ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chinnu Pappu: ಕಾಸರಗೋಡಿನ ಇನ್‌ಫ್ಲುಯೆನ್ಸರ್‌ ಚಿನ್ನು ಪಾಪು ಆತ್ಮಹತ್ಯೆಯ ಬಳಿಕ ಪ್ರಿಯಕರನೂ ಸಾವಿಗೆ ಶರಣು; ಕಾರಣ ನಿಗೂಢ

Kasaragod News: ಕರ್ನಾಟಕ- ಕೇರಳ ಗಡಿಭಾಗವಾದ ಕಾಸರಗೋಡಿನ ಆದೂರು ಮೂಲದ ನಿವಾಸಿ, ಇನ್‌ಫ್ಲುಯೆನ್ಸರ್‌ ಚಿನ್ನ ಪಾಪು ಆಲಿಯಾಸ್‌ ರೇಷ್ಮಾ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳ ನಂತರ ಇದೀಗ ಅವರ ಪ್ರಿಯಕರನೂ ಸಾವಿಗೆ ಶರಣಾಗಿದ್ದಾರೆ. ಮೃತನನ್ನು ಸಂದೇಶ್‌ ಕೆ. (29) ಎಂದು ಗುರುತಿಸಲಾಗಿದೆ.

ಸಂದೇಶ್‌ ಮತ್ತು ರೇಷ್ಮಾ (ಸಂಗ್ರಹ ಚಿತ್ರ)

ಕಾಸರಗೋಡು, ಫೆ. 15: ಕರ್ನಾಟಕ- ಕೇರಳ ಗಡಿಭಾಗವಾದ ಕಾಸರಗೋಡಿನ ಆದೂರು ಮೂಲದ ನಿವಾಸಿ, ಇನ್‌ಫ್ಲುಯೆನ್ಸರ್‌ ಚಿನ್ನು ಪಾಪು ಆಲಿಯಾಸ್‌ ರೇಷ್ಮಾ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳ ನಂತರ ಇದೀಗ ಅವರ ಪ್ರಿಯಕರನೂ ಸಾವಿಗೆ ಶರಣಾಗಿದ್ದಾರೆ (Kasaragod News). ರೇಷ್ಮಾ ಅವರ ಆಪ್ತ ಸ್ನೇಹಿತ ಸಂದೇಶ್‌ ಕೆ. (29) ಮೃತದೇಹ ಕಾಸರಗೋಡಿನ ಮನ್ನಿಪಾಡಿಯಲ್ಲಿರುವ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, (Crime News) ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೂಲತಃ ಮುಳ್ಳೇರಿಯ ಸಮೀಪದ ಆದೂರಿನ ಆಲಂತ್ತಡ್ಕ ಮೂಲದ ರೇಷ್ಮಾ ಕಾಸರಗೋಡಿನಲ್ಲಿ ಬಾಡಿಗೆ ಮನೆಯಲ್ಲಿ ಸಂದೇಶ್‌ ಜತೆ ಕೆಲವು ಸಮಯದಿಂದ ವಾಸವಾಗಿದ್ದರು. ರೇಷ್ಮಾ ಅವರಿಗೆ 24 ವರ್ಷ ವಯಸ್ಸಾಗಿತ್ತು. ಸೋಶಿಯಲ್‌ ಮೀಡಿಯಾದಲ್ಲಿ ಅವರು 2 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಹೊಂದಿದ್ದರು. ಫೆಬ್ರವರಿ 9ರಂದು ರೇಷ್ಮಾ ಕಾಸರಗೋಡಿನ ತಮ್ಮ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.

ಚಿನ್ನ ಪಾಪು ಅವರ ವಿಡಿಯೊ:



ರೇಷ್ಮಾ ಇತ್ತೀಚೆಗೆ ವಿಚ್ಛೇದನ ಪಡೆದುಕೊಂಡಿದ್ದರು. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆಯ ಭಾಗವಾಗಿ ಪೊಲೀಸರು ಸಂತೋಷ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು. ಅದರ ಬೆನ್ನಲ್ಲೇ ಇದೀಗ ಸಂದೇಶ್‌ ಕೂಡ ಈಗ ಆತ್ಮಹತ್ಯೆಗೆ ಶರಣಾಗಿದ್ದು, ವಿಚಾರಣೆ ಆರಂಭವಾಗಿದೆ. ʼʼಫೆಬ್ರವರಿ 15ರಂದು ಕಾಸರಗೋಡಿನ ಮನ್ನಿಪಾಡಿಯಲ್ಲಿರುವ ತಮ್ಮ ನಿವಾಸದಲ್ಲಿ ಸಂತೋಷ್‌ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆʼʼ ಎಂದು ಅದಿಕಾರಿಯೊಬ್ಬರು ತಿಳಿಸಿದ್ದಾರೆ. ರೇಷ್ಮಾ ಮತ್ತು ಸಂದೇಶ್‌ ಮಧ್ಯೆ ಯಾವ ರೀತಿಯ ಸಂಬಂಧವಿತ್ತು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

