Maharani Trophy: ಮೈಸೂರು ವಾರಿಯರ್ಸ್ ಮಹಿಳಾ ತಂಡಕ್ಕೆ ಶುಭಾ ಸತೀಶ್ ನಾಯಕಿ!
2025ರ ಮಹಾರಾಣಿ ಟ್ರೋಫಿ ಟೂರ್ನಿಗೆ ಮೈಸೂರು ವಾರಿಯರ್ಸ್ ಮಹಿಳಾ ತಂಡಕ್ಕೆ ನಾಯಕಿಯನ್ನು ನೇಮಿಸಲಾಗಿದೆ. ಭಾರತ ಟೆಸ್ಟ್ ತಂಡದ ಆಟಗಾರ್ತಿ ಶುಭ ಸತೀಶ್ ಅವರಿಗೆ ನಾಯಕತ್ವವನ್ನು ನೀಡಲಾಗಿದೆ. ಮೈಸೂರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪ್ರಕಟಿಸಲಾಗಿದೆ.

ಮೈಸೂರು ವಾರಿಯರ್ಸ್ ಮಹಿಳಾ ತಂಡಕ್ಕೆ ಶುಭ ಸತೀಶ್ ನಾಯಕಿ.

ಮೈಸೂರು: ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್‌ಆರ್ ಗ್ರೂಪ್ ಒಡೆತನದ ಮೈಸೂರು ವಾರಿಯರ್ಸ್‌ನ ಮಹಿಳಾ ಕ್ರಿಕೆಟ್ (Mysore Warriors) ತಂಡ, ಉದ್ಘಾಟನಾ ಆವೃತ್ತಿಯ ಕೆಎಸ್‌ಸಿಎ ಮಹಾರಾಣಿ ಟ್ರೋಫಿ ಟಿ20 ಟೂರ್ನಿಗೆ (Maharani Trophy 2025) ತನ್ನ ತಂಡದ ನಾಯಕಿ ಮತ್ತು 15 ಆಟಗಾರ್ತಿಯರ ಸಂಪೂರ್ಣ ತಂಡವನ್ನು ಪ್ರಕಟಿಸಲಾಗಿದೆ. ಮೈಸೂರಿನ ರೀಜೆಂಟಾ ಸೆಂಟ್ರಲ್ ಜವಾಜಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಭಾರತ ತಂಡದ ಟೆಸ್ಟ್ ಕ್ರಿಕೆಟ್ ಆಟಗಾರ್ತಿ ಶುಭಾ ಸತೀಶ್ (Shubha Satheesh) ಅವರನ್ನು ಮೈಸೂರು ವಾರಿಯರ್ಸ್ ಮಹಿಳಾ ತಂಡದ ನಾಯಕಿಯಾಗಿ ಘೋಷಿಸಲಾಗಿದೆ. ಜೊತೆಗೆ ತಂಡದ 16 ಮಂದಿ ಮಹಿಳಾ ಆಟಗಾರ್ತಿಯರನ್ನು ಪರಿಚಯಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಂಯೋಜಿಸಿರುವ ಟೀಮ್ ಆಂಥಮ್ ಅನ್ನು ಕೂಡ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ವಾರಿಯರ್ಸ್‌ನ ಮಾಲೀಕ ಮತ್ತು ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ರಂಗಾ, "ಉದ್ಘಾಟನಾ ಆವೃತ್ತಿಯ ಮಹಾರಾಣಿ ಟ್ರೋಫಿ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲಿರುವ ಮಹಿಳಾ ಆಟಗಾರರ ತಂಡವನ್ನು ಘೋಷಿಸಿರುವುದು ಸಂತೋಷ ತಂದಿದೆ. ಭಾರತ ತಂಡಕ್ಕೆ ಆಡಿರುವ ಶುಭಾ ಸತೀಶ್ ಅವರು ನಮ್ಮ ತಂಡದ ನಾಯಕಿಯಾಗಿರುವುದಕ್ಕೆ ಹೆಮ್ಮೆಪಡುತ್ತೇವೆ. ನಮ್ಮ ಸಂಸ್ಥೆ, ಮಹಿಳಾ ಕ್ರಿಕೆಟ್‌ಗೆ ಕೊಡುಗೆ ನೀಡಲು ಉತ್ಸುಕವಾಗಿದೆ,” ಎಂದು ಹೇಳಿದ್ದಾರೆ.
Maharani Trophy 2025: 15 ಆಟಗಾರ್ತಿಯರ ಮೈಸೂರು ವಾರಿಯರ್ಸ್ ತಂಡ ಪ್ರಕಟ!
