ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Haveri News: ಚಕ್ಕಡಿ ಸಮೇತ ತುಂಗಾ ಕಾಲುವೆಗೆ ಬಿದ್ದು ಜೋಡೆತ್ತು ದುರ್ಮರಣ‌

Tunga canal: ಹಾವೇರಿ ತಾಲೂಕಿನ ಕುರಗುಂದ ಗ್ರಾಮದಲ್ಲಿ ಘಟನೆ ನಡೆದಿದೆ. ತುಂಗಾ ಮೇಲ್ದಂಡೆ ಕಾಲುವೆ ದಂಡೆಗಳ‌ ಮೇಲೆ ಹೊಲಗಳಿಗೆ ಹೋಗಲು ರೈತರಿಗೆ ರಸ್ತೆ ಕಲ್ಪಿಸಿದ್ದು, ಕಾಲುವೆ ಏರಿಗಳಿಗೆ ತಡೆ ಬೇಲಿ ನಿರ್ಮಿಸದಿರುವುದೇ ಈ ದುರಂತಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಚಕ್ಕಡಿ ಸಮೇತ ತುಂಗಾ ಕಾಲುವೆಗೆ ಬಿದ್ದು ಜೋಡೆತ್ತು ದುರ್ಮರಣ‌

-

Prabhakara R Prabhakara R Sep 5, 2025 8:05 PM

ಹಾವೇರಿ: ತಾಲೂಕಿನ ಕುರಗುಂದ ಗ್ರಾಮದ ರೈತ ಭರಮಪ್ಪ ಕರಿಯಪ್ಪ ಕೆಂಚಣ್ಣನವರ ಅವರ ಜೋಡೆತ್ತುಗಳು ಶುಕ್ರವಾರ ಬೆಳಗಿನ ಜಾವ ಚಕ್ಕಡಿ ಹೂಡಿಕೊಂಡು ತುಂಗಾ ಮೇಲ್ದಂಡೆ ಕಾಲುವೆ ಏರಿಯ‌ ಮೇಲೆ ಹೊಲಕ್ಕೆ ಸಾಗುವ ವೇಳೆ ಎತ್ತುಗಳು ಬೆದರಿ ಚಕ್ಕಡಿ ಸಮೇತ ಕಾಲುವೆಗೆ ಬಿದ್ದು ದುರ್ಮರಣ‌ ಹೊಂದಿವೆ.

ಭರಮಪ್ಪ ಅಳಿಯ ಬೀರಪ್ಪ ಅವರು ಹೊಲದ ಕೆಲಸಕ್ಕಾಗಿ ಚಕ್ಕಡಿ ಕಟ್ಟಿಕೊಂಡು ಸಾಗುವ ಸಮಯದಲ್ಲಿ ಈ ಹೃದಯ ವಿದ್ರಾವಕ ಘಟನೆ ಸಂಭವಿದೆ. ಇವು ಸುಮಾರು 1.5 ಲಕ್ಷ ರೂಪಾಯಿ ಬೆಲೆಬಾಳುವ ಎತ್ತುಗಳೆಂದು ತಿಳಿದು ಬಂದಿದ್ದು, ಚಕ್ಕಡಿ ನಡೆಸುತ್ತಿದ್ದ ಬೀರಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತುಂಗಾ ಮೇಲ್ದಂಡೆ ಕಾಲುವೆ ದಂಡೆಗಳ‌ ಮೇಲೆ ಹೊಲಗಳಿಗೆ ಹೋಗಲು ರೈತರಿಗೆ ರಸ್ತೆ ಕಲ್ಪಿಸಿದ್ದು, ಕಾಲುವೆ ಏರಿಗಳಿಗೆ ತಡೆ ಬೇಲಿ ನಿರ್ಮಿಸದಿರುವುದೇ ಈ ದುರಂತಕ್ಕೆ ಕಾರಣವಾಗಿದೆ. ಸರಕಾರ ತಕ್ಷಣವೇ ರೈತನ‌ ಎತ್ತುಗಳಿಗೆ ಮಾರುಕಟ್ಟೆ ಬೆಲೆ ಪರಿಹಾರ ನೀಡಬೇಕು. ಮುಂದೆ ಇಂತಹ ಅನಾಹುತಗಳು ನಡೆಯದಂತೆ ದಡೆ ಬೇಲಿ ಹಾಕಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಆಗ್ರಹ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ | Illicit relationship: ಮೂರು ಮಕ್ಕಳು, ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಪರಾರಿ!

ಎಡಮುರಿ ಫಾಲ್ಸ್‌ನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಎಡಮುರಿ ಜಲಪಾತದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ (Yedamuri Falls) ಶುಕ್ರವಾರ ನಡೆದಿದೆ. ಪ್ರವಾಸಿ ತಾಣವಾಗಿರುವ ಎಡಮುರಿ ಫಾಲ್ಸ್‌ ನೋಡಲು ಬೆಂಗಳೂರಿನ ಡಾನ್ ಬಾಸ್ಕೋ ಪದವಿ ಕಾಲೇಜಿನ ಇಬ್ಬರು ತೆರಳಿದ್ದರು. ಕಾಲೇಜಿಗೆ ರಜೆ ಇದ್ದ ಕಾರಣ ಸ್ನೇಹಿತರೊಂದಿಗೆ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದಾಗ ದುರ್ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಗನ್ನು ಶ್ಯಾಮ್(20) ವೆಂಕಟೇಶ್ (20) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿದ ವಿಷಯ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ, ಮೃಹದೇಹಗಳನ್ನು ಹೊರ ತೆಗೆದಿದ್ದಾರೆ.

ಎಮ್ಮೆ ತೊಳೆಯಲು ಹೋಗಿ ಬಾವಿಯಲ್ಲಿ ಮುಳುಗಿ ದಂಪತಿ ಸಾವು

ಮಂಡ್ಯ : ಮಂಡ್ಯದಲ್ಲಿ (Mandya news) ದಾರುಣ ಘಟನೆ ನಡೆದಿದ್ದು, ಎಮ್ಮೆ ತೊಳೆಯುವ ವೇಳೆ ಬಾವಿಗೆ ಬಿದ್ದು (drowned) ದಂಪತಿ ಸಾವನ್ನಪ್ಪಿರುವ ಘಟನೆ ಅರೆಬೊಪ್ಪನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಕೆ.ಆರ್‌ಪೇಟೆ ತಾಲೂಕಿನ ಅರೆಬೊಪ್ಪನಹಳ್ಳಿ ಗ್ರಾಮದಲ್ಲಿ ಎಮ್ಮೆ ತೊಳೆಯಲು ಹೋದಾಗ ವಸಂತಮ್ಮ(65) ಹಾಗು ಕಾಳೇಗೌಡ (70) ಎಂಬ ದಂಪತಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಎಮ್ಮೆ ತೊಳೆಯಲು ಹೋಗಿದ್ದ ವೇಳೆ ತೆರೆದ ಬಾವಿಗೆ ಬಿದ್ದ ಪತ್ನಿಯನ್ನು ರಕ್ಷಿಸಲು ಹೋದ ಪತಿ ಕೂಡ ಸಾವನ್ನಪ್ಪಿದ್ದಾರೆ. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ | Harassment: ಆತನ ಹೆಸರು ವಂದೇ ಮಾತರಂ, ಮಾಡಿದ್ದು ಇಂಥ ಹಲ್ಕಾ ಕೆಲಸ!