ಲಂಡನ್: ರೈಲು ಪ್ರಯಾಣಿಕರಿಗೆ ಚಾಕುವಿನಿಂದ (Mass stabbing) ಶನಿವಾರ ರಾತ್ರಿ ಯುಕೆಯಲ್ಲಿ (UK) ನಡೆದಿದೆ. ಸಾಮೂಹಿಕ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಯುಕೆ ಪೊಲೀಸರು ಬಂಧಿಸಿದ್ದಾರೆ. ಲಂಡನ್ ಗೆ (London) ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದ್ದು, ಇದರಿಂದ ರೈಲನ್ನು ಕೇಂಬ್ರಿಡ್ಜ್‌ಶೈರ್‌ನ ಹಂಟಿಂಗ್‌ಡನ್ ನಲ್ಲಿ ನಿಲ್ಲಿಸಲಾಗಿದೆ. ಘಟನೆಯಲ್ಲಿ ಸುಮಾರು ಹತ್ತು ಮಂದಿಗೆ ಚಾಕುವಿನಿಂದ ಇರಿದಿದ್ದು, ಅವರಲ್ಲಿ ಒಂಬತ್ತು ಮಂದಿಗೆ ಮಾರಣಾಂತಿಕ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಯೋತ್ಪಾದನಾ ನಿಗ್ರಹ ಘಟಕಗಳು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿವೆ.
ಘಟನೆಯ ಕುರಿತು ಸಾಮಾಜಿಕ ಮಾಧ್ಯಮವಾದ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಬ್ರಿಟಿಷ್ ಸಾರಿಗೆ ಪೊಲೀಸರು, ಲಂಡನ್ ಗೆ ತೆರಳುತ್ತಿದ್ದ ರೈಲಿನಲ್ಲಿ ಶಂಕಿತ ಇಬ್ಬರು ಸಾಮೂಹಿಕವಾಗಿ ಜನರ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ರೈಲನ್ನು ಕೇಂಬ್ರಿಡ್ಜ್‌ಶೈರ್‌ನ ಪೂರ್ವ ಗ್ರಾಮೀಣ ಪಟ್ಟಣವಾದ ಹಂಟಿಂಗ್‌ಡನ್‌ನಲ್ಲಿ ನಿಲ್ಲಿಸಲಾಯಿತು. ಮಾಹಿತಿ ತಿಳಿದ ತಕ್ಷಣ ಸಶಸ್ತ್ರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಯಾಣಿಕರ ರಕ್ಷಣೆಗೆ ಮುಂದಾದರು.
ಇದನ್ನೂ ಓದಿ: Drown in water: ನಾಲೆ ನೀರಲ್ಲಿ ಕೊಚ್ಚಿ ಹೋದ ನಾಲ್ವರು ಮಕ್ಕಳು; ಮುಂದುವರಿದ ಶೋಧ ಕಾರ್ಯ
ಹಲವಾರು ಮಂದಿಗೆ ಚಾಕುವಿನಿಂದ ಇರಿಯಲಾಗಿದ್ದು, ತೀವ್ರ ಗಾಯಗೊಂಡಿರುವ ಹತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂಬತ್ತು ಮಂದಿಗೆ ಮಾರಣಾಂತಿಕ ಗಾಯಗಳಾಗಿದೆ. ಘಟನೆಯ ಕುರಿತು ಭಯೋತ್ಪಾದನಾ ನಿಗ್ರಹ ಘಟಕಗಳು ತನಿಖೆಯನ್ನು ಪ್ರಾರಂಭಿಸಿವೆ ಎಂದು ಬ್ರಿಟಿಷ್ ಸಾರಿಗೆ ಪೊಲೀಸರು ತಿಳಿಸಿದ್ದಾರೆ.
ಈಶಾನ್ಯ ಭಾಗದ ಡಾನ್‌ಕಾಸ್ಟರ್‌ನಿಂದ ಲಂಡನ್‌ನ ಕಿಂಗ್ಸ್ ಕ್ರಾಸ್ ನಿಲ್ದಾಣಕ್ಕೆ ರೈಲು ಪ್ರಯಾಣಿಸುತ್ತಿತ್ತು. ಈ ರೈಲಿನಲ್ಲಿ ಹೆಚ್ಚಾಗಿ ಪ್ರಯಾಣಿಕರು ಇರುತ್ತಾರೆ. ಪ್ರತ್ಯಕ್ಷದರ್ಶಿಯೊಬ್ಬರು ಚಾಕುವನ್ನು ಹಿಡಿದ ವ್ಯಕ್ತಿಯನ್ನು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿ ಸಂಪೂರ್ಣ ಮಾಹಿತಿಯನ್ನು ನೀಡಿದರು. ಭಯಭೀತರಾದ ಜನರು ಶೌಚಾಲಯಗಳಲ್ಲಿ ಅಡಗಿಕೊಂಡರು. ಎಲ್ಲೆಡೆ ರಕ್ತ ಹರಿಯುತ್ತಿತ್ತು.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಕೀರ್ ಸ್ಟಾರ್ಮರ್, ಈ ಘಟನೆ ಭಯಾನಕ. ತೀವ್ರ ಕಳವಳಕಾರಿ. ಸಂತ್ರಸ್ತರೊಂದಿಗೆ ನಾವಿದ್ದೇವೆ. ಪ್ರತಿಕ್ರಿಯೆಗಾಗಿ ತುರ್ತು ಸೇವೆಗಳಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಪ್ರಧಾನಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆಂತರಿಕ ಸಚಿವೆ ಶಬಾನಾ ಮಹಮೂದ್, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಏನಾಗಿತ್ತು?