ಶಿಕ್ಷಣ ಮತ್ತು ಕ್ರೀಡೆಯ ಮೂಲಕ ಬಾಲಕಿಯರನ್ನು ಸಬಲೀಕರಣ ಮಾಡುವ ಉದ್ದೇಶದ ಭಾಗವಾಗಿ ಮೈಸೂರು ವಾರಿಯರ್ಸ್ ತಂಡ, ಮೈಸೂರಿನ ಕೇರ್ಗಳ್ಳಿಯಲ್ಲಿರುವ ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯದ ಜೊತೆ ಸದುದ್ದೇಶದ ಪಾಲುದಾರಿಕೆಯನ್ನು ಮಾಡಿಕೊಂಡಿರುವುದಾಗಿ ಘೋಷಿಸಿದೆ. ಆ ಮೂಲಕ ತಂಡದ ಗುಣಮಟ್ಟದ ಕ್ರೀಡಾ ಸಲಕರಣೆಗಳನ್ನು ಒದಗಿಸುವ ಮೂಲಕ ಯುವ ಬಾಲಕಿಯರನ್ನು ಸಬಲೀಕರಿಸುವ ತಮ್ಮ ಬದ್ಧತೆಯನ್ನು ಮರುದೃಢಪಡಿಸಿದೆ. ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯಗಳು ಭಾರತ ಸರ್ಕಾರ ಆರಂಭಿಸಿರುವ ವಸತಿ ಶಾಲೆಗಳಾಗಿದ್ದು, ವಿಶೇಷವಾಗಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಓಬಿಸಿ) ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಬಾಲಕಿಯರಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿವೆ. ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ವಿದ್ಯಾರ್ಥಿನಿಯರು ಈಗ ತಮ್ಮ ಶಾಲೆಯಲ್ಲಿಯೇ ಅತ್ಯುತ್ತಮ ಕ್ರೀಡಾ ಸಲಕರಣೆಗಳೊಂದಿಗೆ ತರಬೇತಿ ಪಡೆಯಬಹುದಾಗಿದ್ದು, ಇದರಿಂದ ಅವರು ಆತ್ಮವಿಶ್ವಾಸದಿಂದ ಸ್ಪರ್ಧಿಸಬಹುದಾಗಿದೆ.
ಮಹಾರಾಣಿ ಟ್ರೋಫಿ ಕೆಎಸ್‌ಸಿಎ ಟಿ20 2025 ಟೂರ್ನಿಯು ಆಗಸ್ಟ್ 5ರಿಂದ 10ರವರೆಗೆ ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಪರಸ್ಪರ ಸೆಣೆಸಲಿವೆ. ಮೈಸೂರು ವಾರಿಯರ್ಸ್ ತಂಡವನ್ನು ಮುಖ್ಯ ಕೋಚ್ ಕರುಣಾ ಜೈನ್ ಮುನ್ನಡೆಸಲಿದ್ದಾರೆ.
IND vs ENG: ಜಸ್‌ಪ್ರೀತ್ ಬುಮ್ರಾ ಹೇಳಿದ್ದ ಮಾತನ್ನು ರಿವೀಲ್ ಮಾಡಿದ ಮೊಹಮ್ಮದ್ ಸಿರಾಜ್!
ಮೈಸೂರು ವಾರಿಯರ್ಸ್ ಮಹಿಳಾ ತಂಡ
ಶುಭಾ ಸತೀಶ್ (ನಾಯಕಿ), ಶಿಶಿರ ಎ ಗೌಡ, ಸಹನಾ ಎಸ್ ಪವಾರ್, ದೀಕ್ಷಾ ಜೆ, ಹೊನುಶ್ರೀ, ರಚಿತಾ ಹತ್ವಾರ್, ಶ್ರೇಯಾ ಪೋತೆ, ವಂದಿತಾ ಕೆ ರಾವ್, ರೋಹಿತಾ ಚೌಡ್ರಿ ಪಿ, ಪೂಜಾ ಕುಮಾರಿ ಎಂ, ದಿಶಾ ಕೆ ವಿ, ತನ್ವಿ ರಾಜ್ ಎಸ್, ಕಿಂಜಲ್ ಬಿ ಪಟೇಲ್, ಪಟೇಲ್ ಸಿಲ್ಕಿನ್ ಜೀತುಭಾಯ್, ಅಕ್ಫಿನ್ ರೂಹಿ ಕೆ, ಕುಸುಮಾ ಗೌಡ, ಪ್ರಕೃತಿ ಎನ್ ಜಿ