ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಅಬ್ಬಾ...ಇದೆಂಥಾ ಕ್ರೌರ್ಯ! ಬರ್ಬರವಾಗಿ ಹೊಟ್ಟೆಗೆ ಚುಚ್ಚಿ, ಯವಕನ ಬೆರಳುಗಳಿಗೆ ಕತ್ತರಿ

UP Shocker: ಕ್ಷುಲಕ ಕಾರಣಕ್ಕೆ ವಿದ್ಯಾರ್ಥಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ಉತ್ತರ ಪ್ರದೇಶದ ಕಾನ್ಪೂರ್‌ನಲ್ಲಿ ಈ ದುಷ್ಕೃತ್ಯ ನಡೆದಿದೆ. 22 ವರ್ಷದ ಅಭಿಜಿತ್ ಸಿಂಗ್ ಚಂಡೇಲ್ ಹಲ್ಲೆಗೊಳಗಾದ ಯುವಕನಾಗಿದ್ದು, ಈತ ಕಾನ್ಪುರ್ ವಿಶ್ವವಿದ್ಯಾಲಯ(Kanpur University)ದಲ್ಲಿ ಮೊದಲ ವರ್ಷದ ಕಾನೂನು ವಿದ್ಯಾರ್ಥಿಯಾಗಿದ್ದಾನೆ. ಆತ ವಿದ್ಯಾಭ್ಯಾಸದೊಟ್ಟಿಗೆ ಮೆಡಿಕಲ್ ಸ್ಟೋರ್ ನಲ್ಲಿ ಪಾರ್ಟ್ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಮಾಧ್ಯಮ ವರದಿಗಳ ಪ್ರಕಾರ, ಔಷಧದ ಬೆಲೆ ಕುರಿತು ಅಂಗಡಿ ಮಾಲೀಕನೊಂದಿಗೆ ನಡೆದ ಗಲಾಟೆಯಲ್ಲಿ ಅಭಿಜಿತ್ ತಲೆಗೆ ಹಲ್ಲೆ ಮಾಡಲಾಗಿದೆ.

ಲಖನೌ: ಔಷಧ ಅಂಗಡಿ ಕೆಲಸಗಾರ ಹಾಗೂ ಕಾನೂನು ವಿದ್ಯಾರ್ಥಿಯ ನಡುವೆ ನಡೆದ ಜಳದಲ್ಲಿ ವಿದ್ಯಾರ್ಥಿಯ ಹೊಟ್ಟೆ ಕೊಯ್ದು, ಎರಡು ಬೆರಳುಗಳನ್ನು ಕತ್ತರಿಸಿರುವ ಭಯಾನಕ ಘಟನೆ ಉತ್ತರ ಪ್ರದೇಶ(Uttar Pradesh)ದ ಕಾನ್ಪೂರ್‌(Kanpur)ನಲ್ಲಿ ನಡೆದಿದೆ. 22 ವರ್ಷದ ಅಭಿಜಿತ್ ಸಿಂಗ್ ಚಂಡೇಲ್(Abhijeet Singh Chandel) ಹಲ್ಲೆಗೊಳಗಾದ ಯುವಕನಾಗಿದ್ದು, ಈತ ಕಾನ್ಪುರ್ ವಿಶ್ವವಿದ್ಯಾಲಯ(Kanpur University)ದಲ್ಲಿ ಮೊದಲ ವರ್ಷದ ಕಾನೂನು ವಿದ್ಯಾರ್ಥಿಯಾಗಿದ್ದಾನೆ. ಮಾಧ್ಯಮ ವರದಿಗಳ ಪ್ರಕಾರ, ಔಷಧದ ಬೆಲೆ ಕುರಿತು ಅಂಗಡಿ ಮಾಲೀಕನೊಂದಿಗೆ ನಡೆದ ಗಲಾಟೆಯಲ್ಲಿ ಅಭಿಜಿತ್ ತಲೆಗೆ ಹಲ್ಲೆ ಮಾಡಲಾಗಿದೆ.