ಪೀಟರ್‌ಬರೋ ಪಟ್ಟಣದಿಂದ ಶನಿವಾರ ರೈಲು ಹೊರಟ ಕೆಲವು ಕ್ಷಣಗಳಲ್ಲಿ ಈ ಘಟನೆ ನಡೆದಿದೆ. ಮಾಹಿತಿ ತಿಳಿದ ತಕ್ಷಣ ಸಶಸ್ತ್ರ ಪೊಲೀಸರು ಸ್ಥಳಕ್ಕೆ ಧಾವಿಸಿ ಎಚ್ಚರಿಕೆಯನ್ನು ನೀಡಲಾಯಿತು. ಪೊಲೀಸರು ಗಾಯಾಳುಗಳನ್ನು ರಕ್ಷಿಸಲು ಆಂಬ್ಯುಲೆನ್ಸ್‌ಗಳು, ಏರ್ ಆಂಬ್ಯುಲೆನ್ಸ್‌ಗಳು ಮತ್ತು ಯುದ್ಧತಂತ್ರದ ಕಮಾಂಡರ್‌ಗಳು ಸೇರಿದಂತೆ ಹಂಟಿಂಗ್‌ಡನ್ ನಿಲ್ದಾಣಕ್ಕೆ ದೊಡ್ಡ ಪ್ರಮಾಣದ ತುರ್ತು ಸೇವೆಗಳನ್ನು ಸಜ್ಜುಗೊಳಿಸಿದರು. ಗಾಯಾಳುಗಳು ಮತ್ತು ಆರೋಪಿಗಳಿಗಾಗಿ ರೈಲಿನಲ್ಲಿ ಹುಡುಕಾಟ ನಡೆಸುವ ವೇಳೆ ರೈಲ್ವೆ ಮಾರ್ಗಗಳನ್ನು ಮುಚ್ಚಲಾಯಿತು ಎಂದು ರೈಲು ನಿರ್ವಾಹಕ ಲಂಡನ್ ನಾರ್ತ್ ಈಸ್ಟರ್ನ್ ರೈಲ್ವೆ ತಿಳಿಸಿದೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಕೇಂಬ್ರಿಡ್ಜ್‌ಶೈರ್ ಮತ್ತು ಪೀಟರ್‌ಬರೋ ಮೇಯರ್ ಪಾಲ್ ಬ್ರಿಸ್ಟೋ, ಇದು ಭಯಾನಕ ದೃಶ್ಯಗಳು. ಗಾಯಾಳುಗಳಿಗೆ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ. ಇಬ್ಬರು ಬಂಧಿತರ ಗುರುತು ಪತ್ತೆಗೆ ತನಿಖೆ ನಡೆಸಲಾಗುತ್ತಿದೆ. ದಾಳಿಯ ಉದ್ದೇಶ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇದೊಂದೇ ಕಾರಣಕ್ಕೆ ಕಿಚ್ಚನ ಚಪ್ಪಾಳೆ ಮಿಸ್ ಮಾಡಿಕೊಂಡ ರಕ್ಷಿತಾ! ತಪ್ಪಾಗಿದ್ದೆಲ್ಲಿ? ಕಿಚ್ಚನ ಕ್ಲಾಸ್
ಚೂರಿ ಇರಿತ ಪ್ರಕರಣಗಳು
2011 ರಿಂದ ಯುಕೆಯಾದ್ಯಂತ ಚೂರಿ ಇರಿತ ಪ್ರಕರಣಗಳು ಹೆಚ್ಚಾಗುತ್ತಿದೆ. ಸರ್ಕಾರಿ ಅಧಿಕೃತ ಅಂಕಿಅಂಶಗಳ ಪ್ರಕಾರ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಚೂರಿ ಇರಿತ ಪ್ರಕರಣಗಳು ನಿರಂತರ ಹೆಚ್ಚಾಗುತ್ತಿವೆ.
ವಿಶ್ವದಲ್ಲೇ ಅತ್ಯಂತ ಕಟ್ಟುನಿಟ್ಟಾದ ಬಂದೂಕು ನಿಯಂತ್ರಣ ಹೊಂದಿದ್ದರೂ ಇತ್ತೀಚೆಗೆ ಚೂರಿ ಇರಿತ ಪ್ರಕರಣ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಚಾಕು, ಚೂರಿ ಬಳಕೆಯನ್ನು ನಿಯಂತ್ರಿಸಲು ಸರ್ಕಾರ ನಿರಂತರ ಪ್ರಯತ್ನವನ್ನು ಮಾಡುತ್ತಿದೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಸುಮಾರು 60,000 ಬ್ಲೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಂತರಿಕ ಸಚಿವಾಲಯ ಬುಧವಾರ ತಿಳಿಸಿದೆ.
ಸಾರ್ವಜನಿಕವಾಗಿ ಚಾಕು ಹಿಡಿದು ತಿರುಗಾಡುವುದನ್ನು ನಿಷೇಧಿಸಿರುವ ಸರ್ಕಾರ ಒಂದು ವೇಳೆ ಕಂಡು ಬಂದರೆ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಕಳೆದ ವರ್ಷದಲ್ಲಿ ಚಾಕು ಕೊಲೆ ಪ್ರಕರಣ ಶೇಕಡಾ 18 ರಷ್ಟು ಕಡಿಮೆಯಾಗಿದೆ ಎಂದು ಸರ್ಕಾರ ಹೇಳಿದೆ.