2 ಲಕ್ಷ ಫಾಲೋವರ್ಸ್‌ ಹೊಂದಿದ್ದ ಇನ್‌ಫ್ಲುಯೆನ್ಸರ್‌ ರೇಶ್ಮಾ ಆತ್ಮಹತ್ಯೆ

ಪತಿಯಿಂದ ದೂರವಾಗಿದ್ದ ರೇಷ್ಮಾ

ರೇಷ್ಮಾ ಅವರಿಗೆ 5 ವರ್ಷದ ಹಿಂದೆಯೇ ಮದುವೆಯಾಗಿತ್ತು. ಅವರಿಗೆ ಓರ್ವ ಮಗನೂ ಇದ್ದಾನೆ. ಪತಿಯಿಂದ ದೂರವಾದ ರೇಷ್ಮಾ ಕಾಸರಗೋಡಿನ ಉಳಿಯತ್ತಡ್ಕ ಬಾಡಿಗೆ ಮನೆಯಲ್ಲಿ ಸಂತೋಷ್‌ ಜತೆಗೆ ವಾಸಿಸುತ್ತಿದ್ದರು. ರೇಷ್ಮಾ ಸಾವಿನ ಬಳಿಕ ಸಂದೇಶ್‌ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ವಿಡಿಯೊ ಶೂಟಿಂಗ್‌, ಪ್ರಮೋಷನ್‌ ಮತ್ತಿತರ ಚಟುವಟಿಕೆಗಳಿಗಾಗಿ ರೇಷ್ಮಾ ಮಗನನ್ನು ತವರು ಮನೆಯಲ್ಲಿ ಇರಿಸಿ ಕಾಸರಗೋಡಿನಲ್ಲಿ ವಾಸವಾಗಿದ್ದರು. ಮಲಯಾಳಂ ಮತ್ತು ತುಳುವಿನಲ್ಲಿ ವಿಡಿಯೊ ಮಾಡುತ್ತಿದ್ದ ರೇಷ್ಮಾ ತಮ್ಮ ಮಾತಿನ ಶೈಲಿಯಿಂದಲೇ ಗಮನ ಸೆಳೆದಿದ್ದರು.

ನಿಗೂಢತೆ ಇಲ್ಲ

ಆರಂಭದಲ್ಲಿ ರೇಷ್ಮಾ ಸಾವಿನ ಹಿಂದೆ ನಿಗೂಢತೆ ಇದೆ, ಇದು ಕೊಲೆ ಆಗಿರುವ ಸಾಧ್ಯತೆ ಇದೆ ಎಂಬೆಲ್ಲ ವದಂತಿ ಹರಡಿತ್ತು. ಆದರೆ ಇದೀಗ ಪೋಸ್ಟ್‌ ಮಾರ್ಟಂ ರಿಪೋರ್ಟ್‌ ಬಂದಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ರೇಷ್ಮಾ ಮೃತದೇಹ ಪತ್ತೆಯಾದ ಬೆನ್ನಲ್ಲೇ ಸಂದೇಶ್‌ನನ್ನು ಪೊಲೀಸರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಅದಾಗ್ಯೂ ಸಂಗಾತಿಯ ಸಾವು ಅವರ ಮನಸ್ಸಿಗೆ ಬಹಳಷ್ಟು ನೋವು ನೀಡಿತ್ತು. ಇದು ಆತ್ಮಹತ್ಯೆಗೆ ಕಾರಣವಾಗಿವ ಸಾಧ್ಯತೆ ಇದೆ ಎನ್ನಲಾಗಿದೆ.

ಅನುಮಾನ ಕಂಡುಬಂದಿಲ್ಲ

ಪತಿಯಿಂದ ದೂರವಾರ ರೇಷ್ಮಾ ಮತ್ತು ಸಂದೇಶ್‌ 1 ವರ್ಷದಿಂದ ಜತೆಗೆ ವಾಸವಾಗಿದ್ದರು. ಇತ್ತೀಚೆಗೆ ರೇಷ್ಮಾ ಸ್ವಭಾವದಲ್ಲಿ ಯಾವುದೇ ಅನುಮಾನ ಕಂಡು ಬಂದಿರಲಿಲ್ಲ ಎಂದು ಮನೆಯವರು ಮತ್ತು ಸ್ನೇಹಿತರು ತಿಳಿಸಿದ್ದಾರೆ.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author