Life Threat: ಪತ್ನಿ, ಮಕ್ಕಳ ಮುಂದೆಯೇ ಸಾಯುತ್ತೀರಿ- ಅಮೆರಿಕದಲ್ಲಿ ಮೇಯರ್ ಅಭ್ಯರ್ಥಿಗೆ ಜೀವ ಬೆದರಿಕೆ
ನ್ಯೂಯಾರ್ಕ್ ನಗರದ ಮೇಯರ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ಅವರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ ಟೆಕ್ಸಾಸ್ ನ ಜೆರೆಮಿ ಫಿಸ್ಟೆಲ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯು ಪತ್ನಿ ಮತ್ತು ಮಕ್ಕಳು ನೀವು ಕೊಲೆಯಾಗುವುದನ್ನು ಅಥವಾ ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಯಿಂದ ಸಾವನ್ನಪ್ಪುವುದನ್ನು ನೋಡುತ್ತಾರೆ ಎಂದು ಬೆದರಿಕೆ ಸಂದೇಶದಲ್ಲಿ ತಿಳಿಸಿದ್ದನು.

-

ನ್ಯೂಯಾರ್ಕ್: ನಿಮ್ಮ ಪತ್ನಿ ಮತ್ತು ಮಕ್ಕಳು ನೀವು ಕೊಲೆಯಾಗುವುದನ್ನು (Murder) ಅಥವಾ ಕ್ಯಾನ್ಸರ್ (Cancer) ನಂತಹ ಭಯಾನಕ ಕಾಯಿಲೆಯಿಂದ ಸಾವನ್ನಪ್ಪುವುದನ್ನು (Life Threat) ನೋಡುತ್ತಾರೆ ಎಂದು ನ್ಯೂಯಾರ್ಕ್ (New York) ನಗರದ ಡೆಮೋಕ್ರಾಟ್ ಮೇಯರ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ (mayoral candidate and Democrat Zohran Mamdani) ಅವರಿಗೆ ಟೆಕ್ಸಾಸ್‌ನ (Texas) ವ್ಯಕ್ತಿಯೊಬ್ಬ ಫೋನ್ ಮತ್ತು ವೆಬ್ ಸೈಟ್ ಮೂಲಕ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಕ್ವೀನ್ಸ್ ಜಿಲ್ಲಾ ವಕೀಲರು (Queens district attorney )ತಿಳಿಸಿದ್ದಾರೆ
ನ್ಯೂಯಾರ್ಕ್ ನಗರದ ಮೇಯರ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ಅವರಿಗೆ ಟೆಕ್ಸಾಸ್ ನ ಜೆರೆಮಿ ಫಿಸ್ಟೆಲ್ ಎಂಬಾತ ಫೋನ್ ಮೂಲಕ ಮತ್ತು ಮಮ್ದಾನಿಯ ಪ್ರಚಾರ ವೆಬ್‌ಸೈಟ್ ಗೆ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಆತನನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಜೆರೆಮಿ ಫಿಸ್ಟೆಲ್ ವಿರುದ್ಧ ದ್ವೇಷದ ಅಪರಾಧ, ಕಿರುಕುಳ ಆರೋಪ ಹೊರಿಸಲಾಗಿದೆ. ಈತ ಜೋಹ್ರಾನ್ ಮಮ್ದಾನಿ ಅವರಿಗೆ ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಜೂನ್ 18 ರಂದು ಮಮ್ದಾನಿಯ ವೆಬ್‌ಸೈಟ್ ಗೆ ಸಂದೇಶ ಕಳುಹಿಸಿದ್ದ ಆರೋಪಿ ಫಿಸ್ಟೆಲ್ ಇದರಲ್ಲಿ ನ್ಯೂಯಾರ್ಕ್ ನಗರದ ಡೆಮೋಕ್ರಾಟ್ ಮೇಯರ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ಅವರು ಕೊಲೆಯಾಗುವುದನ್ನು ಅಥವಾ ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಯಿಂದ ಸಾವನ್ನಪ್ಪುವುದನ್ನು ಅವರ ಪತ್ನಿ ಮತ್ತು ಮಕ್ಕಳು ನೋಡುತ್ತಾರೆ. ಅವರಿಗೆ ಭಯಾನಕ ಸಾವು ಬರಲಿ ಎಂದು ಹಾರೈಸಿದ್ದಾನೆ.
ಐಡಿಎಫ್ ನ ಗುಂಡು ನಿಮ್ಮ ತಲೆಬುರುಡೆಯ ಮೂಲಕ ಹೋಗುವುದನ್ನು ನೋಡಲು ನಾನು ಇಷ್ಟಪಡುತ್ತೇನೆ ಎಂದು ಆರೋಪಿ ಹೇಳಿದ್ದಾನೆ ಎಂದು ನ್ಯಾಯಾಲಯಕ್ಕೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಜೂನ್ 18 ರಂದುಮೊದಲ ಬೆದರಿಕೆ ಧ್ವನಿಮೇಲ್ ಮೂಲಕ ಬಂದಿದ್ದು, ಬಳಿಕ ಎರಡನೇ ಬಾರಿಗೆ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿತ್ತು ಎಂದು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: Basangouda Patil Yatnal: ಸದ್ಯದಲ್ಲೇ ಬಿವೈ ವಿಜಯೇಂದ್ರ ಪದಚ್ಯುತ: ಬಸನಗೌಡ ಯತ್ನಾಳ್
ಫಿಸ್ಟೆಲ್‌ನನ್ನು ಕಳೆದ ವಾರ ಟೆಕ್ಸಾಸ್‌ನಲ್ಲಿ ಬಂಧಿಸಲಾಯಿತು. ಬುಧವಾರ ಕ್ವೀನ್ಸ್‌ಗೆ ಹಸ್ತಾಂತರಿಸಲಾಗಿದೆ, ಆತನಿಗೆ ಗರಿಷ್ಠ 15 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಮೇಯರ್ ಮತ್ತು ಅವರ ಕುಟುಂಬಕ್ಕೆ ರಕ್ಷಣೆ ನೀಡಲು ಕ್ವೀನ್ಸ್ ಜಿಲ್ಲಾ ಅಟಾರ್ನಿ ಮೆಲಿಂಡಾ ಕ್ಯಾಟ್ಜ್ ತಮ್ಮ ಹೇಳಿಕೆಯಲ್ಲಿ ಸೂಚಿಸಿದ್ದಾರೆ.