Bengaluru polie) ಕೂಡ ಆಕೆ ಗಂಡನ (Husband) ಜೊತೆ ಹೋಗುವಂತೆ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ (Anekal) ಬಸವನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಆನೇಕಲ್ ಬಸವನಪುರ ಗ್ರಾಮದಲ್ಲಿ ಲೀಲಾವತಿ ಎಂಬಾಕೆ ಹೀಗೆ ಮಾಡಿದ್ದಾಳೆ. ಮದುವೆಯಾಗಿ 11 ವರ್ಷಗಳ ಬಳಿಕ ಗಂಡ, ಸಂಸಾರ, ಮೂರು ಮಕ್ಕಳನ್ನು ಬಿಟ್ಟು ಈಕೆ ಲವರ್ ಜೊತೆ ಪರಾರಿಯಾಗಿದ್ದಾಳೆ. ಮಂಜುನಾಥ್ ಎಂಬವರ ಪತ್ನಿ ಲೀಲಾವತಿ ಗಂಡ, ಮಕ್ಕಳು ಬೇಡ ಅಂತ ಪ್ರಿಯಕರನ ಹಿಂದೆ ಬಿದ್ದಿದ್ದಾಳೆ. 11 ವರ್ಷದ ಹಿಂದೆಯೇ ಮಂಜುನಾಥನನ್ನು ಲೀಲಾವತಿ ಪ್ರೀತಿಸಿ ಮದುವೆಯಾಗಿದ್ದಳು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳಿದ್ದಾರೆ.

ಈ ಲೀಲಾವತಿಗೆ ಇತ್ತೀಚೆಗೆ ಸಂತು ಎಂಬಾತನ ಜೊತೆ ಪ್ರಣಯ ಶುರುವಾಗಿದೆ. ಸಂತು ಎಂಬಾತನ ಜೊತೆ ಓಡಾಡುತ್ತಿದ್ದ ಈಕೆ ಕಳೆದ ಕಳೆದ ಭಾನುವಾರ ಗಂಡ ಮಕ್ಕಳನ್ನು ಬಿಟ್ಟು ಲವ್ವರ್ ಜೊತೆ ಎಸ್ಕೇಪ್ ಆಗಿದ್ದಾಳೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಗಂಡ ಮಂಜುನಾಥ್​ ಮಿಸ್ಸಿಂಗ್ ಕೇಸ್​ ದಾಖಲಿಸಿದ್ದಾರೆ. ಇದಾದ ಬಳಿಕ ಪ್ರಿಯಕರನ ಜೊತೆ ಲೀಲಾವತಿ ಪೊಲೀಸರ ಮುಂದೆ ಹಾಜರಾಗಿದ್ದಾಳೆ. ಪೊಲೀಸರ ಸಮ್ಮುಖದಲ್ಲಿಯೇ ವಿಚಾರಣೆ ನಡೆದಿದ್ದು, ಈ ವೇಳೆ ನನಗೆ ಪತಿ ಹಾಗೂ ಮಕ್ಕಳು ಬೇಡ ಎಂದು ಲೀಲಾವತಿ ಹೇಳಿದ್ದಾಳೆ.

ಇತ್ತ ಗಂಡ ಮಂಜುನಾಥ್​, ನನಗೆ ನನ್ನ ಹೆಂಡತಿ ಬೇಕು ಎಂದು ಕಣ್ಣೀರು ಹಾಕಿದ್ದಾರೆ. ಮೂವರು ಮಕ್ಕಳು ಕೂಡ, ನಮ್ಮನ್ನು ಬಿಟ್ಟು ಹೋಗಬೇಡ ಎಂದು ಅಮ್ಮನ ಬಳಿ ಗೋಗರೆದಿದ್ದಾರೆ. ಆದರೆ ಆಕೆಯ ಕಲ್ಲು ಹೃದಯ ಕರಗಿಲ್ಲ. ಮೂರು ಮಕ್ಕಳನ್ನು ಕೂಡ ತೊರೆದು ಪ್ರಿಯಕರನ ಜೊತೆ ಹೋಗಿದ್ದಾಳೆ. ನನ್ನ ಪತ್ನಿ ಅಂದವಾಗಿದ್ದಾಳೆ ಎಂದು ಪ್ರಿಯಕರ ಸಂತು ಮರಳು ಮಾಡಿದ್ದಾನೆ. ನಾನು ಮನೆಯಲ್ಲಿ ಇಲ್ಲದಿದ್ದಾಗ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಹಣ ಇದೆ, ಆಸ್ತಿ ಇದೆ ಎಂದು ನಂಬಿಸಿ ಎರಡು ವರ್ಷದಿಂದ ಆಕೆ ಜೊತೆ ಸಂಬಂಧ ಹೊಂದಿದ್ದ. ಇದೀಗ ಅವಳು ನನಗೆ ಹಾಗೂ ಮಕ್ಕಳಿಗೆ ಮೋಸ ಮಾಡಿ ಹೋಗಿದ್ದಾಳೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.

ಇದನ್ನೂ ಓದಿ: Bihar Gangster: ರಾಬರಿ, ಕೊಲೆ, ರೇಪ್‌ ಕೇಸ್‌ನಲ್ಲಿ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್ ಎನ್‌ಕೌಂಟರ್‌‌ಗೆ ಬಲಿ