ಮೊದಲು ಔಷಧದ ಬಲೆಯ ಕುರಿತು ವಿದ್ಯಾರ್ಥಿ ಮತ್ತು ಅಂಗಡಿಯ ಕೆಲಸಗಾರ ಅಮರ್ ಸಿಂಗ್ ನಡುವೆ ಜಗಳವಾಗಿದೆ. ಬಳಿಕ ಅಮರ್ ಸಿಂಗ್(Amar Singh) ತನ್ನ ಸಹೋದರ ವಿಜಯ್(Vijay) ಮತ್ತು ಇನ್ನಿಬ್ಬರನ್ನು ಕರೆಸಿಕೊಂಡು ಸ್ಥಳಕ್ಕೆ ಕರೆಸಿ, ನಾಲ್ವರು ಸೇರಿ ವಿದ್ಯಾರ್ಥಿಯ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ್ದಾರೆ. ಬಳಿಕ ವಿದ್ಯಾರ್ಥಿ ರಕ್ತದ ಮಡುವಿನಲ್ಲೇ ನೆಲಕ್ಕೆ ಬಿದ್ದಿದ್ದಾನೆ. ಪೊಲೀಸ್ ಮಾಹಿತಿ ಪ್ರಕಾರ, ಆರೋಪಿಗಳು ಅಭಿಜಿತ್‌ನನ್ನು ಹಿಡಿದು ಹೊಟ್ಟೆ ಮೇಲೆ ಹಲ್ಲೆ ನಡೆಸಿದ್ದಾರೆ, ಬಳಿಕ ಹರಿತವಾದ ಆಯುಧದಿಂದ ಹೊಟ್ಟೆಯನ್ನು ಕೊಯ್ದಿದ್ದಾರೆ. ಗಾಯಗೊಂಡ ವಿದ್ಯಾರ್ಥಿ ಸಹಾಯಕ್ಕಾಗಿ ಮನೆಯತ್ತ ಓಡುತ್ತಿದ್ದಾಗ, ಮತ್ತೆ ಹಿಡಿದು ಅವನ ಕೈನ ಎರಡು ಬೆರಳುಗಳನ್ನು ಕಡಿದುಹಾಕಿದ್ದಾರೆ, ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ: Viral Video: ಹುಲಿಯ ಡೆಡ್ಲಿ ಅಟ್ಯಾಕ್‌! ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು; ಇಲ್ಲಿದೆ ಮೈಜುಮ್ಮೆನ್ನಿಸುವ ವಿಡಿಯೊ

ಸ್ಥಳೀಯರು ಕಿರುಚಾಟ ಕೇಳಿ ಓಡಿಬಂದು ವಿದ್ಯಾರ್ಥಿಯನ್ನು ರಕ್ಷಿಸಿ, ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಾಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಕೆಲದಿನಗಳ ಹಿಂದಷ್ಟೇ ಕಾನ್ಪುರದ ಬಾರಾ ಪ್ರದೇಶದ ಹಾರ್ದೇವ್ ನಗರ(Hardev Nagar)ದಲ್ಲಿ ಇಂತಹದ್ದೇ ಬೆಚ್ಚಿ ಬೀಳಿಸುವ ಘಟನೆ ನಡೆದಿತ್ತು. ಆರು ವರ್ಷದ ಬಾಲಕನನ್ನು ಅಪಹರಿಸಿ ಹತ್ಯೆ ಮಾಡಲಾಗಿತ್ತು.

ಪೊಲೀಸ್ ಮೂಲಗಳ ಪ್ರಕಾರ, "ಆಯುಷ್ ಸೋಂಕರ್-ಮಖನ್ ಸೋಂಕರ್ ಅವರ ಪುತ್ರ ಶನಿವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಮನೆ ಮುಂದೆ ಆಟವಾಡುತ್ತಿದ್ದಾಗ ಕಾಣೆಯಾಗಿದ್ದನು. ಕುಟುಂಬಸ್ಥರು ಹುಡುಕಾಟ ಆರಂಭಿಸಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು, ಬಾಲಕನ ಶವವನ್ನು ಶನಿವಾರ ಪತ್ತೆ ಮಾಡಿ, ಮತ್ತು ಆರೋಪಿಯನ್ನು ಬಂಧಿಸಿದ್ದರು. "ಪ್ರಾಥಮಿಕ ತನಿಖೆಯಲ್ಲಿ , ಕುತ್ತಿಗೆ ಹಿಸುಕಿ ಬಾಲಕನನ್ನು ಕೊಂದಿರುವಂತೆ ತೋರುತ್ತದೆ. ಮರೋಣತ್ತರ ಪರೀಕ್ಷೆಯ ನಂತರ ಬಾಲಕನ ಸಾವಿನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ," ದಕ್ಷಿಣ ವಿಭಾಗದ ಪೊಲೀಸ್ ಉಪ ಆಯುಕ್ತ ದೀಪೇಂದ್ರನಾಥ್ ಚೌಧರಿ ತಿಳಿಸಿದ್ದರು. ವೈಯಕ್ತಿಕ ವೈಮನಸ್ಯ ಮತ್ತು ಮಗುವಿನ ತಾಯಿಯ ಮೇಲಿನ ಕೋಪದಿಂದ ಬಾಲಕನನ್ನು ಹತ್ಯೆ ಮಾಡಿರುವ ಶಂಕೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.