ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಮದ್ವೆ ವಿಚಾರ ಮಾತಾಡಿದೇ ತಪ್ಪಾಯಿತಾ..? ಪ್ರೇಯಸಿಯನ್ನು ನೋಡಲು ಬಂದವ ಹೆಣವಾದ..!

ಜಾರ್ಖಂಡ್‌ನ ಜಿಲ್ಲೆಯಲ್ಲಿ ಇಬ್ಬರು ಪ್ರೇಮಿಗಳ ನಡುವೆ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಪ್ರೇಯಸಿಯನ್ನು ನೋಡಲು ಬಂದು ಯುವಕ ದುರಂತ ಅಂತ್ಯ ಕಂಡಿದ್ದಾನೆ. ಮದುವೆ ವಿಷಯವಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ ಎನ್ನಲಾಗಿದ್ದು, ಈ ವೇಳೆ ಪ್ರಿಯತಮೆ ತನ್ನ ಪ್ರಿಯಕರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ದುರಾದೃಷ್ಟವಶಾತ್ ಹಲ್ಲೆಗೊಳಗಾದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಪ್ರೇಮಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ..!

-

Profile Sushmitha Jain Sep 20, 2025 11:09 AM

ಜಾರ್ಖಂಡ್‌: ಪ್ರೇಮಿಗಳ(Lovers) ನಡುವಿನ ಜಗಳ(Dispute) ಕೊಲೆಯಲ್ಲಿ(Murder) ಅಂತ್ಯವಾಗಿರುವ ಘಟನೆ ಜಾರ್ಖಂಡ್‌ನ (Jharkhand) ಚತ್ರಾ ಜಿಲ್ಲೆಯ ಲಾಮ್ಟಾ ಗ್ರಾಮದಲ್ಲಿ ನಡೆದಿದ್ದು, ಪ್ರೀತಿಸಿದವನನ್ನೇ ಕೊಲೆ ಮಾಡಿ ಪ್ರಿಯತಮೆ ಕಂಬಿ ಎಣಿಸುತ್ತಿದ್ದಾಳೆ. ಲೇಟರ್ ಜಿಲ್ಲೆಯ ಸಸಾಂಗ್ ಗ್ರಾಮದ ಮುಂತಜೀರ್ (34)ಕೊಲೆಯಾದ ಯುವಕನಾಗಿದ್ದು, ಲಾಮ್ಟಾ ಮೂಲದ ಶಬ್ಬು ಪ್ರವೀನ್ ಅಲಿಯಾಸ್ ನೂರ್ಜಹಾನ್ (24) ಕೊಲೆ ಮಾಡಿದ ಆರೋಪಿಯಾಗಿದ್ದಾಳೆ. ಇಬ್ಬರಿಗೂ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಈ ಹಿನ್ನಲೆಯಲ್ಲಿಯೇ ಮುಂತಜೀರ್ ನೂರ್ಜಹಾನ್ ಭೇಟಿಯಾಗಲು ಅಗಾಗ ಗ್ರಾಮಕ್ಕೆ ಲಾಮ್ಟಾ ಬಂದು ಹೋಗಿತ್ತಿದ್ದ. ಈ ಬಾರಿ ಪ್ರೇಯಸಿಯನ್ನು ಕಾಣುವುದರ ಜೊತೆ ಮದುವೆಯ ವಿಷಯ ಮಾತಾನಾಡಲು ಬಂದವ ಮಾತ್ರ ದುರಂತ ಹತ್ಯೆ ಕಂಡಿದ್ದಾನೆ.

ಹೌದು ಮದುವೆಯ ಕನಸನ್ನು ಹೊತ್ತು ನೂರ್ಜಹಾನ್‌ರನ್ನು ಭೇಟಿಯಾಗಲು ಲಾಮ್ಟಾ ಗ್ರಾಮಕ್ಕೆ ಮುಂತಜೀರ್ಬಂದಿದ್ದ. ಈ ವೇಳೆ ಮದುವೆ ವಿಚಾರವಾಗಿ ಇಬ್ಬರ ನಡುವೆ ಮಾತುಕತೆ ನಡೆದಿದೆ. ಮುಂತಜೀರ್ ಮದುವೆಯಾಗುವಂತೆ ನೂರ್ಜಹಾನ್ ಅನ್ನು ಪೀಡಿಸಿದ್ದು, ಮಾತು ಮಾತು ಬೆಳೆದು ಜಗಳ ತಾರಕ್ಕೇರಿದೆ. ಕೋಪದ ಕೈಗೆ ಬುದ್ಧಿಕೊಟ್ಟ ನೂರ್ಜಹಾನ್ ಚಾಕುವಿನಿಂದ ಮುಂತಜೀರ್ ಮೇಲೆ ಹಲ್ಲೆ ಮಾಡಿದ್ದಾಳೆ.

ಈ ಸುದ್ದಿಯನ್ನೂ ಓದಿ: Viral Video: ಕುಡಿದ ಮತ್ತಿನಲ್ಲಿ ತನಗೆ ಕಚ್ಚಿದ ಹಾವಿನ ತಲೆ ಕಚ್ಚಿ ಪಕ್ಕದಲ್ಲೇ ಮಲಗಿದ ವ್ಯಕ್ತಿ!

ರಕ್ತದ ಮಡಿಲಿನಲ್ಲಿ ಬಿದ್ದು ಒದಾಡುತ್ತಿದ್ದ ಮುಂತಜೀರ್ ಅನ್ನು ತಕ್ಷಣವೇ ಅಲ್ಲಿನ ಚತ್ರಾ ಸದರ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದ್ರೆ ಆತನ ಸ್ಥಿತಿ ಗಂಭೀರವಾಗಿದ್ದ ಕಾರಣ ವೈದರು ಹೆಚ್ಚಿನ ಚಿಕಿತ್ಸೆಗೆಂದು ರಾಂಚಿಯ RIMS ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಹೇಳಿದ್ದು, ಅಲ್ಲಿಂದ ಹೊರಟು ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿಯೇ ದುರಾದೃಷ್ಟವಶಾತ್ ಮುಂತಜೀರ್ ಸಾವನ್ನಪ್ಪಿದ್ದಾನೆ.

ಘಟನೆ ಸಂಬಂಧ ಲಾಮ್ಟಾ ಗ್ರಾಮದ ಲವಲಾಂಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ದಾಖಲಾಗಿದ್ದು, ಮುಂತಜೀರ್ ಸಾಯುವ ಮುನ್ನ ತನ್ನ ಈ ಸ್ಥಿತಿಗೆ ನೂರ್ಜಹಾನ್ ಕಾರಣವೆಂದು ಹೇಳಿದ್ದಾನೆ. ಈ ಹಿನ್ನಲೆ ಲವಲಾಂಗ್ ಪೊಲೀಸರು ನೂರ್ಜಹಾನ್ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಹತ್ಯೆಗೆ ಬಳಸಲಾದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಸದ್ಯ ನೂರ್ಜಹಾನ್ ಅನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲ್ಪಟ್ಟು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಲವಲಾಂಗ್ ಪೊಲೀಸ್ ಠಾಣಾಧಿಕಾರಿ ಪ್ರಸಾಂತ್ ಮಿಶ್ರಾ ತಿಳಿಸಿದ್ದಾರೆ.