ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Disha Patani: ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಅಪ್ರಾಪ್ತರ ಬಂಧನ

ಉತ್ತರಪ್ರದೇಶದ ಬರೇಲಿಯಲ್ಲಿರುವ ಬಾಲಿವುಡ್ ನಟಿ ದಿಶಾ ಪಟಾನಿ ಮನೆ ಮೇಲೆ ಸೆಪ್ಟೆಂಬರ್ 12 ರಂದು ನಡೆದ ದಾಳಿಗೆ ಸಂಬಂಧಿಸಿ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ. ಈ ಇಬ್ಬರು ಬಾಲಾಪರಾಧಿಗಳಾಗಿದ್ದು, ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನುಳಿದ ಇಬ್ಬರು ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.

ದಿಶಾ ಪಟಾನಿ ಮನೆ ಮೇಲೆ ದಾಳಿ: ಮತ್ತೆ ಇಬ್ಬರ ಬಂಧನ

-

ನವದೆಹಲಿ: ಬಾಲಿವುಡ್ ನಟಿ (Bollywood actress) ದಿಶಾ ಪಟಾನಿ (Disha Patani) ಅವರ ಉತ್ತರಪ್ರದೇಶದ (Uttar Pradesh) ಬರೇಲಿಯಲ್ಲಿರುವ (Bareilly) ಮನೆ ಮೇಲೆ ದಾಳಿ ನಡೆಸಿದ ಇಬ್ಬರು ಬಾಲಾಪರಾಧಿಗಳನ್ನು ದೆಹಲಿ ಪೊಲೀಸರು (Delhi Polce) ಬಂಧಿಸಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಎನ್ ಕೌಂಟರ್ ಮಾಡಲಾಗಿತ್ತು. ದೆಹಲಿ ಪೊಲೀಸ್ ವಿಶೇಷ ಘಟಕ, ಹರಿಯಾಣ ಮತ್ತು ಉತ್ತರ ಪ್ರದೇಶ ಎಸ್‌ಟಿಎಫ್ ಜೊತೆಗೆ ಬುಧವಾರ ಗಾಜಿಯಾಬಾದ್‌ನ ಟ್ರೋನಿಕಾ ನಗರದಲ್ಲಿ ಇಬ್ಬರು ಶೂಟರ್‌ಗಳು ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದರು.

ಇದೀಗ ನಟಿಯ ಬರೇಲಿ ನಿವಾಸದ ದಾಳಿಗೆ ಸಂಬಂಧಿಸಿ ದೆಹಲಿಯ ಗುಪ್ತಚರ ತಂಡವು ಇಬ್ಬರು ಅಪ್ರಾಪ್ತ ಶೂಟರ್‌ಗಳನ್ನು ಬಂಧಿಸಿದೆ. ಈ ಇಬ್ಬರ ಬಂಧನಕ್ಕೂ ಬಹುಮಾನ ಘೋಷಿಸಲಾಗಿತ್ತು. ಪೆಟ್ರೋಲ್ ಪಂಪ್‌ನಲ್ಲಿ ಇಂಧನ ತುಂಬಿಸುವಾಗ ಪೊಲೀಸರು ಸಿಸಿಟಿವಿ ದೃಶ್ಯಗಳಲ್ಲಿ ಅವರನ್ನು ಪತ್ತೆ ಮಾಡಿದ್ದು, ಬಳಿಕ ಬಂಧಿಸಲಾಗಿದೆ. ಇಬ್ಬರನ್ನು ಪೊಲೀಸರು ಪ್ರಸ್ತುತ ವಿಚಾರಣೆ ನಡೆಸುತ್ತಿದ್ದಾರೆ.

ಗೋಲ್ಡಿ ಬ್ರಾರ್ ಗ್ಯಾಂಗ್‌ನ ಒಟ್ಟು ನಾಲ್ವರು ಶೂಟರ್‌ಗಳು ದಿಶಾ ಪಟಾನಿಯ ಮನೆಗೆ ಗುಂಡು ಹಾರಿಸಲು ಹೋಗಿದ್ದರು. ಇವರಲ್ಲಿ ಇಬ್ಬರು ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದರೆ ಇದೀಗ ಇಬ್ಬರ ಬಂಧನವಾಗಿದೆ.

ಇದನ್ನೂ ಓದಿ: Viral Video: ಎರಡು ಪಾನಿಪುರಿ ಕಮ್ಮಿ ಕೊಟ್ಟಿದ್ದಕ್ಕೆ ರಸ್ತೆಯನ್ನೇ ಬ್ಲಾಕ್‌ ಮಾಡಿದ್ಲು ಈ ಮಹಿಳೆ! ವಿಡಿಯೋ ನೋಡಿ

ಸೆಪ್ಟೆಂಬರ್ 12 ರಂದು ಬೆಳಗಿನ ಜಾವ 3.45 ರ ಸುಮಾರಿಗೆ ಬರೇಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಪಟಾನಿಯ ಪೂರ್ವಜರ ಮನೆಯ ಮೇಲೆ ಗುಂಡು ಹಾರಿಸಲಾಗಿತ್ತು. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಈ ದಾಳಿಯ ಹೊಣೆಯನ್ನು ಗೋಲ್ಡಿ ಬ್ರಾರ್-ರೋಹಿತ್ ಗೋದಾರ ಗ್ಯಾಂಗ್‌ನ ಸದಸ್ಯರು ಒಪ್ಪಿಕೊಂಡಿದ್ದರು. ದಾಳಿ ನಡೆಸಿದ ಆರೋಪಿಗಳಲ್ಲಿ ಹರಿಯಾಣ ನಿವಾಸಿಗಳಾದ ರವೀಂದ ಅಲಿಯಾಸ್ ಕಲ್ಲು ಮತ್ತು ಅರುಣ್ ಎಂಬವರನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದರು.