ಬೆಂಗಳೂರು, ಮಾರ್ಚ್ 09: ಸಿನಿಮಾ ಸ್ಟೈಲ್ನಲ್ಲಿ ಕಿಡ್ನ್ಯಾಪ್ (kidnap) ಆಗಿದ್ದ ರಿಯಲ್ ಎಸ್ಟೇಟ್ (real agent) ಏಜೆಂಟ್ ಗೋಪಾಲ್ ಶವವಾಗಿ ಪತ್ತೆಯಾಗಿದ್ದಾರೆ. ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದ್ದರೂ ಕಿಡ್ನ್ಯಾಪರ್ಸ್ ಸುಳಿವು ಸಿಕ್ಕಿರಲಿಲ್ಲ. ಇದೀಗ ತಮಿಳುನಾಡಿನ ಡೆಂಕಣಿಕೋಟೆ ಬಳಿ ಗೋಪಾಲ್ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರೋಶ, ಆಕ್ರಂದನ ಮುಗಿಲುಮುಟ್ಟಿದೆ. ಈ ಕುರಿತು ಆನೇಕಲ್ ಠಾಣೆಗೆ ಗೋಪಾಲ್ ಪತ್ನಿ ದೂರು (Murder Case) ಕೊಟ್ಟಿದ್ದಾರೆ. ಆರೋಪಿಗಳಾದ ಮೋಹನ್ ಬಾಬು, ಹರೀಶ್ ಕಿರಣ್ ವಿರುದ್ಧ ದೂರು ಬಂದಿದ್ದು ಇದೀಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
9 ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ 7 ತಂಡ ರಚನೆ ಮಾಡಿ ಪೊಲೀಸರು ಹುಡುಕಾಟ ನಡೆಸಿದ್ದರು. ಗೋಪಾಲ್‌ರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡಿನ ಡೆಂಕಣಿಕೋಟೆ ಬಳಿ ಶವ ಸಿಕ್ಕಿದ್ದು, ಮೋಹನ್ ಬಾಬು ಎಂಬಾತನೇ ಗೋಪಾಲನ ಕೊಲೆಗೆ ಸುಪಾರಿ ಕೊಟ್ಟಿದ್ದ ಎನ್ನುವ ಆರೋಪ ಸಹ ಕೇಳಿ ಬಂದಿದೆ. ನಿನ್ನೆ ಗೋಪಾಲನ ಕಾರು ಅಡ್ಡಗಟ್ಟಿ ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿದ್ದರು. ಅಪಹರಿಸಿ ಕಾರಿನಲ್ಲಿ ಕರೆದೊಯ್ದು ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ ಎನ್ನಲಾಗುತ್ತಿದೆ.
ಗೋಪಾಲನ ಕೊಲೆ ವಿಚಾರ ಗೊತ್ತಾಗ್ತಿದ್ದಂತೆ ಹೊನ್ನ ಕಳಶಾಪುರ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ರಿಯಲ್ ಎಸ್ಟೇಟ್ ಏಜೆಂಟ್ ಮೋಹನ್ ಬಾಬು ಎಂಬಾತನೇ ಕೊಲೆ ಮಾಡಿಸಿದ್ದಾನೆಂದು ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ. ಮೃತ ಗೋಪಾಲ್ನ ಸಂಬಂಧಿಕರು ಬಾಬು ಮನೆಗೆ ಮುತ್ತಿಗೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳಾ ದಿನಾಚರಣೆಯಂದೇ ಘೋರ ದುರಂತ: ನೀರಿನ ಟ್ಯಾಂಕ್‌ನಲ್ಲಿ ಮೂವರು ಬಾಲಕಿಯರ ಶವ ಪತ್ತೆ; ತಂದೆಯೇ ಕೊಲೆಗಾರ?
ನಿನ್ನೆ ಸಂಜೆ ಕರ್ಪೂರು ಬಳಿ ಬರ್ತಿದ್ದ ಗೋಪಾಲನ ಕಾರಿಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆಸಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಕಿಡ್ನಾಪ್ ಮಾಡಿದ್ದರು. ರಿಯಲ್ ಎಸ್ಟೇಟ್ ಏಜೆಂಟ್‌ಗಳಾಗಿದ್ದ ಗೋಪಾಲ್ ಹಾಗೂ ಮೋಹನ್ ಬಾಬು ನಡುವೆ ಕೆಲ ವಿಚಾರಕ್ಕೆ ವೈಷಮ್ಯವಿತ್ತು. ತನಗಿಂತ ಹೆಚ್ಚು ಹಣ ಗಳಿಸುತ್ತಿದ್ದಾನೆ ಎಂದು ಮೋಹನ್ ಬಾಬುಗೆ ಹೊಟ್ಟೆ ಕಿಚ್ಚಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಗೋಪಾಲ ಮೊದಲು ಮೋಹನ್ ಬಾಬು ಬಳಿ ಕೆಲಸ ಮಾಡುತ್ತಿದ್ದನಂತೆ. ಬಳಿಕ ಕೆಲ ವರ್ಷಗಳ ಹಿಂದೆ ಮೋಹನ್ ಬಾಬು ಬಳಿ ಕೆಲಸ ಬಿಟ್ಟು ತಾನೇ ನೇರವಾಗಿ ವ್ಯವಹಾರ ಮಾಡಲು ಶುರು ಮಾಡಿದ್ದ ಎಂದು ತಿಳಿದು ಬಂದಿದೆ.
ಅರ್ಥಿಕವಾಗಿ ಚೆನ್ನಾಗಿ ಬೆಳೆಯುತ್ತಿದ್ದ ಗೋಪಾಲ್ ಕಂಡು ಮೋಹನ್ ಬಾಬುಗೆ ದ್ವೇಷ ಮೂಡಿತ್ತಂತೆ. ಇದೇ ವಿಚಾರಕ್ಕೆ ಮೋಹನ್ ಬಾಬುವನ್ನ ಕಿಡ್ನಾಪ್ ಮಾಡಿಸಿ ಕೊಲೆ ಮಾಡಿದ್ದಾರೆ ಎಂದು ಮೃತ ಗೋಪಾಲ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
Assault Case: ಖಮೇನಿ ಹತ್ಯೆ ಕುರಿತು ಸ್ಟೋರಿ ಹಾಕಿದ ಹಿಂದೂ ಯುವಕನ ಮೇಲೆ ಹಲ್ಲೆ